|
|
|
ಉಗ್ರರನ್ನು ವಿರೋಧಿಸೋಣ ತಮಿಳರನ್ನು ರಕ್ಷಿಸೋಣ |
ಪ್ರಕಟಿಸಿದ ದಿನಾಂಕ : 2008-10-20
ಶಾಂತಿ ಸ್ಥಾಪಿಸುವುದೆಂದರೆ ಏನು? ಒಂದು ಸಮುದಾಯವನ್ನು ಸಾಮೂಹಿಕ ಹತ್ಯಾಕಾಂಡದ ಮೂಲಕ ಇಲ್ಲವಾಗಿಸುವುದು ಶಾಂತಿಯ ಪರಿಕಲ್ಪನೆಯೆ? ಇದು ಸಾಧ್ಯವಾಗುವ ಮಾತೆ? ಸಾಧ್ಯವಾದರೂ, ಅನಂತರ ಸ್ಥಾಪನೆಯಾಗುವ ಶಾಂತಿಯನ್ನು ನಾವು ‘ಶಾಂತಿ’ಯೆಂದು ಕರೆಯಲಾದೀತೆ? ಶ್ರೀಲಂಕಾದಲ್ಲಿ ನಡೆಯುತ್ತಿರುವ ತಮಿಳರ ನರಮೇಧ ಅಥವಾ ಶ್ರೀಲಂಕಾ ಸರಕಾರ ಘೋಷಿಸಿದಂತೆ ಎಲ್‌ಟಿಟಿಇ ಉಗ್ರರ ನಡುವಿನ ಯುದ್ಧ ಇಂತಹದೊಂದು ಪ್ರಶ್ನೆಯನ್ನು ನಮ್ಮಲ್ಲಿ ಹುಟ್ಟು ಹಾಕಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಹಿಂಸೆಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆಂದು ತಿಳಿಯಲಾಗದೆ, ಯುಪಿಎ ಸರಕಾರ ಗೊಂದಲದಲ್ಲಿದೆ. ಶ್ರೀಲಂಕಾ-ಎಲ್‌ಟಿಟಿಇ ನಡುವಿನ ಸಂಘರ್ಷ ತನ್ನ ಆಂತರಿಕ ವಿಚಾರ ಎಂದು ಶ್ರೀಲಂಕಾ ಹೇಳುತ್ತಿದೆ. ಆದರೆ ಶ್ರೀಲಂಕಾದಲ್ಲಿ ನಡೆಯುತ್ತಿರುವುದು ‘ಶ್ರೀಲಂಕಾ-ಎಲ್‌ಟಿಟಿಇ ಘರ್ಷಣೆ’ ಮಾತ್ರವಾಗಿದ್ದರೆ ‘ಆತಂರಿಕ ವಿಚಾರ’ ಎಂದು ಬಿಟ್ಟು ಬಿಡಬಹುದಾಗಿತ್ತು. ಅಲ್ಲಿ ನಡೆಯುತ್ತಿರುವುದು ಉಗ್ರವಾದಿ ಸಂಘಟನೆ ಮತ್ತು ಶ್ರೀಲಂಕಾದ ನಡುವಿನ ಘರ್ಷಣೆ ಮಾತ್ರವಲ್ಲ. ಈ ಕಾರಣಕ್ಕಾಗಿಯೇ, ಈ ಘರ್ಷಣೆ ಭಾರತದಲ್ಲಿ ರಾಜಕೀಯ ‘ಸಂಘರ್ಷ’ ದ ರೂಪ ಪಡೆಯುತ್ತಿದೆ.
