ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಮರಾಠಿಗರ ಗದ್ದಲವಲ್ಲ ಠಾಕ್ರೆ ಪರಿವಾರದ ಗದ್ದಲ

ರಾಷ್ಟ್ರೀಯತೆಯ ಹೆಸರಿನಲ್ಲಿ ಹಿಂದುತ್ವ, ಮರಾಠಿಗರ ಹೆಸರಿನಲ್ಲಿ ಪ್ರಾದೇಶಿಕತೆಯನ್ನು ಏಕ ಕಾಲದಲ್ಲಿ ಪ್ರತಿಪಾದಿಸುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ಈ ದೇಶದ ರಾಜಕೀಯ ವಿರೋಧಾಭಾಸಗಳಿಗೆ ಹಿಡಿದ ಕನ್ನಡಿ. ಮುಂಬೈನಲ್ಲಿ ಟ್ಯಾಕ್ಸಿ ಓಡಿಸುತ್ತಿರುವ, ಚಹಾ ಅಂಗಡಿ ಇಟ್ಟಿರುವ ಅಮಾಯಕರನ್ನು ಥಳಿಸುತ್ತಾ ಅದನ್ನೇ ಪ್ರಾದೇಶಿಕ ಧ್ವನಿ ಎಂದು ಕರೆಯುತ್ತಾ ಮಹಾರಾಷ್ಟ್ರದ ನಿಜವಾದ ಪ್ರಾದೇಶಿಕ ಸಂವೇದನೆಗಳನ್ನು ಮಟ್ಟ ಹಾಕುತ್ತಾ ಬಂದಿದೆ ಶಿವಸೇನೆ. ಮಹಾರಾಷ್ಟ್ರದ ದಲಿತರು, ತಳ ವರ್ಗದ ಜನರು ತಮ್ಮ ಹಕ್ಕಿಗಾಗಿ ಧ್ವನಿಯೆತ್ತಿದಾಗ ಇದೇ ‘ಸೇನೆ’ ಅತ್ಯಂತ ಬರ್ಬರವಾಗಿ ಅದನ್ನು ಮಟ್ಟ ಹಾಕಿದೆ. ಇದೀಗ ಬಾಳಾ ಠಾಕ್ರೆ ಹಲ್ಲು ಮುರಿದು ಬಿದ್ದಿರುವಾಗ, ಅವರು ಉಳಿಸಿದ ದಾರಿಯಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ನಾಯಕ ರಾಜ್ ಠಾಕ್ರೆ ತನ್ನ ರಾಜಕೀಯ ರಥವನ್ನು ಮುನ್ನಡೆಸಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಮೊನ್ನೆ ರೈಲ್ವೆ ಇಲಾಖೆಯ ನೇಮಕಾತಿ ಪರೀಕ್ಷೆಗೆ ಬರೆಯಲು ಬಂದ ಬಡಪಾಯಿ ಬಿಹಾರಿ ವಿದ್ಯಾರ್ಥಿಗಳ ಮೇಲೆ ರಾಜ್ ಠಾಕ್ರೆಯವರ ಗೂಂಡಾಗಳು ಅಮಾನವೀಯವಾಗಿ ದಾಳಿ ನಡೆಸಿದರು. ಈ ಕಪಿ ಸೇನೆಯ ಕೃತ್ಯಗಳಿಗೆ ‘ಪ್ರಾದೇಶಿಕ ಭಾವನೆಗಳ ಸೋಟ’ ಎಂದು ಕೆಲ ಮಾಧ್ಯಮಗಳು ತಲೆಬರಹಗಳನ್ನು ಕೊಡುತ್ತಿವೆ. ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಮುಂಬೈಯಲ್ಲಿ ಮಾಡುತ್ತಿರುವ ಅನಾಹುತಗಳನ್ನು ‘ಮರಾಠಿಗರ ಬದುಕಿನ ಹೋರಾಟ’ ಎಂದು ಯಾವ ಮುಜುಗರವೂ ಇಲ್ಲದೆ ಬಣ್ಣಿಸಲಾಗುತ್ತಿದೆ.

