ದುಬೈ: ಭವ್ಯ ಎಲೆಕ್ಟ್ರಾನಿಕ್ಸ್ ಮಾರಾಟ ಉತ್ಸವ ಜಿ-ಟೆಕ್ಸ್ ಪ್ರಾರಂಭ : ಪೇಲವಗೊಂಡ ಪ್ರತಿಕ್ರಿಯೆ |
ಪ್ರಕಟಿಸಿದ ದಿನಾಂಕ : 2008-10-21
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆ ಸಂಸ್ಥೆಗಳ ಭಾಗವಹಿಸುವಿಕೆ
ದುಬೈ, ಅಕ್ಟೋಬರ್ 21: ಅಕ್ಟೋಬರ್ 18 ರಿಂದ 24 ರವರೆಗೆ ನಗರದ ಏರ್ ಪೋರ್ಟ್ ಎಕ್ಸ್ಪೋ ಎಕ್ಸಿಬಿಷನ್ ಹಾಲ್ ನಲ್ಲಿ ನಡೆಯುತ್ತಿರುವ ಜಿ-ಟೆಕ್ಸ್ ಮೇಳ ಹಿಂದಿನ ಅಬ್ಬರವನ್ನು ಪಡೆಯಲು ವಿಫಲವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಕಡಿಮೆ ಸಂಸ್ಥೆಗಳು ಈ ಉತ್ಸವದಲ್ಲಿ ಭಾಗವಹಿಸಿವೆ.
ಶನಿವಾರ ಪ್ರಾರಂಭದ ದಿನ ಜಿ-ಟೆಕ್ಸ್ ನಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರೂ ಭಾನುವಾರದ ನಂತರ ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡುಬಂದಿದೆ. ಹಿಂದಿನ ವರ್ಷಗಳಲ್ಲಿ ಜಿ-ಟೆಕ್ಸ್ ಉತ್ಸವದಲ್ಲಿ ವಸ್ತುಗಳ ಬೆಲೆ ಕಡಿಮೆಯಿರುವುದು ಹಾಗೂ ಹೆಚ್ಚಿನ ಪ್ರಲೋಭನೆಗಳು ಜನರಿಗೆ ಹೆಚ್ಚು ಕೊಳ್ಳುವುದರಲ್ಲಿ ಆಸಕ್ತಿ ಹುಟ್ಟಿಸುತ್ತಿತ್ತು. ಆದರೆ ಈ ವರ್ಷ ಬೆಲೆಗಳಲ್ಲಿ ಹೆಚ್ಚಿನ ವ್ಯತ್ಯಾಸ ಗೋಚರಿಸದಿರುವುದು ಹಾಗೂ ಏಕಪ್ರಕಾರದ ನಮೂನೆಗಳು ಜನರನ್ನು ಹಿಂದಿನ ಆಕರ್ಷಣೆಯೊಡ್ಡಲು ವಿಫಲವಾಗಿವೆ.
ಉತ್ಸವದಲ್ಲಿ ಪ್ರತಿ ಘಂಟೆಗೆ ಒಂದು ಬಹುಮಾನವನ್ನು ಘೋಷಿಸಲಾಗಿದ್ದು ಲ್ಯಾಪ್ ಟಾಪ್ ಸಹಿತ ಹಲವಾರು ಬಹುಮಾನಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಆದರೆ ಈ ಪ್ರಲೋಭನೆಗಳೂ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ವಿಫಲವಾಗಿವೆ. ಒಳಗಡೆ ಇರುವ ಆಹಾರಮಳಿಗೆಯ ಬೆಲೆ ಸಮಾನ್ಯಕ್ಕಿಂತ ಐದು ಪಟ್ಟು ಹೆಚ್ಚಾಗಿರುವುದೂ ಉತ್ಸವದತ್ತ ಹಿಮ್ಮುಖಗೊಳ್ಳಲು ಇನ್ನೊಂದು ಕಾರಣವಾಗಿದೆ.
ಪ್ರಮುಖ ಸಂಸ್ಥೆಗಳಾದ ಲುಲು, ಪ್ಲಗ್ ಇನ್ಸ್, ಹಾಗೂ ಶರಾಫ್ ಡಿ.ಜಿ. ಮೊದಲಾದ ಸಂಸ್ಥೆಗಳು ಈ ಬಾರಿಯ ಜಿ.ಟೆಕ್ಸ್ ನಲ್ಲಿ ಭಾಗವಹಿಸದಿರುವುದು ಪ್ರಮುಖ ಕೊರತೆಯಾಗಿದೆ.
ಆದರೆ ಇನ್ನೂ ನಾಲ್ಕು ದಿನಗಳ ಉತ್ಸವ ಬಾಕಿಯಿದ್ದು ಕಡೆಯ ದಿನಗಳಲ್ಲಿ ಹೆಚ್ಚಿನ ಮಾರಾಟವಾಗಬಹುದೆಂದು ಮಳಿಗೆ ಮಾರಾಟಗಾರರು ನಿರೀಕ್ಷೆಯಲ್ಲಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಖಲೀಜ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-21
|
|
|