ದುಬೈ: ವಿಲ್ಲಾ ಹಂಚಿಕೊಳ್ಳುತ್ತಿರುವ ಕುಟುಂಬಗಳಿಗೆ ತರವುಗೊಳಿಸಿದ್ದ ಗಡುವು ಮುಕ್ತಾಯ |
ಪ್ರಕಟಿಸಿದ ದಿನಾಂಕ : 2008-10-25
ಇಬ್ಬಂದಿಯಲ್ಲಿ ಹಲವು ಕುಟುಂಬಗಳು
ದುಬೈ, ಅಕ್ಟೋಬರ್ 25: ಒಂದು ವಿಲ್ಲಾ-ಒಂದು ಕುಟುಂಬ ಅಭಿಯಾನದಲ್ಲಿ ಒಂದು ವಿಲ್ಲಾವನ್ನು ಹಂಚಿಕೊಳ್ಳುತ್ತಿರುವ ಕುಟುಂಬಗಳು ಬೇರೆ ವ್ಯವಸ್ಥೆ ಮಾಡಿಕೊಳ್ಳಲು ನಿನ್ನೆ ಕಡೆಯದಿನವಾಗಿದ್ದು ಹಲವರು ಇನ್ನೂ ತಮ್ಮ ಹಳೆಯ ಮನೆಗಳಲ್ಲಿಯೇ ಉಳಿಸಿದ್ದಾರೆ. ನಗರದ ಜುಮೇರಾ, ಉಮ್ಮ್ ಸುಖೇಯಿಮ್, ಅಲ್ ಬರ್ಷಾ, ದ ಸ್ಪ್ರಿಂಗ್ಸ್ ಮೊದಲಾದ ಪ್ರದೇಶಗಳಲ್ಲಿರುವ ವಿಲ್ಲಾಗಳ ಕುಟುಂಬಗಳು ಇನ್ನೂ ಹೊರಹೋಗಬೇಕಾಗಿದೆ. ಇವರಲ್ಲಿ ಹಲವರು ತಮಗೆ ಮುನಿಸಿಪಾಲಿಟಿಯಿಂದ ಯಾವುದೇ ನೋಟೀಸು ಬರದೇ ಇರದಿರುವುದು ಕಾರಣ ನೀಡಿದರೆ ಇನ್ನೂ ಹಲವರು ಪರ್ಯಾಯ ಮನೆಗಳನ್ನು ಪಡೆಯಲು ವಿಫಲರಾಗಿದ್ದಾರೆ.
ವಿಲ್ಲಾಗಳನ್ನು ತೆರವುಗೊಳಿಸಲು ಮೂವತ್ತು ದಿನಗಳ ಗಡುವು ನೀಡಲಾಗಿದ್ದು ನಿನ್ನೆಗೆ ಈ ಗಡುವು ಮುಗಿದಿದೆ. ಈ ಅವಧಿಯ ಬಳಿಕ ಮುನಿಸಿಪಾಲಿಟಿ ಆ ವಿಲ್ಲಾಗಳ ವಿದ್ಯುತ್ ಹಾಗೂ ನೀರು ಸರಬರಾಜನ್ನು ನಿಲ್ಲಿಸಬಹುದಾಗಿದೆ. ಹಲವು ವಿಲ್ಲಾಗಳಲ್ಲಿ ಈಗಾಗಲೇ ವಿದ್ಯುತ್ ಹಾಗೂ ನೀರಿನ ಸರಬರಾಜನ್ನು ನಿಲ್ಲಿಸಲಾಗಿದೆ. ಈಗಾಗಲೇ ತಮ್ಮ ಮಕ್ಕಳನ್ನು ಸಮೀಪದ ಶಾಲೆಗಳಲ್ಲಿ ಸೇರಿಸಿರುವ ಕುಟುಂಬಗಳು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿವೆ. ದುಬೈ ನಗರದಲ್ಲಿ ಬಾಡಿಗೆ ವಿಪರೀತ ಏರಿದ್ದು ಹಲವರು ದೂರದ ಅಜ್ಮಾ, ಫ್ಯೂಜೈರಾ ಗಳಿಗೆ ತೆರಳುತ್ತಿದ್ದಾರೆ. ತಮ್ಮ ಮಕ್ಕಳ ಟೀಸಿ ಪಡೆದು ಅಲ್ಲಿಯ ಶಾಲೆಗಳಲ್ಲಿ ದಾಖಲಾತಿಗೆ ಪ್ರಯತ್ನಿಸುತ್ತಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ದ ನ್ಯಾಶನಲ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-25
|
|
|