ಬಿಹಾರಿಗಳ ಮೇಲೆ ನಡೆದ ಹಲ್ಲೆ ‘ಬದುಕಿನ ಹೋರಾಟ’ ನಿಜ. ಆದರೆ ಮರಾಠಿಗರ ಬದುಕಿನ ಹೋರಾಟ ಅಲ್ಲ. ರಾಜ್ ಠಾಕ್ರೆ ಮತ್ತು ಅವರ ರಾಜಕೀಯ ಪಕ್ಷದ ಬದುಕಿನ ಹೋರಾಟ. ಕೆಲವು ತಿಂಗಳ ಹಿಂದೆಯಷ್ಟೇ ಉತ್ತರ ಭಾರತೀಯರ ಹೆಸರಿನಲ್ಲಿ ಟ್ಯಾಕ್ಸಿ ಚಾಲಕರ ಹಾಗೂ ಸಣ್ಣ ಪುಟ್ಟ ಕ್ಯಾಂಟೀನ್‌ಗಳನ್ನಿಟ್ಟು ಬದುಕುವವರ ಮೇಲೆ ಹಲ್ಲೆ ನಡೆಸಿ ‘ಮಹಾರಾಷ್ಟ್ರದ ನಾಯಕ’ನಾಗಿ ಮಾಧ್ಯಮಗಳಲ್ಲಿ ಪೋಸು ಕೊಟ್ಟ ರಾಜ್ ಠಾಕ್ರೆ ಮಹಾರಾಷ್ಟ್ರದ ಅಭಿವೃದ್ಧಿಯ ಕುರಿತಂತೆ ಯಾವುದೇ ದೂರಗಾಮಿ ಆಲೋಚನೆಗಳಿಲ್ಲದ ದಟ್ಟ ದರಿದ್ರ ನಾಯಕ. ಈ ಹಿಂದೆ ಶಿವಸೇನೆಯ ನಾಯಕ ಬಾಳಾ ಠಾಕ್ರೆ ಬಳಸಿ ಬಿಟ್ಟ ತಂತ್ರವನ್ನೇ ಮತ್ತೆ ತನ್ನ ರಾಜಕೀಯ ಬಂಡವಾಳವಾಗಿಸಲು ಹೊರಟಿರುವ ರಾಜ್ ಠಾಕ್ರೆಯವರಿಂದ ಮರಾಠಿಗರು ಉದ್ಧಾರವಾಗಲು ಸಾಧ್ಯವೇ? ಹಿಂಸೆಯನ್ನು ರಾಜಕೀಯ ಭಾಷೆಯಾಗಿ ಬಳಸಿ ಮರಾಠಿಗರನ್ನು ತಲುಪಲು ಪ್ರಯತ್ನಿಸುತ್ತಿರುವ ರಾಜ್ ಠಾಕ್ರೆ, ಅರ್ಥಪೂರ್ಣವಾಗಿ, ಜನಸಮೂಹದ ಅಸಮಾಧಾನದಿಂದಲೇ ಮೂಡಿ ಬರಬಹುದಾದ ಪ್ರಾದೇಶಿಕ ಚಳವಳಿಯನ್ನೇ ತನ್ನ ರಾಜಕೀಯ ಉದ್ದೇಶಕ್ಕಾಗಿ ಮಟ್ಟ ಹಾಕುತ್ತಿದ್ದಾರೆ.
ರಾಜ್ ಠಾಕ್ರೆ ಯಾರಿಂದ ಉದ್ಯೋಗಗಳನ್ನು ಕಿತ್ತು ಯಾರಿಗೆ ಕೊಡಲು ಹೊರಟಿದ್ದಾರೆ? ಮುಂಬೈಯಲ್ಲಿ ಹೊಟೇಲು ನಡೆಸುತ್ತಿರುವವರು, ಟ್ಯಾಕ್ಸಿ ಚಲಾಯಿಸುವವರಿಗೆ ಥಳಿಸಿ ಅವರಿಂದ ಮರಾಠಿಗರ ಹಕ್ಕುಗಳನ್ನು ಮರಳಿ ಪಡೆಯಲು ಹೊರಟಿದ್ದಾರೆಯೇ? ಯಾವುದೋ ಬಿಹಾರದ ಮೂಲೆಮೂಲೆಗಳಿಂದ ಉದ್ಯೋಗದ ಕನಸು ಹೊತ್ತು ಬಂದ ಅಮಾಯಕ ತರುಣರಿಗೆ ಥಳಿಸಿದರೆ ಮರಾಠಿಗರು ಕಳೆದುಕೊಂಡುದು ಸಿಗುತ್ತದೆಯೇ? ಅಷ್ಟಕ್ಕೂ ಬಿಹಾರದ ಈ ಬಡಪಾಯಿ ತರುಣರು ಮರಾಠಿಗರ ಬದುಕನ್ನು ಕಸಿದುಕೊಂಡಿರುವುದು ನಿಜವೇ? ರಾಜ್‌ಠಾಕ್ರೆಯ ಗೂಂಡಗಳಿಂದ ಪೆಟ್ಟು ತಿಂದು ಬಿಹಾರಕ್ಕೆ ಮರಳಿದವರು ಬಹುತೇಕ ಬಿಹಾರದ ಹಿಂದುಳಿದ ವರ್ಗಕ್ಕೆ ಸೇರಿದ ಜನರು ಶೋಷಿತ ಸಮುದಾಯದಿಂದ ಬಂದವರು. ಅವರಾರೂ ಉತ್ತರ ಭಾರತದ ‘ಪ್ರಭುತ್ವ’ವನ್ನು ಪ್ರತಿನಿಸುವವರಾಗಿರಲಿಲ್ಲ.

