ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಬ೦ದಿದೆ ಸಡಗರದ ಹಬ್ಬ ದೀಪಾವಳಿ ,ನಿವಾರಿಸಲಿ ಮನದ ಅ೦ಧಕಾರದ ಹಾವಳಿ

ಹಬ್ಬ ಎಂದಾಕ್ಷಣ ಮುಖ್ಯವಾಗಿ ನೆನಪಿಗೆ ಬರುವುದೇ ದೀಪಾವಳಿ. ಬಹುಶಃ ಪಟಾಕಿ ಸಿಡಿಸಲು ಅವಕಾಶವಿದೆ ಎಂಬ ಕಾರಣಕ್ಕೆ ಬಾಲ್ಯದಿಂದಲೂ ಮಕ್ಕಳಿಗೆ ಅತ್ಯಂತ ಪ್ರಿಯವಾಗಿ ಬಿಟ್ಟಿರುವುದೇ ಮನದಂಗಳದಲ್ಲಿ ಈ ಮನಸ್ಥಿತಿ ಚಿರಸ್ಥಾಯಿಯಾಗಲು ಕಾರಣವೂ ಇರಬಹುದು.

ಸಮಾಜದ ಎಲ್ಲ ವರ್ಗದವರೂ, ಜಾತಿ-ಸಮುದಾಯದವರೂ ಭೇದ-ಭಾವ ಮರೆತು ಭ್ರಾತೃತ್ವ, ಸೌಹಾರ್ದತೆಯ ಪ್ರತೀಕವಾಗಿ ಆಚರಿಸುವ ಹಬ್ಬಗಳಲ್ಲಿ ಅತ್ಯಂತ ಪ್ರಮುಖವಾದದ್ದು ಕೂಡ ದೀಪಾವಳಿಯೇ. ಪ್ರತಿಯೊಂದು ಹಬ್ಬವೂ ತನ್ನದೇ ಆದ ಸಂದೇಶವನ್ನು ಸಾರುತ್ತದೆ. ಅದೇ ರೀತಿ ದೀಪಾವಳಿ ಕೂಡ ಅಜ್ಞಾನದ ಕತ್ತಲನ್ನು ಹೋಗಲಾಡಿಸಿಕೊಳ್ಳುವ ಮನಸ್ಸು ಬೆಳೆಸಿಕೊಳ್ಳಬೇಕೆಂಬ ಸಂದೇಶ ಸಾರುತ್ತದೆ.

ಮಹಾಭಾರತದ ಒಂದು ಪ್ರಸಂಗ ಇಲ್ಲಿ ಉಲ್ಲೇಖನೀಯ, ಯುಗಾವತಾರಿ ಶ್ರೀ ಕೃಷ್ಣನು ಅದೊಂದು ದಿನ ಕೌರವನಲ್ಲಿ ಉಭಯ ಕುಶಲೋಪರಿ ಸಂದರ್ಭ ಕೇಳುತ್ತಾನೆ "ಲೋಕದ ಜನರು ಹೇಗೆ?". ಅದಕ್ಕೆ ಧರ್ಮರಾಯನ ಉತ್ತರ - "ಎಲ್ಲರೂ ಕೆಟ್ಟವರು, ಎಲ್ಲರೂ ಸ್ವಾರ್ಥಿಗಳು". ಅದೇ ಪ್ರಶ್ನೆಯನ್ನು ಶ್ರೀಕೃಷ್ಣನು ಯುಧಿಷ್ಠಿರನ ಮುಂದಿಡುತ್ತಾನೆ. ಧರ್ಮಜ್ಞಾನಿಯಾದ ಧರ್ಮರಾಯನ ಉತ್ತರ ಹೀಗಿರುತ್ತದೆ. "ಭಗವಾನ್, ಲೋಕದಲ್ಲಿರುವವರು ಎಲ್ಲರೂ ಒಳ್ಳೆಯವರು".

ಈ ಪ್ರಸಂಗ ಇಲ್ಲಿ ಉಲ್ಲೇಖಿಸಿದ್ದೇಕೆ? ಹೌದು. ಮನದ ಅಂಧಕಾರ ತೊಲಗಿದರೆ ಜೀವನ ಸ್ವರ್ಗಸಮಾನ, ಜಗತ್ತನ್ನು ನಾವು ಯಾವ ದೃಷ್ಟಿಯಿಂದ ಕಾಣುತ್ತೇವೆ ಎಂಬುದು ಇಲ್ಲಿ ಬಹಳ ಮುಖ್ಯ. ನಮ್ಮ ಈ ಮನಸ್ಸಿನ ಭಾವನೆಯೇ ಕನ್ನಡಿಯಂತೆ ಕೆಲಸ ಮಾಡುತ್ತದೆ. ಜಗತ್ತು ಕೆಟ್ಟದು ಅಂತ ನಾವು ತಿಳಿದುಕೊಂಡರೆ, ಎಲ್ಲವೂ ಕೆಟ್ಟದೇ ಮತ್ತು ಎಲ್ಲರೂ ಕೆಟ್ಟವರೇ. ಅದೇ, ಲೋಕವದೆಷ್ಟು ಸುಂದರ ಅಂತ ಅರಿತುಕೊಂಡು ಮುಂದಡಿಯಿಟ್ಟರೆ, ನಮ್ಮಲ್ಲಿ ನಕಾರಾತ್ಮಕ ಮನೋಭಾವವಿಲ್ಲದೆ, ಧನಾತ್ಮಕ ಚಿಂತನೆ ಮೈಗೂಡಿಸಿಕೊಂಡರೆ... ಪ್ರತಿ ಕ್ಷಣವೂ ಸುಂದರ, ಪ್ರತಿ ಕಾರ್ಯವೂ ಸುಲಲಿತ.

