ದುಬೈ: ಫೆರರೈಟ್ಸ್ ಯು.ಎ.ಇ. ಆಯೋಜಿಸಿರುವ ವೋಕಲ್ ಟಚ್ - ಗಾಯನಕಾರ್ಯಕ್ರಮ |
ಪ್ರಕಟಿಸಿದ ದಿನಾಂಕ : 2008-10-24
ನವಗಾಯಕರಿಗೆ ಸುವರ್ಣಾವಕಾಶ : ಅನುಭವಿಗಳೊಂದಿಗೆ ಹಾಡುವ ಕಾರ್ಯಾಗಾರ
ದುಬೈ, ಅಕ್ಟೋಬರ್ 24: ಹೊಸ ಗಾಯಕರಿಗೆ ತಮ್ಮ ಪ್ರತಿಭೆಯನ್ನು ಬೆಳಗಿಸಲು ವೇದಿಕೆಯೊಂದನ್ನು ನೀಡುವ ನಿಟ್ಟಿನಲ್ಲಿ ಫೆರರೈಟ್ಸ್ ಯು.ಎ.ಇ. ಸಂಘಟನೆ -ವೋಕಲ್ ಟಚ್- ಎಂಬ ಗಾಯನಾ ಕಾರ್ಯಾಗಾರವೊಂದನ್ನು ಏರ್ಪಡಿಸಿದೆ.
ಬರ್ ದುಬೈ ಬ್ಯಾಂಕ್ ಸ್ಟ್ರೀಟ್ ನಲ್ಲಿರುವ ಫೋರ್ ಪಾಯಿಂಟ್ಸ್ ಶೆರಟನ್ ಹೋಟೆಲಿನಲ್ಲಿ ಈ ಕಾರ್ಯಾಗಾರವನ್ನು ಮಧ್ಯಾಹ್ನ 11:30ರಿಂದ ಮಧ್ಯಾಹ್ನ 3:30 ರವೆರೆಗೆ ಆಯೋಜಿಸಲಾಗಿದ್ದು ಹಲವು ಅನುಭವಿ ಗಾಯಕರು ಪಾಲ್ಗೊಳ್ಳಲಿದ್ದಾರೆ. ಹೊಸ ಗಾಯಕರಿಗೆ ಈ ಕಾರ್ಯಾಗಾರ ಅನುಕೂಲಕವಾಗಿದ್ದು ಹೆಚ್ಚಿನದನ್ನು ಕಲಿಯಲು ಸುವರ್ಣಾವಕಾಶ ಕಲ್ಪಿಸಲಿದೆ.
ಕಾರ್ಯಕ್ರಮವನ್ನು ಶ್ರೀ ಜೋಸಿ ಮೋರಾಸ್ ರವರು ನಿರೂಪಿಸುತ್ತಿದ್ದು ಇಂಟೆಗ್ರೇಟೆಡ್ ಲಾಜಿಸ್ಟಿಕ್ಸ್ ಸಂಸ್ಥೆ ಪ್ರಾಯೋಜಿಸುತ್ತಿದೆ. ಹೋಟೆಲ್ ಆವರಣದಲ್ಲಿ ಆಗಮಿಸಿದ ಅತಿಥಿಗಳಿಗೆ ವ್ಯಾಲೆ ಪಾರ್ಕಿಂಗ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ಫೆರರೈಟ್ಸ್ ಯು.ಎ.ಇ. ಅಧ್ಯಕ್ಷರಾದ ಶ್ರೀ ವಿನ್ಸೆಂಟ್ ಪೆರೀರಾ ರವರನ್ನು ದೂರವಾಣಿ 050-4451809 ಮೂಲಕ ಸಂಪರ್ಕಿಸಬಹುದಾಗಿದೆ
ವರದಿಯ ವಿವರಗಳು |
 |
ಕೃಪೆ : ಫೆರರೈಟ್ಸ್ ಯು.ಎಇ. ಪ್ರಕಟಣೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-24
|
|
|