ರಾಜ್ ಠಾಕ್ರೆ ಮತ್ತು ಅವರ ಪರಿವಾರದ ಸೋಗಲಾಡಿತವಿರುವುದೇ ಇಲ್ಲಿ. ಮುಂಬೈಯ ಚುಕ್ಕಾಣಿ ಇರುವುದು ಉತ್ತರ ಭಾರತೀಯರಲ್ಲಿ ಎನ್ನುವ ಅಂಶದಲ್ಲಿ ಸತ್ಯವಿದೆ. ಆದರೆ ಚುಕ್ಕಾಣಿ ಪರೀಕ್ಷೆ ಬರೆಯಲು ಬಂದ ಬಿಹಾರದ ಈ ಬಡಪಾಯಿ ತರುಣರಲ್ಲಿಲ್ಲ. ಗುಜರಾತ್‌ನಿಂದ ಬಂದ ಸಿಂ, ಪಾರ್ಸಿ ಉದ್ಯಮಿಗಳ ಕೈಯಲ್ಲಿ ಮುಂಬೈ ಇದೆ. ಉತ್ತರ ಭಾರತದ ಬನಿಯಾಗಳು, ವರ್ತಕರು ಮುಂಬೈಯನ್ನು ಆಳುತ್ತಿದ್ದಾರೆ. ರಾಜ್ ಠಾಕ್ರೆಯವರ ಸಿಟ್ಟು ಪ್ರಾಮಾಣಿಕವಾದುದೇ ಆಗಿದ್ದರೆ ಅವರು ಮೊದಲು ದಾಳಿ ಮಾಡಬೇಕಾದುದು ಗುಜರಾತ್‌ನ ಶ್ರೀಮಂತ ಉದ್ಯಮಿಗಳ ವಿರುದ್ಧ. ಆದರೆ ದಾಳಿ ಮಾಡುವುದಿರಲಿ, ಶಿವಸೇನೆಯಂತಹ ಪಕ್ಷ ಮಹಾರಾಷ್ಟ್ರದಲ್ಲಿ ಕೊಬ್ಬಿ ನಿಂತಿರುವುದೇ ಈ ಬನಿಯಾಗಳ ಉದ್ಯಮಗಳ ಮೇಲೆ ದಾಳಿ ನಡೆಸಿದ ಉದಾಹರಣೆಗಳಿಲ್ಲ. ಇಂತಹ ಶಿವಸೇನೆ ಪರಿವಾರ, ಬಿಹಾರದ  ಬಡಪಾಯಿ ತರುಣರು, ಟ್ಯಾಕ್ಸಿ ಚಾಲಕರಿಗೆ ಥಳಿಸಿ ಮರಾಠಿಗರನ್ನು ಉದ್ದರಿಸಲು ಹೊರಟಿದೆ.

ಕಳೆದೆರಡು ದಿನಗಳಿಂದ ಮುಂಬೈಯಲ್ಲಿ ನಡೆಯುತ್ತಿರುವುದು ಪ್ರಾದೇಶಿಕ ಅಸಹನೆಯ ಸೋಟದ ಪರಣಾಮ ಖಂಡಿತ ಅಲ್ಲ. ಕೆಲವು ಗೂಂಡಾಗಳನ್ನಿಟ್ಟು ತನ್ನ ರಾಜಕೀಯ ಪಕ್ಷವನ್ನು ಗಟ್ಟಿಗೊಳಿಸಲು ಮುಂಬೈಯಲ್ಲಿ ಆತಂಕ, ಭಯವನ್ನು ಸೃಷ್ಟಿಸುತ್ತಿದ್ದಾರೆ. ಮಹಾರಾಷ್ಟ್ರ ನವನಿರ್ಮಾಣ ಸೇನೆಯ ವರಿಷ್ಠ ರಾಜ್ ಠಾಕ್ರೆ ಅವರ ಈ ಕ್ಷುದ್ರ ರಾಜಕಾರಣಕ್ಕೆ ಈಗಾಗಲೇ ಹಲವರು ಪ್ರಾಣತೆತ್ತಿದ್ದು, ಮುಂಬೈ ತಲ್ಲಣಗೊಂಡಿದೆ. ರಾಜ್ ಠಾಕ್ರೆ ತನ್ನ ಬೆರಳೆಣಿಕೆಯ ಗೂಂಡಾಗಳನ್ನು ಬಳಸಿ ಮಾಡಿದ ಅನಾಹುತ, ಬಿಹಾರದಲ್ಲೂ ಪ್ರತಿಧ್ವನಿಸಿದೆ. ಬಿಹಾರಾದ್ಯಂತ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದ್ದು, ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಎರಡು ಪ್ರದೇಶಗಳ ಜನರನ್ನು ವಿನಾಕಾರಣದಿಂದಾಗಿ ಎತ್ತಿ ಕಟ್ಟಿ, ದೇಶದ ಅಖಂಡತೆಗೆ ಬೆಂಕಿ ಹಚ್ಚಲು ಹೊರಟಿರುವ ರಾಜ್ ಠಾಕ್ರೆ ಎಲ್ಲ ರೀತಿಯಲ್ಲೂ ಬಂಧನಕ್ಕೆ ಅರ್ಹರು. ರಾಜ್ ಠಾಕ್ರೆಯವರ ಪರವಾಗಿ ಮಹಾರಾಷ್ಟ್ರಿಗರು, ಮುಂಬೈಗರು ಪ್ರತಿಭಟಿಸುತ್ತಿಲ್ಲ. ಆ ಗದ್ದಲವನ್ನು ಮಣಿಸುವ ಇಚ್ಛಾಶಕ್ತಿಯನ್ನು ನಮ್ಮ ಕಾನೂನು ವ್ಯವಸ್ಥೆ ಹೊಂದಬೇಕಾಗಿದೆ.