ದೀಪಾವಳಿ ಎಂಬುದು ಬೆಳಕಿನ ಆವಳಿ. ಸಾಲು ಸಾಲು ಬೆಳಕಿನ ಹಣತೆಗಳನ್ನಿರಿಸಿ ಅಜ್ಞಾನವೆಂಬ ಅಂಧಕಾರವನ್ನು ನೀಗಿಸುವ, ಎಲ್ಲೆಲ್ಲೂ ಸುಜ್ಞಾನದ ಬೆಳಕು ಬೆಳಗಿಸುವುದನ್ನು ಸಂಕೇತಿಸುವ ಪರ್ವ. ಮಹಾಭಾರತದ ಈ ಪ್ರಸಂಗವು ನಮಗೆ ನೀಡುವ ಸಂದೇಶವೂ ಅದೇ. ನಮ್ಮನ್ನು ಅಜ್ಞಾನವೆಂಬ ಅಂಧಕಾರದ ಪೊರೆ ಆವರಿಸಿಕೊಂಡಿದೆ. ಈ ಪೊರೆ ಕಳಚಿಕೊಳ್ಳುವಂತೆ ಮಾಡಿ ಸುಜ್ಞಾನ ಪಥದತ್ತ ನಮ್ಮನ್ನು ಒಯ್ದು ಜ್ಞಾನ ಚಕ್ಷುವನ್ನು ತೆರೆದುಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

ಅಜ್ಞಾನದ ಅಂಧಕಾರ ನಿವಾರಿಸುವುದಕ್ಕೆ ದೀಪಗಳನ್ನು ಬೆಳಗುವುದು ಸಾಂಕೇತಿಕ ರೂಪವಾದರೂ, ನಮ್ಮನ್ನು ನಾವು ತಿದ್ದಿಕೊಂಡು ಮುನ್ನಡೆಯಬೇಕೆಂಬ ಮನೋಭಾವ ನಮ್ಮಲ್ಲಿ ಒಡಮೂಡಬೇಕು. ಇದು ನಮ್ಮ ಆತ್ಮಶಕ್ತಿಯ ದ್ಯೋತಕವೂ ಹೌದು, ಯಶಸ್ಸಿನ ಚಂದ್ರಯಾನ ಮಾಡಿಸಬಲ್ಲ ಗುರಿಯೂ ಹೌದು.

ಲೋಕವಿಂದು ಅಕ್ಷರಶಃ ಅಂಧಕಾರಮಯವಾಗಿಬಿಟ್ಟಿದೆ. ಸತ್ಯವಂತರಿಗಿದು ಕಾಲವಲ್ಲ ಅಂತ ಯಾವತ್ತೋ ದಾಸವರೇಣ್ಯರು ಹಾಡಿದ್ದಾರೆ. ಸುಖ ಲೋಲುಪತೆಯೇ ಪರಮಗುರಿಯಾಗಿಬಿಟ್ಟಿದೆ. ಅನ್ಯಾಯ-ಅನಾಚಾರಗಳು ಮೇರೆ ಮೀರುತ್ತಿವೆ. ಹಣದಿಂದಲೇ ಎಲ್ಲವೂ ಸಾಧ್ಯ ಎಂಬ ಮನೋಭಾವ. ಜೀವನದಲ್ಲಿ ಮೇಲೆ ಬರಲು, ಯಶಸ್ಸಿನ ತುತ್ತ ತುದಿಗೇರಲು ಏನು ಮಾಡಲೂ ಹೇಸುವುದಿಲ್ಲ. ಇದನ್ನೆಲ್ಲಾ ಯೋಚಿಸಿದರೆ, ಇದಕ್ಕೆ ಮೂಲ ಕಾರಣ ನಮ್ಮ ಅಂಧಕಾರದಿಂದ ತುಂಬಿದ ಮನಸ್ಥಿತಿ ಎಂಬುದು ಅರಿವಿಗೆ ಬರುತ್ತದೆ. "ತಪ್ಪು ಮಾಡೋದು ಸಹಜ.... ತಿದ್ದಿ ನಡೆಯೋನು ಮನುಜ" ಎಂಬ ವಾಕ್ಯವು ಮನುಷ್ಯತ್ವವನ್ನು ಅದೆಷ್ಟು ರಮ್ಯವಾಗಿ ವ್ಯಾಖ್ಯಾನಿಸುತ್ತದೆ! ಯಾವಾಗ ಒಬ್ಬಾತನಿಗೆ ತಾನು ಮಾಡಿದ ತಪ್ಪಿನ ಅರಿವಾಗುತ್ತದೆಯೋ... ಅಂದಿನಿಂದಲೇ ಆತ ಯಶಸ್ಸಿನ ಮೆಟ್ಟಿಲೇರಲಾರಂಭಿಸಿದ್ದಾನೆ. ಅದಕ್ಕೇ ಹಿರಿಯರಂದಿದ್ದು - ತನ್ನ ತಾನರಿತವನೇ ಕಡು ಜಾಣ! ಅಲ್ಲಿಯವರೆಗೆ ಜಗತ್ತೆಲ್ಲಾ ಅಂಧಕಾರಮಯವಾಗಿರುತ್ತದೆ, ದುರ್ಯೋಧನನ ಮನಸ್ಥಿತಿಯೇ ಇರುತ್ತದೆ.

