ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಅವ್ಯಾಹತ ಕ್ರಿಸ್ತೀಕರಣ: ಎಸ್.ಎಲ್.ಭೈರಪ್ಪ

“ಸೆಪ್ಟೆಂಬರ್ ೧೧ರ ನಂತರ ಅಮೆರಿಕದಲ್ಲಿ ಒಂದೇ ಒಂದು ಭಯೋತ್ಪಾದಕ ಕೃತ್ಯ ನಡೆದಿಲ್ಲ. ನಮ್ಮಲ್ಲಿ ಪ್ರತಿ ದಿನ ಜನ ಉಗ್ರಗಾಮಿಗಳಿಂದ ಸಾಯುತ್ತಲೇ ಇದ್ದಾರೆ. ನಮ್ಮ ರಾಜಕಾರಣಿಗಳು ಇದನ್ನು ತಡೆಯುವುದು ಕನಸಿನ ಮಾತು.”

“ಭಾರತದಲ್ಲಿ ದಿನಕ್ಕೆ 5000 ಜನರು ಕ್ರೈಸ್ತರಾಗಿ ಪರಿವರ್ತಿತರಾಗುತ್ತಿದ್ದಾರೆಂಬ ಒಂದು ಲೆಕ್ಕವಿದೆ. ಚರ್ಚಿಗೆ ಇರುವ ಆದಾಯ ಅಗಾಧವಾದದ್ದು. ಜನ ಬಲವೂ ಅಷ್ಟೇ ಅಗಾಧವಾದದ್ದು. ತಮ್ಮ ಮತ ವಿಸ್ತರಣೆಗಾಗಿ ಇವರು ಇಷ್ಟೊಂದು ಹಣ, ಮಾನವ ಶಕ್ತಿ ಮತ್ತು ಸಂಘಟನಾ ತಂತ್ರಗಳನ್ನೆಲ್ಲ ಯಾಕೆ ಕ್ರೋಡೀಕರಿಸಿ ವ್ಯಯ ಮಾಡುತ್ತಾರೆ?”“ಮತಾಂತರ ಚಟುವಟಿಕೆಯು ತಪ್ಪು ಎಂದು ನಾವು ಹೇಳುತ್ತೇವೆ. ಸರ್ವೋಚ್ಚ ನ್ಯಾಯಾಲಯವೂ ಹೀಗೆಯೇ ವ್ಯಾಖ್ಯೆ ಮಾಡಿದೆ. ಆದರೆ ಅದು ತಪ್ಪೆಂದು ಅವರು ಭಾವಿಸುವುದಿಲ್ಲ. ಧರ್ಮಬೋಧೆಯು ಅವಿಭಾಜ್ಯ ಅಂಗವಾಗಿ ಅವರ ತಲೆಯಲ್ಲಿ ಗಟ್ಟಿಯಾಗಿ ಕೂತಿರುವಾಗ ಅವರು ಬೇರೆ ರೀತಿ ಆಲೋಚಿಸುವುದು ಹೇಗೆ ಸಾಧ್ಯ?”

“ಚರ್ಚಿನ ತಂತ್ರವು ಒಂದೊಂದು ಸಂದರ್ಭದಲ್ಲಿ ಒಂದೊಂದು ತೆರನಾಗಿರುತ್ತದೆ. ಬೆದರಿಸುವಲ್ಲಿ ಬೆದರಿಕೆ , ಹಿಂಸಿಸುವಲ್ಲಿ ಹಿಂಸೆ, ನಯಗಾರಿಕೆಯಲ್ಲಿ ನಯ, ಆಮಿಷದಲ್ಲಿ ಪೂರೈಕೆ ಮೊದಲಾಗಿ ಅವರದು ವಿವಿಧ ಸಮಯ ಸಾಧಕ ಮಾರ್ಗಗಳು.”

ನಾಲ್ಕು ಶತಮಾನಗಳಿಂದಲೂ ಸತತವಾಗಿ ಭಾರತದಲ್ಲಿ ನಡೆಯುತ್ತಿರುವ ಕ್ರಿಸ್ತೀಕರಣವು ಸೋನಿಯಾ ಗಾಂಧಿಯ ಪಟ್ಟಾಭಿಷೇಕವಾದ ನಂತರ ಅಗಾಧವಾದ ಪ್ರಮಾಣಕ್ಕೆ ಏರಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾದರೂ ಯಾವ ಪತ್ರಿಕೆ ಅಥವಾ ಟಿವಿ ಚಾನೆಲ್ ನವರು ಹಾಗೆಂದು ಸ್ಪಷ್ಟವಾಗಿ ಬರೆದಿಲ್ಲ, ಹೇಳಿಲ್ಲ. ಆದರೆ ಈ ಅಗಾಧತೆಯಿಂದ ಎಚ್ಚೆತ್ತು ಒರಿಸ್ಸಾ, ಕರ್ನಾಟಕ ಮೊದಲಾದ ಕಡೆ ಅಲ್ಲಲ್ಲಿ ಪ್ರತಿಕ್ರಿಯೆಯಾಗುತ್ತಿರುವುದನ್ನು ಎಲ್ಲ ಮಾಧ್ಯಮದವರೂ ಮುಖಪುಟದ ಸುದ್ದಿ ಮಾಡುತ್ತಿರುವುದು, ಜಾತ್ಯತೀತ ಪತ್ರಿಕೆಗಳು, ಎಡಪಂಥದ ಮಾಧ್ಯಮಗಳು ಭಾರತದ ವಿನಾಶವೇ ಸಂಭವಿಸುತ್ತಿದೆ ಎಂಬಂತೆ ಹುಯಿಲೆಬ್ಬಿಸಿ ಮಿಶನರಿಗಳಿಗೆ ಸಹಕಾರಿಯಾಗಿ ವರ್ತಿಸುತ್ತಿರುವುದು ಸಾಧಾರಣ ಓದುಗನಿಗೂ ಅರ್ಥವಾಗುತ್ತದೆ. ಈ ಹುಯಿಲನ್ನು ಸೋನಿಯಾಗಾಂಧಿಯ ಅನುಯಾಯಿಗಳು, ಬುದ್ಧಿಜೀವಿಗಳು, ಜಾತ್ಯತೀತರು, ತಾರಕಕ್ಕೇರಿಸಿ ಹಿಂದೂ ಪರ ಸಂಘಟನೆಗಳು, ಮಠಾಧೀಶರು ಮತ್ತು ಬಿಜೆಪಿ ಸರಕಾರಗಳಿಗೆ ಮಸಿ ಬಳಿಯುವುದು ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ, ವಿಶ್ವಸಂಸ್ಥೆಯ ಮಟ್ಟದಲ್ಲಿ ಭಾರತಕ್ಕೆ ಛೀಮಾರಿ ಹಾಕಿಸಲು ಉದ್ಯುಕ್ತವಾಗಿರುವ ಕ್ರೈಸ್ತ ಸಂಘಟನೆಗಳಿಗ ನೆರವಾಗುತ್ತಿರುವುದೂ ಸ್ಪಷ್ಟವಾಗಿದೆ. ಕೇಂದ್ರ ಸರಕಾರವನ್ನು ಹಿಡಿದುಕೊಂಡಿರುವ ಸೋನಿಯಾ ಗಾಂಧಿಯ ಕಾಂಗ್ರೆಸ್ ಪಕ್ಷವಂತೂ ಈ ಸನ್ನಿವೇಶವನ್ನು ದೊಡ್ಡದು ಮಾಡಿಕೊಂಡು ಕರ್ನಾಟಕ ಮತ್ತು ಒರಿಸ್ಸಾ ಸರಕಾರಗಳನ್ನು ಬರ್ಖಾಸ್ತ್ ಮಾಡುವ ಹುನ್ನಾರವನ್ನೂ ಮಾಡುತ್ತಿದೆ. ಹಾಗೆ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಜನಗಳು ಬರ್ಖಾಸ್ತುಗೊಂಡ ಸರಕಾರಗಳನ್ನು ಪುನರ್ಪ್ರತಿಷ್ಠಾಪಿಸಿಯಾರೆಂಬ ಲೆಕ್ಕಾಚಾರದಿಂದ ತಡೆದುಕೊಂಡಿದೆ. ಪ್ರತಿಕ್ರಿಯೆಯಾಗಿ ಗಲಭೆ ಮಾಡುತ್ತಿರುವವರು ಭಜರಂಗದಳದವರೆಂದು ಕೇಂದ್ರದ ಆಡಳಿತ ಪಕ್ಷವೂ ಎಡಪಂಥೀಯ ಮತ್ತು ವಿಶೇಷವಾಗಿ ಇಂಗ್ಲಿಷ್ ಮಾಧ್ಯಮವೂ ಥಟ್ಟನೆ ಆಪಾದಿಸುತ್ತಿವೆ. ಆದರೆ ಈ ಗಲಭೆಯಲ್ಲಿ ಭಜರಂಗದಳದ ಪಾತ್ರವೆಷ್ಟು ? ಭಜರಂಗದಳದ ಹೆಸರಿನಲ್ಲಿ ನಡೆಯುವ ಗಲಭೆಗಳೆಷ್ಟು ? ಮಿಶನರಿಗಳ ಆಮಿಷ ಮತ್ತು ಅಪಪ್ರಚಾರಕ್ಕೆ ಒಳಗಾಗಿ ಮತಾಂತರಗೊಂಡವರ ನೆರೆ ಹೊರೆಯವರೇ ಸ್ವಯಂಪ್ರೇರಿತರಾಗಿ ಗಲಭೆ ಮಾಡಿರುವವರೆಷ್ಟು ಎಂಬ ವಿವರಗಳನ್ನು ಯೋಚಿಸುವುದು ಇವರಾರಿಗೂ ಬೇಕಿಲ್ಲ.ಭಾರತದಲ್ಲಿ ವಾಸಿಸುತ್ತಿರುವ ಫ್ರಾಂಕ್ವಾಗೋತಿಯೆ ಎಂಬ ಫ್ರೆಂಚ್ ಪತ್ರಕರ್ತನು ಸೋನಿಯಾಗಾಂಧಿಯ ಆಡಳಿತದಲ್ಲಿ ನಡೆಯುತ್ತಿರುವ ಕ್ರಿಸ್ತೀಕರಣವನ್ನು ವಿವರಿಸುತ್ತಾ ಅಂಜಿಕೆಯನ್ನು ವ್ಯಕ್ತಪಡಿಸಿದ್ದಾನೆ. ಆತ ಹೇಳುತ್ತಾನೆ;ನಾನು ಸ್ವತಃ ಪಾಶ್ಚಿಮಾತ್ಯ ಹಾಗೂ ಹುಟ್ಟಿನಿಂದ ಕ್ರೈಸ್ತ. ಹೆಚ್ಚಾಗಿ ಕ್ಯಾಥೊಲಿಕ್ ಶಾಲೆಗಳಲ್ಲಿ ಬೆಳೆದವನು. ಚಿನ್ನದಂಥ ಮನುಷ್ಯನಾಗಿದ್ದ ನನ್ನ ಚಿಕ್ಕಪ್ಪ ಹೈಗೋತಿಯೇ ಪ್ಯಾರಿಸ್ಸಿನ ಒಂದು ಸುಂದರ ಚರ್ಚಿನ ಅರ್ಚಕನಾಗಿದ್ದ. ಫ್ರ್ರಾನ್ಸಿನಲ್ಲಿ ಪ್ರಸಿದ್ಧ ಕಲಾವಿದನಾಗಿದ್ದ ನನ್ನ ತಂದೆ ಜೀವನವಿಡೀ ನಿಷ್ಠಾವಂತ ಕ್ಯಾಥೊಲಿಕ್. ಅವರು ಪ್ರತಿದಿನ ಚರ್ಚಿಗೆ ಹೋಗುತ್ತಿದ್ದರು...ಆದರೂ ಸೋನಿಯಾಗಾಂಧಿಯ ರಾಜ್ಯಭಾರದಲ್ಲಿ ಕ್ರೈಸ್ತ ಧರ್ಮವು ಎಷ್ಟೊಂದು ಪ್ರಮಾಣದಲ್ಲಿ ಭಾರತವನ್ನು ವಶಕ್ಕೆ ತೆಗೆದುಕೊಳ್ಳುತ್ತಿದೆ ಎಂಬುದನ್ನು ನೋಡಿದಾಗ ನಾನು ಕಸಿವಿಸಿಗೊಳ್ಳುತ್ತೇನೆ. ೨೦೦೧ನೇ ಸೆನ್ಸಸ್ ಪ್ರಕಾರ ಭಾರತದಲ್ಲಿ ೨೩೪ ಲಕ್ಷ ಕ್ರೈಸ್ತರಿದ್ದಾರೆ. ಎಂದರೆ ಶೇಕಡಾ ೨.೫ ರಷ್ಟೂ ಇಲ್ಲ. ಇದೊಂದು ನಗಣ್ಯ ಸಂಖ್ಯೆ. ಆದರೂ ಇಂದು ಭಾರತದಲ್ಲಿ ಐದು ಜನ ಕ್ರೈಸ್ತ ಮುಖ್ಯಮಂತ್ರಿಗಳಿದ್ದಾರೆ- ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಕೇರಳ ಮತ್ತು ಆಂಧ್ರ ಪ್ರದೇಶ. ಸೋನಿಯಾಗಾಂಧಿಯ ಸಮೀಪ ವರ್ತುಲದಲ್ಲಿರುವ ರಾಜಕಾರಣಿಗಳಲ್ಲಿ ಬಹುತೇಕರು ಕ್ರೈಸ್ತರು ಅಥವಾ ಮುಸ್ಲಿಮರು. ಆಕೆಗೆ ಹಿಂದೂಗಳಲ್ಲಿ ನಂಬಿಕೆ ಇಲ್ಲವೆಂದು ತೋರುತ್ತದೆ. ಕ್ರೈಸ್ತಳಾದ ಅಂಬಿಕಾ ಸೋನಿ ಕಾಂಗ್ರೆಸ್ಸಿನ ಜನರಲ್ ಸೆಕ್ರೆಟರಿ, ರಾಜಕೀಯವಾಗಿ ಬಹಳ ಬಲಶಾಲಿಯಾದ ವ್ಯಕ್ತಿ, ಸೋನಿಯಾ ಗಾಂಧಿಗೆ ಹತ್ತಿರದ ಪ್ರವೇಶಾಧಿಕಾರವುಳ್ಳವಳು. ಆಸ್ಕರ್ ಫರ್ನಾಂಡೀಸರು ಕೇಂದ್ರ ಸರಕಾರದ ಕಾರ್‍ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮಂತ್ರಿ. ಮಾರ್ಗರೇಟ್ ಆಳ್ವಾ ಮಹಾರಾಷ್ಟ್ರದಲ್ಲಿ ಭಯ ಹುಟ್ಟಿಸುವಂಥ ಹೆಗ್ಗಳಿಕೆಯವರು. ಕರ್ನಾಟಕವು ವಸ್ತುಶಃ ಎ.ಕೆ. ಆಂಟನಿಯವರ ನಿಯಂತ್ರಣದಲ್ಲಿದೆ; ಅವರ ಕಾರ್ಯದರ್ಶಿಗಳೆಲ್ಲ ದಕ್ಷಿಣ ಭಾರತದ ಕ್ರೈಸ್ತ ಸಂಘಟನೆಯಿಂದ ಬಂದವರು. ಹಿಂದೂ ದ್ವೇಷಿಯಾದ ವಾಲ್ಸನ್ ಥಂಪುವು ಎನ್‌ಸಿಇಆರ್‌ಟಿ (ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಷನಲ್ ರೀಸರ್ಚ್ ಅಂಡ್ ಟ್ರೈನಿಂಗ್) ಪಠ್ಯಕ್ರಮದ ವಿಮರ್ಶಾ ಸಮಿತಿಯ ಅಧ್ಯಕ್ಷ. ಹಿಂದೂ ಹಿಂಸಕನೆಂದೇ ಪ್ರಸಿದ್ಧನಾದ ಜಾನ್ ದಯಾಳ್ ಸೋನಿಯಾ ಗಾಂಧಿಯಿಂದ ರಾಷ್ಟ್ರೀಯ ಭಾವೈಕ್ಯತಾ ಸಮಿತಿಗೆ ನಾಮಕರಣಗೊಂಡವನು. ಹಿಂದೂ ದ್ವೇಷಿ ಕಾಂಚಾ ಎಲ್ಲಯ್ಯ ಅವರಿಗೆ ವಿಶ್ವಸಂಸ್ಥೆ ಮತ್ತು ಅಮೆರಿಕದ ಸಂಸತ್ತಿನಲ್ಲಿ ಭಾರತದಲ್ಲಿ ಜಾತಿ ಭೇದವಿರುವುದೆಂದೂ, ಅದನ್ನು ಈ ಸಂಸ್ಥೆಗಳು ಕೈಗೆತ್ತಿಕೊಳ್ಳಬೇಕೆಂದೂ ವಶೀಲಿ ಮಾಡಲು ಭಾರತ ಸರಕಾರವು ಅನುಮತಿ ಕೊಟ್ಟಿದೆ....