ರಾಜ್ ಠಾಕ್ರೆಯವರಂತಹ ಅಷಾಢಭೂತಿ ಪ್ರಾದೇಶಿಕ ನಾಯಕರನ್ನು ನಿರಾಕರಿಸುತ್ತಲೇ ನಾವು ಉತ್ತರ ಭಾರತದ ಹೇರಿಕೆಯನ್ನು ವಿರೋಸಬೇಕಾಗಿದೆ. ಭಾರತವೆಂದರೆ ಉತ್ತರ ಭಾರತ ಮಾತ್ರವಲ್ಲ. ಎನ್ನುವುದನ್ನು ದಿಲ್ಲಿಯ ಜನರಿಗೆ ಮನದಟ್ಟು ಮಾಡಬೇಕಾದ ಕೆಲಸ ಪ್ರಾಮಾಣಿಕವಾಗಿ ನಡೆಯಬೇಕಾಗಿದೆ. ಇಂದಿಗೂ ಭಾರತವನ್ನು ಆಳುತ್ತಿರುವುದು ಉತ್ತರ ಭಾರತದ ಸಣ್ಣ ಬನಿಯಾ ಗುಂಪು. ಆ ಗುಂಪನ್ನು ಗುರುತಿಸುವ ಕೆಲಸವನ್ನು ನಾವು ಮಾಡಬೇಕು. ಒಂದು ಕಾಲದಲ್ಲಿ ತಮಿಳುನಾಡು ಹೇಗೆ ದ್ರಾವಿಡ ಚಳವಳಿಯ ಮೂಲಕ ಉತ್ತರ ಭಾರತಕ್ಕೆ ಸವಾಲು ಹಾಕಿತೋ, ಅಂತಹದೊಂದು ‘ನೆಲದಿಂದ ಮೂಡಿ ಬಂದ’ ಚಳವಳಿಯ ಅಗತ್ಯವಿದೆ. ಮಹಾರಾಷ್ಟ್ರದಲ್ಲೂ ಅಂತಹದೊಂದು ಚಳವಳಿ ತನ್ನದೇ ರೂಪದಲ್ಲಿ ದಲಿತ, ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿ, ಬೆಳೆಯುತ್ತಿದೆ. ಕರ್ನಾಟಕದಲ್ಲಿ ಅಹಿಂದ ಮೂಲಕ ಅಂತಹದೊಂದು ಚಳವಳಿ ಬೆಳೆಯುವ ಸೂಚನೆ ದೊರಕಿತು. ಉತ್ತರ ಪ್ರದೇಶದಲ್ಲಿ ಬಿ‌ಎಸ್‌ಪಿಯ ಮೂಲಕ ‘ಪ್ರಾದೇಶಿಕ’ ಮಾತನಾಡತೊಡಗಿತು. ಆಂಧ್ರದಲ್ಲಿ ಪ್ರಾದೇಶಿಕತೆ ‘ಬಂಡಾಯ’ದ ರೂಪದಲ್ಲಿ ಕಾಣಿಸಿಕೊಂಡಿತು. ಇಂತಹ ಚಳವಳಿಗಳು ಗಟ್ಟಿಗೊಂಡಾಗ ಪ್ರಾದೇಶಿಕತೆಯ ಕುರಿತಂತೆ ಆಡುವ ಮಾತು ಅರ್ಥ ಪಡೆಯತೊಡಗುತ್ತದೆ. ಅವಸರದಿಂದ ನಾವು ರಾಜ್ ಠಾಕ್ರೆಯವರ ಗದ್ದಲವನ್ನು, ಹಿಂಸೆಯನ್ನು ಪ್ರಾದೇಶಿಕ ಧ್ವನಿ ಎಂದು ಕರೆದರೆ, ಅದರಿಂದ ನಷ್ಟ ಈ ನೆಲದ ತಳಮಟ್ಟದ ಜನರಿಗೆ. ಈ ಎಚ್ಚರಿಕೆ ನಮ್ಮಲ್ಲಿರಬೇಕು.