ನಮ್ಮ ಮನಸ್ಸಿನೊಳಗಿನ ಕಲ್ಮಶಗಳನ್ನು, ಗಾಢಾಂಧಕಾರಮಯ ಆಲೋಚನೆಗಳನ್ನು ತೊಲಗಿಸಲು ಜ್ಞಾನದ ಬೆಳಕು ನೀಡುವ ಹಣತೆ ಹಚ್ಚಬೇಕಾಗಿದೆ. ಈ ಗುರಿ ನಮ್ಮೆದುರಿಗಿದ್ದರೆ ಗುರು ತಾನಾಗಿಯೇ ದೊರೆಯುತ್ತಾನೆ, ಅದಕ್ಕಲ್ಲವೇ ಗುರುವನ್ನು ಹಾಡಿ ಹೊಗಳುವುದು... "ಅಜ್ಞಾನ ತಿಮಿರಾಂಧಸ್ಯ, ಜ್ಞಾನಾಂಜನ ಶಲಾಕಯಾ" ಅಂತ.

ಇಂದಿನ ಲೌಕಿಕ ಜಂಜಾಟದ ಜೀವನದಲ್ಲಿ ನಮ್ಮ ಸುತ್ತಮುತ್ತ ಇರುವವರೇ ನಮಗೆ ಗುರು. ಅವರಲ್ಲಿ ಉತ್ತಮರನ್ನು ಆಯ್ದುಕೊಳ್ಳುವುದು ಕೂಡ ನಮ್ಮ ಮನಸ್ಥಿತಿಯ ಮೇಲೆಯೇ ಅವಲಂಬಿತವಾಗಿದೆ.

ಲೋಕವೇ ಕೆಟ್ಟಹುಳಗಳಿಂದ ತುಂಬಿದೆ ಎಂದಿರುವ ಕೌರವನ ಮನಸ್ಥಿತಿ ನಮ್ಮದಾದಲ್ಲಿ ಜೀವನದಲ್ಲಿ ಮುಂದೆ ಬರುವುದು ಸಾಧ್ಯವೇ ಇಲ್ಲ. ಮೊದಲು ತನ್ನನ್ನು ಅರಿತುಕೊಂಡು, ತಪ್ಪು ತಿದ್ದಿಕೊಳ್ಳಬೇಕು. ಅದಕ್ಕಲ್ಲವೇ ಹೇಳಿರುವುದು "ಅರಿವೇ ಗುರು" ಎಂದು, ಇದರೊಂದಿಗೆ, ಸುತ್ತಮುತ್ತಲಿದ್ದವರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳದೆ ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಜೀವನದ ಹಾದಿ ತುಂಬಾ ಬೆಳಕು, ಬೆಳಕು, ಬೆಳಕು.

ದೀಪಾವಳಿಯಲ್ಲಿ ಸುಡುಮದ್ದು ಸುಡುವುದು ಮತ್ತು ಸಿಡಿ ಮದ್ದು ಸಿಡಿಸುವುದಕ್ಕೂ ತನ್ನದೇ ಆದ ಕಾರಣಗಳಿವೆ. ಮನದೊಳಗಿನ ಕೆಟ್ಟದ್ದನ್ನು ಸುಟ್ಟು ಬಿಡುವುದು, ಜಗತ್ತೆಂಬ ಮಾಯೆಯಲ್ಲಿ ಹರಡಿಕೊಂಡಿರುವ ದುಷ್ಟಶಕ್ತಿಗಳನ್ನು ಸದ್ದು ಮಾಡಿ ಓಡಿಸುವುದು ಇದರ ಹಿಂದಿರುವ ಮರ್ಮ.

ಆಂಗ್ಲರ ನಾಲಿಗೆಯಲ್ಲಿ ದೀಪಾವಳಿಯು ಅಪಭ್ರಂಶಗೊಂಡು 'ದಿವಾಳಿ' ಎಂದೇ ಆಗಿದೆ. ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು ತಲೆದೋರಿರುವ ಇಂದಿನ ದಿನಗಳಲ್ಲಿ ಆಂಗ್ಲರ ಈ ನಾಮಕರಣವನ್ನು ನಾವು ಒಪ್ಪಬಹುದಾಗಿದ್ದರೂ, ಹ್ಯಾಪಿ ದಿವಾಳಿ ಆಗೋದು ಬೇಡವೇ ಬೇಡ, "ದೀಪಾವಳಿ ಶುಭಾಶಯಗಳು" ಎಂದೇ ವಿನಿಮಯ ಮಾಡಿಕೊಳ್ಳೋಣ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವೆಬ್ ದುನಿಯ
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-27


ಪ್ರತಿಸ್ಪಂದನ
shakeer kudregala, kudregala,mudigere
2008-10-28
ಸರ್ವರಿಗೂ ಭ್ರಾತೃತ್ವ, ಸೌಹಾರ್ದತೆಯ ಪ್ರತೀಕವಾಗಿರುವ,ಮನದ ಅಂಧಕಾರ ತೊಲಗಿಸುವ,ಅಜ್ಞಾನವೆಂಬ ಅಂಧಕಾರವನ್ನು ನೀಗಿಸುವ, ಎಲ್ಲೆಲ್ಲೂ ಸುಜ್ಞಾನದ ಬೆಳಕು ಬೆಳಗಿಸುವುದನ್ನು ಸಂಕೇತಿಸುವ ದೀಪಾವಳಿ ಹಬ್ಬದ ಶುಭಾಶಯಗಳು.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಗೋಕರ್ಣದ ಅಶೋಕೆಗೆ ರಾಮಚಂದ್ರಾಪುರ ಮಠ?