ಸೋನಿಯಾಗಾಂಧಿ ವಿರುದ್ಧ ನನಗೆ ವೈಯಕ್ತಿಕವಾಗಿ ಏನೂ ಕಹಿ ಭಾವನೆ ಇಲ್ಲ... ಆದರೆ ಆಕೆ ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿ ತೊಡಗಿದಂದಿನಿಂದ ಕ್ರೈಸ್ತ ಮತಕ್ಕೆ ಪರಿವರ್ತನೆಗೊಳ್ಳುತ್ತಿರುವವರ ಸಂಖ್ಯೆ ನಾಗಾಲೋಟ ಹೊಡೆಯುತ್ತಿದೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವಿದೇಶಿ ಮಿಶನರಿಗಳು ಕ್ರೈಸ್ತ ಧರ್ಮ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯವು ಬಂದಾಗ ತ್ರಿಪುರದಲ್ಲಿ ಕ್ರೈಸ್ತರೇ ಇರಲಿಲ್ಲ; ಈಗ ಒಂದು ಲಕ್ಷ ಇಪ್ಪತ್ತು ಸಾವಿರವಿದ್ದಾರೆ. ೧೯೯೧ ರಿಂದ ಅವರ ಸಂಖ್ಯೆಯಲ್ಲಿ ಶೇ. ೯೦ ರಷ್ಟು ಹೆಚ್ಚಳವಾಗಿದೆ. ಅರುಣಾಚಲ ಪ್ರದೇಶದಲ್ಲಿ ಈ ಸಂಖ್ಯೆಯು ಇನ್ನೂ ಎದ್ದು ಹೊಡೆದು ಕಾಣುತ್ತದೆ. ೧೯೨೧ ರಲ್ಲಿ ೧೭೭೦ ಕ್ರೈಸ್ತರಿದ್ದದ್ದು, ಈಗ ಹನ್ನೆರಡು ಲಕ್ಷವಿದ್ದಾರೆ ; ಅಲ್ಲದೇ ೭೮೦ ಚರ್ಚುಗಳಿವೆ. ಆಂಧ್ರ ಪ್ರದೇಶದಲ್ಲಂತೂ ಹೊಸ ಹೊಸ ಚರ್ಚುಗಳು ಪ್ರತಿದಿನವೂ ದೂರದೂರದ ಹಳ್ಳಿಗಳಲ್ಲಿ ತಲೆ ಎತ್ತುತ್ತಿರುವುದು ಮಾತ್ರವಲ್ಲದೆ ತಿರುಪತಿಯಲ್ಲೂ ಕಟ್ಟುವ ಹುನ್ನಾರ ನಡೆದಿದೆ. ಈಶಾನ್ಯ ರಾಜ್ಯಗಳ ಮಿಜೋ, ಬೋಡೋಗಳಂಥ ಹಲವು ಚಳವಳಿಗಳು ಕ್ರೈಸ್ತ ಪ್ರಬಲವಾಗಿರುವುದು ಮಾತ್ರವಲ್ಲದೇ ಮಿಶನರಿಗಳ ಕುಮ್ಮಕ್ಕಿ ನಿಂದಲೇ ನಡೆಯುತ್ತಿವೆ...ಕಳೆದ ಎರಡು ದಶಕಗಳಲ್ಲಿ ಅಸ್ಸಾಮ್ ಮತ್ತು ಮಣಿಪುರಗಳಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ದಂಗೆಯಿಂದ ಜೀವ ಕಳೆದುಕೊಂಡಿದ್ದಾರೆ....

ಸರಕಾರದ ಮಾಲೀಕತ್ವದಲ್ಲಿರುವ ಇಂಡಿಯನ್ ಏರ್ ಲೈನ್ಸ್‌ನವರು ದ್ವಾರಕಾ ಪೀಠದ ಸನ್ಯಾಸಿ ಅವಿಮುಕ್ತಾನಂದ ಸರಸ್ವತಿ ಅವರನ್ನು ಕೈಯಲ್ಲಿ ತನ್ನ ಸನ್ಯಾಸದ ಲಾಂಛನವಾದ ಒಂದು ದಂಡವನ್ನು ಹಿಡಿದುಕೊಂಡಿದ್ದರಿಂದ ವಿಮಾನದಿಂದ ಕೆಳಗಿಳಿಸಿದರು. ಅದೊಂದು ಸಣ್ಣ ಬಿದಿರು ತುಂಡು. ಸೋನಿಯಾಗಾಂಧಿಯಂಥ ವಿದೇಶಿಗೆ ರಾಷ್ಟ್ರದ ಪಟ್ಟ ಕಟ್ಟಿದ ಈ ದುರ್ಬಲ ದೇಶದಲ್ಲಲ್ಲದೇ

ಇಂಥ ಘಟನೆ ಬೇರೆ ಯಾವ ದೇಶದಲ್ಲಿ ನಡೆಯಲು ಸಾಧ್ಯ?”

ನಾನು ಇಲ್ಲಿ ಫ್ರಾಂಕ್ವಾ ಗೋತಿಯೆ ಅವರ ಲೇಖನದ ಕೆಲವು ವಾಕ್ಯಗಳನ್ನಷ್ಟೇ ಉದ್ಧರಿಸಿದ್ದೇನೆ. (Francois Gautier:www.francoisgautier.com

09343538419/09442123255) .ಕ್ರೈಸ್ತರ ಧರ್ಮಗುರು ಪೋಪ್ ಭಾರತಕ್ಕೆ ಭೇಟಿ ಕೊಟ್ಟಾಗ ಇಡೀ ಮಾಧ್ಯಮವು ಅದರಲ್ಲೂ ಇಂಗ್ಲಿಷ್ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಎಷ್ಟೊಂದು ಸಂಭ್ರಮಪಟ್ಟವು ? ಸಂಭ್ರಮ ಸೃಷ್ಟಿಸಿದವು !

ಒಬ್ಬ ರಾಷ್ಟ್ರಾಧ್ಯಕ್ಷನಿಗೆ ಸಲ್ಲುವ ಸ್ವಾಗತವನ್ನು ಭಾರತ ಸರಕಾರವು ಸಲ್ಲಿಸಿತು. ಭಾರತದ ರಾಷ್ಟ್ರಾಧ್ಯಕ್ಷರು, ಪ್ರಧಾನಿಯಾದಿಯಾಗಿ ಮಂತ್ರಿ ಗಣವು ಸಾಲುಗಟ್ಟಿ ಅಭಿವಂದಿಸಿತು. ಇವರು ಭಾರತಕ್ಕೆ ಬರುತ್ತಿರುವುದು ನಮ್ಮ ಜನಗಳ ಮತ ಪರಿವರ್ತನೆಗೆ, ಈತನಿಗೆ ದೇಶದಲ್ಲಿ ಪ್ರವೇಶ ಕೊಡಕೂಡದು, ಕೊಟ್ಟರೂ ಸರ್ಕಾರದ ವತಿಯಿಂದ ಸ್ವಾಗತ ನೀಡಕೂಡದು ಎಂದು ಕೆಲವು ಹಿಂದೂ ಸಂಘಟನೆಗಳು ದನಿ ಎತ್ತಿದ್ದಕ್ಕೆ ಇಂಗ್ಲಿಷ್ ಮಾಧ್ಯಮಗಳು ಮತ್ತು ಪ್ರಗತಿಪರರೆಂದು ವೇಷ ಹಾಕುವ ಗುಂಪುಗಳು ಹಿಂದೂ ಮೂಲಭೂತವಾದಿಗಳೆಂದು ಬಾಯಿ ಬಡಿದುಕೊಂಡವು. ಆದರೂ ಈ ಪೋಪ್ ಮಹಾಶಯ ಮಾಡಿದ್ದೇನು? “ಮೊದಲನೆಯ ಸಹಸ್ರಮಾನದಲ್ಲಿ ಶಿಲುಬೆಯನ್ನು ಯೂರೋಪಿನ ನೆಲದಲ್ಲಿ ನೆಟ್ಟಂತೆ, ಎರಡನೆ ಸಹಸ್ರಮಾನದಲ್ಲಿ ಅಮೆರಿಕಗಳು ಮತ್ತು ಆಫ್ರಿಕದಲ್ಲಿ ನೆಟ್ಟಂತೆ, ಮೂರನೆಯ ಸಹಸ್ರಮಾನದಲ್ಲಿ ನಮ್ಮ ನಂಬಿಕೆಯ ಭಾರಿ ಫಸಲನ್ನು ಈ ದೊಡ್ಡ ಮತ್ತು ಸಶಕ್ತ ಖಂಡದಲ್ಲಿ (ಏಷ್ಯಾ) ತೆಗೆಯುತ್ತೇವೆ” ಎಂದು ರಾಜಾರೋಷವಾಗಿ ಘೋಷಿಸಿದರು. ಪೋಪರು ತಮ್ಮ ಉದ್ದೇಶದಲ್ಲಿ ಮುಚ್ಚು ಮರೆ ಮಾಡಲಿಲ್ಲ. ಆದರೆ ಹಿಂದೂ ಸಂಘಟನೆಗಳನ್ನು ಮೂಲಭೂತವಾದಿಗಳೆಂದು ಬಾಯಿ ಬಡಿದುಕೊಂಡಿದ್ದ ಮಾಧ್ಯಮದವರು ಮತ್ತು ಪ್ರಗತಿಶೀಲ ವೇಷಧಾರಿಗಳು ಸದ್ಯಕ್ಕೆ ಜಾಣ ಮೌನ ತಾಳಿದರು.

ಮೊದಲಿನಿಂದಲೂ ಕ್ರೈಸ್ತ ಮತದ ಸೋಂಕಿಲ್ಲದೆ ತಮ್ಮ ತಮ್ಮ ಮೂಲ ಮತಗಳನ್ನು ಅನುಸರಿಸಿಕೊಂಡು ಬದುಕುತ್ತಿದ್ದ ಈ ಕೆಳಕಂಡ ದೇಶಗಳು ಆಕ್ರಮಣಕಾರಿ ಮಿಶನರಿಗಳ ತಂತ್ರಗಳಿಂದ ಕ್ರೈಸ್ತರಾಗಿರುವ ಶೇಕಡವಾರು ಸಂಖ್ಯೆಯು ಈ ರೀತಿ ಇದೆ : ಅಂಗೋಲಾ ಶೇಕಡ ೯೦, ಬುರುಂಡಿ ಶೇಕಡ ೭೮, ಕೆಮರೂನ್ ಶೇಕಡ ೩೫, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಶೇಕಡ ೮೨, ಚಾದ್ ಶೇಕಡ ೩೩, ಕಾಂಗೋ ಶೇಕಡ ೬೨, ಪೂರ್ವ ತೈಮೂರ್ ಶೇ.೯೮, ಇಥಿಯೋಪಿಯಾ ಶೇ.೫೨, ಈಕ್ವಟೋರಿಯಲ್‌ಗಿನಿ ಶೇ. ೯೪, ಗಬನ್ ಶೇ.೭೯, ಕೆನ್ಯ ಶೇ.೨೫, ಲೈಬೀರಿಯಾ ಶೇ.೬೮, ಮೊಸಾಂಬಿಕ್ ಶೇ.೩೧, ನೈಜೀರಿಯಾ ಶೇ.೫೨, ಪಾಪುವಾ ನ್ಯೂಗಿನೀ ಶೇ.೯೭, ಫಿಲಿಪ್ಪೀನ್ಸ್ ಶೇ.೮೪, ರುವಾಂಡ ಶೇ.೬೯, ದಕ್ಷಿಣ ಆಫ್ರಿಕ ಶೇ.೭೮, ದಕ್ಷಿಣ ಕೊರಿಯಾ ಶೇ.೪೯, ಸೂಡಾನ್ ಶೇ.೩೦, ತಾಂಜಾನಿಯಾ ಶೇ.೨೦, ಟೋಗೋ ಶೇ.೨೩, ಉಗಾಂಡಾ ಶೇ.೭೦, ಜೈರೆ ಶೇ.೯೦.