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾರ್ತಾಭಾರತಿ
ವರದಿಗಾರರು : ಗ.ಕ.ಕರಾವಳಿ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-23


ಪ್ರತಿಸ್ಪಂದನ
ಪುರುಷೋತ್ತಮ್, ಮಂಗಳೂರು
2008-10-23
ಸಂಪೂರ್ಣ ದಿಕ್ಕು ತಪ್ಪಿದ ವರದಿ . ಈ ವರದಿಯನ್ನು ಓದುತ್ತ ಹೋದಂತೆ ಬರಹಗಾರ ಪೂರ್ವಗ್ರಹ ಪೀಡಿತ ಎಂದು ಮನದಟ್ಟಾಗುತ್ತದೆ. ಒಟ್ಟಾರೆ ಬಾಳ ಸಾಹೇಬ್ ಠಾಕ್ರೆಯನ್ನು ಟೀಕಿಸಲು ನವನಿರ್ಮಾಣ ಸೇನೆಯೇ ಕುಕೃತ್ಯಗಳಿಗೆ ಮೊರೆಹೊದದ್ದು ವರದಿಯ ಸತ್ವವನ್ನೆ ಹೊಸಕಿಹಾಕಿದೆ. ಶಿವಸೇನೆಯಿಂದ ಹೊರಬಂದ ರಾಜ್ ಠಾಕ್ರೆಯನ್ನು ಪೋಷಿಸಿದ್ದೆ ಏನ್ ಸಿ ಪಿ ಮತ್ತು ಕಾಂಗ್ರೆಸ್ಸ್ ಪಕ್ಷಗಳು. ಶಿವಸೇನೆಯನ್ನು ಮಟ್ಟ ಹಾಕಲು ರಾಜ್ ಠಾಕ್ರೆಯನ್ನು ಬಳಸಿಕೊಳ್ಳಲು ವಿಫಲ ಯತ್ನ ಮಾಡಿದ ಈ ಪಕ್ಷಗಳು ರಾಜ್ ಆರಂಭಿಕವಾಗಿ ನಡೆಸಿದ ಕೆಲವು ದಾಳಿಗಳನ್ನು ಪರೆದೆಯ ಹಿಂದಿನಿಂದ ಬೆಂಬಲಿಸಿದವು. ಈಗ ಅದು ಈ ಪಕ್ಷಗಳ ಉಸಿರುಗಟ್ಟಿಸಿದೆ. ರಾಜ್ ಠಾಕ್ರೆಯನ್ನು ಬಂಧಿಸಿದಂತೆ ಮತ್ತೊಬ್ಬ ಜಾತಿವಾದಿ, ದನಗಳ ಮೇವು ನುಂಗಿದ ಮಂತ್ರಿ ಲಾಲು ಪ್ರಸಾದ್ ಯಾದವನನ್ನು ಬಂಧಿಸಬೇಕು. ಕರ್ನಾಟಕ, ಮಹಾರಾಷ್ಟ್ರದಂತಹ ರಾಜ್ಯಗಳಿಗೆ ತನ್ನ ರೈಲ್ವೆ ಇಲಾಖೆಯ ಪುಕ್ಕಟೆ ರೈಲುಗಳ ಮುಖಾಂತರ ಸಾವಿರಾರು ಬಿಹಾರಿಗಳನ್ನು ತುಂಬಿಸಿ ಕಳಿಸಿ ನೇಮಕಾತಿಯಲ್ಲಿ ಸ್ಥಳಿಯರಿಗೆ ಉದ್ಯೋಗ ಸಿಗದಂತೆ ಮಾಡಿದ ಪಾಪಿಯ ಮೇಲೆ ಕೇಂದ್ರ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇವನ ಈ ಕಳ್ಳಾಟದಿಂದ ಮಹಾರಾಷ್ಟ್ರದಲ್ಲಿ ಹಿಂಸೆ ಶುರುವಾಗಿದೆ. ಮುಂದೆ ಕರ್ನಾಟಕದಲ್ಲೂ ನಡೆಯಬಹುದು. ಹಾಗೆ ಬಿಹಾರಿಗಳ ವೇಷದಲ್ಲಿ ಬರುವ ಶೇ. ೨೫ ರಷ್ಟು ಮಂದಿ ಬಾಂಗ್ಲಾದೇಶಿ ಅಕ್ರಮ ವಲಸಿಗರು. (ಇದೆ ರೀತಿಯ ಪೂರ್ವಗ್ರಹ ಪೀಡಿತ ವರದಿಗಳನ್ನು ಪ್ರಕಟಿಸಿದರೆ ಗಲ್ಫ್ ಕನ್ನಡಿಗವನ್ನು, ಗಲ್ಫ್ ವಾರ್ತಾಬರ್ತಿ ಎಂದು ಬದಲಾಯಿಸಬೇಕಾದಿತು)
Ramesh Kotian, Kandlur
2008-10-23
ಲೇಖಕರು ದರಿದ್ರ ಹಾಗು ಗೂಂಡಾ ಠಾಕ್ರೆ ಕುಟುಂಬಕ್ಕೆ ಸರಿಯಾಗಿ ಉಗಿದಿದ್ದಿರಿ, ಹಾಕ್ ತು...........
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»2008 ನಲ್ಲಿ ಕಾಲ್ತುಳಿತಕ್ಕೆ 360 ಕ್ಕೂ ಹೆಚ್ಚು ಬಲಿ , ಬಾಂಬ್ ಸ್ಪೋಟಕ್ಕೆ 156
»ಆಗಾಗ ಬದುಕಿ ಬರುವವರು...!! ಸಮಾಜವ ಹಿಂಡಲು..??
»The dilemma of an educated Muslim youth
»ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೆ ಹಿಂಸಿಸಿಕೊಂಡಂತೆ
»ಕುಂಕುಮವಿಟ್ಟರೆ ಗೆಟ್ ಔಟ್!
»ಸಬಕೋ ಸನ್ಮತಿ ದೇ ಭಗವಾನ್ .....
»ಟಾಪ್ ಸಿ.ಎಮ್
»ಸರ್ ಎಂ.ವಿಶ್ವೇಶ್ವರಯ್ಯನವರಿಗೆ ನಮನ
»ಅಪ್ಪಿಕೋ ಚಳವಳಿ ನೆನಪಿನ ಹಬ್ಬ
»ಮನೆಯೊಳಗೆ ಬೇರುಗಳ ಸುಂದರ ಲೋಕ
»ಈ ಸಂದಿಗ್ಧ ಕಾಲದಲ್ಲಿ ನೀವು ಯಾರ ಪರ?