»ವಿಶ್ವದ ಅತ್ಯ೦ತ ಕಿರಿಯ ನಿರ್ದೇಶಕ ಮಾಸ್ಟರ್ ಕಿಶನ್‌ಗೆ ಪ್ರಶಸ್ತಿ
»ಕನ್ನಡಮ್ಮನ ಐಸಿರಿ 'ನುಡಿಸಿರಿ'ಗೆ ಸಜ್ಜಾಗಿದೆ ಮೂಡುಬಿದಿರೆ
»ಎಚ್. ಶಕುಂತಳಾ ಭಟ್‌ಗೆ ಹೊರನಾಡ ರಾಜ್ಯೋತ್ಸವ ಪ್ರಶಸ್ತಿ
»ಜ್ಯೋತಿ ಕುಲಾಲ್‌ಗೆ ಪ್ರಗತಿಶೀಲ ರೈತ ಮಹಿಳೆ ಪ್ರಶಸ್ತಿ
»ರಾಜ್ಯಮಟ್ಟದ ಪ್ರತಿಭಾ ಕಾರಂಜಿ: ಪೂರ್ಣಿಮಾ ಪ್ರಥಮ ಸ್ಥಾನ
»ಕೊಡೇಕಲ್‌ನಲ್ಲಿ 401 ಜೋಡಿ sಸಾಮೊಹಿಕ ವಿವಾಹ
»ಚೆಂಬೂರು ಕರ್ನಾಟಕ ಸಂಘದಿಂದ ಸಾಹಿತ್ಯ ಸಹವಾಸ-2008 ಕಾರ್ಯಕ್ರಮ
»ತಬಲಾ ಜತೆಗೆ ಗಾಯನ ಲಿಮ್ಕಾ ದಾಖಲೆಯತ್ತ
»ಚೀನಾ ನೆಲದಲ್ಲಿ ಯಕ್ಷಗಾನ ಚೈನಾದಲ್ಲಿ ಪ್ರದರ್ಶನ ನೀಡಿದ ಮಹಿಳಾ ಯಕ್ಷಗಾನ ತಂಡ.
»ಹಿರಿಯಡಕ ಯಕ್ಷಗಾನ ಮೇಳ ಮತ್ತೆ ತಿರುಗಾಟ ಆರಂಭ
» 'ಕುರುಕ್ಷೇತ್ರಕ್ಕೊಂದು ಅಯೋಗ’ ಯಕ್ಷರಂಗ ಪ್ರಯೋಗ
»ಕೃಷ್ಣಪ್ರಸಾದ್, ಶರಾವತಿಗೆ ಕಂಬಳ ಕಲಾಪ್ರಶಸ್ತಿ
»ಕನ್ನಡದಲ್ಲಿರುವ ‘ಮಂಕುತಿಮ್ಮನ ಕಗ್ಗ' ಆಂಗ್ಲಕ್ಕೆ ಅನುವಾದದ ಕೃತಿ ಬಿಡುಗಡೆ
»ಜನಮನ ಸೂರೆಗೊಂಡ ಹಿಂದೂಸ್ಥಾನೀ ಗಾಯನ
»ಲಿಯೋ ಫೆರ್ನಾಂಡಿಸ್ ಮತ್ತು ವಿಲ್ಸನ್ ಒಲಿವೆರಾ ಪಾಲಿಗೆ ಈ ಭಾರಿಯ ದಿವೋ ಸಾಹಿತ್ಯ ಪುರಸ್ಕಾರ-2008
»ಹಿರಿಯ ಕೊಂಕಣಿ ಸಾಹಿತಿ ರವೀಂದ್ರ ಕೇಲ್ಕರ್ ರಿಗೆ ಘನತೆಯ ಜ್ನಾನಪೀಟ ಪ್ರಶಸ್ತಿ
»ಸಂಧ್ಯಾ ಪೈ ಅವರ‘ಗಮ್ಮತ್ತಿನ ಕಥೆಗಳು’,ಮು೦ತಾದ 6 ಕೃತಿ ಬಿಡುಗಡೆ
»ಜನಪದ ಸಂಸ್ಕೃತಿಯ ಬೆಸುಗೆಗೆ ಅಪೂರ್ವ, ಅಪರೂಪ ಸುಗ್ಗಿ ಬೆನ್ನಿ
»ಅರಾಟೆ ಮಂಜುನಾಥಗೆ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ
»ವೈಷ್ಣವಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ: ರಾಜ್ಯಕ್ಕೆ ಹೆಮ್ಮೆ
»‘ನಿರ್ಭಯ ಸೂರ್ಯ’ ಕವನ ಸ೦ಕಲನ ಬಿಡುಗಡೆ
»ಪ್ರಕಾಶ ಚಂದ್ರ ಶಿಶಿಲ ಅವರಿಗೆ ಡಾಕ್ಟರೇಟ್
»ಪೆರ್ಣೆ: 26 ಜೋಡಿಗಳಿಗೆ ಕಂಕಣ ಭಾಗ್ಯ
»ಮೈಸೂರು:ಬೆಟ್ಟದ ನಂದಿಗೆ ಮಹಾಭಿಷೇಕ
»ಯಲ್ಲಾಪುರ:ಮನಸೂರೆಗೊ೦ಡ ಸಂಕಲ್ಪ ಉತ್ಸವ
»ರಾಜ್ಯಮಟ್ಟದ ತುಳು ಜನಪದ ಜಾತ್ರೆ: ತುಳುವೆರೆ ಆಯನೊ-2009
»ಕೇರಳ ರಾಜ್ಯ 4 ನೇ ಕನ್ನಡ ಸಮ್ಮೇಳನಕ್ಕೆ ಸಿದ್ಧತೆ
»ಸಾಹಿತ್ಯ ಕ್ಷೇತ್ರದಲ್ಲಿ ವಿಖ್ಯಾತರಾಗಿರುವ ಲೇಖಕ ಮಾಳಗಾಂವಕರ
