‘ಉಗ್ರ ಸಾಧ್ವಿ’ ಜೊತೆ ಬಿಜೆಪಿ ಸಂಪರ್ಕ ಸುತ್ತ ಈಗ ವಿವಾದ |
ಪ್ರಕಟಿಸಿದ ದಿನಾಂಕ : 2008-10-27
ನವದೆಹಲಿ: ಮಹಾರಾಷ್ಟ್ರದ ಮಾಲೇಗಾಂವ್ ಸ್ಫೋಟದ ರೂವಾರಿ ಎಂಬ ಆರೋಪ ಹೊತ್ತು ಬಂಧಿತರಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಜೊತೆ ಬಿಜೆಪಿ ಸಂಪರ್ಕ ಈಗ ಬೆಳಕಿಗೆ ಬಂದಿದ್ದು, ಭೋಪಾಲ್ ಹಾಗೂ ಇಂದೋರ್ ವಲಯದಲ್ಲಿ ವಿವಾದ ಎಬ್ಬಿಸಿದೆ.
ಸಾಧ್ವಿ ಪೂರ್ಣಚೇತಾನಂದ (ಸನ್ಯಾಸತ್ವ ಸ್ವೀಕರಿಸಿದ ನಂತರದ ಹೆಸರು) ಅಲಿಯಾಸ್ ಪ್ರಜ್ಞಾ ಸಿಂಗ್ ಜೊತೆ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇರುವ ಫೋಟೋ ಬಹಿರಂಗಗೊಂಡಿದೆ.
೨೦೦೬ರಲ್ಲಿ ಮಧ್ಯಪ್ರದೇಶದ ಸಚಿವರೊಬ್ಬರು ನಿಧನರಾದಾಗ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಯುವ ಸಾಧ್ವಿ ಜೊತೆ ರಾಜನಾಥ್ ಮತ್ತು ಶಿವರಾಜ್ ಇದ್ದ ಫೋಟೋ ಇದು. ಸನ್ಯಾಸತ್ವ ಪಡೆಯುವುದಕ್ಕೂ ಮೊದಲು ಪ್ರಜ್ಞಾ ಸಿಂಗ್ ಬಿಜೆಪಿಯ ವಿದ್ಯಾರ್ಥಿ ಘಟಕದಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದರು. ಜೊತೆಗೆ ವಿಶ್ವ ಹಿಂದು ಪರಿಷತ್‌ನ ಮಹಿಳಾ ಘಟಕವಾದ ದುರ್ಗಾವಾಹಿನಿಯ ಸದಸ್ಯೆಯಾಗಿದ್ದರು. ಇವರು ಇಂದೋರ್‌ನ ಮೇಯರ್ ಉಮಾ ಶಶಿ ಶರ್ಮಾ ಮತ್ತು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಮತ್ತೊಬ್ಬ ಸಾಧ್ವಿ ಉಮಾ ಭಾರತಿಯವರ ಆಪ್ತೆ.
ಸಾಧ್ವಿ ಮನೆ ಮೇಲೆ ದಾಳಿ:
ಮಧ್ಯಪ್ರದೇಶ ಪೊಲೀಸರು ಜಬಲ್‌ಪುರದಲ್ಲಿ ಸಾಧ್ವಿ ಬಾಡಿಗೆಗೆ ಪಡೆದಿದ್ದ ಮನೆಯ ಮೇಲೆ ಭಾನುವಾರ ದಾಳಿ ನಡೆಸಿ ಪರಿಶೀಲಿಸಿದರು. ಆದರೆ, ಆಕ್ಷೇಪಾರ್ಹ ವಸ್ತುಗಳಾವುವೂ ಅಲ್ಲಿ ಸಿಗಲಿಲ್ಲ. ಕೇವಲ ಧಾರ್ಮಿಕ ಪುಸ್ತಕಗಳು, ಪರಿಕರಗಳು ಸಿಕ್ಕಿದವು.