»ಅವನಿಗೆ ಅಬ್ದುಲ್ ಕಲಾಂ ಕಾಗದ ಬರೆದರು!
»ದಿನದ ಸುದ್ದಿ- ಹಾಡು ಹಕ್ಕಿಗೆ ಕೃತಕ ಗೂಡು
»ಜೀವಕ್ಕೆ ಬೆಲೆಯೆಲ್ಲಿದೆ? ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ...
»ಕೋಮು ದ್ವೇಷದ ಸುಗ್ಗಿಯ ಕುಯಿಲು...
»ಅಲ್ಲಿ ಮಹಾಸ್ಫೋಟ, ಇಲ್ಲಿ ಮಹಾಪ್ರಯೋಗ
»ಮಧ್ಯ ಬೆರಳಿನ ಪುರಾಣ - History of the Middle Finger
»ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ
»ಹೋದವರು ಮತ್ತೆ ಬರಲಾರರು
»ವಿಶ್ವದ ಹುಟ್ಟಿನ ಪತ್ತೆ ಯತ್ನ...ವಿಜ್ಞಾನಿಗಳಿಂದ ಪ್ರೊಟಾನ್ ಸ್ಪೋಟ
»ಕಂದನ ನಗು ಕಸಿದಹೃದಯ ಬೇನೆ .....
»ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು
»ಭಗತ್ ಸಿಂಗ್ ರ ಅಣಿಮುತ್ತುಗಳು.
»ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
»ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು
»ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!
»ವಿಜ್ಞಾನಿಗೆ ಕೈಕೊಟ್ಟ ಕಂಪ್ಯೂಟರ್ ಉಪಕರಣಗಳು..!
»ವಾರದಲ್ಲಿ ಹೊಸಮನೆ ರೆಡಿ
»ಹೆಕ್ಕಿಕೋ, ಪ್ಲಾಸ್ಟಿಕ್ ಹೆಕ್ಕಿಕೋ...
»ಮುದ್ರಿಸುವ ಮುನ್ನ ಯೋಚಿಸಿ...
»ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?
»ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...
»ಮಳೆಗೆ ನಾವೆಷ್ಟು ಸಿದ್ಧ?
»ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ
»ನೀರಿನ ಮೇಲೆ ತೇಲುವ ಕಾರು ಪಾರ್ಕಿಂಗ್ ವ್ಯವಸ್ಥೆ
»Virginity: A virtue or a curse?
»ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ
»ತಾಯಿಯ ಹಾಲಿನಲ್ಲಿ ಮೊಟ್ಟೆಯ ವಾಸನೆ!
»ನೋವಿಗೆಷ್ಟು ಕಾಸು!
»ಭವಿಷ್ಯದ ತಿಜೋರಿಯಲ್ಲಿ ಭಾರತದ ಬೀಜಗಳು!
»ಪತ್ರೊಡೆಯ ಘಮಕ್ಕೆ ಒಸರುವ ಜೊಲ್ಲು
»ಅಂದು ಸ್ವಾತಂತ್ರ್ಯಕ್ಕೂ ಸಾರ್ಥಕತೆ!
»ಕೆ‌ಆರ್‌ಎಸ್ ಕ್ರೆಸ್ಟ್‌ಗೇಟ್ ಹಿಂದಿನ ಇತಿಹಾಸ
»ಗಂಡಸರೂ ಬಸುರಿ ಆಗುವುದಾಗಿದ್ದರೆ...?!
»ಮೊಬೈಲ್ ಸಿಮ್: ಉಪೇಕ್ಷೆ ಮಾಡದಿರಿ - ಹೀಗೊಂದು ಉಪಯುಕ್ತ ಮಾಹಿತಿ
»ಪ್ರಚಂಡ ಸವಾಲು
»ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರು..........
»ಸ್ವಾತಂತ್ರ್ಯಕ್ಕಾಗಿ ಜೈಲುವಾಸ: ರಾಜ್ಯದ ಮೊದಲ ಮಹಿಳೆ ಸ್ದಿದಮ್ಮ
»ಛಿದ್ರವಾಗುವ ಮುನ್ನ ಭದ್ರವಾಗೋಣ
» ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..?
»ವಿಶ್ವಾಸದ ಮೂರು ಮುಖಗಳು ....
»ನೀರಿನ ಹೆಸರಿನಲ್ಲಿ ಕಣ್ಣೀರು.....
»‘ಅರಣ್ಯ’ ರೋದನ.....