ಮಿಶನರಿ ಕೆಲಸಗಳಿಗೆ ಅಮೆರಿಕದಿಂದ (USA) ವರ್ಷಕ್ಕೆ ೧೪೫ ಬಿಲಿಯನ್ ಡಾಲರ್ ಹರಿದು ಬರುತ್ತದೆ. ಇಡೀ ಪ್ರಪಂಚದಲ್ಲಿ ಚರ್ಚುಗಳು ೧.೧ ಬಿಲಿಯನ್ ಡಾಲರ್‌ಗಳನ್ನು ಮತ ಪರಿವರ್ತನೆಯನ್ನು ಗುರಿಯಾಗಿಟ್ಟುಕೊಂಡ ಸಂಶೋಧನೆಗೆ ಖರ್ಚು ಮಾಡುತ್ತವೆ. ಇವುಗಳು ೩೦೦ ಭಾಷೆಗಳಲ್ಲಿ ೧೮೦ ವಿಷಯಗಳನ್ನು ಕುರಿತದ್ದಾಗಿರುತ್ತವೆ. ಪುಸ್ತಕ ಅಥವಾ ಲೇಖನಗಳು ೫೦೦ ಭಾಷೆಗಳಲ್ಲಿ ಪ್ರಕಟವಾಗುತ್ತವೆ. ಅವುಗಳ ಒಟ್ಟು ಸಂಖ್ಯೆ ೧೭೫೦೦೦. ಪ್ರತಿಯೊಬ್ಬ ವ್ಯಕ್ತಿಯ ಮತ ಪರಿವರ್ತನೆಗೂ ಒಟ್ಟು ೩,೩೦೦೦ ಡಾಲರ್‌ಗಳು ಖರ್ಚಾಗುತ್ತವೆ. ಈ ಮೊತ್ತವು ಪರಿವರ್ತಿತನಾಗುವವನಿಗೆ ಸೇರುತ್ತದೆಂದಲ್ಲ. ಪರಿವರ್ತನಾ ಚಟುವಟಿಕೆಗಳ ಆಡಳಿತ, ಯೋಜನೆ, ಕಾರ್ಯಾಚರಣೆ ಇವುಗಳ ಒಟ್ಟು ಲೆಕ್ಕದಲ್ಲಿ ಈ ಖರ್ಚನ್ನು ಲೆಕ್ಕ ಹಾಕಲಾಗಿದೆ. ಕ್ರಿ.ಶ. ೧೫೦೦ರಲ್ಲಿ ಮಿಶನರಿ ಕಾರ್ಯದಲ್ಲಿ ತೊಡಗಿಸಿಕೊಂಡ ಕ್ರೈಸ್ತರ ಸಂಖ್ಯೆ ಮೂವತ್ತು ಲಕ್ಷವಿತ್ತು.. ಈಗ ಅದು ೬೪.೮ ಕೋಟಿಯಾಗಿದೆ. ಅದರಲ್ಲಿ ಶೇ.೫೪ ಬಿಳಿಯೇತರರೇ ಆಗಿದ್ದಾರೆ. ಎಂದರೆ ಬಿಳಿಯೇತರರಿಗೆ ತರಬೇತಿ ಕೊಟ್ಟು, ಹಣ ಪ್ರಭಾವಗಳನ್ನು ಒದಗಿಸಿ ಮಿಶನರಿ ಕೆಲಸಗಳಲ್ಲಿ ತೊಡಗಿಸುವುದು ಈ ತಂತ್ರವಾಗಿದೆ. ಇದು ಬ್ರಿಟಿಷರ ಕಾಲದಲ್ಲಿ ಭಾರತೀಯರನ್ನು ಸೈನಿಕರಾಗಿ ನೇಮಿಸಿಕೊಂಡು ಸರಿಯಾದ ಸಂಬಳ ಸಾರಿಗೆ ಕೊಟ್ಟು ಭಾರತವನ್ನು ಆಳಲು ಬಳಸಿಕೊಳ್ಳುತ್ತಿದ್ದಂತೆ.

ಇದರಿಂದ ಯಾವ ಅಧ್ಯಾತ್ಮ ಸಾಧನೆಯಾಗುತ್ತದೆ? ಭಾರತೀಯರಿಗೆ ಇದು ಅರ್ಥವಾಗದ ಸಮಸ್ಯೆ. ಏಕೆಂದರೆ ಭಾರತೀಯರಿಗೆ ಅಧ್ಯಾತ್ಮವೆಂದರೆ ಕಾಡಿನ ಪರ್ಣಶಾಲೆಯಲ್ಲಿ, ಬೆಟ್ಟದ ಗುಹೆಗಳಲ್ಲಿ, ಹಿಮಾಲಯದ ಹೆಪ್ಪುಗಟ್ಟಿಸುವ ಎತ್ತರದಲ್ಲಿ ಕುಳಿತು ಅಂತರ್ಮುಖಿಯಾಗುವ ಸಾಧನೆ . ತನ್ನೊಳಗೆ ಬೆಳಕು ಸಾಧಿಸುವ ಮುನ್ನ ಅನ್ಯರಿಗೆ ಉಪದೇಶ ಮಾಡುವ ಅಧಿಕಾರವಿರುವುದಿಲ್ಲ. ಉಪದೇಶ ಮಾಡುವುದಾದರೂ ಏನನ್ನು? ಅಂತರ್ಮುಖಿಯಾಗು. ನಿನ್ನನ್ನು ನೀನು ಅರಿ. ಧರ್ಮವೆಂದರೆ ಈ ಅರಿವು. ಅದನ್ನು ವಿವರಿಸುವ ರೀತಿಗೆ ಜಿಜ್ಞಾಸೆ ಎಂದು ಹೆಸರು. ಆದರೆ ಕ್ರೈಸ್ತಮತದ ತಿರುಳಾಗಲಿ, ರೀತಿಯಾಗಲಿ ಅದಲ್ಲ.ಕ್ರೈಸ್ತ ಮತವನ್ನು ಅರ್ಥಮಾಡಿಕೊಳ್ಳಬೇಕಾದರೆ ಸೆಮೆಟಕ್ ರಿಲಿಜನ್‌ಗಳ ಗುಣಲಕ್ಷಣಗಳನ್ನು ನಾವು ತಿಳಿಯಬೇಕು. ಇವುಗಳನ್ನು ಪ್ರವಾದಿ ಮತಗಳು (Prophetic Religions) ಎಂದು ಕೂಡ ಕರೆಯುತ್ತಾರೆ. ಎಂದರೆ ಈ ಮತಗಳು ಒಬ್ಬೊಬ್ಬ ಪ್ರವಾದಿಯಿಂದ ಸ್ಥಾಪಿತವಾದವು. ಪ್ರವಾದಿ ಅಬ್ರಹಾಮನಿಂದ ಸ್ಥಾಪಿತವಾದ ಎಹೂದಿ ಮತವು ಮೂಲ. ಅದರ ಪರಿವರ್ತಿತ ರೂಪವೇ ಏಸುವಿನಿಂದ ಸ್ಥಾಪಿತವಾದ ಕ್ರೈಸ್ತ ಮತ. ಅನಂತರ ಅದೇ ಅಬ್ರಹಾಮನ ಮತದ ಎಷ್ಟೋ ಗುಣಲಕ್ಷಣಗಳನ್ನು ಅಳವಡಿಸಿಕೊಂಡು ಪ್ರವಾದಿ ಮಹಮ್ಮದರಿಂದ ಸ್ಥಾಪಿತವಾದದ್ದು ಇಸ್ಲಾಂ. ಈ ಮೂರೂ ಪ್ರವಾದಿ ಮತಗಳಲ್ಲಿರುವ ಸಾಮಾನ್ಯ ಅಂಶವೆಂದರೆ : ದೇವರು ನಿಮಗೆ ನೇರವಾಗಿ ಲಭ್ಯನಲ್ಲ. ನೀವು ಮೂಲತಃ ಪಾಪಿಗಳು. ದೇವರು ಮಹಾ ಭಯಂಕರ, ಮಹಾಕ್ರೂರ ಶಿಕ್ಷೆಯನ್ನು ಮುಲಾಜಿಲ್ಲದೆ ಕೊಡುವವನು. ಪ್ರವಾದಿಯಾದ ನನ್ನನ್ನು ನಂಬಿ ನನ್ನ ಬೋಧೆಯಂತೆ ನಡೆದರೆ ನಿನಗೆ ಸತ್ತ ನಂತರ ಘೋರ ನರಕಕ್ಕೆ ಬೀಳುವುದನ್ನು ತಪ್ಪಿಸಿಕೊಳ್ಳುವ ಅವಕಾಶವುಂಟು. ಇಲ್ಲದಿದ್ದರೆ ಕೊನೆ ಇಲ್ಲದ ನೋವಿನ ನರಕ ಕಟ್ಟಿಟ್ಟದ್ದು. ನೀನು ನಂಬಬೇಕು. ಇತರರನ್ನು ನಂಬಿಸಬೇಕು. ಎಲ್ಲೆಲ್ಲಿಯೂ ಹೋಗಿ ಬಲ ಪ್ರಯೋಗವನ್ನಾದರೂ ಮಾಡಿ ನಂಬುವವರನ್ನು ಹೆಚ್ಚಿಸಬೇಕು. ಅದೇ ಧರ್ಮ, ಅದೇ ನೀತಿ.ನಂಬದವರನ್ನು ಹಿಂಸಿಸಿ ಕೊಲ್ಲುವ, ಗುಲಾಮರನ್ನಾಗಿ ತುಳಿದು ದುಡಿಸಿಕೊಳ್ಳುವ ವಿಧಾನವನ್ನು ಪ್ರವಾದಿ ಮಹಮದರು ಬೋಧಿಸಿದರು. ಈ ಬೋಧನೆಯು ಹಲವು ಕಡೆಗಳಲ್ಲಿ ಪ್ರಖರವಾಗಿ ಪ್ರಧಾನವಾಗಿ ಕುರಾನಿನ ಅವಿಭಾಜ್ಯ ಅಂಗವಾಗಿದೆ. ಅನ್ಯಮತಗಳ ದೇವರುಗಳನ್ನು ಯಾವ ಪ್ರವಾದಿಯೂ ಸಹಿಸುವುದಿಲ್ಲ. ನನ್ನ ‘ಆವರಣ’ ಕಾದಂಬರಿಯಲ್ಲಿ ಈ ಗುಣಲಕ್ಷಣಗಳನ್ನು ಚಿತ್ರಿಸಿದ್ದೇನೆ.

ಸಮರ್ಪಕ ಉತ್ತರ ಇಲ್ಲ

ಏಸುವೂ ಇಂಥ ಒಬ್ಬ ಪ್ರವಾದಿಯೇ.. ಆದರೆ ಅವನು ಪ್ರವಾದಿ ಅಬ್ರಹಾಮನ ಬೋಧನೆಗಿಂತ ಭಿನ್ನವಾದ ತಾಳ್ಮೆ ಮತ್ತು ಪ್ರೇಮವನ್ನು ಬೋಧಿಸಿದನೆಂದು ಪ್ರತೀತಿ. ವಾಸ್ತವವಾಗಿ ಏಸುವೆಂಬ ಒಬ್ಬ ವ್ಯಕ್ತಿ ಇದ್ದನೇ ಎಂಬ ಸಂಶಯವು ಸಂಶೋಧಕರಲ್ಲಿದೆ. ಇದ್ದಿದ್ದರೂ ಅವನು ಬೈಬಲಿನ ಹೊಸ ಒಡಂಬಡಿಕೆಯಲ್ಲಿ ಚಿತ್ರಿತವಾಗಿರುವಂತೆ ಇದ್ದನೇ? ಎಂಬ ಇನ್ನೊಂದು ಸಂಶಯವೂ ಪ್ರಬಲವಾಗಿದೆ. Dead Sea Scrolls ಸಂಶೋಧನೆಯಾದ ನಂತರ ಈ ಸಂಶಯವು ತುಂಬ ಗಟ್ಟಿಯಾಗಿದೆ. ವಾಸ್ತವವಾಗಿ ಕ್ರೈಸ್ತ ಧರ್ಮಕ್ಕೆ ಈಗಿರುವ ಸ್ವರೂಪವನ್ನು ಕೊಟ್ಟವನು ಚರ್ಚಿನ ಸ್ಥಾಪಕನಾದ ಪಾಲ್. ಅದು ಏನೇ ಇರಲಿ, ನೀವು ಬೈಬಲನ್ನು ನಂಬದಿದ್ದರೆ ನಿಮಗೆ ಮಹಾಘೋರ ನರಕವೇ ಗತಿ ಎಂಬ ವಿಷಯದಲ್ಲಿ ಬೈಬಲಿಗೂ ಕುರಾನಿಗೂ ವ್ಯತ್ಯಾಸವಿಲ್ಲ. ನಮ್ಮ ಏಸುವನ್ನು ಶಿಲುಬೆಗೆ ಏರಿಸಿದವರು ಎಹೂದಿಗಳು ಎಂಬ (ತಪ್ಪು) ಗ್ರಹಿಕೆಯಿಂದ ಆನಂತರ ಪ್ರಬಲರಾದ ಕ್ರೈಸ್ತರು, ಎಹೂದಿಗಳನ್ನು ಹಿಂಸಿಸತೊಡಗಿ, ಬಲವಂತ ಮತಾಂತರಗೊಳಿಸಿ, ಮತಾಂತರಕ್ಕೆ ಒಪ್ಪದವರನ್ನು ಮತ್ತಷ್ಟು ಹಿಂಸಿಸಿದ್ದರಿಂದ ಎಹೂದಿಗಳು ಬೇರೆಯವರನ್ನು ಮತಾಂತರಿಸಲು ಹೋಗಲಿಲ್ಲ. ಅಷ್ಟು ಮಾತ್ರವಲ್ಲ, ಆರಂಭ ಕಾಲದಿಂದಲೇ ಎಹೂದಿ ಧರ್ಮೀಯರು ಬೇರೆಯವರಿಂದ ಹಿಂಸೆಯನ್ನನುಭವಿಸಿದರು. ಇವತ್ತೂ ಅನುಭವಿಸುತ್ತಿದ್ದಾರೆ. ಹಿಟ್ಲರನು ಅರವತ್ತು ಲಕ್ಷ ಯಹೂದಿಗಳನ್ನು ಅನಿಲ ಕೋಣೆ (ಗ್ಯಾಸ್ ಚೇಂಬರ್)ಗಳಲ್ಲಿ ಕೊಲ್ಲುತ್ತಿದ್ದುದು ಆಗ ಪೋಪರಾಗಿದ್ದ ೧೨ನೇ ಪಯಸ್‌ಗೆ ಗೊತ್ತಿತ್ತು. ಪೋಪ್ ಪಯಸನು ‘ಹಿಟ್ಲರನ ಪೋಪ್’- ಎಂದೇ ಕುಖ್ಯಾತನಾಗಿದ್ದಾನೆ. ಅವರು ಮನಸ್ಸು ಮಾಡಿದ್ದರೆ ಕ್ರೈಸ್ತನಾದ ಹಿಟ್ಲರನಿಗೆ ಹೇಳಿ ಆ ಮಹಾಸಾಮೂಹಿಕ ಕೊಲೆಯನ್ನು ಸ್ವಲ್ಪಮಟ್ಟಿಗಾದರೂ ನಿಲ್ಲಿಸಬಹುದಿತ್ತು. ಆದರೆ ನಮ್ಮ ಏಸುವನ್ನು ಶಿಲುಬೆಗೆ ಏರಿಸಿದ ಆ ಜನಾಂಗದವರು ಸಾಯಲಿ ಎಂದು ಪೋಪರು ಸುಮ್ಮನಿದ್ದರು ಎಂಬ ಆಪಾದನೆಯು ಪ್ರಬಲವಾಗಿದೆ. ಅದಕ್ಕೆ ಕ್ರೈಸ್ತರು ಸಮರ್ಪಕ ಉತ್ತರ ಕೊಟ್ಟಿಲ್ಲ.ಗೋವಾ ಇನ್‌ಕ್ವಿಸಿಶನ್ (Goa Inquisition)ಎಂದು ಕುಪ್ರಸಿದ್ಧವಾಗಿರುವ, ಮತಾಂತರಕ್ಕೆ ಒಪ್ಪದವರನ್ನು ಪೋರ್ಚ್‌ಗೀಸ್ ಪಾದ್ರಿಗಳು (೧೫೬೦ರಿಂದ ೧೮೧೭ರ ನಡುವಿನ

