ಶಾರ್ಜಾ: ಶಿಕ್ಷಕೌ ಖಾಸಗಿ ಟ್ಯೂಶನ್ ನೀಡುವುದು ಕಾನೂನಿಗೆ ವಿರುದ್ಧ : ಎಚ್ಚರಿಕೆ ಜಾರಿ |
ಪ್ರಕಟಿಸಿದ ದಿನಾಂಕ : 2008-10-24
ಕಟ್ಟಳೆ ಮೀರಿದರೆ ಸ್ವದೇಶಕ್ಕೆ ರವಾನೆ
ಶಾರ್ಜಾ, ಅಕ್ಟೋಬರ್ 24: ಶಾಲೆಗಳಲ್ಲಿ ಉದ್ಯೋಗ ನಿರ್ವಹಿಸುವ ಶಿಕ್ಷಕರು ಖಾಸಗಿ ಮನೆಪಾಠ ಹೇಳುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಶಾರ್ಜಾ ಶಿಕ್ಷಣ ನಿರ್ದೇಶನಾಲಯದ ಕಾನೂನು ಸಲಹೆ ವಿಭಾಗದ ಮುಖ್ಯಸ್ಥರಾಗಿರುವ ಅಬ್ದುಲ್ಲಾ ಅಮೀನ್ ಅವರು ತಿಳಿಸಿದ್ದಾರೆ. ಹಲವು ಶಿಕ್ಷಕರು ಹೆಚ್ಚುವರಿ ಆದಾಯ ಬಯಸಿ ಮನೆಪಾಠವನ್ನು ನೀಡುತ್ತಿರುವುದು ಕಂಡುಬಂದಿದೆ. ಹಲವರು ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳೂ, ವಿಸಿಟಿ ವೀಸಾ ಮೂಲಕ ಪ್ರವಾಸಿಗಳಾಗಿ ಆಗಮಿಸಿದವರೂ ಮನೆಪಾಠ ಹೇಳುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ.
ಈ ಕಟ್ಟಳೆಯನ್ನು ಉಲ್ಲಂಘಿಸಿದ ಶಿಕ್ಷಕರ ಅನುಮತಿಪತ್ರವನ್ನು ರದ್ದುಗೊಳಿಸಿ ಅವರನ್ನು ತಮ್ಮ ಸ್ವದೇಶಗಳಿಗೆ ಹಿಂತಿರುಗುವಂತೆ ಮಾಡಲಾಗುವುದು ಎಂದು ಅಮೀನ್ ತಿಳಿಸಿದ್ದಾರೆ.
ಮನೆಪಾಠಕ್ಕೆ ಕುಮ್ಮಕ್ಕು ನೀಡುವ ನಿಟ್ಟಿನಲ್ಲಿ ಶಾಲೆಗಳಲ್ಲಿ ನೀಡುವ ಶಿಕ್ಷಣಕ್ಕೆ ಕುಂದು ಬರದಂತೆ ನೋಡಿಕೊಳ್ಳುವುದರಲ್ಲಿ ಈ ಕಾನೂನು ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಒಂದು ವೇಳೆ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಪಾಠಗಳಲ್ಲಿ ಹಿಂದೆಬಿದ್ದಲ್ಲಿ ಖಾಸಗಿ ನೋಂದಾಯಿತಾ ಶಿಕ್ಷಣಕೇಂದ್ರಗಳು ಹೆಚ್ಚಿನ ಶಿಕ್ಷಣ ನೀಡಲು ಸಹಾಯ ಮಾಡುತ್ತವೆ ಎಂದು ಅಮೀನ್ ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ದ ನ್ಯಾಶನಲ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-24
|
|
|