ನಷ್ಟದಲ್ಲೂ ಮಿತ್ತಲ್‌ಗಿಂತ ಅಂಬಾನಿಗಳೇ ಮುಂದೆ |
ಪ್ರಕಟಿಸಿದ ದಿನಾಂಕ : 2008-10-27
ನಷ್ಟದಲ್ಲೂ ಮಿತ್ತಲ್‌ಗಿಂತ ಅಂಬಾನಿಗಳೇ ಮುಂದೆ
ಮುಂಬೈ: ಷೇರುಪೇಟೆ ಮೇಲೆದ್ದಾಗಲೆಲ್ಲ ಇವತ್ತು ಯಾರು ಎಷ್ಟು ಶ್ರೀಮಂತರಾದರು ಎಂಬ ಲೆಕ್ಕಾಚಾರ ಹಾಕುವವರಿದ್ದಾರೆ.
ಈಗ ಷೇರುಪೇಟೆ ನೆಲ ಕಚ್ಚಿರುವುದರಿಂದ ಯಾರಿಗೆ ಎಷ್ಟು ನಷ್ಟವಾಗಿದೆ ಎಂಬುದನ್ನು ಲೆಕ್ಕ ಹಾಕುವ ಸರದಿ. ಭಾರತದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಲಕ್ಷ್ಮೀ ಮಿತ್ತಲ್‌ಗಿಂತ ಮುಂದಿದ್ದ ಅಂಬಾನಿ ಸೋದರರು ಈಗ ನಷ್ಟದಲ್ಲೂ ಅವರಿಗಿಂತ ಮುಂದಿದ್ದಾರೆ. ಆರ್ಥಿಕ ಕುಸಿತದಿಂದಾಗಿ ಮಿತ್ತಲ್‌ಗೆ ಉಂಟಾಗಿರುವ ನಷ್ಟಕ್ಕಿಂತ ಅಂಬಾನಿಗಳಿಗೆ ಉಂಟಾದ ನಷ್ಟವೇ ಹೆಚ್ಚು.
ನಷ್ಟದ ಶೇಕಡಾವಾರು ಪ್ರಮಾಣದಲ್ಲಿ ಡಿಎಲ್‌ಎಫ್‌ನ ಕೆ.ಪಿ. ಸಿಂಗ್, ಯುನಿಟೆಕ್‌ನ ರಮೇಶ್‌ಚಂದ್ರ ಅಂಬಾನಿಗಳಿಗಿಂತಲೂ ಮುಂದಿದ್ದಾರೆ. ಷೇರುಪೇಟೆ ಕುಸಿದುಬಿದ್ದ ಮೇಲೆ ದೇಶದ 10 ಅತಿ ಶ್ರೀಮಂತರಿಗೆ ಉಂಟಾಗಿರುವ ನಷ್ಟ 20 ಲಕ್ಷ ಕೋಟಿ ರು.!
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-27
|
|
|