ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ ಐಟಿ ಉಗ್ರ ಪೀರ್‌ಭಾಯ್ |
ಪ್ರಕಟಿಸಿದ ದಿನಾಂಕ : 2008-10-27
ಮುಂಬೈ, ಅ.೨೬.ದೆಹಲಿ ಹಾಗೂ ಅಹಮದಾಬಾದ್ ಸ್ಫೋಟದ ನಂತರ ಮಾಧ್ಯಮಗಳಿಗೆ ಸ್ಫೋಟದ ಹೊಣೆಹೊತ್ತು ಇಂಡಿಯನ್ ಮುಜಾಹಿದಿನ್ ಪರವಾಗಿ ಇ ಮೇಲ್ ಕಳುಹಿಸಿದ್ದ ಐಟಿ ಉಗ್ರ, ಸಾಫ್ಟ್‌ವೇರ್ ಎಂಜಿನಿಯರ್ ಮನ್ಸೂರ್ ಪೀರ್‌ಭಾಯ್ ಇದೀಗ ಕ್ಷಮಾದಾನ ಕೋರಿದ್ದಾನೆ.
ಈ ಕುರಿತು ಮೊಕಾ ಕೋರ್ಟಿಗೆ ಅರ್ಜಿ ಸಲ್ಲಿಸಿರುವ ಮನ್ಸೂರ್ ತಾನು ಮಾಫಿ ಸಾಕ್ಷಿಯಾದರೆ ತನಗೆ ಯಾವ ರೀತಿಯ ಕ್ಷಮಾದಾನ ನೀಡಲಾಗುವುದು ಎಂದು ಮಾಹಿತಿ ಕೋರಿದ್ದಾನೆ. ಈ ಹಿನ್ನೆಲೆಯಲ್ಲಿ ಅರ್ಜಿ ಬಗ್ಗೆ ನ.೪ರೊಳಗೆ ಉತ್ತರ ನೀಡುವಂತೆ ಕೋರ್ಟ್ ಮುಂಬೈ ಪೊಲೀಸ್ ಅಪರಾಧ ವಿಭಾಗಕ್ಕೆ ಸೂಚಿಸಿದೆ. ಈತ ಇಂಡಿಯನ್ ಮುಜಾಹಿದಿನ್ ಸಂಘಟನೆಯ ಮಾಧ್ಯಮ ವಿಭಾಗದ ಪ್ರಮುಖ ಸದಸ್ಯನ ಪೈಕಿ ಒಬ್ಬನಾಗಿದ್ದಾನೆ. ಸ್ಫೋಟ ನಡೆಯುವ ಮುನ್ನವೂ ರಿಯಾಜ್ ಭಟ್ಕಳನ ಆದೇಶದ ಮೇರೆಗೆ ಮಾಧ್ಯಮಗಳಿಗೆ ಬೆದರಿಕೆ ಇ ಮೇಲ್ ಕಳುಹಿಸಿದ್ದ.
ವರದಿಯ ವಿವರಗಳು |
 |
ಕೃಪೆ : ಪಿಟಿಐ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-27
|
|
|