ಇನ್ನೂರಐವತ್ತೆರಡು ವರ್ಷಗಳ ಅವಧಿಯಲ್ಲಿ) ಮಾಡುತ್ತಿದ್ದ ಕ್ರೂರ ಹಿಂಸೆಗಳ ವಿವರಗಳು ದಾಖಲಾಗಿವೆ. ಈ ಇನ್‌ಕ್ವಿಸಿಶನ್ ಕಾನೂನುಗಳು ೨೩೦ ಪುಟಗಳಷ್ಟು ದೊಡ್ಡದಾಗಿದ್ದವು.

(Inquisition= ತನಿಖೆ, ಹಿಂಸಾತ್ಮಕ ತನಿಖೆ). ಸ್ಟಾಲಿನ್ ಮಾಡುತ್ತಿದ್ದ ಕ್ರೂರ ಹಿಂಸಾತ್ಮಕ ತನಿಖೆಯ ವಿಧಾನಗಳು ಕ್ರೈಸ್ತ inquisition ತನಿಖೆಗಳ ಮಾದರಿಯಿಂದ ಅಳವಡಿಸಿಕೊಂಡವು. ಗೋವಾದಲ್ಲಿ ಈ ತನಿಖೆಯನ್ನು ದೊಡ್ಡಮನೆ ಎಂಬಲ್ಲಿ ಕಿಟಕಿ ಬಾಗಿಲುಗಳನ್ನು ಮುಚ್ಚಿ ಮಾಡುತ್ತಿದ್ದರು. ಏಸುವನ್ನು ನಂಬುವುದಿಲ್ಲವೆಂದು ಹೇಳುವವನು ಸೈತಾನನ ಪ್ರಭಾವಕ್ಕೆ ಒಳಗಾದವನೇ ಇರಬೇಕು. ಶಿಕ್ಷೆಯಿಂದ ಅವನ ಬಾಯಿ ಬಿಡಿಸಬೇಕು, ಎಂದು ನಂಬದ ಗಂಡಸು, ಹೆಂಗಸು ಮತ್ತು ಮಕ್ಕಳನ್ನು ನಾನಾತರಹದ ಕ್ರೌರ್ಯಕ್ಕೆ ಒಳಪಡಿಸುತ್ತಿದ್ದರು. ರಾತ್ರಿಯ ನಿಶ್ಯಬ್ದದಲ್ಲಿ ಈ ಬಲಿಮಾನವರು ನೋವಿನಿಂದ ಚೀತ್ಕರಿಸುತ್ತಿದ್ದುದು ಕೇರಿಯ ಇತರರಿಗೂ ಕೇಳಿಸುತ್ತಿತ್ತು. ಅವರಿಗೆ ಚಾವಟಿಯಿಂದ ಬಾರಿಸುತ್ತಿದ್ದರು. ಅವರ ದೇಹದ ಅಂಗಗಳನ್ನು ಹರಿಯುತ್ತಿದ್ದರು. ಮುರಿಯುತ್ತಿದ್ದರು. ಕಣ್ಣು ರೆಪ್ಪೆಗಳನ್ನು ಕೀಳುತ್ತಿದ್ದರು. ಕೈ ಕಾಲುಗಳ ತುದಿಗಳನ್ನು ಸ್ವಲ್ಪಸ್ವಲ್ಪವಾಗಿ ಕತ್ತರಿಸುತ್ತಿದ್ದರು. ಇವೆಲ್ಲವನ್ನೂ ಆತನ (ಅವಳ) ಬಂಧುಗಳೆದುರಿಗೇ ಮಾಡುತ್ತಿದ್ದರು. ಡೈಯಾಗೋ ಡಿ ಬೋರ್ಡೋ ಎಂಬ ಕ್ರೈಸ್ತ ಪೂಜಾರಿ ಮತ್ತು ಚರ್ಚುಗಳ ಪ್ರಾಂತ್ಯಾಧಿಕಾರಿ ಮಿಗ್ವೆಲ್‌ವಾಜ್ ಎಂಬುವವರು ಹಿಂದೂಗಳನ್ನು ಹಿಂಸಿಸುವ ೪೧ ಅಂಶಗಳ ಯೋಜನೆಯನ್ನು ಸಿದ್ಧಪಡಿಸಿದರು.

ಈ ಯೋಜನೆಯಡಿಯಲ್ಲಿ ಗೋವಾದ ವೈಸ್‌ರಾಯ್ ಆಗಿದ್ದ ಅಂಟಾನೋಡಿ ನೊರೋನ್ಹಾನು ೧೫೬೬ರಲ್ಲಿ ಪೋರ್ಚುಗೀಸ್ ಆಳ್ವಿಕೆಯಲ್ಲಿದ್ದ ಇಡೀ ಪ್ರದೇಶಕ್ಕೆ ಅನ್ವಯವಾಗುವಂತೆ ಕೆಳಕಂಡ ಹುಕುಂ ಅನ್ನು ಜಾರಿ ಮಾಡಿದ. “ನಾನು ಈ ಮೂಲಕ ಹುಕುಂ ಮಾಡುವುದೇನೆಂದರೆ ನನ್ನ ದೊರೆಯ ಆಡಳಿತದಲ್ಲಿರುವ ಪ್ರದೇಶದಲ್ಲಿ ಯಾರೂ ಒಂದೂ ಹಿಂದೂ ದೇವಾಲಯವನ್ನು ಕಟ್ಟಕೂಡದು: ಈಗಾಗಲೇ ಕಟ್ಟಿರುವ ಯಾವ ದೇವಾಲಯದ ದುರಸ್ತಿಯನ್ನೂ ನನ್ನ ಅನುಮತಿ ಇಲ್ಲದೆ ಮಾಡಕೂಡದು. ಈ ಹುಕುಂ ಅನ್ನು ಉಲ್ಲಂಘಿಸಿದರೆ ಆ ದೇವಾಲಯಗಳನ್ನು ನಾಶಪಡಿಸಿ ಅವುಗಳಲ್ಲಿರುವ ವಸ್ತುಗಳನ್ನು ಪುಣ್ಯ ಕೆಲಸಗಳಿಗೆ ಬಳಸಿಕೊಳ್ಳಲಾಗುವುದು.”

ಇದಲ್ಲದೆ ಅವರು ಹುಕುಂ ಮಾಡಿದ ಇನ್ನೂ ಕೆಲವು ಉದಾಹರಣೆಗಳು: ಹಿಂದೂಗಳ ಮದುವೆಯಲ್ಲಿ ಯಾವ ವಾದ್ಯವನ್ನೂ ಬಾರಿಸಕೂಡದು. ವೀಳ್ಯಶಾಸ್ತ್ರದಲ್ಲಿ ಗಂಡು ಮತ್ತು ಹೆಣ್ಣಿನ ಯಾವ ಸಂಬಂಧಿಗಳನ್ನೂ ಕರೆಯಕೂಡದು. ಮದುವೆಯಲ್ಲಿ ಯಾರಿಗೂ ವೀಳ್ಯ ಕೊಡ ಕೂಡದು. ಹೂವು ಹಣ್ಣು ಅಡಕೆ ಮೊದಲಾದವನ್ನು ಹೆಣ್ಣು ಮತ್ತು ಗಂಡಿನ ಮನೆಗಳಿಗೆ ಕಳಿಸಬಾರದು. ಕುಲದೇವತೆಗಳ ಪೂಜೆ ಮಾಡಕೂಡದು: ಪದ್ಧತಿಯಂತೆ ಮದುವೆಗೆ ಮೊದಲು ಭತ್ತ ಕುಟ್ಟುವ , ಸಂಬಾರ ಪದಾರ್ಥಗಳನ್ನು ಪುಡಿ ಮಾಡುವುದಾಗಲಿ ಕೂಡದು: ಪೆಂಡಾಲ್ ಹಾಕಕೂಡದು. ಯಾರಾದರೂ ಸತ್ತಾಗ ವೈಕುಂಠ ಸಮಾರಾಧನೆ ಅಥವಾ ಗಣಾರಾಧನೆ ಮಾಡಕೂಡದು. ಸತ್ತ ಹನ್ನೆರಡನೆ ದಿನದ ಶಾಸ್ತ್ರವನ್ನು ಮಾಡಕೂಡದು. ಏಕಾದಶಿಯಂದು ಉಪವಾಸ ಮಾಡಕೂಡದು. ಹಿಂದೂ ಗಂಡಸರು ಯಾವತ್ತೂ ಪಂಚೆ ಉಡಕೂಡದು: ಹೆಂಗಸರು ರವಿಕೆ ತೊಡಕೂಡದು: ಮನೆಯ ಮುಂದಾಗಲಿ, ಹಿತ್ತಲಲ್ಲಾಗಲಿ, ತೋಟಗಳಲ್ಲಾಗಲಿ ಎಲ್ಲೂ ತುಳಸಿಯನ್ನು ಬೆಳೆಸಕೂಡದು. ಯಾರೂ ಹಿಂದೂ ಹೆಸರನ್ನಾಗಲಿ ಮನೆತನದ ಹೆಸರನ್ನಾಗಲಿ ಉಪಯೋಗಿಸಕೂಡದು.

೧೫೭೦ನೇ ಸೆಪ್ಟೆಂಬರ್ ೨೨ ರಂದು ಜಾರಿ ಮಾಡಿದ ಹುಕುಂ ಪ್ರಕಾರ ಕ್ರೈಸ್ತ ಧರ್ಮಕ್ಕೆ ಸೇರಿದ ಹಿಂದೂಗಳಿಗೆ ಹದಿನೈದು ವರ್ಷ ಕಾಲ ಸಮಸ್ತ ತೆರಿಗೆಗಳಿಂದಲೂ ವಿನಾಯಿತಿ ದೊರೆಯುತ್ತಿತ್ತು.ಹೀಗೆಯೇ ಬರೆಯುತ್ತಾ ಹೋದರೆ ಈ ಸಣ್ಣ ಲೇಖನದಲ್ಲಿ ಸ್ಥಳ ಸಾಲುವುದಿಲ್ಲ. ಓದುಗರು A.K.PRIOLKAR ಅವರು ಬರೆದಿರುವ THE GOA INQUISITION (Voice of India. New Delhi) ಎಂಬ ಗ್ರಂಥವನ್ನು ಪೂರ್ತಿ ಓದಬೇಕು. ಈ ಗ್ರಂಥದ 79-80-81-82-83-84 ಪುಟಗಳ ಭರ್ತಿ ಮಿಶನರಿಗಳು ನಾಶ ಮಾಡಿದ ಹಿಂದೂ ದೇವಸ್ಥಾನಗಳ ಮತ್ತು ಅವುಗಳು ಇದ್ದ ಊರುಗಳ ಹೆಸರುಗಳಿವೆ. ಈ ಗ್ರಂಥದ ಕೊನೆಯಲ್ಲಿ ಸಮಕಾಲೀನ ಪೋರ್ಚುಗೀಸರೇ ಬರೆದ ಆಧಾರ ಗ್ರಂಥಗಳ ದೊಡ್ಡ ಪಟ್ಟಿಯೇ ಇದೆ. ಮತಾಂತರಕ್ಕೆ ಒಪ್ಪದವರಿಗೆ ಕೊಡುತ್ತಿದ್ದ ಕ್ರೂರ ಹಿಂಸೆ ಮತ್ತು ದೇವಾಲಯ ನಾಶಗಳಲ್ಲಿ ಈ ಕ್ರೈಸ್ತರಿಗೂ ಭಾರತದಲ್ಲಿ ಇದೇ ಕೆಲಸ ಮಾಡಿದ ಮುಸಲ್ಮಾನ ದೊರೆಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ತಮ್ಮ ಧರ್ಮವನ್ನು ಬಿಡದೆ ಜೀವಿಸಲು ಗೋವೆಯ ಲಕ್ಷಾಂತರ ಜನರು ಪಕ್ಕದ ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳಗಳಿಗೆ ಓಡಿ ಹೋದರು. ಅವರೇ ಈಗ ತಮ್ಮನ್ನು ತಾವು ಕೊಂಕಣಿ ಹಿಂದೂಗಳೆಂದು ಗುರುತಿಸಿಕೊಳ್ಳುವವರು. ಬ್ರಾಹ್ಮಣರಲ್ಲಿ ಜಿಎಸ್‌ಬಿ (ಜಿಎಸ್‌ಬಿ = ಗೌಡ ಸಾರಸ್ವತ ಬ್ರಾಹ್ಮಣ) ಮತ್ತು ಸಾರಸ್ವತರೆಂದು ಪ್ರಸಿದ್ಧರಾದವರೂ ಹೀಗೆ ಓಡಿ ಬಂದು ತಮ್ಮ ಧರ್ಮ ಸಮೇತ ಜೀವ ಉಳಿಸಿಕೊಂಡವರ ವಂಶಜರು.ಪ್ರಸಿದ್ಧ ಇತಿಹಾಸಕಾರ ಕೆ.ಎಂ.ಪಣಿಕ್ಕರ್ ಅವರು ತಮ್ಮ MALABAR AND THE PORTUGUESE ಎಂಬ ಗ್ರಂಥದ (VOICE OF INDIA, NEW DELHI

