ಭಾರತೀಯ ಜನತಾ ಪಾರ್ಟಿ ದಕ್ಷಿಣ ಭಾರತ ಘಟಕದ ಉಪಾಧ್ಯಕ್ಷರಾಗಿ ಮೋರ್ಲ ರತ್ನಾಕರ ಶೆಟ್ಟಿ ಆಯ್ಕೆ |
ಪ್ರಕಟಿಸಿದ ದಿನಾಂಕ : 2008-10-26
ಭಾರತೀಯ ಜನತಾ ಪಾರ್ಟಿ ದಕ್ಷಿಣ ಭಾರತ ಘಟಕದ ಉಪಾಧ್ಯಕ್ಷರಾಗಿ ಮೋರ್ಲ ರತ್ನಾಕರ ಶೆಟ್ಟಿ ಆಯ್ಕೆ
ಮುಂಬಯಿ ಪ್ರದೇಶ ಭಾರತೀಯ ಜನತಾ ಪಕ್ಷದ ದಕ್ಷಿಣ ಭಾರತ ಘಟಕದ ಉಪಾಧ್ಯಕ್ಷರಾಗಿ ಸಮಾಜ ಸೇವಕ, ಸಂಘಟಕ ಮೋರ್ಲ ರತ್ನಾಕರ ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ.
ಬಿಜೆಪಿಯ ದಕ್ಷಿಣ ಭಾರತೀಯ ವಿಭಾಗೀಯ ಸಮಾವೇಶವು ಇತ್ತೀಚೆಗೆ ದಾದರ್‌ನ ಕಥಕ್ ಭವನದಲ್ಲಿ ಜರಗಿದ್ದು, ಈ ಸಮಾವೇಶದಲ್ಲಿ ಶಾಸಕ ಹಾಗೂ ಮುಂಬಯಿ ಪ್ರದೇಶ ಬಿಜೆಪಿ ಅಧ್ಯಕ್ಷರಾದ ಗೋಪಾಲ ಸಿ. ಶೆಟ್ಟಿ ಇವರು ಮೋರ್ಲ ರತ್ನಾಕರ ಶೆಟ್ಟಿಯವರನ್ನು ಉಪಾಧ್ಯಕ್ಷರನ್ನಾಗಿ ನೇಮಕಾತಿಗೊಳಿಸಿದ್ದು, ಪ್ರಕಟನೆಯಲ್ಲಿ ತಿಳಿಸಿದರು.
ಬಿಜೆಪಿಯಲ್ಲಿ ಸುಮಾರು ಒಂದುವರೆ ದಶಕದಿಂದ ಅನೇಕನೇಕ ಹುದ್ದೆಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಮೋರ್ಲ ಇವರು ರಾಜಕೀಯ ವಲಯದಲ್ಲಿ ತನ್ನದೇ ಆದ ಪ್ರತಿಷ್ಟೆಯನ್ನು ಗಳಿಸಿರುವರು.
ಅಂಧೇರಿ ಜೆ. ಬಿ. ನಗರದ ಬಿಜೆಪಿಯ ವಾರ್ಡ್‌ನ ಖಜಾಂಜಿಯಾಗಿ, ಉತ್ತರ-ಪಶ್ಚಿಮ ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಕಚೇರಿ ಮುಖ್ಯಸ್ಥರಾಗಿ, ದಕ್ಷಿಣ ಭಾರತ ವಿಭಾಗದ ಸಂಚಾಲಕರಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಮೋರ್ಲರು ಈ ತನಕ ಮುಂಬಯಿ ಬಿಜೆಪಿ ದಕ್ಷಿಣ ಭಾರತ ಘಟಕದ ಕಾರ್ಯದರ್ಶಿಯಾಗಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-26
|
|
|