ಸರಕಾರಿ ಭದ್ರತೆಯ ಅಗತ್ಯವಿಲ್ಲ:ರಾಜ್ ಠಾಕ್ರೆ |
ಪ್ರಕಟಿಸಿದ ದಿನಾಂಕ : 2008-10-23
ಮು೦ಬೈ,ಅ.23.
ತನಗೆ ನೀಡುವ ಭದ್ರತೆಯನ್ನು 'ಝೆಡ್' ವರ್ಗದಿಂದ 'ವೈ' ವಿಭಾಗಕ್ಕೆ ತಗ್ಗಿಸಿರುವ ವಿಚಾರವು ತಿಳಿದ ನಂತರ, ಸರಕಾರವು ನೀಡುವ ಭದ್ರತಾ ಸೇವೆಯನ್ನು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ನಿರಾಕರಿಸಿದ್ದಾರೆ.
ರಾಜ್ ಠಾಕ್ರೆ ಅವರ ಭದ್ರತಾ ವರ್ಗವನ್ನು ತಗ್ಗಿಸಲು ಸರಕಾರವು ನಿರ್ಧರಿಸಿರುವ ಬಗ್ಗೆ ಪ್ರತಿಕ್ರಯಿಸಿದ ಠಾಕ್ರೆ, 'ನನ್ನನ್ನು ನಾನೇ ರಕ್ಷಿಸಿಕೊಳ್ಳಬಲ್ಲೆ. ನನಗೆ ಯಾವುದೇ ಸರಕಾರಿ ಭದ್ರತೆಯ ಅಗತ್ಯವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಈವೆರಗೆ ಠಾಕ್ರೆ ಅವರಿಗೆ 'ಝೆಡ್' ವಿಭಾಗದಲ್ಲಿ ಬಂಧೂಕುಧಾರಿ ಪೊಲೀಸ್ ಮತ್ತು ಅವರ ಖಾಸಗಿ ಭದ್ರತಾ ಅಧಿಕಾರಿಗಳನ್ನು ರಕ್ಷಣೆಗಾಗಿ ನೀಡಲಾಗುತ್ತಿತ್ತು. ಆದರೆ, ಈಗ ಭದ್ರತೆಯನ್ನು 'ವೈ' ವಿಭಾಗಕ್ಕೆ ತಗ್ಗಿಸಿದ ನಂತರ, ಭದ್ರತೆಗಾಗಿ ಕೆಲವೇ ಪೊಲೀಸರನ್ನು ನೀಡಲಾಗುತ್ತದೆ.
ರಾಜ್ ಠಾಕ್ರೆ ಅವರ ಭದ್ರತೆಯನ್ನು ತಗ್ಗಿಸುವ ನಿರ್ಧಾರವನ್ನು ಕೆಲವು ದಿನಗಳ ಹಿಂದೆಯೇ ಕೈಗೊಂಡಿದ್ದು, ಅದನ್ನು ಬುಧವಾರದಂದು ಜಾರಿಗೊಳಿಸಲಾಯಿತು ಎಂದು ಪೊಲೀಸ್ ಮುಖ್ಯಸ್ಥ ಹಸನ್ ಗಫೂರ್ ತಿಳಿಸಿದ್ದಾರೆ.
ವಿವಿಧ ರಾಜಕೀಯ ಪಕ್ಷಗಳ ಒತ್ತಡದ ಮೇರೆಗೆ ರಾಜ್ಯ ಸರಕಾರವು ಈ ನಿರ್ಧಾರವನ್ನು ಕೈಗೊಂಡಿದ್ದು, ಸರಕಾರದ ಈ ನಿರ್ಧಾರವು ಪ್ರತೀಕಾರ ರೂಪದಲ್ಲಿದೆ ಎಂದು ಎಂಎನ್ಎಸ್ ವಕ್ತಾರ ನಿತಿನ್ ಸರ್ದೇಸಾಯ್ ಆರೋಪಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-23
|
|
|