ದೋಹಾ: ಊಟದಲ್ಲಿ ಹುಳ : 350 ಕಾರ್ಮಿಕರಿಂದ ಬಹಿಷ್ಕಾರ |
ಪ್ರಕಟಿಸಿದ ದಿನಾಂಕ : 2008-10-25
ಊಟ ವಿಲೇವಾರಿ ಮಾಡುವ ಸಂಸ್ಥೆಯನ್ನು ಬದಲಿಸಲು ಆಗ್ರಹ
ದೋಹಾ, ಅಕ್ಟೋಬರ್ 25: ನಗರದ ಪ್ರಮುಖ ಖಾಸಗಿ ಸಂಸ್ಥೆಯೊಂದರ ಕಾರ್ಮಿಕರು ಮಧ್ಯಾಹ್ನದ ಊಟದಲ್ಲಿ ಹುಳ ಕಂಡುಬಂದಿದ್ದರ ಹಿನ್ನೆಲೆಯಲ್ಲಿ ಬಹಷ್ಕಾರ ಘೋಷಿಸಿದ್ದಾರೆ. ಬುಧವಾರ ಉದ್ಯೋಗಿಯೊಬ್ಬರ ಊಟದಲ್ಲಿ ಹುಳ ಕಂಡುಬಂದಿದ್ದು ಊಟ ವಿಲೇವಾರಿ ಮಾಡುವ ಸಂಸ್ಥೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕಾರ್ಮಿಕರು ತಿಳಿಸಿದ್ದಾರೆ.
ಬುಧವಾರದಿಂದ ಮೂರನೆಯ ದಿನಕ್ಕೆ ಕಾಲಿಟ್ಟಿರುವ ಬಹಿಷ್ಕಾರ ಅಧಿಕಾರಿಗಳ ಗಮನ ಸೆಳೆದಿದೆ. ಇದು ಸತತ ಎರಡನೆಯ ಬಾರಿ ಊಟದಲ್ಲಿ ಹುಳ ಕಂಡುಬಂದಿದ್ದು ಊಟ ವಿಲೇವಾರಿ ಮಾಡುವ ಸಂಸ್ಥೆಯನ್ನು ಬದಲಿಸದೇ ತಾವು ಆ ಆಹಾರವನ್ನು ಸ್ವೀಕರಿಸುವುದಿಲ್ಲ ಎಂದು ಕಾರ್ಮಿಕರು ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ನೀಡಿದ ಮನವಿಪತ್ರದಲ್ಲಿ ಮನವಿಮಾಡಿಕೊಂಡಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ದ ಪೆನಿನ್ಸುಲಾ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-25
|
|
| Vijay Suvarna, Qatar | 2008-11-01 | | Thanks for news. but you have to publish the name of Catering company who was catering the food for that company. then we can also beware of that caterer forever.hope you will try to get the name.
once again thanks for the important news. |
|