»ಬಹುಮುಖ ಪ್ರತಿಭೆಯ ಯಕ್ಷ ಕಲಾವಿದ ಡಿ. ಮನೋಹರ ಕುಮಾರ್
»ಕನ್ನಡ ಬಾಷೆಗೆ ಶಾಸ್ತ್ರೀಯ ಸ್ಥಾನಮಾನಗಳಿಸುವಲ್ಲಿ ಹೋರಾಟ ನಡೆಸಿದ ಗಣ್ಯರಿಗೆ ಗೌರವ
»ಕವಿಯಲ್ಲಿ ಸಮಕಾಲೀನ ಪ್ರಜ್ಞೆ ಇರಬೇಕು- ಪ್ರಾ. ಸೀತಾರಾಮ್ ಶೆಟ್ಟಿ
»ಅರ್ಧ ಶಕ್ತಿ ಪೀಠ: ನಾಸಿಕ್ ಸಪ್ತಶೃಂಗಿ ದೇವಿ
»‘ಎದೆ ತುಂಬಿ ಹಾಡುವೆನು' ಕಾರ್ಯಕರಮದಲ್ಲಿ ಮಣಿಪಾಲದ ಕೋಗಿಲೆ ಮರಿಗೆ ಪ್ರಶಸ್ತಿ
»ಯಕ್ಷಗಾನದಲ್ಲಿನ ಬದಲಾವಣೆಗೆ ಕಲಾವಿದ, ಪ್ರೇಕ್ಷಕರಿಬ್ಬರು ಕಾರಣ: ಗಣಪತಿ ಶಾಸ್ತ್ರಿ
»ಸೂರ್ಯ ಶೇರಿಗಾರ್ ನಿಟ್ಟೂರು ಉಡುಪಿ ಇವರಿಗೆ ಸನ್ಮಾನ
»ಗದುಗಿನ ‘ರತ್ನ’ ಈಗ ‘ಭಾರತ ರತ್ನ’ ;ಎಲ್ಲೆಡೆ ಸಡಗರ,ಸ೦ಭ್ರಮ, ಹರ್ಷ
»ಜ.29 ರಿಂದಚಿತ್ರದುರ್ಗದಲ್ಲಿ 75ನೇ ಸಾಹಿತ್ಯ ಸಮ್ಮೇಳನ
»ಕನ್ನಡ ಸಾಹಿತ್ಯ ಪರಿಷತ್ ನ ಉಡುಪಿ ಜಿಲ್ಲಾ ಘಟಕ ಉದ್ಘಾಟನೆ:ಪರಿಷತ್ ಕಟ್ಟಡಕ್ಕೆ ಶೀಘ್ರವೇ ಮ೦ಜೂರಾತಿ- ಡಿಸಿ
»ನುಡಿಸಿರಿ ಉದ್ಘಾಟನೆಗೆ ನಿಸಾರ್, ಅಧ್ಯಕ್ಷತೆ ಕಣವಿ
»ಕಲೆಯ ಉಳಿವಿಗೆ ಸಮಷ್ಟಿ ಯತ್ನ : ಹೇರಂಜಾಲು ಚಂದ್ರಶೇಖರ ಹೊಳ್ಳ
»ಬರವಣಿಗೆ ನನಗೆ ಸತ್ಯಾನ್ವೇಷಣೆ: ಭೈರಪ್ಪ
»ತೋನ್ಸೆ ಪಡುಮನೆ ಪಾರ೦ಪರಾಗತ ಕ೦ಬಳ
»ರಾಷ್ಟ್ರೀಯ ಭಾಷಾ ನೀತಿ ಜಾರಿಗೆ ಬರಗೂರು ಆಗ್ರಹ
»ಶಾಸ್ತ್ರೀಯ ಸ್ಥಾನ: ಪಿಐಎಲ್‌ ವಜಾಕ್ಕೆ ರಾಜ್ಯ ಆಗ್ರಹ
»ತುಳು ಭಾಷೆಗೆ ಎರಡು ಸಾವಿರ ವರ್‍ಷ ಇತಿಹಾಸ: ಪಾಲ್ತಾಡಿ ರಾಮಕೃಷ್ಣ ಆಚಾರ್
» ಈಗ ಎಲ್ಲೆಲ್ಲೂ ಹರಡುತ್ತಿದೆ ಕನನ್ನಡದ ಕಂಪು
»ಕೊಂಕಣಿ ಜನರು ಎಲ್ಲಾ ಕ್ಷೇತ್ರಗಳಲ್ಲಿ ಸೈಎನಿಸಿಕೊಳ್ಳಬೇಕು : ಖಾರ್ವಿ ಕರೆ
»ಮತಾಂತರ ಬೇಡ ದಲಿತ ಸಮುದಾಯಕ್ಕೆ ಪೇಜಾವರ ಶ್ರೀಗಳ ಕರೆ
»ಸಾಹಿತಿಗಳ ಸ್ವಸಹಾಯ ಸಂಘ ಉತ್ತಮ ಬೆಳವಣಿಗೆ: ಕಲ್ಕೂರ
»ಬ್ರಹ್ಮ ಕಲಶೋತ್ಸವ ಸಿದ್ಧತೆಯಲ್ಲಿ ಉದ್ದಂತೋಡು ತರವಾಡು
»ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ : ನಾಡೋಜನಿಗೆ ಹರ್ಷ
»ಮಾಧವ ಕುಲಕರ್ಣಿ, ಮೋಹನ ಸೋನಗೆ ಕಾಂತಾವರ ಪುರಸ್ಕಾರ ಪ್ರದಾನ
»ಶಾಸ್ತ್ರೀಯ ಭಾಷೆಗೆ ಪದ ಎರವಲು: ಕನ್ನಡ ಮನಸುಗಳ ದ್ವಂದ್ವ
»ರಾಜ್ಯೋತ್ಸವಕ್ಕೆ ಶಾಸ್ತ್ರೀಯ ಸಂಭ್ರಮ .