1997 RePrint) PORTUGUESE RELIGIOUS POLICY IN MALABAR ಎಂಬ ಹನ್ನೆರಡನೆ ಅಧ್ಯಾಯದಲ್ಲಿ ಬರೆಯುತ್ತಾರೆ: ಸಿರಿಯನ್ ಚರ್ಚಿನ ಕ್ರೈಸ್ತರನ್ನು ಮಲಬಾರಿನ ಹಿಂದೂ ರಾಜರು ಅವರ ಧರ್ಮಾಚರಣೆಗಳಲ್ಲಿ ಸ್ವಲ್ಪವೂ ತಲೆ ಹಾಕದೆ ಉದಾರವಾಗಿ ನಡೆಸಿಕೊಳ್ಳುತ್ತಿದ್ದರು. ಹಾಗೆಂದು ಪೋರ್ಚುಗೀಸ್ ಪ್ರವಾಸಿಗಳೇ ದಾಖಲಿಸಿದ್ದಾರೆ. ಆದರೆ ಈ ಭಾರತೀಯ ಸಿರಿಯನ್ ಕ್ರೈಸ್ತರು ತಮಗೊದಗಿದ ಮೊದಲ ಅವಕಾಶದಲ್ಲೇ ಹಿಂದೂ ರಾಜರಿಗೆ ತಾವು ಇಟ್ಟಿದ್ದ ನಿಷ್ಠೆಯನ್ನು ತಿರಸ್ಕರಿಸಿ ಪೋರ್ಚುಗಲ್ ರಾಜನ ಅಧಿಕಾರವನ್ನು ಸ್ವೀಕರಿಸಿರುವುದಾಗಿ ಘೋಷಿಸಿಕೊಂಡರು.... ತಮ್ಮಲ್ಲಿದ್ದ ಪುರಾತನ ದಾಖಲೆಗಳು ಮತ್ತು ಧರ್ಮ ಚಿಹ್ನೆಗಳನ್ನು ವಾಸ್ಕೊಡಗಾಮನಿಗೆ ಸಮರ್ಪಿಸಿದರು. ಅಲ್ಲದೆ ಹಿಂದೂ ರಾಜ್ಯಗಳನ್ನು ವಶಪಡಿಸಿಕೊಳ್ಳುವಂತೆಯೂ. ಅದಕ್ಕೆ ತಾವು ಸಹಾಯ ಮಾಡುವುದಾಗಿಯೂ ಅವನಿಗೆ ಸೂಚಿಸಿದರು. ಈ ಉದ್ದೇಶಕ್ಕಾಗಿ ಗ್ರಾಂಗನೂರಿನಲ್ಲಿ ಒಂದು ಕೋಟೆ ಕಟ್ಟುವಂತೆ ಆಹ್ವಾನಿಸಿದರು. ಕ್ರೈಸ್ತರಿಗೆ ತಾವು ತೋರಿಸಿದ ಔದಾರ್ಯ ಮತ್ತು ದಯೆಗೆ ಹಿಂದೂ ರಾಜರುಗಳು ಪಡೆದ ಪ್ರತಿಫಲ ಇದು. ಕೊಚಿನ್‌ನ ಹಿಂದೂ ರಾಜನನ್ನೇ ಮತ ಪರಿವರ್ತನೆ ಮಾಡುವಂತೆ ಪೋರ್ಚುಗಲ್‌ನ ವೈಸರಾಯಿಗೆ ಆದೇಶ ಮಾಡಲಾಯಿತು.

ಟಿಪ್ಪಣಿ ಮಾಡುವ ಅಗತ್ಯವಿಲ್ಲ

ಚರ್ಚು ತನ್ನ ಮತ ವಿಸ್ತರಣೆಯ ವಿಧಾನದಲ್ಲಿ ಕ್ರೌರ್ಯವನ್ನು ಕಡಿಮೆ ಮಾಡಿಕೊಂಡದ್ದಕ್ಕೆ ಪ್ರಮುಖ ಕಾರಣವೆಂದರೆ ಯೂರೋಪಿನಲ್ಲಿ ನವೋದಯ ಉಂಟಾಗಿ ವಿಜ್ಞಾನ ತಂತ್ರಜ್ಞಾನಗಳ ಬೆಳವಣಿಗೆಯಾಗಿ ಯೂರೋಪಿನ ಹಲವು ರಾಜ್ಯಗಳು ಹೊಸ ಭೂಮಿಗಳನ್ನು ಆಕ್ರಮಿಸಿ ಸಾಮ್ರಾಜ್ಯ ಸ್ಥಾಪನೆ ಮಾಡತೊಡಗಿ ಧರ್ಮವೆಂದರೆ ಚರ್ಚಿನ ಧರ್ಮವೊಂದೇ ಅಲ್ಲ, ಪ್ರಪಂಚದಲ್ಲಿ ಬೇರೆ ಬೇರೆ ನಂಬಿಕೆಗಳಿವೆ ಎಂಬ ತಿಳಿವಳಿಕೆಯು ಮೇಲುವರ್ಗದವರಲ್ಲಿ ಉಂಟಾದದ್ದು . ಚರ್ಚಿನ ಅಧಿಕಾರಕ್ಕೆ ಸವಾಲು ಹಾಕಿದ ರಾಜ್ಯಶಕ್ತಿಗಳು ಪ್ರೊಟೆಸ್ಟೆಂಟ್ ಧರ್ಮವನ್ನು ಆರಂಭಿಸಿದವು. ಆಧುನಿಕ ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಸಮಾಜಶಾಸ್ತ್ರಗಳ ಉದಯವಾಗಿ ಚರ್ಚಿನ ಕಂದಾಚಾರಗಳನ್ನು ಜನರು ತಿರಸ್ಕರಿಸತೊಡಗಿದರು. ತನ್ನ ಉಳಿವಿಗಾಗಿ ಚರ್ಚು ಈ ಹೊಸ ಚಿಂತನೆಗಳನ್ನು ತನ್ನ ಹಳೆಯ ನಂಬಿಕೆಗಳಿಂದ ಉದ್ಭವಿಸಿದ ವಿಚಾರಗಳೇ ಎಂಬಂತೆ ಬಿಂಬಿಸತೊಡಗಿತು. Christian Science ಎಂಬ ಹೊಸ ನಾಮಕರಣವನ್ನು ಮಾಡಿತು. ವಿಜ್ಞಾನವೇ ಬೇರೆ, Faith

ಬೇರೆ. ವಿಜ್ಞಾನದ ವಿಧಾನಗಳಿಂದ Faith ಅನ್ನು ಅಳೆಯುವುದಾಗಲಿ, ತಿರಸ್ಕರಿಸುವುದಾಗಲಿ ಸಲ್ಲದು ಎಂಬ ವಾದವನ್ನು ಮುಂದೆ ಮಾಡಿತು.