»ಸರಕಾರಿ ಬಸ್ಸುಗಳಿರುವುದು ಲಾಭ ಗಳಿಸುವುದಕ್ಕಲ್ಲ
»ಕಲ್ಲು ಗಣಿಗಾರಿಕೆ; ಪಶ್ಚಿಮಘಟ್ಟ ನಾಶಕ್ಕೆ ನಾಂದಿ
»ದಿನವೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅಬ್ಬಿ ಫಾಲ್ಸ್
»ಮರುಪೂರಣದಿಂದ ಹತ್ತಡಿ ಏರಿದ ನೀರು
»ಜನ, ವಾಹನ ದಟ್ಟಣೆಯ ಸುಳಿಯಲ್ಲಿ ಕೆ‌ಆರ್ ಮಾರ್ಕೆಟ್ ಸದಾ ಗಜಿಬಿಜಿ, ಗೌಜು ಗ್ದದಲ, ಗಲೀಜಿನ ವಾತಾವರಣ
»ಬೆಂಗಳೂರು ಸರಣಿ ಸ್ಪೋಟ : ರವಿ ಬೆಳೆಗೆರೆ ಅಭಿಪ್ರಾಯ
»ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ!
»ಗಣಿ: ನಿಸರ್ಗ, ಬೊಕ್ಕಸ ಕೊಳ್ಳೆ
»ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಮುಂಬೈ ರೊಟ್ಟಿ ಕಾರ್ಖಾನೆಯೊಂದರೊಳಗಣ ನೋಟ
»ಅತಿಯಾದ ಸೆಖೆಯೇ? ಟ್ರೈ ಮಾಡಿ-ಯು.ಎಸ್.ಬಿ. ಎಸಿ ಶರ್ಟ್
»ಕಣ್ಣಿಲ್ಲದ ಅಜ್ಜಿಯ ಬಳಿ ದಾರಿ ಕಾಣದ ತಬ್ಬಲಿಗಳು
»ಅರವತ್ತು ವರ್ಷಗಳ ಬಳಿಕ ಹಿಂದಕ್ಕೆ ಬಂದ ಪತ್ರ
»ತೋಟವನ್ನೇ ನುಂಗುತ್ತಿರುವ ಬೇರುಹುಳಗಳು : ಕಂಗಾಲಾದ ಅಡಿಕೆ ಬೆಳೆಗಾರರು
»ತುಂಗೆಯ ಮಡಿಲಿಗೆ ಪಕ್ಷಿ ಜೀವಗಳ ಬಾಗಿನ!
»ಬಾಂಬ್ ಸೂಟ್ ಎಂಬ ರಕ್ಷಾ ಕವಚ
»ಕಾವೇರಿ ಕಣಿವೆಯಲ್ಲಿ :ಚುಕ್...ಪುಕ್... ಬಾಬಾ ಎಕ್ಸ್‌ಪ್ರೆಸ್
»ಶ್ರೀರಾಮ ಸೇತುವೆಯನ್ನು ಧ್ವಂಸಗೈದವರು ಯಾರು?
» ‘ಪವರ್ ಕಿಂಗ್’ ನಿಂದ ‘ಪವರ್ ಕ್ವೀನ್’ ಅಗುತ್ತಿರುವ ನಮ್ಮ ಮಹಿಳೆಯರು
»ಸಡಿಲ ಪ್ಯಾಂಟ್ ಧರಿಸಿದರೆ ದಂಡ
»ಮೋಡ ಬಿತ್ತನೆ: ಹೆರಿಗೆಯೋ ಗರ್ಭಪಾತವೋ?
»ಸಂಪ್ರದಾಯಸ್ಥ ಹವ್ಯಕರಲ್ಲಿ ಹೊಸ ಗಾಳಿ...
»ರೈತರನ್ನು ಕೊಂದು ಪ್ರತಿಮೆ ಸ್ಥಾಪಿಸಲು ಹೊರಟವರು
»ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಮುನ್ನ
»ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ
»ಇಹಲೋಕ ತ್ಯಜಿಸಿದ ಬ್ಲಾಗ್‌ಲೋಕದ ಹಿರಿಯಜ್ಜಿ
»ಗಾಳಿ ಶಕ್ತಿಯಿಂದ ಚಲಿಸಲಿದೆ ವಾಹನ !
»ಓಪನ್ ಆಫೀಸ್ ಬಗ್ಗೆ ಒಂದಿಷ್ಟು ಮಾಹಿತಿ
»ಮೂರೂ ಬಿಟ್ಟವರ ಅಮೆರಿಕ ಯಾತ್ರೆ .......
»ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
»ಎಪ್ಪತ್ತರ ಅಜ್ಜಿಗೆ ಅವಳಿ ಮಕ್ಕಳು
»ರೈತರಿಗೆ ಅನ್ನದಾತರಾಗಿರುವ ಐಟಿ ಇಂಜಿನಿಯರ್‌ಗಳು!!
»ಅಮೆರಿಕೆಗಾಗಿ ದೇಶದ ಹಿತ ಬಲಿ
»ದುಬೈ : ಖರ್ಜೂರದಾಕಾರದ ಹೊಸ ಕಟ್ಟಡ : ದುಬೈ ಕ್ರೌನ್
»ಸಿದ್ದರಾಮಯ್ಯ: ಬಾಣಲೆಯಿಂದ ಬೆಂಕಿಗೆ, ಬೆಂಕಿಯಿಂದ ಎಲ್ಲಿಗೆ?
»ಬಿಜೆಪಿಯ ದುರಂತಕ್ಕೆ ಪೀಠಿಕೆ .....?
