ಮುಕ್ತಿ ಧಾಮ್ ನಾಟಕ ದ ಅಭಿನಯಕ್ಕೆ ಲತೇಶ್ ಪೂಜಾರಿಗೆ ಶ್ರೇಷ್ಟ ನಟ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2008-10-21
ಮಹಾನಗರ ಮುಂಬಯಿಯಲ್ಲಿ ಇತ್ತೀಚೆಗೆ ನಡೆದ ಅಖಿಲ ಕಾಲೇಜು ಮಟ್ಟದ ನಾಟಕ ಸ್ಪರ್ಧೆಯಲ್ಲಿ ಮುಕ್ತಿಧಾಮ್ನಾಟಕದಲ್ಲಿನ ಅಭಿನಯಕ್ಕಾಗಿ ಮತ್ತು ಭಾರತೀಯ ವಿದ್ಯಾಭವನ ಆಯೋಜಿಸಿದ್ದ ಕಪ್‌ವುಡ್ ಸ್ಪರ್ಧಾಕ್ಷಣದಲ್ಲೂಮುಕ್ತಿಧಾಮ್ ಪಾತ್ರಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ನಕ್ರೆಮೂಲದ ಲತೇಶ್ ಎಂ. ಪೂಜಾರಿಶ್ರೇಷ್ಟ ನಟ ಪುರಸ್ಕಾರ ಪಡೆದಿದ್ದಾರೆ.
ಅದಲ್ಲದೆ ಮುನ್ಶಿ ಫಲಕ್ ಸ್ಪರ್ಧೆಯಲ್ಲಿ ಇದೇ ನಾಟಕದ ತನ್ನ ವೈಶಿಷ್ಟ್ಯಪೂರ್ಣ ಪಾತ್ರಕ್ಕಾಗಿ ಶ್ರೇಷ್ಟ ನಟ ಪುರಸ್ಕಾರಪಡೆದರೆ ಇಪ್ಪ ಸಂಸ್ಥೆ ಆಯೋಜಿಸಿದ್ದ ನಾಟಕ ಸ್ಪರ್ಧಾ ಕೂಟದಲ್ಲೂ ಲತೇಶ್ ಇವರು ಬಲರಾಜ್ ಸಾಹ್ನಿಟ್ರೋಪಿಯೊಂದಿಗೆ ಅತ್ಯುತ್ತಮ ನಟ ಪುರಸ್ಕಾರ ವಿಜೇತರೆಣಿಸಿದ್ದಾರೆ.
ಈ ನಾಟಕದ ಸ್ಪರ್ಧಾ ಕೂಟಗಳಲ್ಲಿ ಸುಮಾರು ೩೭ ತಂಡಗಳು ಭಾಗವಹಿಸಿದ್ದು, ಅಂತಿಮ ಸುತ್ತಿಗೆ ಆರು ತಂಡಗಳುರಂಗ ಪ್ರವೇಶಗೈದಿದ್ದವು. ಆ ತಂಡಗಳಲ್ಲಿ ಪ್ರಹ್ಲಾದ್ ರಾಯ್ ದಾಲ್ಮಿಯಾ ಲಯನ್ಸ್ ಕಾಲೇಜು ತಂಡ ಒಂದಾಗಿದ್ದು,ಈ ತಂಡದ ಮುಖೇನ ಮುಕ್ತಿಧಾಮ್ ನಾಟಕದಲ್ಲಿ ಲತೇಶ್ ಅಭಿನಯಿಸಿದ್ದರು.
ಮೂಲತಃ ನಕ್ರೆ ಇಲ್ಲಿನವರಾಗಿರುವ ಮೋಹನ್ ಜಿ. ಪೂಜಾರಿ ಇವರು ಭಾರತ್ ಬ್ಯಾಂಕ್‌ನನಿರ್ದೇಶಕರಲ್ಲೋರ್ವರಾಗಿರುವರು. ಬಂಟ್ವಾಳದ ಕಜೆಕಾರು ನಿವಾಸಿ ಶ್ರೀಮತಿ ಚಂದ್ರಿಕಾ ಎಂ. ಪೂಜಾರಿ ಹಾಗೂಮೋಹನ್ ಜಿ. ಪೂಜಾರಿ ಸುಪುತ್ರನಾದ ಲತೇಶ್ ಪೂಜಾರಿ ಮುಂಬಯಿಯ ಸುಪ್ರಸಿದ್ಧ ಕಲಾ ಸಂಸ್ಥೆ ಕಲಾಜಗತ್ತುಇದರ ಬಾಲಪ್ರತಿಭೆಯಾಗಿ ಹೊರಹೊಮ್ಮಿರುವರು.
ಕಲಾಜಗತ್ತು ಇದರ ತುಳು ನಾಟಕಗಳಾದ ಎನಡ್ದಾವಂದ್ ಮತ್ತು ಒರಿಯೆ ಮಗೆ ಒರಿಯೆ ಇವುಗಳಲ್ಲೂ ನಟಿಸಿ,ಚಿಣ್ಣರ ಬಿಂಬದ ಮೂಲಕ ಗಮನಸೆಳೆದು ಇದೀಗ ಮುಕ್ತಿಧಾಮ್ ನಾಟಕದ ಅಭಿನಯದೊಂದಿಗೆ ಮೂರುಪ್ರಶಸ್ತಿಗಳನ್ನು ತನ್ನಗಾಗಿಸಿ ಕೊಂಡಿರುವ ಲತೇಶ್‌ಗೆ ಕಲಾ ಜಗತ್ತು ಸಂಸ್ಥೆಯ ರೂವಾರಿಗಳಾದ ವಿಜಯ್ ಕುಮಾರ್ಶೆಟ್ಟಿ ಮತ್ತು ಸುರೇಂದ್ರ ಕುಮಾರ್ ಹೆಗ್ಡೆ ಅಭಿನಂದನೆ ಸಲ್ಲಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-21
|
|
|