ಚಾರ್‌ಕೋಪ್ ಕನ್ನಡಿಗರ ಬಳಗದ ಭವನಕ್ಕೆ ಶಂಕುಸ್ಥಾಪನೆ |
ಪ್ರಕಟಿಸಿದ ದಿನಾಂಕ : 2008-10-21
ಮುಂಬಯಿ ಉಪನಗರದ ಕಾಂದಿವಲಿ ಪಶ್ಚಿಮದ ಚಾರ್‌ಕೋಪ್ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಚಾರ್‌ಕೋಪ್ ಕನ್ನಡಿಗರ ಬಳಗದ ನೂತನ ಸಂಕೀರ್ಣ ಹಾಗೂ ಭವನಕ್ಕೆಇತ್ತೀಚೆಗೆ ತುಳು-ಕನ್ನಡಿಗ ಶಾಸಕ ಗೋಪಾಲ್ ಸಿ. ಶೆಟ್ಟಿ ಇವರು ಶಂಕು ಸ್ಥಾಪನೆಯನ್ನು ನೆರವೇರಿಸಿದರು.
ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳುನೆರವೇರಿದ್ದು, ಪೂಜಾ ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಭಾಸ್ಕರ ಸರಪಾಡಿ ದಂಪತಿ ಭಾಗಿಗಳಾಗಿದ್ದರು.
ಕಾರ್ಯಕ್ರಮದ ಸಲುವಾಗಿ ಸ್ಥಳೀಯ ಏಕ್‌ವೀರ್ ಶಾಲೆಯ ಸಭಾಗೃಹದಲ್ಲಿ ಶಾರದಾ ಪೂಜೆ ಮತ್ತು ಸಭಾ ಕಾರ್ಯಕ್ರಮ ನೇರವೇರಿಸಲಾಗಿದ್ದು,
ಸಮಾರಂಭದ ಅಧ್ಯಕ್ಷತೆಯನ್ನು ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್. ಶೆಟ್ಟಿ ವಹಿಸಿದ್ದು, ಬಿಲ್ಲವರ ಎಸೋಸಿಯೇಶನ್‌ನ ಅಧ್ಯಕ್ಷ ಜಯ ಸಿ. ಸುವರ್ಣ,ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಆಹಾರ್‌ನ ಉಪಾಧ್ಯಕ್ಷ ಎರ್ಮಾಳ್ ಹರೀಶ್ಶೆಟ್ಟಿ, ಮಲಾಡ್ ಕನ್ನಡ ಸಂಘದ ಅಧ್ಯಕ್ಷ ಹರೀಶ್ ಎಂ. ಶೆಟ್ಟಿ, ಕಾಂದಿವಲಿ ಕನ್ನಡ ಸಂಘದಮುಖ್ಯಸ್ಥ ಜಯಪಾಲ್ ಶೆಟ್ಟಿ, ಹೊಟೇಲ್ ಉದ್ಯಮಿಗಳಾದ ಪಿ.ಕೆ.ಸಾಲ್ಯಾನ್, ಕಳತ್ತೂರು ವಿಶ್ವನಾಥ ಶೆಟ್ಟಿ, ಕೆ.ಡಿ.ಶೆಟ್ಟಿ, ಪುರುಶೋತ್ತಮ ಕುಪ್ಪೆಪದವು, ಗೋಪಾಲ್ ಪುತ್ರನ್, ನ್ಯಾ| ಸಂಜೀವ ಕಾಂಚನ್,ಅಶೋಕ್ ಪುರೋಹಿತ್, ಕರ್ನಾಟಕ ಮಲ್ಲ ದೈನಿಕದ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ,ಸಮಾಜ ಸೇವಕರುಗಳಾದ ಗುಣಪಾಲ್ ಸಂತೋಷ ಡಿ.ಶೆಟ್ಟಿ ನೆರೂಳ್, ಸಂಘಟಕರುಗಳಾದ ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ ಮತ್ತಿತರರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-21
|
|
|