»ಚಮ್ಮಾರಿಕೆಯೊಂದಿಗೆ ಪುಸ್ತಕ ಪ್ರಕಟಿಸುವ ಧನರಾಜ
»ಹೊಸ ಬ್ಯಾಟರಿ ಕಂಡುಹಿಡಿಯಿರಿ : 300 ಮಿಲಿಯನ್ ಡಾಲರ್ ಗೆಲ್ಲಿರಿ
»ಮುತ್ತು ವೈಜ್ಞಾನಿಕ ಸತ್ಯಾಂಶಗಳು ..ಇಂದು( ಜು 6) ಅಂತಾರಾಷ್ಟ್ರೀಯ ‘ಕಿಸ್ಸಿಂಗ್ ಡೇ’
»ತರೀಕೆರೆ ಏರಿಯಾ - ಚಿಟ್ಟೆಗಳ ಕಲಾವಿದೆ
»ಹುಲಿ ಸಾಮ್ರಾಜ್ಯದಲ್ಲಿ ಕಾಫಿ ಎಸ್ಟೇಟ್!
»ವೈದ್ಯಕೀಯ ಜ್ಞಾನನಿಧಿ ಡಾ| ಕೆ.ಜಿ.ಎಸ್. ಭಟ್
»ಚಳ್ಳಕೆರೆ : ಮಾನವ ರಹಿತ ವಿಮಾನ ಹಾರಾಟ ಕೇಂದ್ರ
»ಏನಿದು ಭಾರತ-ಅಮೆರಿಕ ಅಣು ಒಪ್ಪಂದ? ಇದರಿಂದ ಏನು ಲಾಭ? ವಿರೋಧ ಏಕೆ? ಸಮಗ್ರ ನೋಟ
»ಹಣದುಬ್ಬರವೆಂದರೇನು ಗೊತ್ತಾ?
»ಹೊಳೆ ದಾಟಿದ ಮೇಲೆ...
»ಅಂತರಿಕ್ಷದಲ್ಲಿ ಮದುವೆ ಮಾಡಿಸುತ್ತದೆ ಈ ಸಂಸ್ಥೆ!
»ಜಿರಾಫೆಯನ್ನು ಬಂಧಿಸಿದ ಪೊಲೀಸರು
»ಆ ಸಿಗರೇಟು ಬಿಡಿ ಇ-ಸಿಗರೇಟು ಸೇದಿ
»ರೈತರ ಸರಣಿ ಆತ್ಮಹತ್ಯೆ : ದೊರಕದ ಸಹಾಯ
»ಪಠ್ಯಪುಸ್ತಕ ಬದಲಾವಣೆಗೆ ಸಚಿವರ ‘ಕೇಸರಿ ನಕಾಶೆ’
»’ಮೊಬೈಲ್’ ಗಾದೆಗಳು!!
»ಭಾರತೀಯ ಭಾಷಾ ಗಣಕಲೋಕದ ಪಿತಾಮಹ - ಶ್ರೀ ಕೆ.ಪಿ ರಾವ್
»ಒಂದು ಸಾವಿನ ಮನೆಯ ವೃತ್ತಾಂತ .....
»ಕನ್ನಡ ಕಲಿಸುವುದಕ್ಕೆ ಇಷ್ಟವಿರುವವರಿಗೆ ಅರ್ಪಣೆ
»ಅನಾಥ ಅಜ್ಜಿಗೆ ಸ್ಪೂರ್ಥಿಯ ಆಸರೆ
»ರಾಜಕೀಯ ಚದುರಂಗದಾಟದ ಕಾಯಿಗಳಾಗುತ್ತಿರುವ ರೈತರು
»ಅನ್ನ ತಿನ್ನುವವರು ನೀರುಳಿಸುವ ವಿಧಾನ
»ಗಂಗೆ ಅಂತರ್ಧಾನಳಾದಾಳೇ... !?
»ಚಿಕುನ್‌ಗುನ್ಯಾದಿಂದ ಕರಾವಳಿ ಕಲಿಯಬೇಕಾದ ಪಾಠ
»ಕಾಲ್ ಸೆಂಟರ್‌ಗಳಲ್ಲಿ ತೆರೆಯಲಿ ಏಡ್ಸ್ ಜಾಗೃತಿ ಅಂಗಡಿಗಳು
»ಕರಾವಳಿಯನ್ನು ಕಾಡುತ್ತಿದೆ ಕಮ್ಯುನಿಸ್ಟ್ ಕಳೆ
»ಗಣಿಗಾರಿಕೆ ರಾಷ್ಟ್ರೀಕರಣವಾಗಲಿ
»ಕಳೆ ಪಡೆಯುತ್ತಿರುವ ಹೊಳೆ ಮೀನುಗಾರಿಕೆ ....
» 'Housewives' out of fashion in metros!
»ನನ್ನಜ್ಜನಿಗೊಂದಾನೆಯಿತ್ತು !
»ಕೊಂಕಣಿ ರಾಜ್ಯದ ಕನಸು ಕಂಡಿದ್ದ ಕಾಮತರು
»ಪದ್ಮಪ್ರಿಯಾ ಪ್ರಕರಣದ ಸುತ್ತ...
»... ಆ ಒಂದು ಮುತ್ತಿನ ಕತೆ
»