»ಧರ್ಮಸ್ಥಳ: ದೇವರು ಬಂದರು ಅಂಗಣದೆಡೆಗೆ...
»ಪಾಟೀಲ್ ಪುಟ್ಟಪ್ಪಗೆ ನೃಪತುಂಗ ಪ್ರಶಸ್ತಿ
»ಕನ್ನಡ ನಿಧಿ ಯೋಜನೆಗೆ 10ಕೋಟಿ ಸಂಗ್ರಹ
»ಯುಕ್ತಿ, ಶಕ್ತಿಗಳ ಹೋರಿ ಬೆದರಿಸುವ ಹಟ್ಟಿಹಬ್ಬ
»ಹಂಪಿ ಉತ್ಸವ: ಪರಂಪರೆ ನಡಿಗೆಗೆ ನಾ೦ದಿ
»ಯಕ್ಷಗಾನ ಶಿಕ್ಷಣಕ್ಕೆ ಪ್ರಮಾಣಪತ್ರದ ಮಾನ್ಯತೆ ಅಗತ್ಯ: ರಘುಪತಿ ಭಟ್
»ಜಾನಪದ ಸಾಹಿತಿ ಮುದೇನೂರು ಸಂಗಣ್ಣ ವಿಧಿವಶ
»‘ಯಕ್ಷಗಾನ ಧರ್ಮವೂ ಹೌದು’
»ಪೇಜಾವರ ಸದಾಶಿವರಾವ್ ಸ್ಮಾರಕ ಪ್ರಶಸ್ತಿಗೆ ಅರ್‍ಜಿ ಆಹ್ವಾನ
»ಬ೦ದಿದೆ ಸಡಗರದ ಹಬ್ಬ ದೀಪಾವಳಿ ,ನಿವಾರಿಸಲಿ ಮನದ ಅ೦ಧಕಾರದ ಹಾವಳಿ
»ಮರೆಯಾಗುತ್ತಿರುವ ಸಾ೦ಪ್ರದಾಯಿಕ ಗೂಡುದೀಪಗಳು
»ಗೋರುಚ ಜಾನಪದ ಅಕಾಡೆಮಿ ಅಧ್ಯಕ್ಷ
»ದಿಲ್ಲಿಯಲ್ಲಿ ಯಕ್ಷಲೋಕ ಸೃಷ್ಟಿಸಿದ ಕಾಸರಗೋಡಿನ ಬೊಂಬೆಗಳು
»ಪ್ರದೀಪ್ ಕುಮಾರ್ ಕಲ್ಕೂರರಿಗೆ ಸಾರ್ವಜನಿಕ ಅಭಿನಂದನೆ
»ಮಲೆನಾಡಗಿತ್ತಿಗೆ ದೀಪದೋಕುಳಿ
»ಮುಂಬೈ ಕನ್ನಡಿಗರ ಮನಗೆದ್ದ `ಉಷಾಹರಣ' ನಾಟಕ
»‘ವೈಟ್ ಟೈಗರ್’ ನಾಯಕ ಬೆಂಗಳೂರಿನವ
»ಬೆಳ್ಳಾರೆ: 3ನೇ ವರ್ಷದ ಶಾರದೋತ್ಸವ
»ಸಾಮೂಹಿಕ ಆಚರಣೆಯಿಂದ ಧರ್ಮಜಾಗೃತಿ : ರಾಘವೇಶ್ವರ ಶ್ರೀಗಳು
»ಮಂಗಳೂರಿನ ಅರವಿಂದ್‌‌ ಅಡಿಗರಿಗೆ 'ಬೂಕರ್' ಪ್ರಶಸ್ತಿ’
»ಸಾಹಿತಿ ಆನಂದಿ ಸದಾಶಿವ ರಾವ್ ಇನ್ನಿಲ್ಲ
»ಚಾಮುಂಡಿಬೆಟ್ಟದಲ್ಲಿ ವಿಜೃಂಭಣೆಯ ಮಹಾರಥೋತ್ಸವ
»ಸನಾತನ ಧರ್ಮ ಅತ್ಯ೦ತ ದೊಡ್ಡ ಧರ್ಮ,ಉಳಿದ ಧರ್ಮ ಹುಟ್ಟಲು ಇದು ಕಾರಣ;ಸದಾನ೦ದ ಗೌಡ
»ಕೇರಳದ ಪ್ರೀತಿಯ ಸಿಸ್ಟರ್ ಈಗ ಸಂತ ಅಲ್ಫೋನ್ಸಾ
»ತುಳು ಅಕಾಡೆಮಿ ಅಧ್ಯಕ್ಷರಾಗಿ ಸಾಹಿತಿ ಪಾಲ್ತಾಡು ರಾಮಕೃಷ್ಣ ಆಚಾರ್
»ಮುಂಬೈಯಲ್ಲಿ ಸುಬ್ರಾಯ ಭಟ್ಟರಿಗೆ ಸನ್ಮಾನ
»ಗೋಕರ್ಣ ಪುನರುತ್ಥಾನಕ್ಕೆ ನಾಂದಿ
»ಕಾರಂತರು ಒಂದು ವಿಸ್ಮಯ: ಅಂಬಾತನಯ ಮುದ್ರಾಡಿ
