‘ಸ್ವಾದ್ವಿ ’ ಸಹಿತ ಮೂವರ ಬಂಧನ |
ಪ್ರಕಟಿಸಿದ ದಿನಾಂಕ : 2008-10-25
ಹೊಸದಿಲ್ಲಿ: ಮಾಲೆಗಾಂವ್ ಹಾಗೂ ಮೋಡಸ ಸ್ಪೋಟ ಪ್ರಕರಣಗಳಿಗೆ ಸಂಬಂಸಿದಂತೆ ಹಿಂದೂ ಜಾಗರಣಾ ಮಂಚವೆಂಬ ಸಂಘಟನೆಗೆ ಸೇರಿದವರನ್ನೆಲಾದ ಒಬ್ಬ ಮಹಿಳೆ ಸೇರಿದಂತೆ ಮೂರು ಮಂದಿಯನ್ನು ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳವು ಬಂಸಿದ್ದು, ಕೊಲೆ, ಕೊಲೆಯತ್ನ, ಉದ್ದೇಶಿತ ಹಿಂಸೆ ಹಾಗೂ ಸೋಟಕ ಕಾಯ್ದೆಯನ್ವಯ ಆರೋಪ ಹೊರಿಸಲಾಗಿದೆ. ಅವರಿಗೆ ನ.೩ರವರೆಗೆ ಪೊಲೀಸ್ ಕಸ್ಟಡಿ ವಿಸಲಾಗಿದೆ.
ಬಂತರನ್ನು ಇಂಧೋರ್‌ನ ಶ್ಯಾಂಲಾಲ್ ಭಂವರ್‌ಲಾಲ್, ಶಿವನಾರಾಯಣ ಸಿಂಗ್ ಹಾಗೂ ೨೦ರ ಹರೆಯದ ಸ್ವಾ ಪ್ರಜ್ಞಾಸಿಂಗ್ ಠಾಕೂರ್ ಎಂದು ಗುರುತಿಸಲಾಗಿದೆ.
ಪ್ರಜ್ಞಾ, ವಿಶ್ವ ಹಿಂದೂ ಪರಿಷತ್‌ನ ಮಹಿಳಾ ವಿಭಾಗವಾಗಿರುವ ದುರ್ಗಾ ವಾಹಿನಿಯ ಸದಸ್ಯೆಯೆನ್ನಲಾಗಿದ್ದು, ಆಕೆಯನ್ನು ಸೂರತ್‌ನಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಬಾಂಬ್ ದಾಳಿಗೆ ಬಳಸಲಾದ ಮೋಟಾರ್ ಬೈಕ್ ಆಕೆಗೆ ಅಥವಾ ಆಕೆಯ ಸಂಬಂಕರಿಗೆ ಸೇರಿದುದೆನ್ನಲಾಗಿದೆ. ವಾಹನದ ನೋಂದಣಿ ಹಾಗೂ ಚಾಸಿ ಸಂಖ್ಯೆಗಳನ್ನು ರಾಸಾಯನಿಕ ಬಳಸಿ ಅಳಿಸಲಾಗಿತ್ತು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಗ.ಕ.ಕರಾವಳಿ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-25
|
|
|