ಸಮಸ್ತ ಭಾರತದಲ್ಲಿ ಸಾಮ್ರಾಜ್ಯವನ್ನು ಕಟ್ಟಿದ ಬ್ರಿಟಿಷರು ರೋಮಿನ ವ್ಯಾಟಿಕನ್‌ನಿಂದ ಸ್ವತಂತ್ರವಾದ Church of England ಅನ್ನು ಸ್ಥಾಪಿಸಿಕೊಂಡವರು. ಭಾರತದ ಧರ್ಮಗಳನ್ನು ನೇರವಾಗಿ ಕೆಣಕಿ ತಮ್ಮ ಸಾಮ್ರಾಜ್ಯವನ್ನು ಅಸ್ಥಿರಗೊಳಿಸಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಆದ್ದರಿಂದ ತೋರಿಕೆಗಾದರೂ ಮಿಶನರಿಗಳಿಗಿಂತ ಸರ್ಕಾರವು ಭಿನ್ನವೆಂಬ ನಿಲುವನ್ನು ಅಳವಡಿಸಿಕೊಂಡರು. ಆದರೆ ಒಂದು ಹಂತದಲ್ಲಿ ಮಿಶನರಿಗಳಿಗೂ ಬ್ರಿಟಿಷರಿಗೂ ಒಂದೇ ಗುರಿ, ಒಂದೇ ಉದ್ದೇಶವಿತ್ತು. ಭಾರತೀಯರ ಭಾರತೀಯತೆಯನ್ನು ನಾಶಪಡಿಸಿದರೆ ತಮ್ಮ ಸಾಮ್ರಾಜ್ಯವನ್ನು ವಿರೋಧಿಸುವ ಅವರ ಶಕ್ತಿಯು ಉಡುಗುತ್ತದೆಂದು ಅವರು ಆಲೋಚಿಸಿ ನಿರ್ಧರಿಸಿದರು. ಮೆಕಾಲೆಯ ವಿದ್ಯಾಭ್ಯಾಸ ನೀತಿ, ಆರ್ಯರು ಹೊರಗಿನಿಂದ ಬಂದವರೆಂಬ ಸಿದ್ಧಾಂತ, ಭಾರತದ ಇತಿಹಾಸ ವ್ಯಾಖ್ಯಾನ, ವರ್ಣಾಶ್ರಮದ ವ್ಯಾಖ್ಯಾನ, ಸಮಾಜಶಾಸ್ತ್ರದ ವಿಶ್ಲೇಷಣೆ, ಸೆನ್ಸಸ್ ನೀತಿ, ಬೌದ್ಧರು, ಜೈನರು, ಸಿಖ್ಖರು, ಹಿಂದೂಗಳಲ್ಲವೆಂಬ ಸಿದ್ಧಾಂತ, ಆರ್ಯ ದ್ರಾವಿಡ ಸಿದ್ಧಾಂತ, ಮುಸ್ಲಿಮರ ಪ್ರತ್ಯೇಕತಾಭಾವದ ಪೋಷಣೆ ಮೊದಲಾದ ವಿಘಟನಾತ್ಮಕ ವ್ಯಾಖ್ಯಾನವನ್ನು ಸಿದ್ಧಪಡಿಸಿ ವಿಶ್ವವಿದ್ಯಾಲಯಗಳಲ್ಲಿ, ಪಠ್ಯಗಳಲ್ಲಿ ಪ್ರಚುರಪಡಿಸಿ ಭಾರತದ ಹೊಸ ತಳಿಗಳಲ್ಲಿ ಬಿತ್ತಿ ಬೆಳೆಸಿದರು. ಇವೆಲ್ಲವನ್ನೂ ಮಿಶನರಿಗಳು ಬಳಸಿಕೊಂಡದ್ದಲ್ಲದೆ, ಹಿಂದೂ ದೇವ ದೇವತೆಗಳನ್ನು ಅಪವ್ಯಾಖ್ಯಾನಿಸಿ ಇಡೀ ಹಿಂದೂ ಧರ್ಮವನ್ನು ಹೀಗಳೆಯುವ ಕೆಲಸವನ್ನು ಮಾಡುವ ಮೂಲಕ ಮತ ಪರಿವರ್ತನೆಯನ್ನು ಸುಲಭ ಮಾಡಿಕೊಂಡರು. ಅಷ್ಟರಲ್ಲಿ ಮಿಶನರಿಗಳು ಮತ ಪರಿವರ್ತನೆಯ ಅಸ್ತ್ರವಾಗಿ ಬೆಳೆಸಿಕೊಂಡಿದ್ದ ಶಾಲೆ, ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ ಅವರು ಕೇಳಿದ ಕಡೆ, ಕೇಳಿದಷ್ಟು ಜಾಗಗಳನ್ನು ಕೊಡುತ್ತಾ, ದೇಶಿ ರಾಜರುಗಳಿಂದ ಕೊಡಿಸುತ್ತಾ, ಅಲೋಪತಿ ಚಿಕಿತ್ಸೆಯ ಮುಖ್ಯ ವಾಹಕರನ್ನಾಗಿ ಅವರನ್ನು ಬಿಂಬಿಸುತ್ತಾ ಪ್ರೋತ್ಸಾಹಿಸಿದರು. ಕ್ರೈಸ್ತರಾಗಿ ಮತ ಪರಿವರ್ತಿತರಾದವರಿಗೆ ನೌಕರಿ ಮತ್ತು ಬಡ್ತಿಗಳಲ್ಲೂ ಆದ್ಯತೆ ಕೊಡತೊಡಗಿದರು. ಪರಿವರ್ತಿತರಾದವರು ಬೇರೆಯವರಿಗಿಂತ ಕೆಂಪು ದೊರೆಗಳಿಗೆ ಹೆಚ್ಚು ನಿಷ್ಠರಾಗಿರುವಂತೆ ಚರ್ಚು ಮತ್ತು ಆಡಳಿತ ಎರಡೂ ನೋಡಿಕೊಂಡವು. ಅಚಾರ ವಿಚಾರ, ವೇಷ, ಊಟದ ರೀತಿ, ಜೀವನ ಶೈಲಿ ಮೊದಲಾದ ಎಲ್ಲ ವಿಧಗಳಲ್ಲೂ ಅವರು ಬ್ರಿಟಿಷರ ರೀತಿಯಲ್ಲೇ ಇರುವಂತೆ, ಬೆಳೆಯುವಂತೆ ಚರ್ಚು ಮಾಡಿತು. ಎಂಥೆಂಥ ವಿದ್ಯಾಸಂಸ್ಥೆಗಳನ್ನು, ಆಸ್ಪತ್ರೆಗಳನ್ನು ಅವರು ಕಟ್ಟಿದರು! ಎಂದು ನಮ್ಮ ಎಷ್ಟೋ ಜನರು ಮೆಚ್ಚುಗೆಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡದ್ದನ್ನು ನಾನೇ ನೋಡಿದ್ದೇನೆ (ಈಗ ನಮ್ಮವರೂ ಅವಕ್ಕಿಂತ ದೊಡ್ಡ ಸಂಸ್ಥೆಗಳನ್ನು ಕಟ್ಟಿದ್ದಾರೆ. ಕಟ್ಟುತ್ತಿದ್ದಾರೆ). ಆದರೆ ಒಂದು ಅಂಶವನ್ನು ಮಾತ್ರ ನಾವು ಮರೆಯಬಾರದು. ಅವರ ವೈದ್ಯಕೀಯ ಕಾಲೇಜುಗಳ ಬಹುಭಾಗ ಸೌಲಭ್ಯಗಳನ್ನು ಬಳಸುತ್ತಿದ್ದುದು, ಈಗಲೂ ಬಳಸುತ್ತಿರುವುದು ಕ್ರೈಸ್ತರಿಗೆ ವೈದ್ಯಕೀಯ ತರಬೇತಿ ಕೊಡುವುದಕ್ಕೆ, ವಿಶೇಷ ಪರಿಣತಿಗಳಲ್ಲಿ ಅವರನ್ನು ಮುಂದೆ ತರುವುದಕ್ಕೆ. ಈ ಸಂಸ್ಥೆಗಳನ್ನು ಕಟ್ಟಲು ಅವರಿಗೆ ದೊರೆತ ಸೌಲಭ್ಯಗಳನ್ನು ಹೋಲುವ ಒಂದು ಉದಾಹರಣೆಯನ್ನು ಇಲ್ಲಿ ಕೊಡಬಹುದು. ಎಂಥ ಗೊಂಡಾರಣ್ಯಗಳನ್ನು ಕಡಿದು ಕಾಫಿ ತೋಟಗಳನ್ನಾಗಿ ಪರಿವರ್ತಿಸಿದ ಇಂಗ್ಲಿಷ್ ರ ಸಾಹಸ ನಮ್ಮವರಿಗೆ ಎಲ್ಲಿಂದ ಬರಬೇಕು! ಎಂದು ಅವರನ್ನು ಹೊಗಳುತ್ತಿದ್ದ ಮಾತನ್ನು ಚಿಕ್ಕ ಹುಡುಗನಲ್ಲಿ ನಾನು ಕೇಳಿದ್ದೇನೆ. ಆನಂತರ ಒಬ್ಬ ನಿವೃತ್ತ ಹಿರಿಯ ಕಂದಾಯ ಅಧಿಕಾರಿಯು ನನಗೆ ವಿವರಿಸಿದರು: ಬೆಂಗಳೂರಿನಲ್ಲಿರುತ್ತಿದ್ದ ಬ್ರಿಟಿಷ್ ರೆಸಿಡೆಂಟರಿಂದ ಸಂಸ್ಥಾನದ ಸರಕಾರಕ್ಕೆ ಇಂತಿಂಥವರಿಗೆ ಕಾಫಿ ತೋಟಕ್ಕೆ ಜಮೀನು ಕೊಡಿ ಎಂದು ಸೂಚನೆ ಹೋಗುತ್ತಿತ್ತು. ಸೂಚನೆ ಎಂದರೆ ವಸ್ತುಶಃ ಹುಕುಂ. ಅದು ಜಿಲ್ಲಾಧಿಕಾರಿಯ ಮೂಲಕ ತಾಲೂಕಿನ ಅಮಲ್ದಾರರಿಗೆ ತಲುಪಿ ಅವರು ಒಬ್ಬ ರೆವಿನ್ಯೂ ಇನ್ಸ್‌ಪೆಕ್ಟರನ್ನು ಕಳಿಸುತ್ತಿದ್ದರು. ಈ ರೆವಿನ್ಯೂ ಇನ್ಸ್‌ಪೆಕ್ಟರೊಡನೆ ಕುದುರೆ ಏರಿದ ಬಿಳಿಯ ದೊರೆಯು (ಆಗ ಬಿಳಿಯರನ್ನೆಲ್ಲ ದೊರೆ ಎಂದೇ ಕರೆಯುತ್ತಿದ್ದುದು) ಒಂದು ಗುಡ್ಡದ ನೆತ್ತಿಯನ್ನೇರಿ ನಿಂತು ವೃತ್ತಾಕಾರದಲ್ಲಿ ಬೆರಳು ತೋರಿಸಿ ಇಷ್ಟು ಭೂಮಿ ಬೇಕು ಎನ್ನುತ್ತಿದ್ದ. ಈ ರೆವಿನ್ಯೂ ಅಧಿಕಾರಿ ವಿನಯದಿಂದ ತಲೆಬಾಗಿ ಆ ವಿಶಾಲ ವೃತ್ತಾಕಾರವನ್ನು ಅಳತೆ ಮಾಡಿಸಿ ಮೇಲಧಿಕಾರಿಗಳಿಗೆ ವರದಿ ಮಾಡುತ್ತಿದ್ದ. ಒಂದು ವಾರದಲ್ಲಿ ಸಾವಿರಾರು ಎಕರೆ ಕಾಡು ಆ ದೊರೆಗೆ ಮಂಜೂರಾಗುತ್ತಿತ್ತು. ಸ್ಥಳೀಯರನ್ನು ಕೂಲಿಗಳಾಗಿ ನೇಮಿಸಿಕೊಂಡು ದೊರೆಯು ಕಾಡಿನ ತೇಗ, ಬೀಟೆ, ಮತ್ತಿ ಮೊದಲಾದ ಹೆಮ್ಮರಗಳನ್ನು ಕಡಿಸಿ ಮಾರಿ ಹಣ ಮಾಡಿಕೊಂಡು ಅದೇ ಹಣವನ್ನು ಕಾಫಿ ತೋಟ ಮಾಡಲು ಬಳಸಿಕೊಳ್ಳುತ್ತಿದ್ದ. ಜತೆಗೆ ಬ್ರಿಟಿಷ್ ಮಾಲೀಕತ್ವದ ಇಂಪೀರಿಯಲ್ ಬ್ಯಾಂಕ್ ಅಂಥ ದೊರೆಗಳಿಗೆ ಕಾಫಿ ಬೆಳೆ ಬರುವವರೆಗೆ ಬಡ್ಡಿ ರಹಿತ, ಬೆಳೆ ಶುರುವಾದ ನಂತರ ಶೇಕಡಾ ಒಂದರಂತೆ ಬಡ್ಡಿ ಸಹಿತ ಸಾಲ ಕೊಡುತ್ತಿತ್ತು. ಒಬ್ಬೊಬ್ಬ ದೊರೆಯೂ ಸಾವಿರಾರು ಎಕರೆ ಕಾಫಿ ತೋಟದ ಒಡೆಯನಾಗಿ ಗುಡ್ಡದ ನೆತ್ತಿಯ ಮೇಲೆ ಇಂಗ್ಲಿಷ್ ಶೈಲಿಯ ಬಂಗಲೆ ಕಟ್ಟಿಸಿಕೊಳ್ಳುತ್ತಿದ್ದ. ಎಂಥ ಸಾಹಸ ! ಭಾರತೀಯ ಹೇಡಿಗಳಿಗೆ ಎಲ್ಲಿಂದ ಬರಬೇಕು, ಈ ಸಾಹಸ ! ಆಗ ಸಕಲೇಶಪುರದಲ್ಲಿದ್ದ ಪ್ಲಾಂಟರ್ಸ್ ಅಸೋಸಿಯೇಶನ್ ಕಟ್ಟಡದ ಬಾಗಿಲಿನಲ್ಲಿ “ಸ್ಥಳೀಯರಿಗೂ ನಾಯಿಗಳಿಗೂ ಪ್ರವೇಶ ಇಲ್ಲ” ಎಂಬ ಬೋರ್ಡ್ ಇತ್ತೆಂದು ಈಗಲೂ ಹೇಳುತ್ತಾರೆ. ಮರಳುಗಾಡಿನಲ್ಲಿ ಜನ್ಮ ತಳೆದ ಈ ಮೂರು ಪ್ರವಾದಿ ಮತಗಳಿಗೂ ಭಾರತದಲ್ಲಿ ಹುಟ್ಟಿದ ಧರ್ಮಕ್ಕೂ ಒಂದು ಮೂಲಭೂತ ವ್ಯತ್ಯಾಸವಿದೆ. ಪ್ರತಿಯೊಬ್ಬ ಪ್ರವಾದಿಯೂ ನಾನು ಹೇಳುವುದೇ ಪರಮ ಸತ್ಯ. ; ನನ್ನ ಮೂಲಕವೇ ದೈವವಾಣಿಯು ಅಭಿವ್ಯಕ್ತವಾಗಿದೆ. ನೀವು ಅದಕ್ಕೆ ಎಂದರೆ ನನಗೆ, ಸಮರ್ಪಿಸಿಕೊಳ್ಳದಿದ್ದರೆ ನರಕವೇ ಗತಿ. ಅಷ್ಟು ಮಾತ್ರವಲ್ಲ. ಅದನ್ನು ಹಿಂಸೆಯನ್ನಾದರೂ ಪ್ರಯೋಗಿಸಿ ಪ್ರಪಂಚದಲ್ಲೆಲ್ಲ ವಿಸ್ತರಿಸುವುದು ನಿಮ್ಮ ಮತ ನಿಷ್ಠೆಯ ಮೂಲ ಗುಣ, ಆದ್ಯ ಕರ್ತವ್ಯ ಎಂದು ಬೋಧಿಸುತ್ತಾನೆ. ಪ್ರವಾದಿ ಮತವು ಮೂಲತಃ ಮತಾಂಧವಾದದ್ದು. ಭಾರತ ಧರ್ಮದ ಅತ್ಯಂತ ಪ್ರಾಚೀನ ಅಭಿವ್ಯಕ್ತಿಯಾದ ವೇದದ ಬಹುಮುಖ್ಯವಾದ ಬೋಧೆ, ಏಕಂ ಸತ್ ವಿಪ್ರಾಃ ಬಹುಧಾ ವದಂತಿ. ಸತ್ ಎಂಬುದು ಒಂದೇ. ತಿಳಿದವರು ಅದನ್ನು ಹಲವು ವಿಧಗಳಲ್ಲಿ ಹೇಳುತ್ತಾರೆ ಎಂಬ ಅತ್ಯಂತ ಮುಕ್ತ ಕಲ್ಪನೆಯು ಆನಂತರ ಕವಲೊಡೆದ ಎಲ್ಲ ವಾಹಿನಿಗಳಲ್ಲೂ ವ್ಯಕ್ತವಾಗಿದೆ. ಜೈನ ಜಿಜ್ಞಾಸೆಯಲ್ಲಿ ಸ್ಯಾದ್ವಾದ (ಸ್ಯಾತ್=ಬಹುದು, ಇರಬಹುದು, may be) ಎಂಬುದು ಬಹು ಮುಖ್ಯವಾದ ತತ್ತ್ವ. ಯಾವುದನ್ನೂ ಇದೇ ಪರಮಸತ್ಯವೆಂದು ಹಟ ಹಿಡಿಯಬಾರದು. ಯಾವ ವಿಚಾರವಾಗಲಿ, ನಾನು ಹೇಳುತ್ತಿರುವುದನ್ನೂ ಸೇರಿಸಿ, ಇರಬಹುದು. ಅದರ ವಿರುದ್ಧವಾದುದೂ ಇರಬಹುದು. ಇವೆರಡೂ ಕಕಾಲದಲ್ಲಿ ಇರಬಹುದು. ಹೀಗೆ ಅವರು ಏಕಕಾಲದಲ್ಲಿ ಏಳು ಬಗೆಯ ಸಾಧ್ಯತೆಗಳನ್ನು ಗುರುತಿಸುತ್ತಾರೆ. ಇದು ವೇದದ ಏಕಂ ಸತ್ ವಿಪ್ರಾಃ ಬಹುಧಾ ವದಂತಿ ಎಂಬ ದೃಷ್ಟಿಯ ಬೇರೊಂದು ಉಕ್ತಿ. ಭಾರತೀಯ ದರ್ಶನಗಳೆಲ್ಲವೂ ತರ್ಕವನ್ನು ಒಪ್ಪಿಕೊಂಡವು. ವಾದ ವಿವಾದಗಳನ್ನು ಮಾನ್ಯ ಮಾಡಿದವು. ಹೀಗಾಗಿ ಇಲ್ಲಿ ಪ್ರವಾದಿ ಮತದ ಮೂಲ ಬೇರಾದ ಮತಾಂಧತೆಗೆ ಅವಕಾಶವಾಗಲಿಲ್ಲ. ವೇದ ಮತ್ತು ಉಪನಿಷತ್ತುಗಳ ಋಷಿಗಳಾರೂ ಪ್ರವಾದಿಗಳಲ್ಲ. ಬೆಲ್ಜಿಯಂ ದೇಶದ ಕಾನ್ರಾಡ್ ಎಲ್ಸ್ಟ್ (KOENRAAD ELST) ಎಂಬ ತೌಲನಿಕ ಮತಧರ್ಮಗಳ ವಿದ್ವಾಂಸನು