»ಮಿತ್ತ ಬೈಲು ಯಮುನಕ್ಕ ತುಳುನಾಡಿನ ಸಾಂಸ್ಕೃತಿಕ ಕೃತಿ: ಡಿ.ಕೆ. ಚೌಟ
»ನಾದವೈಭವಂನ ಭಜನಾ ನಾದಾಭಿಯಾನಕ್ಕೆ ಚಾಲನೆ
»ಫ್ರೆಂಚ್ ಲೇಖಕ ಲೆ ಕ್ಲೇಜಿಯೊಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ
»ಇಸ್ಲಾ೦ ಧರ್ಮದ ಐದು ಆಧಾರ ಸ್ಥ೦ಭಗಳು
»ನಾಳೆ ನಗರದಲ್ಲಿ ಕಾರಂತ ಹುಟ್ಟು ಹಬ್ಬ
»ಮೂವರು ಗಣ್ಯರಿಗೆ ರಾಜ್ಯ ಮಟ್ಟದ ಪ್ರಶಸ್ತಿ
»ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಮೊತ್ತ 1 ಲಕ್ಷರು.ಗೆ ಏರಿಕೆ
»ಭಾರತೀಯ ತತ್ತಶಾಸ್ತ್ರ ಪ್ರವೇಶ ಗ್ರಂಥ ಲೋಕಾರ್ಪಣೆ
»ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ
»ಕರ್ನಾಟಕ ಸಾಹಿತ್ಯ ಪರಿಷತ್ ಉದಯ
»ಹೂವಿನಕೋಲಿಗೆ ಮನಸೋತ ಸೋನಿಯಾ
»ರವಿ ಬೆಳಗೆರೆ ಅವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ
»ಮಾನವೀಯತೆಯೇ ನಿಜವಾದ ಧರ್ಮ : ಶ್ರೀ ಪೂರ್ಣಕಾಮಾನಂದಜೀ
»`ಮಕ್ಕಳ ಮೊಲಕ ಕನ್ನಡ ಕಸ್ತೂರಿಯನ್ನು ಪಸರಿಸಿ'
»ಐತಿಹಾಸಿಕ ಮೈಸೂರು ದಸರಾಕ್ಕೆ ಸಿದ್ದಗಂಗಾಶ್ರೀ ಚಾಲನೆ
»ನವಮದ ಮಹತ್ವ ಹೊತ್ತ ನವರಾತ್ರಿ
»ಈದಲ್ ಫಿತ್ರ್ `ಮಾನವ ಮೈತ್ರಿಗೆ ರಮ್ಜಾನ್ ಸಂದೇಶ'
»ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಪ್ರಕಟ
»ಕಸಾಪಗೆ ಪರ್ಯಾಯವಾಗಿ ಕರ್ನಾಟಕ ಸಾಹಿತ್ಯ ಪರಿಷತ್!
»ಜಿಲ್ಲಾ ಕಾರಾಗೃಹದಲ್ಲಿ ಬಹುಭಾಷಾ ಕವಿಗೋಷ್ಟಿ !
»ದೆಹಲಿಯಲ್ಲಿ ಮಿಂಚಿದ ‘ಮಳೆಹಕ್ಕಿ’
»ಐವರು ಗಣ್ಯರಿಗೆ ಅನುವಾದ ಅಕಾಡೆಮಿ ಗೌರವ ಪ್ರಶಸ್ತಿ
»ಚಾಂದ್ರಾಯಣ ವ್ರತ
»ಮತಾಂತರ ವಿರೋಧಿ ಕಾಯ್ದೆಗೆ ಪೇಜಾವರಶ್ರೀ ಆಗ್ರಹ
»ಶಿಶುನಾಳ ಶರೀಫರು
»ಶಿಕ್ಷಣದಲ್ಲಿ ಗಮಕ ಕಲೆ ಕಡ್ಡಾಯಕ್ಕೆ ಗೊತ್ತುವಳಿ ಮಂಡನೆ
»ವಿದೇಶದ ಕ್ರೈಸ್ತ ಶಾಲೆಗಳಲ್ಲಿ ವೇದಾಂತ ಪಾಠ!
»ಗೋಕರ್ಣ, ಮತಾಂತರ ಹಾಗೂ ನ್ಯೂ ಲೈಫ್!
