ವರದಕ್ಷಿಣೆ ಪ್ರಕರಣ ಮಂಡ್ಯ ಜಿಲ್ಲೆಯ ಸುರೇಶ್ ಗೌಡ ಬಂಧನ |
ಪ್ರಕಟಿಸಿದ ದಿನಾಂಕ : 2008-10-26
ಕಳೆದ ಐದು ತಿಂಗಳ ಹಿಂದೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಸದ್ಯ ಮುಂಬಯಿಯ ಚೆಂಬೂರು ನಿವಾಸಿ ಸುರೇಶ್ ಗೌಡ ಇವನನ್ನು ತನ್ನ ನವವಿವಾಹಿತ ಪತ್ನಿ ಸುನೀತಾ ಗೌಡ (22.)ಗೆ ವರದಕ್ಷಿಣೆ ಸಂಬಂಧಿನೀಡಿದ ಕೊಲೆ ಪ್ರಯತ್ನಕ್ಕೆ ಬೊರಿವಿಲಿ ಪೂರ್ವದ ಕಸ್ತೂರ್ಬಾ ರೋಡ್ ಪೋಲಿಸರು ನಿನ್ನೆ ಬಂಧಿಸಿರುತ್ತಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ್‌ನ ತಂದೆ ಚೆಂಬೂರು ಶ್ರೀ ಶನೀಶ್ವರ ಮಂದಿರದ ಧರ್ಮಾಧಿಕಾರಿ ರಾಮುಸ್ವಾಮಿ ಗೌಡ, ಆತನ ತಾಯಿ ಜಯಮ್ಮ, ಚೆಂಬೂರು ಮನೆಯಲ್ಲೇ ವಾಸಿಸುತ್ತಿದ್ದ ಸುನೀತಾಳ ಮೈದುನ ಆನಂದ್ ಗೌಡ, ದೊಡ್ಡಮ್ಮ ಪಾರ್ವತಿ ಗೌಡ ಹಾಗೂ ಬಲರಾಮ ಗೌಡ, ಫೋನ್ ಮೂಲಕ ಬೆದರಿಕೆಯೊಡ್ಡುತ್ತಿದ್ದ ಅಮೇರಿಕಾದಲ್ಲಿ ನೆಲೆಯಾಗಿರುವ ನಾದಿನಿ ಪ್ರೇಮ ಗೌಡ ಇವರ ವಿರುದ್ಧ ಕೇಸು ದಾಖಲಿಸಲಾಗಿದ್ದು, ಪೋಲಿಸರು ಇವರೆಲ್ಲರ ಶೋಧದಲ್ಲಿದ್ದಾರೆ.
ವರದಕ್ಷಿಣೆ ಸಂಬಂಧಿಸಿ ಕಿರುಕುಳ ಆರಂಭಿಸಿದ ಸುರೇಶ್ ಗೌಡ ದಿನಾಲೂ ಈ ಸಂಬಂಧಿ ತಕರಾರು ಎತ್ತಿ ಸುನೀತಾಳಿಗೆ ಮಾನಸಿಕ ಹಿಂಸೆ ನೀಡುತ್ತಿದ್ದು, ಬಳಿಕ ಸಿಗರೇಟು ಬೆಂಕಿಯಿಂದ ಕಾಯಿಸಿ ಜೊತೆಗೆ ಮತ್ತಿತರ ಆಯುಧಗಳಿಂದ ದೈಹಿಕ ಹಿಂಸೆ ನೀಡಿ ಕೊಲೆ ಬೆದರಿಕೆ ನೀಡುತ್ತಿದ್ದ ಎನ್ನಲಾಗಿದೆ.
ಆದರೂ ಎಲ್ಲವನ್ನೂ ಸಹಿಸುತ್ತಿದ್ದ ಸುನೀತಾಳಿಗೆ ಪತಿ ಸುರೇಶ್ ಗೌಡ ಕಳೆದ 2008ರ ಜೂನ್ 21ರ ರಾತ್ರಿ ವಿಷವನ್ನೇ ಕುಡಿಸಿ ಮುಗಿಸುವ ಪ್ರಯತ್ನ ಮಾಡಿದ್ದು, ಅಷ್ಟರಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಈತನೇ ಮನೆಯವರನ್ನೊಳಗೂಡಿ ಸ್ಥಳೀಯ ಆಸ್ಪತ್ರೆಗೆ ಒಯ್ದು ಇದು ತಪ್ಪು ತಿಳುವಳಿಕೆಯಿಂದ ನಡೆದ ಘಟನೆ ಎಂದು ಆಸ್ಪತ್ರೆಗೆ ದಾಖಲಿಸಿ ಪೋಲಿಸರಿಗೆ ದೂರು ನೀಡದೆ ಸುನೀತಾಳಿಗೆ ಮೌನವಾಗಿರುವಂತೆ ಪ್ರಕರಣ ಮುಚ್ಚಿ ಹಾಕಿದ್ದರೆನ್ನಲಾಗಿದೆ.
