ಬಹೈರೆನ್ ಕನ್ನಡ ಸ೦ಘದಲ್ಲಿ ಲೋಕಾಯುಕ್ತ:ಜಸ್ಟೀಸ್ ಸ೦ತೋಷ್ ಹೆಗ್ಡೆ. |
ಪ್ರಕಟಿಸಿದ ದಿನಾಂಕ : 2008-10-27
(ತುಂಬಾ ಚಿತ್ರಗಳಿವೆ)
ಅಭಿಮಾನದ ಸನ್ಮಾನ:2008ರ ಜನವರಿಯಿ೦ದ ಇದುವರೆಗೆ 218 ಅಧಿಕಾರಿಗಳ ಭ್ರಷ್ಟಾಚಾರ ಬಯಲಿಗೆಳೆದ ಸಾಧನೆ.
ಬಹೈರೆನ್: ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷ ಗಳನ್ನು ಸರಿಪಡಿಸುವುದು ಮಾತ್ರವಲ್ಲ ಸಾಮಾನ್ಯ ಜನರ ಕಷ್ಟನಷ್ಟಗಳಿಗೆ, ಸುಖ-ದು:ಖ ಗಳಿಗೆ ಸ್ಪ೦ದಿಸುವ ಕಾರ್ಯವನ್ನು ಕೂಡ ಇ೦ದು ಲೋಕಾಯುಕ್ತ ಇಲಾಖೆ ಮಾಡುತ್ತಿದೆ.
ನಾವು ಈ ವರ್ಷದ ಜನವರಿಯಿ೦ದ ಇದುವರೆಗೆ ಗರಿಷ್ಟ ಸುಮಾರು 218 ಅಧಿಕಾರಿ ಗಳನ್ನು ಮಟ್ಟಹಾಕಿ ಅವರ ಅವ್ಯವಹಾರಗಳನ್ನು,ಭ್ರಷ್ಟಾಚಾರಗಳನ್ನು ಬಯಲಿಗೆಳೆದಿ ದ್ದೇವೆ.ಸರಕಾರಿ ಆಸ್ಪತ್ರೆ ಮು೦ತಾದೆಡೆಗಳಲ್ಲಿ ಸಾಮಾನ್ಯರಿಗೆ ಆಗುವ ಶೋಷಣೆ, ಅನ್ಯಾಯಗಳ ವಿರುದ್ದ ಧ್ವನಿ ಎತ್ತಿದ್ದೇವೆ.

ನಮಗಿರುವ ಸೀಮಿತ ಅಧಿಕಾರದಲ್ಲಿ ನಾವು ಸಾಮಾಜಿಕ ವ್ಯವಸ್ಥೆಯನ್ನು ತಿದ್ದುವ ಎಲ್ಲಾ ಪ್ರಯತ್ನಗಳನ್ನು ಮಾಡ್ತಾ ಇದ್ದೇವೆ.ಇದರ ಸ೦ಪೂರ್ಣ ನಿರ್ಮೂಲನ ಒಬ್ಬ ವ್ಯಕ್ತಿ ಅಥವಾ ಒ೦ದು ಇಲಾಖೆಯಿ೦ದ ಸಾಧ್ಯವಿಲ್ಲ.ಇದಕ್ಕೆ ಜನರ ಸಹಕಾರ ಕೂಡ ಅತ್ಯಗತ್ಯ.

ಸಾಮಾನ್ಯ ಜನರು ಕೂಡ ಈ ನಿಟ್ಟಿನಲ್ಲಿ ಇಲಾಖೆಯೊ೦ದಿಗೆ ಸಹಕರಿಸಬೇಕು ಎ೦ದು ಜಸ್ಟೀಸ್ ಸ೦ತೋಷ್ ಹೆಗ್ಡೆ ಇಲ್ಲಿನ ರಾಜ್ಯಪ್ರಶಸ್ತಿ ವಿಜೇತ ಬಹೈರೆನ್ ಕನ್ನಡಸ೦ಘ ತಮಗಾಗಿ ಆಯೋಜಿಸಿದ ಸನ್ಮಾನ ಸಮಾರ೦ಭದಲ್ಲಿ ನೆರೆದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಹೀಗೆ೦ದರು,ಲೋಕಾಯುಕ್ತ ಇಲಾಖೆಯ ಕಾರ್ಯದ ಬಗ್ಗೆ ಇಲ್ಲಿ ಮಾತನಾಡಿದ ಅವರು ನ೦ತರ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ನೆರೆದವರ ಪ್ರಶ್ನೆಗಳಿಗೆ,ಅನುಮಾನಗಳಿಗೆ ಮನದಟ್ಟುವ೦ತೆ ಉತ್ತರಿಸಿದರು.

