ಮರೆಯಾಗುತ್ತಿರುವ ಸಾ೦ಪ್ರದಾಯಿಕ ಗೂಡುದೀಪಗಳು |
ಪ್ರಕಟಿಸಿದ ದಿನಾಂಕ : 2008-10-26
ಉಡುಪಿ,ಅ.25:ಈಗ ಎಲ್ಲೆಲ್ಲೂ ವಿದೇಶಿ ನಿಮಿತ್ತ ವಸ್ತುಗಳೇ ರಾರಾಜಿಸುತ್ತಿರುವ೦ತೆಯೇ ಸಾ೦ಪ್ರದಾಯಿಕ ಗೂಡುದೀಪಗಳು ಈಗ ಚೈನಾ ಮೇಡ್ ಗೂಡುದೀಪಗಳು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿವೆ.ಸಾ೦ಪ್ರದಾಯಿಕ ಗೂಡುದೀಪಗಳನ್ನು ಕೇಳುವವರಿಲ್ಲ ಎ೦ಬ ಸ್ಥಿತಿ ನಿರ್ಮಾಣವಾಗಿದೆ.
ಇ೦ದು ಸಾ೦ಪ್ರದಾಯಿಕ ಗೂಡುದೀಪಗಳು ಮರೆಯಾಗಿದ್ದು ಅದರ ಜಾಗದಲ್ಲಿ ಪ್ಲಾಸ್ಟಿಕ್ ತುಳಸಿಕಟ್ಟೆ, ಜೋಪಡಿ, ಮ೦ಟಪ, ತಾವರೆ, ಹಕ್ಕಿ,ದೋಣಿ, ಹಣತೆ, ವಿಮಾನ, ಬಸ್, ಕಾರ್, ಬಲೂನ್ ಮು೦ತಾದ ಮಾದರಿಯ ಗೂಡುದೀಪಗಳು ಬ೦ದಿವೆ.ಜೊತೆಗೆ ಬಟ್ಟೆಗಳಿ೦ದ ತಯಾರಿಸಿರುವ ಗೂಡುದೀಪಗಳು ಹೆಚ್ಚು ಬೇಡಿಕೆಯನ್ನು ಪಡೆಯುತ್ತಿವೆ.
ಸಾಮಾನ್ಯವಾಗಿ ಸಾ೦ಪ್ರದಾಯಿಕ ಗೂಡುದೀಪಗಳನ್ನು ಬಿದಿರಿನ ಕಡ್ಡಿಗಳನ್ನು ಬಳಸಿ ತಯಾರಿಸಲಾಗುತ್ತದೆ.ಇವುಗಳನ್ನು ತಯಾರಿಸಲು ಸುಮಾರು ಒ೦ದು ವಾರ ಕಾಲಾವಕಾಶ ಬೇಕಾಗಿರುವುದರಿ೦ದ ಶಾಶ್ವತವಾಗಿ ಮೊಲೆಗೆ ಬಿದ್ದಿದೆ ಎ೦ದು ಉಡುಪಿ ಸಮೀಪದ ಗು೦ಡ್ಮಿಯ ಗಣೇಶ್ ಹೇಳಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-26
|
|
|