ದುಬೈ: ಕುಸಿಯುತ್ತಿರುವ ರೂಪಾಯಿ ಬೆಲೆ : ಎಕ್ಸ್ ಚೇಂಜ್ ಗಳಿಗೆ ಧಾವಿಸುತ್ತಿರುವ ಭಾರತೀಯರು |
ಪ್ರಕಟಿಸಿದ ದಿನಾಂಕ : 2008-10-25
ಪ್ರತಿ ದಿರ್ಹಾಂಗೆ 13.43 ರೂಪಾಯಿ : ಇತ್ತೀಚೆನ ದಾಖಲೆ
ದುಬೈ, ಅಕ್ಟೋಬರ್ 25: ದೀಪಾವಳಿಯ ದಿನಗಳು ಹತ್ತಿರ ಬರುತ್ತಿದ್ದಂತೆ ಭಾರತೀಯ ರೂಪಾಯಿ ಬೆಲೆಯೂ ಕುಸಿತ ಕಂಡಿದ್ದು ಹಲವರು ಈ ಸಂದರ್ಭದ ಉಪಯೋಗಪಡೆದುಕೊಳ್ಳುತ್ತಿದ್ದಾರೆ. ನಿನ್ನೆಯ ವಿನಿಮಯ ದರದ ಪ್ರಕಾರ ಪ್ರತಿ ದಿರ್ಹಾಂ ಗೆ 13.43 ರೂಪಾಯಿಗಳು ದೊರಕುತ್ತಿದ್ದು ಇತ್ತೀಚಿನ ದಿನಗಳಲ್ಲೇ ಒಂದು ದಾಖಲೆಯಾಗಿದೆ. ಸುಮಾರು ಮೂರು ತಿಂಗಳ ಹಿಂದಿನ ದರಕ್ಕೆ ಹೋಲಿಸಿದರೆ ಇದು 15% ಹೆಚ್ಚಾಗಿದೆ ಎಂದು ಯು.ಎಇ. ಎಕ್ಸ್ ಚೇಂಜ್ ಸಂಸ್ಥೆಯ ನಿರ್ವಾಹಕರಾಗಿರುವ ಸುಧೀರ್ ಶೆಟ್ಟಿಯವರು ತಿಳಿಸಿದ್ದಾರೆ.
ಡಾಲರ್ ಬೆಲೆ ಪ್ರತಿದಿನ ಕುಸಿಯುತ್ತಿದ್ದು ಹೆಚ್ಚಿನ ಭಾರತೀಯರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ರಮಧಾನ್ ತಿಂಗಳ ಕಡೆಯಲ್ಲಿ ಭಾರೀ ಸಂಖ್ಯೆಯಲ್ಲಿ ಭಾರತೀಯರು ತಮ್ಮ ಹಣವನ್ನು ಭಾರತಕ್ಕೆ ರವಾನಿಸಿದ್ದು ಈಗ ಮೂರು ದಿನಗಳಿಂದ ಮತ್ತೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ತಮ್ಮ ಹಣವನ್ನು ಭಾರತಕ್ಕೆ ಕಳುಹಿಸುತ್ತಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಖಲೀಜ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-25
|
|
|