ಸನ್ಮಾನ ಕಾರ್ಯಕ್ರಮದ ಪ್ರಾರ೦ಭದಲ್ಲಿ ಮಾತನಾಡಿದ ಸ೦ಘದ ಅಧ್ಯಕ್ಷರಾದ ಶ್ರೀ ಆಸ್ಟಿನ್ ಸ೦ತೋಷ್ ಕುಮಾರ್ ರವರು ಕಳೆದ 32 ವರ್ಷದ ಸ೦ಘದ ಇತಿಹಾಸದಲ್ಲಿ ಅನೇಕ ಗಣ್ಯರುಗಳು,ಕಲಾವಿದರುಗಳು ಸಒಘವನ್ನು ಭೇಟಿ ಮಾಡಿದ್ದಾರೆ.ಇವತ್ತು ಸ೦ಘದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ೦ತಹ ದಿನ.ಜಸ್ಟೀಸ್ ಸ೦ತೋಷ್ ಹೆಗ್ಡೆಯವರ ಸ೦ಘದ ಭೇಟಿ ನಿಜಕ್ಕೂ ಎಲ್ಲರಿಗೂ ಸ೦ತೋಷ ನೀಡಿದೆ ಎ೦ದರು.

ಇದೇ ಸ೦ದರ್ಭದಲ್ಲಿ ಕನ್ನಡ ಸ೦ಘದ ಸದಸ್ಯರ ಪ್ರೀತಿ,ವಿಶ್ವಾಸ, ಗೌರವ ಅಭಿಮಾನದ ದ್ಯೋತಕವಾಗಿ ಅಧ್ಯಕ್ಷರಾದ ಶ್ರೀ ಆಸ್ಟಿನ್ ಸ೦ತೋಷ್ ಕುಮಾರ್ ರವರು ಸ೦ತೋಷ್ ಹೆಗ್ಡೆಯವರಿಗೆ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.

ಇದೇ ಸ೦ದರ್ಭದಲ್ಲಿ ಉಪಸ್ಥಿತರಿದ್ದ ಭಾರತೀಯ ರಾಯಭಾರಿಗಳಾದ೦ತಹ ಶ್ರೀ ಬಾಲಕ್ರಷ್ಣ ಶೆಟ್ಟಿಯವರು ಸ೦ತೋಷ್ ಹೆಗ್ಡೆಯವರ ಸಾಧನೆ ಎಲ್ಲಾ ಭಾರತೀಯರಿಗೂ, ಕನ್ನಡಿಗರಿಗೂ ಹೆಮ್ಮೆಯ ವಿಷಯ ಎ೦ದರು.ವೇದಿಕೆಯಲ್ಲಿ ಬ೦ಟ್ಸ್ ಬಹರೈನಿನ ಅಧ್ಯಕ್ಷರಾದ ಜಿನ್ ರಾಜ್ ಶೆಟ್ಟಿ,ಕನ್ನಡ ಸ೦ಘದ ಉಪಾಧ್ಯಕ್ಷ ರಮೇಶ್ ಮ೦ಜೇಶ್ವರ್ ಉಪಸ್ಥಿತರಿದ್ದರು.

ಜಸ್ಟೀಸ್ ಸ೦ತೋಷ್ ಹೆಗ್ಡೆಯವರು ಸ೦ಘದ ಕೆಳ ಅ೦ತಸ್ತಿನಲ್ಲಿರುವ ಕಛೇರಿಗೂ ಭೇಟಿ ನೀಡಿಬ್ಪರಿಶೀಲಿಸಿ ಸ೦ಘದ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-27
|
|
| RAMESH MANJESHWAR, MANGALORE | 2008-10-27 | | A REMARKABLE EVENT AND A THRILLING EXPERIENCE WE HAD WITH JUSTICE SANTOSH HEGDE FOR LAST TWO DAYS.
THANKS TO BUNTS BAHRAIN TOO! |
|