PSYCHOLOGY OF PROPHETISM ಎಂಬ ತನ್ನ ಗ್ರಂಥದ ಕೊನೆಯ ಅಧ್ಯಾಯದಲ್ಲಿ “ಪ್ರವಾದಿಗಳು ತಮ್ಮ ಬಗೆಗೇ ತುಂಬ ಹೇಳಿಕೊಳ್ಳುತ್ತಾರೆ. ತಾವು ವಿಶೇಷವಾದ ವ್ಯಕ್ತಿಗಳು, ತಮಗೂ ಸೃಷ್ಟಿಕರ್ತನಿಗೂ ಬೇರಾರಿಗೂ ಇಲ್ಲದ ವಿಶೇಷ ಸಂಬಂಧವುಂಟೆಂದು ಭಾವಿಸುತ್ತಾರೆ. ಋಷಿಗಳಾದರೋ ವಿಶ್ವಾತ್ಮಕ ಸತ್ಯವನ್ನು ಮಾತ್ರ ಹೇಳುತ್ತಾರೆ. ಸತ್ಯವು ಚೇತನದ ಒಂದು ವಿಶೇಷ ಸ್ಥಿತಿಯಲ್ಲಿ ಅರಿಯಬಹುದಾದದ್ದು. ಆ ಸ್ಥಿತಿಯನ್ನು ನಾವು ನೀವೆಲ್ಲ ಸಾಧನೆಯಿಂದ ಪಡೆಯಬಹುದು” ಎನ್ನುತ್ತಾರೆ. ಕಾನ್ರಾಡ್ ಎಲ್ಸ್ಟ್ ಅವರ ಈ ಪುಸ್ತಕವನ್ನು ಈ ವಿಷಯದಲ್ಲಿ ಗಂಭೀರ ಆಸಕ್ತಿ ಇರುವ ಪ್ರತಿಯೊಬ್ಬರೂ ಓದಬೇಕು. ಬೌದ್ಧ ಧರ್ಮವನ್ನು ಬೋಧಿಸಿದ ಬುದ್ಧನು ಪ್ರವಾದಿಯಲ್ಲ; ಋಷಿ. ಉಪನಿಷತ್ ಯುಗದ ಧರ್ಮ ಜಿಜ್ಞಾಸೆಗೆ ತೊಡಗಿದ ಮಹರ್ಷಿ. ಅವನ ಕಾಣ್ಕೆಯು ಉಪನಿಷತ್ತುಗಳಿಗೆ ವಿರೋಧವಾಗಿಲ್ಲ. ಈ ಬಗೆಗೆ R.D. RANADE ಯವರ A Constructive Survey of the Upanishadic Philosophy ಎಂಬ ಗ್ರಂಥದ ನಾಲ್ಕನೆ ಪ್ರಕರಣ, ಎರಡನೆ ವಿಭಾಗವನ್ನು ನೋಡಬೇಕು. ಈ ಪುಸ್ತಕದ ಕನ್ನಡಾನುವಾದವನ್ನು ಆರ್.ಆರ್. ದಿವಾಕರ, ದ.ರಾ.ಬೇಂದ್ರೆ ಮತ್ತು ಶಂಬಾ ಜೋಷಿಯವರು ಜೊತೆಗೂಡಿ ಮಾಡಿ ಮೂಲ ಇಂಗ್ಲಿಷ್ ಕೃತಿಯು ಪ್ರಕಟವಾದ ಎರಡು ವರ್ಷದೊಳಗೆ ಪ್ರಕಟಿಸಿದರು. ನನ್ನಲ್ಲಿರುವುದು ೨೦೦೪ರಲ್ಲಿ ಗುರುದೇವ ರಾನಡೆ ಸಮಾಧಿ ಟ್ರಸ್ಟ್, ನಿಂಬಾಳ, ವಿಜಾಪುರ ಜಿಲ್ಲೆ ಅವರು ಪ್ರಕಟಿಸಿರುವ ನಾಲ್ಕನೆಯ ಆವೃತ್ತಿಯ ಕನ್ನಡ ಪ್ರತಿ. ವೈದಿಕ ವಾಹಿನಿಯಾಗಲಿ, ಜೈನ, ಬೌದ್ಧ ವಾಹಿನಿಗಳಾಗಲಿ ಬಳಸುವುದು ಧರ್ಮ ಎಂಬ ಶಬ್ದವನ್ನೇ ಹೊರತು ಪ್ರವಾದಿ ಮತಗಳು ತಮ್ಮನ್ನು ತಾವು ಬಳಸಿಕೊಳ್ಳುವ religion ಎಂಬ ಶಬ್ದವನ್ನಲ್ಲ.

ಅಧ್ಯಾತ್ಮವನ್ನು ಹೀಗೆ ಅಳೆಯದಿರಿ

ಇತರ ಧರ್ಮ ಅಥವಾ ಮತಗಳ ಬಗೆಗೆ ಔದಾರ್ಯ ಮತ್ತು ಧರ್ಮಭಾವಗಳನ್ನು ಸೃಷ್ಟಿಸಿದ ಏಕಂ ಸತ್‌ವಿಪ್ರಾಃ ಬಹುಧಾ ವದಂತಿ ತತ್ತ್ವವು ಬೇಟೆಗಾರ ಮತಗಳು ಭಾರತವನ್ನು ದಾಳಿ ಮಾಡಿ ಆಕ್ರಮಿಸಿಕೊಳ್ಳತೊಡಗಿದಾಗ ನಮ್ಮ ಮತಾಚಾರ್ಯರುಗಳನ್ನು ಮೈ ಮರೆಸಿತು. ದಾಳಿ ಮಾಡಿ ಅಮಾನವೀಯವಾಗಿ ಲಕ್ಷ ಲಕ್ಷ ಜನರನ್ನು ಕೊಂದು ಹೆಂಗಸರು ಮಕ್ಕಳನ್ನು ಅತ್ಯಾಚಾರ ಮಾಡಿ ಗುಲಾಮರನ್ನಾಗಿ ಎಳೆದು ಕೊಳ್ಳುವವರು ಹೀನವರ್ತನೆಯವರೇ ವಿನಾ ಅವರ ಧರ್ಮದಲ್ಲಿ ಏನೂ ತಪ್ಪಿಲ್ಲ ಎಂಬ ಅಭ್ಯಾಸ ಬಲದ ಗ್ರಹಿಕೆಯ ಅಜ್ಞಾನದಲ್ಲೇ ಅವರು ಪ್ರವಚನ ಮಾಡುತ್ತಿದ್ದರು. ಶೃಂಗೇರಿ ಮಠದ ಎರಡು ತಲೆಮಾರು ಹಿಂದಿನ ಚಂದ್ರಶೇಖರ ಭಾರತಿ ಸ್ವಾಮಿಗಳಿಗೆ ಸಂಬಂಧಿಸಿದ ಒಂದು ಘಟನೆಯನ್ನು ಬಹುಜನರು ಹಿಂದೂ ಧರ್ಮದ ಉದಾರತೆಯ ಉದಾಹರಣೆಯಾಗಿ ಬರೆದಿದ್ದಾರೆ. ಯಾರೋ ಒಬ್ಬ ಯೂರೋಪಿಯನ್ನನು ಸ್ವಾಮಿಗಳನ್ನು ಸಂದರ್ಶಿಸಿ “ನನಗೆ ಹಿಂದೂವಾಗುವ ಬಯಕೆ ಇದೆ. ದೀಕ್ಷೆ ಕೊಡಿ” ಎಂದನಂತೆ. ಅದಕ್ಕೆ ಸ್ವಾಮಿಗಳು “ನೀನು ಒಳ್ಳೆಯ, ಕ್ರೈಸ್ತನಾಗು. ಆಗ ಹಿಂದೂವೂ ಆಗುತ್ತೀಯೆ” ಎಂದರಂತೆ. ಆದರೆ ಒಳ್ಳೆಯ ಕ್ರೈಸ್ತ ಎಂದರೆ ಸಾಧ್ಯವಾದಷ್ಟು ಜನರನ್ನು ಕ್ರೈಸ್ತ ಮತಕ್ಕೆ ಪರಿವರ್ತನೆ ಮಾಡುವವನೂ ಆಗಿರಬೇಕು ಎಂಬ ಒಳ ತತ್ತ್ವವು ಸ್ವಾಮಿಗಳಿಗೆ ತಿಳಿದಿತ್ತೇ? ಅಥವಾ ಏಕಂ ಸತ್ ವಿಪ್ರಾಃ ಎಂಬ ಮಂತ್ರದಲ್ಲಿ ಅವರು ಮುಳುಗಿ ಹೋಗಿದ್ದರೆ? ಅಥವಾ ಅನ್ಯಜಾತಿ ಅಥವಾ ಅನ್ಯ ಧರ್ಮೀಯನಿಗೆ ಉಪದೇಶ ಕೊಡದಿರುವ ಸಂಪ್ರದಾಯವನ್ನು ದಾಟುವುದು ಸ್ವಾಮಿಗಳಿಗೆ ಸಾಧ್ಯವಾಗಲಿಲ್ಲವೇ? ಎಂಬ ಪ್ರಶ್ನೆಗಳು ಉಳಿಯುತ್ತವೆ. ಮುಸಲ್ಮಾನರು ನಮ್ಮನ್ನು ಸದೆಬಡಿದು ಮತಾಂತರಿಸುತ್ತಿದ್ದಾಗ ಪೋರ್ಚುಗೀಸರು ಗೋವ, ಮಲಬಾರುಗಳಲ್ಲಿ INQUISITION ಮಾಡುತ್ತಿದ್ದಾಗ, ಬ್ರಿಟಿಷರ ಕಾಲದಲ್ಲಿ ಪಾದ್ರಿಗಳು ಸಮಾಜಸೇವೆಯ ಸೋಗಿನಲ್ಲಿ ಎಲ್ಲೆಲ್ಲೂ ಪರಿವರ್ತನೆ ಮಾಡುತ್ತಿದ್ದಾಗ ಈ ಬೇಟೆಗಾರ ಮತಗಳ ಗ್ರಂಥಗಳನ್ನು ಓದಿ ಅವುಗಳನ್ನು ಧಾರ್ಮಿಕ ಜಿಜ್ಞಾಸೆಗೆ ಒಳಪಡಿಸುವ ಕೆಲಸವನ್ನು ನಮ್ಮ ಧರ್ಮಾಚಾರ್ಯರುಗಳು ಮಾಡಲಿಲ್ಲ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಆಧ್ಯಾತ್ಮಿಕ ಪ್ರೇರಕರೂ ಮಾರ್ಗದರ್ಶಕರೂ ಆಗಿದ್ದ ವಿದ್ಯಾರಣ್ಯರಿಗೆ ದೇಶದ ಸಾಂಸ್ಕೃತಿಕ ಮತ್ತು ರಾಜಕೀಯ ಸಮಸ್ಯೆ ಗೊತ್ತಿತ್ತು. ಆದರೆ ಅವರು ಆ ಬೇಟೆಗಾರ ಮತವನ್ನು ಓದಿ ವಿಶ್ಲೇಷಿಸಿ ಬರೆದಿರುವುದು ನನಗೆ ಗೊತ್ತಿಲ್ಲ. ಈ ಕೆಲಸವನ್ನು ನೇರವಾಗಿ ಕೈಗೆತ್ತಿಕೊಂಡು ಅಧ್ಯಾತ್ಮ ಮತ್ತು ಜಿಜ್ಞಾಸೆಯ ಮಟ್ಟದಲ್ಲಿ ಮಾಡಿದವರು ನನ್ನ ಓದಿನ ವ್ಯಾಪ್ತಿಯ ಮಿತಿಯಲ್ಲಿ ಹೇಳುವುದಾದರೆ ಮಹರ್ಷಿ ದಯಾನಂದ ಸರಸ್ವತಿಯವರು ಮತ್ತು ಸ್ವಾಮಿ ವಿವೇಕಾನಂದರು.

ಪೂರ್ವದ ಮತ್ತು ಬಹುತೇಕ ಇಂದಿನ ಹಿಂದೂ ಧರ್ಮಾಚಾರ್ಯರುಗಳಿಗಿರುವ ಬೇಟೆಗಾರ ಮತಗಳ ಬಗೆಗಿನ ಅವಜ್ಞೆಯು ಅಷ್ಟೇ ಬಹುತೇಕ ವಿದ್ಯಾವಂತ ಲೌಕಿಕರಿಗೂ ಇದೆ. ತಮ್ಮ ಜೀವನವನ್ನೇ ಬಲಿಯಾಗಿಟ್ಟು ಜಿಹಾದಿಗಳು ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವಂತೆ ಹಳ್ಳಿ ಹಳ್ಳಿಗಳಲ್ಲಿ , ಗುಡ್ಡಗಾಡುಗಳಲ್ಲಿ ತಿರುಗಿ ಜನರನ್ನು ಮತಾಂತರಕ್ಕೆ ಪ್ರಚೋದಿಸುವ ಕಾಯಕದಲ್ಲಿ ತೊಡಗಿರುವ ಮಿಷನರಿಗ

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಿಜಯ ಕರ್ನಾಟಕ, ಅಕ್ಟೋಬರ್ ೧೬
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-24