ಇದಾದ ಮೇಲೆ ಕಳೆದ ಮಂಗಳವಾರ ತವರು ಮನೆಗೆ ಬಂದಿದ್ದ ತನ್ನ ಮಗಳ ಮೌನವನ್ನಾವರಿಸಿದ ಸಂಧಿಗ್ಧ ನಡೆಯನ್ನು ಪ್ರೆಶ್ನಿಸಿದ ಸುನೀತಾಳ ಮಾತಾಪಿತರಾದ ರಂಗಪ್ಪ ಗೌಡ ಮತ್ತು ಶ್ರೀಮತಿ ಅನುಸೂಯ ಗೌಡ ಇವರು ವಿಷಯ ತಿಳಿದು ಪ್ರಕರಣವನ್ನು ಬೆಳಕಿಗೆ ತಂದು ಸುರೇಶ್ ಮತ್ತು ಆತನ ಕುಟುಂಬಸ್ಥರಿಗೆ ತಿಳಿಸಿ ಮಾತುಕತೆಗೆ ಯತ್ನಿಸಿದ್ದರು.
ಆದರೆ ಮತ್ತೆ ಅತ್ತೆ ಮನೆಗೆ ಬಂದ ಸುರೇಶ್ ತನ್ನ ಪತ್ನಿ ಸುನೀತಾಳೊಡನೆ ವರದಕ್ಷಿಣೆ ಹಣದ ಬಗ್ಗೆ ಗಲಾಟೆ ಎಬ್ಬಿಸಿ ಕೊಲೆ ಬೆದರಿಕೆ ಹಾಕಿ ಹೊರಟಿದ್ದನು. ಅಲ್ಲದೆ ಅದೇ ರಾತ್ರಿ ರಾಜಿಸಂಧಾನ ಮಾಡುವ ನೆಪದಲ್ಲಿ ಬೊರಿವಲಿಯ ರಾಮ್‌ದೇವ್ ಹೊಟೇಲಿನಲ್ಲಿ ಬರುವಂತೆ ರಂಗಪ್ಪ ಗೌಡರನ್ನು ಕರೆದಿದ್ದು, ಜೊತೆಗೆ ಕೆಲವು ಬಾಡಿಗೆ ಜನರನ್ನು ಕರೆದು ತಂದು ರಾಮ್‌ದೇವ್ ಹೊಟೇಲಿನಲ್ಲಿ ಗಲಾಟೆ ಮಾಡಿ ದ್ವಂಸಗೈದರೆನ್ನಲಾಗಿದ್ದು, ಈ ಬಗ್ಗೆ ಬೊರಿವಿಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮರುದಿನ ಬುಧವಾರ ಬೊರಿವಿಲಿಯ ತನ್ನ ತವರು ಮನೆಯಲ್ಲೇ ಇದ್ದ ಸುನೀತಾಳು ಪತಿ ಸುರೇಶ್ ತನ್ನನ್ನು ಕೊಲ್ಲುವುದಾಗಿ ಮಾನಸಿಕವಾಗಿ ನೊಂದು ಹೆದರಿ ಕಳೆದ ಬುಧವಾರ ಮಧ್ಯಾಹ್ನ 2.20ರ ವೇಳೆಗೆ ವಿಷವನ್ನು ಸೇವಿಸಿದಿದ್ದು, ಜೀವನ್ಮರಣದ ಹೋರಾಟದಲ್ಲಿದ್ದ ಸುನೀತಳನ್ನು ಕೂಡಲೇ ಬೊರಿವಿಲಿಯ ನರೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯಿತ್ತಿದ್ದಾರೆ.