ಉಮಾಭಾರತಿ ವಾಗ್ದಾಳಿ:
ಪ್ರಜ್ಞಾ ಸಿಂಗ್ ಅವರನ್ನು ಬಿಜೆಪಿ ತನಗೆ ಬೇಕಾದಾಗ ಬಳಸಿಕೊಂಡಿತು. ಈಗ ಕಷ್ಟಕಾಲದಲ್ಲಿ ಆಕೆಯನ್ನು ಕೈಬಿಟ್ಟಿದೆ ಎಂದು ಉಮಾಭಾರತಿ ವಾಗ್ದಾಳಿ ನಡೆಸಿದ್ದಾರೆ. ಈ ನಡುವೆ, ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಭೋಪಾಲದಿಂದ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡ ಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-27
|
|
| basker shetty, udupi dubai | 2008-10-27 | | muslimarannu bayatpataka anta heli avarannu jailige karedukondu hogi peedisi bayanaka sikse kottu ugravadi mudre hotte, bjp mattu policeru maduva natakavannu innadaru nillise olleya jivana jeevana nadesuva muslimarannu nodi kalitukolliri |
| Dimello Pinto, Nagoor | 2008-10-27 | | ಸಾದ್ವಿಯವರೇ, \"ಉಪ್ಪು ತಿಂದವನು ನೀರು ಕುಡಿಯಲೇಬೇಕು\" ಸಂಘಪರಿವಾರದ ಭಯೋತ್ಪಾದನೆಯಾ ಅಟ್ಟಹಾಸ ಮುಗಿಲು ಮುಟ್ಟುತ್ತಿರುವಂತೆ ರಾಷ್ಟ್ರ ಮಟ್ಟದಲ್ಲಾದ ಮಹತ್ವದ ಕಾರ್ಯಾಚರಣೆ ಬಿ ಜೆ ಪಿ ಹಾಗು ಅದರ ಅಂಗಸಂಸ್ಥೆಯಾದ ಚಡ್ಡಿ ಪಡೆಯಲ್ಲಿ ತ್ಸುನಾಮಿಯೆಂತೆ ಬಿರುಗಾಳಿ ಯಬ್ಬಿಸಿದೆ. ಪಾಪ ಅಡ್ವಾಣಿಜಿ ಯವರ ತಲೆ ವಿಶ್ವ ಮಟ್ಟದಲ್ಲಿ ತಗ್ಗಿದೆ. ಇನ್ನು ಕೂಡ ಸಂತೋಷ್ ಬಹ್ರೈನ್ ಹಾಗು ಪಾಂಚನಗ್ನ ಇದರ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿಲ್ಲ, ಬಹುಶ ಅವರ ಭಯೋತ್ಪಾದಕ ಸಂಘಟನೆ ಸಂಘಪರಿವಾರದ ಚಡ್ಡಿ ಪಡೆಯ ದಿವಾಳಿಯಾಗುವ ಸಮಯ ಸಮೀಪಿಸುತ್ತಿದೆ ಎನ್ನುವ ಭಯ ಅವರಲ್ಲಿರಬೇಕು. ಇನ್ನಾದರೂ ಕರ್ನಾಟಕದ ಬಿ, ಜೆ, ಪಿ ಹಾಗು ಖಾಕಿ ಪಡೆ (ಕೆಸರಿಕರಣಗೊಂಡ ಪೋಲಿಸ್ ಇಲಾಖೆ ) ಎಚ್ಚರಗೊಂಡು ಅಮಾಯಕರನ್ನು ಬಂದಿಸುದನ್ನ ಬಿಟ್ಟು ನಿಜವಾದ ಭಯೋತ್ಪಾದಕರನ್ನು ಗುರುತಿಸಿ ಶಿಕ್ಷಿಸಬೇಕಾಗಿದೆ. ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಭಾರತದಲ್ಲಿ ಸಂಭವಿಸಿದ ಬಾಂಬ್ ಸ್ಪೋಟದ ಹಿಂದೆ ಹಿಂದೂ ಭಯೋತ್ಪಾದಕ ಸಂಘಟನೆ ಸಂಘಪರಿವಾರದ ಕೈವಾಡ ವಿರುದನ್ನು ಅಲ್ಲಗಳೆಯುವಂತಿಲ್ಲ. ಇನ್ನಾದರೂ ಮುಂದೆ ಭಯೋತ್ಪಾದಕ ಕ್ರತ್ಯ ಸಂಭವಿಸಿದಲ್ಲಿ ಕೇವಲ ಮುಸ್ಲಿಮರನ್ನು ಬಲಿಪಶು ಮಾಡುದನ್ನು ಬಿಟ್ಟು ಭಯೋತ್ಪಾದಕ ನಿಗ್ರಹ ದಳಕ್ಕೆ ಹಿಂದೂ ಭಯೋತ್ಪಾದಕ ಸಂಘಟನೆ ಸಂಘಪರಿವಾರದ ಭಯೋತ್ಪಾದನೆಯ ಬಗ್ಗೆ ಕೂಡ ವಿಶ್ಲೇಷಿಸಬೇಕಾಗಿದೆ. ಬಿ ಜೆ ಪಿಯ ರಾಷ್ಟ್ರಾಧ್ಯಕ್ಷರಾದ ಮಾನ್ಯ ರಾಜನಾಥ್ ಸಿಂಗ್ ರವರೆ ತಲೆಯ ಮೇಲೆ ಹಾಕಿದ ನೀರು ಕಾಲಿಗೆ ಬರಲೇ ಬೇಕು ಎನ್ನುದನ್ನು ಮರಿಯಬೇಡಿ. |
|