ಪ್ರತಿಸ್ಪಂದನ
prakash, karnataka
2008-11-15
e lekhana tumba gondalamayavagide sriman bhirappanavaru nanyada ondu mukhavanne nodiddare kelaondu vishyavannu mundittu edi kristha moolavnu moodalisiddare kevala negetive annu ethi edideddare sariyagi artha maadikollade komu galabege kummakku niduthiddare sl birappanavre sariyagi yochici bareeri nimmanthha gannya vykthigalige sariyada baraha edalla nimage bareyalu bekada visha bejan ede brashtacara athyachra innitra vishaya anaitikathe free sex college galalli nadeyuvanta anaitikathegalu evella vichaRagalive adannu bittu bisi tuppakke nirannu oyyadedi edarinda aguva aanautakke karanaragabedi yaaru tanna nambikeyalii stiravagiruttaro avarannu yaru allaisalara yemba maatannu nivu maretiddira dayavittu 10 nimisha yochisi nodi nivu baredirudu sareyo tappu endu kelavondu vishaya sariyirabaudu adare shanthi nemmadi yannu gamanadallittu lekana bareyeri edu nimma nemmadigu banga tarutide yemba sathya arieri ennu bareyalu summru ede
U. HEGDE, KAPU
2008-11-01
MR. RONALD .... SO ITS NOT ME WHO IS BITTEN BY TRUTH, BUT ITS YOU WHO IS BITTEN BY TRUTH Mr.RONALD. SO RONALD THINK ONCE CALMLY AND THEN WRITE COMMENTS..[ EDITED}
Ronald, Udupi
2008-10-31
Mr. Hegde, You are bitten by truth and have gone for unconvincing lenghty explanation. It is foolish to question the national integrity of Indian Christians. You may not find facts to prove against. Why too much importance is given to cast and religion these days? For power isn\'t it? You are talking about injustice! It is committed by Bhajrangis and Chaddi Pade who took law into their hands. Digest the truth and be a positive thinker towards the growth of the country. Part of growth is eliminating poverty. This is not possible with hatred towards another community. Do not say only Hindus are progressive. What about Abdul Kalam, Mother Theresa, educational
U. Hegde, kapu
2008-10-29
mr. steevan if you stopped reading vijaya karnataka means that you have been bitten by the truth. good and one more thing steevan instead of arguing baselessly argue with good points so that people can atleast try to think about it. and inorder to talk about dollars being spent on conversion one need not be a financial expert. you can simply spend some time in research and you can find many documents which can prove that. and one more thing you should know that mr. bahirappa has given references of so many other articles and documents. so go through those details please. when we hindus say that we have been totured you people always have many objections. so we cant help it. look at the figures it itself shows how we have been targetted, but still you many unwanted answers. so now we know what is wrong and what is right and we will protest when we are subjected to injustice. if it hurts you then stop your people from doing injustice. you people talk about \"tolerance\" but you know tolerating injustice is a sin. so no more \"tolerance\" for people who think that we are weak and we cannot react. and now mr.RONALD you are talking about national intergrity. it doesnt come when hindus reamin silent to all injustices and when only false things are projected. truth is also required and people like you who cannot digest truth should not talk about integrity. we hindus have always been progressive people who have accepted our wrong things and tried to change that. i agree some section of hindus have done many wrong things but there are section of people who oppose them. so dont teach bhairappa about national integration. if he wanted to be in news he could have surrendered his self respect and bowed before the communist historians and could have won big awards, instead he chose the path of truth and we all respect him for that.
Steevan, Mangalore
2008-10-26
I dont know as a writer how he wrote nonsence article.I and all my friends and all stopped reading the vijaya karnataka, we dont like this type of uncultured writers writings.Here also politics, everyone is telling that \'matanthara\' just tell me hindu\'s dont have a brain? how can one person forced to change? and is telling that about US dollers I think he is a not only writer but also financial manager.He was written about sonia gandi so one thing is clear that beyond this nonsence writer political power (money)is working.
Mohan H Naik, Mangaluru
2008-10-24
ಲೇಖನವನ್ನು ಓದಿ ಮನಸ್ಸು ಮೌನವಾಗಿ ರೊದಿಸಿತು. ಮಹಾತ್ಮಾ ಗಾಂಧಿ ಯವರ ನಾಮಬಲದ ಶ್ರೀರಕ್ಷೆಯಲ್ಲಿ ರಾಜ್ಯಬಾರ ಮಾಡ್ತಾ ಇರೋ ಇಂದಿನ ಕೆಲವು ರಾಜಕೀಯ ಕುಟುಂಬ ಹಾಗು ವ್ಯಕ್ತಿಗಳು, ಮಹಾತ್ಮನ ತತ್ವ ಉಪದೇಶಗಳಿಗೆ ತಿಲಾಂಜಲಿ ಇಟ್ಟು, ದೇಶ ಹಾಗು ಸಂಸ್ಕೃತಿ ಯನ್ನ ಸಾರಾಸಗಟು ಹಾಳು ಗೆಡುವುತ್ತ ಇರೋದು ನಮ್ಮ ಹಾಗು ದೇಶದ ದುರಾದ್ರಷ್ಟ . ಮಾತು ಮಾತಿಗೂ, ಗಾಂಧಿ, ಬಾಪು, ಅಂತ ಹೇಳ್ತಾ, ಜನರನ್ನ ದಾರಿತಪ್ಪಿಸೂ ಈ ಜನಕ್ಕೇ, ಮಹಾತ್ಮನ, ಹಿಂದೂ ದರ್ಮದ ಬಗ್ಗೆ ಇದ್ದ ಕಳಕಳಿ, ಅಕ್ಕರೆ, ಪ್ರೇಮ, ನಂಬಿಕೆ ಬಗ್ಗೆ ಕೊಂಚವಾದರೂ ಜ್ನಾನವಿದೆಯ? ಸಮಾನ ಮನಸ್ಕರ ಗಮನಕ್ಕೇ ಬಾಪು ವಿನ ಕೆಲವು ವಿಚಾರ ಧಾರೆ. " I Call Myself a Sanatani Hindu I call myself a Sanatani Hindu, because I believe in the Vedas, the Upanishads, the Puranas, and all that goes by the name of Hindu scripture, and therefore in avataras and rebirth; I believe in the varnashrama dharma in a sense, in my opinion strictly Vedic but not in its presently popular and distorted crude sense; I believe in the protection of cow. I do not disbelieve in murti puja. (Young India: June 10, 1921) Why I am Not a ಕನ್ವರ್ಟ್ Hinduism as I know it entirely satisfies my soul, fills my whole being. When doubts haunt me, when disappointments stare me in the face, and when I see not one ray of light on the horizon, I turn to the Bhagavad Gita, and find a verse to comfort me; and I immediately begin to smile in the midst of overwhelming sorrow. My life has been full of tragedies and if they have not left any visible and indelible effect on me, I owe it to the teachings of the Bhagavad Gita. (Young India: June 8, 1925) I Disbelieve in Conversion I disbelieve in the conversion of one person by another. My effort should never to be to undermine another\'s faith. This implies belief in the truth of all religions and, therefore, respect for them. It implies true humility. (Young India: April 23, 1931) Conversion: Impediment to Peace It is impossible for me to reconcile myself to the idea of conversion after the style that goes on in India and elsewhere today. It is an error which is perhaps the greatest impediment to the world\'s progress toward peace. Why should a Christian want to convert a Hindu to Christianity? Why should he not be satisfied if the Hindu is a good or godly man? (Harijan: January 30, 1937) Conversion must not mean denationalization. Conversion should mean a definite giving up of the evil of the old, adoption of all the good of the new and a scrupulous avoidance of everything evil in the new. Conversion, therefore, should mean a life of greater dedication to one\'s country, greater surrender to God, greater self-purification. (Young India: August 20, 1925) Missionary Aim: Uprooting Hinduism My fear is that though Christian friends nowadays do not say or admit it that Hindu religion is untrue, they must harbour in their breast that Hinduism is an error and that Christianity, as they believe it, is the only true religion. So far as one can understand the present (Christian) effort, it is to uproot Hinduism from her very foundation and replace it by another faith. (Harijan: March 13,1937) Missionaries: Vendors of Goods When the missionary of another religion goes to them, he goes like a vendor of goods. He has no special spiritual merit that will distinguish him from those to whom he goes. He does however possess material goods which he promises to those who will come to his fold. (Harijan: April 3, 1937) Christianity and Imperialistic Exploitation Christianity in India has been inextricably mixed up for the last one hundred and fifty years with British rule. It appears to us as synonymous with materialistic civilization and imperialistic exploitation by the stronger white races of the weaker races of the world. Its contribution to India has been, therefore, largely negative. (Young India: March 21, 1929) Let the Hindu be a Better Hindu I came to the conclusion long ago that all religions were true and also that all had some error in them, and whilst I hold by my own, I should hold others as dear as Hinduism. So we can only pray, if we are Hindus, not that a Christian should become a Hindu. But our innermost prayer should be a Hindu should be a better Hindu, a Muslim a better Muslim, a Christian a better Christian. (Young India: January 19, 1928) \" How nice it would be, if everyone of us really understand the same, in the larger interest of nation.
Ronald, Udupi
2008-10-24
Bhairappa has written lot of things which are far from truth. He wants to be in news and running out of ideas to create a good litrature. He is sowing hatred by such article. News paper too would like to gain some advantage by creating bitter feelings and hatred. This is the gift of this writer to the modern world with an attempt to move backward. Why can\'t these people write good article which can improve national integrity than tearing it apart? What is the contribution of this article towards communal harmony? If possible help for the growth of the country or stay away. Do not be a distroyer Bhairappa!
chira786, Bahrain
2008-10-24
Howdu 5 varshada hinde slow poison hagittu higa soniya krapaposita yakshagana mandali banda mele fast poison hagide
ನಿತ್ಯಾನ೦ದ ಬೆಸ್ಕೂರ್, ಉಡುಪಿ, ದುಬೈ
2008-10-24
ಯೊಚಿಸಬೇಕಾದ ವಿಶಯ.ಬರಹದಲ್ಲಿ ಅರ್ಥವಿದೆ.ಅದಲ್ಲದೆ ಕ್ರಿಸ್ಚಿಯನ್ನರು ಈಗ ಹಿ೦ದು ಹೆಸರನ್ನು ಇಡುವುದರಿ೦ದ ಅವರನ್ನು ಹಿ೦ದುಗಳೆ೦ದು ಬಾವಿಸುತೇ ವೆ . ೨ ದಶಕಗಳಿ೦ದ ಈ ರೀತಿ ಹೆಸರು ಬದಳಾವಣೆ ನಡಿತಿದೆ.ಬುದ್ದಿವ೦ತರು ಅವರು, ಅಲ್ಲವೆ.ಸ೦ದರ್‍ಬಕ್ಕೆ ಸರಿಯಾಗಿ ಹೆಸರನ್ನು ಉಪಯೊಗಿಸುತಾರೆ.ಒಳ್ಳೇ ದಿಮಾಕು ಅವರದ್ದು ಏನ೦ತೀರಿ.ನಾವು ವಟ,ವಟ,ಅ೦ತ ಬಡ್ಕೊತೀವಿ ಅಷ್ಟೇ. ಏನಾದ್ರು ಪ್ರಯೊಜನ ಇದ್ಯಾ ಹೆಏಳೀ.
ಪುರುಷೋತ್ತಮ್ , ಮಂಗಳೂರು
2008-10-24
"ಭಾರತದಲ್ಲಿ ೨೩೪ ಲಕ್ಷ ಕ್ರೈಸ್ತರಿದ್ದಾರೆ. ಎಂದರೆ ಶೇಕಡಾ ೨.೫ ರಷ್ಟೂ ಇಲ್ಲ. ಇದೊಂದು ನಗಣ್ಯ ಸಂಖ್ಯೆ. ಆದರೂ ಇಂದು ಭಾರತದಲ್ಲಿ ಐದು ಜನ ಕ್ರೈಸ್ತ ಮುಖ್ಯಮಂತ್ರಿಗಳಿದ್ದಾರೆ" ಇದು ಗಮನಿಸಬೇಕಾದ ವಿಚಾರ. ತಮ್ಮ ವಿಚಾರವನ್ನು ಕರಾರುವಕ್ಕಾಗಿ ಮಂಡಿಸಲು ಭೈರಪ್ಪನವರು ಬೇರೆ ಬೇರೆ ಮೂಲಗಳನ್ನು ಬಳಸಿಕೊಂಡಿದ್ದಾರೆ. ಆ ಮೂಲಕ ತಮ್ಮ ವಿಚಾರವನ್ನು ಓದುಗರ ಮೇಲೆ ಹೇರುತ್ತಿದ್ದರೆಂಬ ಭಾವನೆ ಮಾಯವಾಗಿದೆ. francoisgautier.com ವೆಬ್ ಸೈಟ್ನಲ್ಲಿ ಇನ್ನೂ ಹಲವಾರು ಕಣ್ತೆರೆಸುವ ಲೇಖನಗಳಿದ್ದಾವೆ. ಹಾಗೆ A.K.PRIOLKAR ಅವರು ಬರೆದಿರುವ THE GOA INQUISITION ಕೆಲವು ಭಾಗಗಳನ್ನು ಓದಿ ಬೇಸರವಾಯಿತು. ಅಂದು ಆ ರೀತಿ ವರ್ತಿಸಿದವರು ಇಂದು ಬಾಡಿಗೆ ಹಂತಕರನ್ನು ಗೊತ್ತುಪಡಿಸಿ ಸ್ವಾಮಿಗಳನ್ನು ಕೊಳ್ಳುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ತಪ್ಪು ಎಲ್ಲರಿಂದಲೂ ನಡೆಯುತ್ತದೆ. ತಮ್ಮ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಸೌಹಾರ್ದತೆಯಿಂದ ಬಾಳಿದರೆ ಉತ್ತಮ. ಬಾಹ್ಯ ಪ್ರಚೋದನೆಗೊಳಗಾಗಿ ಅಶಾಂತಿ ಸೃಷ್ಟಿಸಿದರೆ ಯಾರಿಗೂ ನೆಮ್ಮದಿ ಇರೋದಿಲ್ಲ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»2008 ನಲ್ಲಿ ಕಾಲ್ತುಳಿತಕ್ಕೆ 360 ಕ್ಕೂ ಹೆಚ್ಚು ಬಲಿ , ಬಾಂಬ್ ಸ್ಪೋಟಕ್ಕೆ 156
»ಆಗಾಗ ಬದುಕಿ ಬರುವವರು...!! ಸಮಾಜವ ಹಿಂಡಲು..??
»The dilemma of an educated Muslim youth
»ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೆ ಹಿಂಸಿಸಿಕೊಂಡಂತೆ
»ಕುಂಕುಮವಿಟ್ಟರೆ ಗೆಟ್ ಔಟ್!
»ಸಬಕೋ ಸನ್ಮತಿ ದೇ ಭಗವಾನ್ .....
»ಟಾಪ್ ಸಿ.ಎಮ್
»ಸರ್ ಎಂ.ವಿಶ್ವೇಶ್ವರಯ್ಯನವರಿಗೆ ನಮನ
»ಅಪ್ಪಿಕೋ ಚಳವಳಿ ನೆನಪಿನ ಹಬ್ಬ
»ಮನೆಯೊಳಗೆ ಬೇರುಗಳ ಸುಂದರ ಲೋಕ
»ಈ ಸಂದಿಗ್ಧ ಕಾಲದಲ್ಲಿ ನೀವು ಯಾರ ಪರ?
»ಅವನಿಗೆ ಅಬ್ದುಲ್ ಕಲಾಂ ಕಾಗದ ಬರೆದರು!
»ದಿನದ ಸುದ್ದಿ- ಹಾಡು ಹಕ್ಕಿಗೆ ಕೃತಕ ಗೂಡು
»ಜೀವಕ್ಕೆ ಬೆಲೆಯೆಲ್ಲಿದೆ? ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ...
»ಕೋಮು ದ್ವೇಷದ ಸುಗ್ಗಿಯ ಕುಯಿಲು...
»ಅಲ್ಲಿ ಮಹಾಸ್ಫೋಟ, ಇಲ್ಲಿ ಮಹಾಪ್ರಯೋಗ
»ಮಧ್ಯ ಬೆರಳಿನ ಪುರಾಣ - History of the Middle Finger
»ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ
»ಹೋದವರು ಮತ್ತೆ ಬರಲಾರರು
»ವಿಶ್ವದ ಹುಟ್ಟಿನ ಪತ್ತೆ ಯತ್ನ...ವಿಜ್ಞಾನಿಗಳಿಂದ ಪ್ರೊಟಾನ್ ಸ್ಪೋಟ
»ಕಂದನ ನಗು ಕಸಿದಹೃದಯ ಬೇನೆ .....
»ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು
»ಭಗತ್ ಸಿಂಗ್ ರ ಅಣಿಮುತ್ತುಗಳು.
»ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
»ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು
»ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!
»ವಿಜ್ಞಾನಿಗೆ ಕೈಕೊಟ್ಟ ಕಂಪ್ಯೂಟರ್ ಉಪಕರಣಗಳು..!
»ವಾರದಲ್ಲಿ ಹೊಸಮನೆ ರೆಡಿ
»ಹೆಕ್ಕಿಕೋ, ಪ್ಲಾಸ್ಟಿಕ್ ಹೆಕ್ಕಿಕೋ...
»ಮುದ್ರಿಸುವ ಮುನ್ನ ಯೋಚಿಸಿ...
»ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?
»ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...
»ಮಳೆಗೆ ನಾವೆಷ್ಟು ಸಿದ್ಧ?
»ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ
»ನೀರಿನ ಮೇಲೆ ತೇಲುವ ಕಾರು ಪಾರ್ಕಿಂಗ್ ವ್ಯವಸ್ಥೆ
»Virginity: A virtue or a curse?
»ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ
»ತಾಯಿಯ ಹಾಲಿನಲ್ಲಿ ಮೊಟ್ಟೆಯ ವಾಸನೆ!
»