ಸದ್ಯ ವಿಷಯ ತಿಳಿದ ಗೌಡ ಸಮೂದಾಯದ ರಂಗಪ್ಪರ ಭಾರೀ ಸಂಖ್ಯೆಯ ಅಭಿಮಾನಿಗಳು ಸುನೀತಾಳನ್ನು ಕಾಣಲು ಆಸ್ಪತ್ರೆಯಲ್ಲಿ ಜಮಾಯಿಸುತ್ತಿದ್ದು, ಪತ್ರಿಕಾ ಮಾಧ್ಯಮದ ವರದಿಗಾರರು, ಹಲವಾರು ಟಿವಿ ವಾಹಿನಿಯ ಪ್ರತಿನಿಧಿಗಳು ಸಾಲುಗಟ್ಟಿ ವರದಿಗಾಗಿ ಜಮಾಗೊಂಡಿರುವುದು ವಿಶೇಷವಾಗಿದೆ.
ಜಯಲಕ್ಷ್ಮೀ ಕೋ. ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಇದರ ಕಾರ್ಯದರ್ಶಿ, ಶ್ರೀ ಆದಿ ಚುಂಚನಗಿರಿ ಸೇವಾ ಸಮಿತಿ ಮುಂಬಯಿ ಇದರ ಉಪಾಧ್ಯಕ್ಷ, ಓಂ ಸಾಯಿನಾಥ್ ಆಟೋ ಕನ್ಸಲ್ಟೆಂಟ್‌ನ ಮಾಲಿಕರೂ, ಮಹಾನಗರದಲ್ಲಿನ ಹಿರಿಯ ಹೊಟೇಲ್ ಉದ್ಯಮಿ ರಂಗಪ್ಪ ಸಿ. ಗೌಡ ಮತ್ತು ಶ್ರೀಮತಿ ಅನುಸೂಯ ಆರ್. ಗೌಡ ಇವರ ಸುಪುತ್ರಿ ಯಾಗಿದ್ದಾರೆ.
ರಾಮುಸ್ವಾಮಿ ಗೌಡ ಇವರು ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕೊಟ್ಟೆಗಳ್ಳಿ ಇಲ್ಲಿಯವರಾಗಿದ್ದು,ಚೆಂಬೂರುನಲ್ಲಿ ತಮ್ಮ ಕುಟುಂಬಸ್ಥರ ಟ್ರಸ್ಟ್ ಮೂಲಕ ತನ್ನ ಆಡಳಿತ ಮೊಕ್ತೇಸರದಲ್ಲಿ ಶ್ರೀ ಶನೀಶ್ವರ ಮಂದಿರವನ್ನು ನಡೆಸುತ್ತಿದ್ದಾರೆ.
ರಂಗಪ್ಪ ಸಿ. ಗೌಡ ಇವರು ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯ ಪಟ್ಟಣ ತಾಲೂಕಿನ ಹೊಣ್ಣೇನ ಹಳ್ಳಿಯ ಭೂಕ ಇಲ್ಲಿನ ಮೂಲ ನಿವಾಸಿ ಆಗಿದ್ದು, ಕಳೆದ ಹಲವಾರು ವರುಷಗಳಿಂದ ಮುಂಬಯಿಯ ಬೊರಿವಿಲಿ ಪೂರ್ವದ ದತ್ತಪಾಡ ರಸ್ತೆಯಲ್ಲಿನ ಮೆಜೆಸ್ಟಿಕ್‌ನಲ್ಲಿ ವಾಸವಾಗಿರುವರು.
ತಮ್ಮ ಮೂರು ಮಕ್ಕಳಲ್ಲಿ ಓರ್ವ ಸುಪುತ್ರನಿದ್ದು, ಇಬ್ಬರು ಪುತ್ರಿಯರು. ಆ ಪಯ್ಕಿ ಪ್ರಥಮ ಸುಪುತ್ರಿ ಸುನೀತಾ ಗೌಡ ಇವರನ್ನು ರಾಮಸ್ವಾಮಿ ಇವರ ಪುತ್ರ ಸುರೇಶ್ ಗೌಡನಿಗೆ ಮದುವೆ ಮಾಡಿ ಕೊಟ್ಟಿದ್ದರು.
ಪ್ರಕರಣ ದಾಖಲಿಸಿದ ಬೊರಿವಿಲಿ ಕಸ್ತೂರ್ಬಾ ರೋಡ್ ಪೋಲಿಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಚಿತ್ರ / ವರದಿ : ರೋನ್ಸ್ ಬಂಟ್ವಾಳ್ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-26
|
|
|