»ವಸುಧೈವ ಕುಟುಂಬಕಮ್
»ವಿವೇಕಾನಂದ ಎಂಬ ವೀರ ಸನ್ಯಾಸಿ
»‘ಗೋಕರ್ಣ: ಸ್ಥಿರಾಸ್ತಿ ವರ್ಗಾವಣೆಯಾಗಿಲ್ಲ ’
» 8 ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ.ಗಮಕಿಗಳಿಗೆ ‘ಕುಮಾರವ್ಯಾಸ’ ಪ್ರಶಸ್ತಿ- ಆಚಾರ್ಯ
»ಹಿಂದೂ ಧರ್ಮ ಅಪಾರ್ಥಕ್ಕೆ ಒಳಗಾಗಿದೆಯೇ?
»`ಆದೇಶದಿಂದ ಕನ್ನಡದ ಕಳಕಳಿ ಮೊಡದು'
»ಕೋಳ್ಯೂರು ಅವರಿಗೆ ಮಂಡೆಚ್ಚ ಪ್ರಶಸ್ತಿ
»ಆತ್ಮಲಿಂಗ-ಭಕ್ತರ ಮಧ್ಯೆ ಮಠ ಗೋಡೆಯಾಗಲ್ಲ: ರಾಘವೇಶ್ವರ ಶ್ರೀ ಘೋಷಣೆ
»ಕಟೀಲಿನಲ್ಲಿ 19 ರಿಂದ ರಾಜ್ಯ ಗಮಕ ಕಲಾ ಸಮ್ಮೇಳನ
»ಗಂಗೂಬಾಯಿ, ಭೀಮಸೇನರಿಗೆ ಸವಾಯಿ ಗಂಧರ್ವ ಪ್ರಶಸ್ತಿ
»ರಾಘವೇಶ್ವರ ಸ್ವಾಮಿ ಪುರ ಪ್ರವೇಶ. ಗೋಕರ್ಣದಲ್ಲಿ ‘ಮಹಾಸಂಕಲ್ಪ ಸಮಾವೇಶ’.ಹಸ್ತಾಂತರಕ್ಕೆ ಸ್ವರ್ಣವಲ್ಲಿಶ್ರೀ ವಿರೋಧ
»ಹಿಂದಿ ಹೇರಿಕೆ ತಡೆಗೆ 12 ಸೂತ್ರಗಳು!!
»ಎಸೆಸೆಲ್ಸಿ ಪ್ರಥಮ ರ್‍ಯಾಂಕ್ ಪಡೆದಿದ್ದ ಅರವಿಂದ
»ದೇವಾಲಯಗಳ ಹಸ್ತಾಂತರ ಜಾತಿ ಸಂಘಷ೯ಕ್ಕೆ ಮೂಲವಾದೀತೇ ?
»ಅಧ್ಯಾತ್ಮಕ ಪಾಶ್ಚಾತ್ಯ ಸಂಸ್ಕೃತಿ ಧಕ್ಕೆಯಾಗದಿರಲಿ: ಕಲ್ಕೂರ
» ಅಮೆರಿಕದಲ್ಲಿ ಕನ್ನಡದ ಕ೦ಪು
»ನಲ್ಲೂರು - ಸಾರಥಿಯಾದ ಬಗೆ
»9/11- ಅವತ್ತು ಅಮೆರಿಕೆಯೇನು? ಇಡೀ ಜಗತ್ತೇ ನಡುಗಿತ್ತು!
»ಚೌತಿ ಹಬ್ಬ ಮತ್ತು ಪ್ಯಾಸೆಂಜರ್ ರೈಲಿನ ಪ್ರಯಾಣ!
»'ಬೂಕರ್' ಪ್ರಶಸ್ತಿ ಸಾಲಿನಲ್ಲಿ ಮಂಗಳೂರಿನ ಅರವಿಂದ್‌‌
»ಹೃದಯದಿಂದ ಸ್ಫುರಿಸಿದ ಭಾವ ದೀಪ್ತಿ ‘ಕಾವ್ಯ’: ಬಿ. ಕೃಷ್ಣ ಪೈ
»ವಯೋಲಿನ್ ಮಾಂತ್ರಿಕ ಕುನ್ನಕುಡಿ ವೈದ್ಯನಾಥನ್ ನಿಧನ
»ವಿಶ್ವ ಕನ್ನಡ ಸಮ್ಮೇಳನದ ಸುತ್ತ ಅನುಮಾನದ ಹುತ್ತ
»ಖ್ಯಾತ ಯಕ್ಷಗಾನ ಕಲಾವಿದ ಮಿಜಾರು ಅಣ್ಣಪ್ಪ ಅವರಿಗೆ ಯಕ್ಷ ಕಲಾನಿಧಿ ಪ್ರಶಸ್ತಿ ಪ್ರಧಾನ
»ಬೆಂಗಳೂರಿನಲ್ಲಿ ಯಕ್ಷ ಅಕಾಡೆಮಿ ಕೇಂದ್ರ : ಕುಂಬ್ಳೆ ಸುಂದರ ರಾವ್
»ಮುದ್ರಾಡಿ, ತಲೆಂಗಳ, ಕೋಳ್ಯೂರು ಅವರಿಗೆ ಕುಕ್ಕಿಲ, ದಿವಾಣ, ಕರ್ಗಲ್ಲು ಪ್ರಶಸ್ತಿ
»ಬಡಗುತಿಟ್ಟು ಯಕ್ಷಗಾನದ ಹಿರಿಯ ಭಾಗವತ ನೆಲ್ಲೂರು ಮರಿಯಪ್ಪ ಅಚಾರ್ ನಿಧನ
»ರಾಷ್ಟ್ರೀಯ ತೆಂಕಣ ಯಕ್ಷೋತ್ಸವ ...
»