ಶ್ರೀಲಂಕಾದಲ್ಲಿ ತಮಿಳು ಜನಾಂಗೀಯರ ಮೇಲೆ ಶ್ರೀಲಂಕಾ ಸೇನೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿರುವ ಡಿಎಂಕೆ, ಇದನ್ನು ತಡೆಯಲು ಯಾವುದೇ ಗಂಭೀರ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಬೆಂಬಲ ಹಿಂದೆಗೆದುಕೊಳ್ಳುವ ಬೆದರಿಕೆಯನ್ನು ಒಡ್ಡಿದೆ. ಇದರ ಭಾಗವಾಗಿ ೧೪ ಮಂದಿ ಸಂಸದರು ಕರುಣಾನಿಗೆ ರಾಜೀನಾಮೆ ಪತ್ರವನ್ನು ಒಪ್ಪಿಸಿದ್ದು, ಕೇಂದ್ರ ಪ್ರತಿಕ್ರಿಯಿಸಿದೇ ಅಕ್ಟೋಬರ್ ೨೯ಕ್ಕೆ ರಾಜೀನಾಮೆ ಅಕೃತವಾಗಿ ಸಲ್ಲಿಕೆಯಾಗಲಿದೆ. ರಾಜ್ಯಸಭಾ ಸಲ್ಲಿಸಿದಾಗಲೇ, ಪ್ರಕರಣವನ್ನು ಡಿಎಂಕೆ ಗಂಭೀರವಾಗಿ ಸ್ವೀಕರಿಸಿರುವುದು ಸ್ಪಷ್ಟವಾಗಿತ್ತು. ಇದೀಗ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ, ಡಿಎಂಕೆಗೆ ಶ್ರೀಲಂಕಾದ ತಮಿಳುರ ಕುರಿತಂತೆ ಕಾಳಜೆ ವ್ಯಕ್ತಪಡಿಸುವುದು ಅನಿವಾರ್ಯವಾಗಿದೆ. ಕರುಣಾನಿಯವರದು ಅಪ್ಪಟ ರಾಜಕೀಯ ನಡೆ ಇದಾಗಿದ್ದರೂ, ಶ್ರೀಲಂಕಾದ ತಮಿಳರ ಪರವಾಗಿ ಭಾರತ ಮಾತನಾಡುವುದು ಸದ್ಯದ ಅಗತ್ಯ ಎನ್ನುವುದನ್ನು ನಾವು ಉಪೇಕ್ಷಿಸುವಂತಿಲ್ಲ. ಶ್ರೀಲಂಕಾ-ಎಲ್‌ಟಿಟಿಇ ಘರ್ಷಣೆ ಆ ದೇಶದ ಆಂತರಿಕ ವಿಚಾರ ನಿಜ. ಆದರೆ ಈ ಘರ್ಷಣೆಯಲ್ಲಿ ಬೀದಿ ಪಾಲಾಗುತ್ತಿರುವ ಆಹಾರವಿಲ್ಲದೆ ಸಾಯುತ್ತಿರುವ ಲಕ್ಷಾಂತರ ಅಮಾಯಕ ತಮಿಳು ನಾಗರಿಕರನ್ನು ಆಂತರಿಕವಿಚಾರವೆಂದು ಪರಿಗಣಿಸುವಂತಿಲ್ಲ.
ಹಾಗೆ ನೋಡಿದರೆ, ಭಯೋತ್ಪಾದನೆಯನ್ನು ವಿರೋಸಲು ಭಾರತಕ್ಕೆ ಯಾರೂ ಕಲಿಸಬೇಕಾಗಿಲ್ಲ. ಎಲ್‌ಟಿಟಿಇ ಸಂಘಟನೆ ನಡೆಯುತ್ತಿರುವ ಹೋರಾಟವನ್ನು ಏನೆಂದು ಕಲಿಯಬೇಕು ಎಂದು ಪಶ್ಚಿಮ ರಾಷ್ಟ್ರಗಳು ತಲೆಕೆಡಿಸಿಕೊಳ್ಳುತ್ತಿದ್ದಾಗ ಅಥವಾ ಎಲ್‌ಟಿಟಿಇಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾಗ ಆ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಮೊತ್ತ ಮೊದಲು ಕರೆದಿರುವುದೇ ಭಾರತ. ೧೯೯೧ರಲ್ಲಿ ರಾಜೀವ್ ಗಾಂ ಹತ್ಯೆ ನಡೆದಾಗ ಎಲ್‌ಟಿಟಿಇಯನ್ನು ಉಗ್ರ ಸಂಘಟನೆಯೆಂದು ಘೋಷಿಸಿದ್ದು ಮಾತ್ರವಲ್ಲ, ಪ್ರಭಾಕರನ್‌ನನ್ನು ‘ಮೋಸ್ಟ್ ವಾಂಟೆಡ್’ ಗುಂಪಿನಲ್ಲಿ ಸೇರಿಸಿತು. ತನ್ನ ಶಾಂತಿಪಡೆಯನ್ನು ಶ್ರೀಲಂಕಾಕ್ಕೆ ಗುಂಪಿನಲ್ಲಿ ಸೇರಿಸಿತು. ತನ್ನ ಶಾಂತಿ ಪಡೆಯನ್ನು ಶ್ರೀಲಂಕಾಕ್ಕೆ ಕಳುಹಿಸಿ ಭಾರತ ಕಳೆದುಕೊಂಡಿದ್ದು ಸಣ್ಣದೇನಲ್ಲ. ಅಲ್ಲಿ ಶಾಂತಿಪಡೆ ನಡೆಸಿದ ‘ಅಶಾಂತಿ’ ಕೆಲಸಕ್ಕಾಗಿ ಈ ದೇಶ ತನ್ನ ಪ್ರಧಾನಿಯನ್ನೇ ಬಲಿಕೊಡಬೇಕಾಯಿತು. ಹೀಗಿರುವಾಗ, ಶ್ರೀಲಂಕಾದಲ್ಲಿ ತಮಿಳುನಾಗರಿಗೆ ಅನ್ಯಾಯವಾದರೆ ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುವ ಒಂದೇ ಒಂದು ಅರ್ಹ ದೇಶ ವಿಶ್ವದಲ್ಲಿದ್ದರೆ ಅದು ಭಾರತ ಮಾತ್ರ. ಶ್ರೀಲಂಕಾ ಸೇನೆ ಮತ್ತು ಎಲ್‌ಟಿಟಿಇ ಸಂಘರ್ಷದಲ್ಲಿ ಸುಮಾರು ಎರಡೂವರೆ ಲಕ್ಷ ತಮಿಳರು ನಿರ್ವಸಿತರಾಗಿದ್ದಾರೆ. ಒಂದು ರೀತಿಯಲ್ಲಿ ಆಹಾರ ಪದಾರ್ಥಗಳಿಲ್ಲದೆ ದಿಗ್ಭಂಧನೆಕ್ಕೊಳಗಾಗಿದ್ದಾರೆ. ಶಸ್ತ್ರಗಳ ದಾಳಿಯಿಂದ ಮಾತ್ರವಲ್ಲ. ಆಹಾರ-ನೀರು ಇಲ್ಲದೆಯೂ ಸಾಯುತ್ತಿದ್ದಾರೆ. ಒಂದು ರೀತಿಯಲ್ಲಿ ತಮಿಳರ ಮಾರಣಹೋಮ ನಡೆಯುತ್ತಿದೆ. ಪ್ರತಿ ಮನೆಯಲ್ಲಿ, ಓಣಿ ಓಣಿಗಳಲ್ಲಿ ಮರಣ ಕುಣಿದು ಕುಪ್ಪಳಿಸುತ್ತಿದೆ. ಇದನ್ನು ಶ್ರೀಲಂಕಾ ಸರಕಾರ ‘ಎಲ್‌ಟಿಟಿಇ’ ವಿರುದ್ಧದ ಕಾರ್ಯಚರಣೆ’ ಎಂದು ಕರೆದರೆ ಭಾರತ ಸುಮ್ಮನಿರುವುದು ಎಷ್ಟು ಸರಿ? ಎಲ್‌ಟಿಟಿಇ ವಿರುದ್ಧ ತನ್ನ ಸೇನೆಯನ್ನೇ ಕಳುಹಿಸಿದ್ಧ ಭಾರತ, ಇಂದು ತಮಿಳು ಸಂತ್ರಸ್ತರ ಪರವಾಗಿಯೂ ಮಾತನಾಡಬೇಕಾಗುತ್ತದೆ. ಸುನಾಮಿ ಸಂದರ್ಭದಲ್ಲಿ ಅಲ್ಲಿನ ನಾಗರಿಕರ ನೆರವಿಗೆ ಭಾರತ ಅತ್ಯಂತ ಕಾಳಜಿಯಿಂದ ಧಾವಿಸಿತ್ತು. ಈಗಲೂ ತಮಿಳರ ಪಾಲಿಗೆ ಸುನಾಮಿ ನಿಂತಿಲ್ಲ. ಅವ ಪಾಲಿಗೆ ಇದು ಸುನಾಮಿಗಿಂತಲೂ ಭೀಕರವಾದುದು. ಭಾರತ ಆಹಾರ ವಸ್ತುಗಳ ನೆರವನ್ನು ಮಾತ್ರವಲ್ಲ, ರಾಜಕೀಯ ನೆರವನ್ನು ಕೂಡ ಅವರಿಗೆ ನೀಡಬೇಕಾಗಿದೆ. ಯಾಕೆಂದರೆ ತಮಿಳರ ತಾಯಿ ಬೇರು ಭಾರತದೊಂದಿಗೆ ತಳಕು ಹಾಕಿಕೊಂಡಿದೆ. ಆ ಮಹಾಬೇರನ್ನೇ ಹಿಡಿದು ಅಲುಗಿಸುವ ಪ್ರಯತ್ನವನ್ನು ಶ್ರೀಲಂಕಾ ಸರಕಾರ ಮಾಡಿದರೆ, ಅದರ ಪರಿಣಾಮ ದೇಶದ ಮೇಲೆ ಮುಖ್ಯವಾಗಿ ತಮಿಳುನಾಡಿನಲ್ಲಿ ಉಂಟಾಗಲಿದೆ.
ಆಹಾರ ಪದಾರ್ಥಗಳು ಯುದ್ಧ ಪೀಡಿತ ಪ್ರದೇಶಗಳಿಗೆ ತಲುಪಬೇಕಾದರೆ ಯುದ್ಧಕ್ಕೆ ತಾತ್ಕಾಲಿಕ ವಿರಾಮವನ್ನು ನೀಡುವುದು ಅನಿವಾರ್ಯವಾಗುತ್ತದೆ. ಈ ನಿಟ್ಟಿನಲ್ಲಿ ಭಾರತ ಸರಕಾರತನ್ನ ಗರಿಷ್ಠ ಒತ್ತಡವನ್ನು ಹೇರಬೇಕಾಗುತ್ತದೆ. ಈ ಒತ್ತಡ ಎಲ್‌ಟಿಟಿಇ ಪರವಾಗಿಯಲ್ಲ. ಅಲ್ಲಿನ ತಮಿಳು ನಾಗರಿಕರ ಪರವಾಗಿ ಎನ್ನುವುದನ್ನು ಅಲ್ಲಿನ ಸರಕಾರಕ್ಕೆ ಮನದಟ್ಟು ಮಾಡಿಕೊಡಬೇಕಾಗುತ್ತದೆ. ಮಾನವೀಯ ಕಾರಣಗಳಿಗಾಗಿ ತನ್ನೆಲ್ಲ ಮುಜುಗರವನ್ನು ಪಕ್ಕಿಕ್ಕಿಟ್ಟು ಯುಪಿಎ ಸರಕಾರ, ಶ್ರೀಲಂಕಾ ಸರಕಾರದ ಜೊತೆಗೆ ಮಾತನಾಡಬೇಕು. ಶ್ರೀಲಂಕಾವು ಒಂದನ್ನು ನೆನಪಿಟ್ಟುಕೊಳ್ಳಬೇಕಾಗಿದೆ. ಭಾರತದ ಸಹಾಯವಿಲ್ಲದೆ ತಮಿಳರ ಸಮಸ್ಯೆಯನ್ನು ಬರೇ ಕೋವಿಯ ಮೂಲಕ ಇತ್ಯರ್ಥಗೊಳಿಸಲು ಅಲ್ಲಿನ ಸರಕಾರಕ್ಕೆ ಸಾಧ್ಯವಿಲ್ಲ. ಆದುದರಿಂದ ಉಭಯ ಸರಕಾರ ಮಾತುಕತೆಗೆ ಕುಳಿತು, ಉಗ್ರವಾದನ್ನು ಇಲ್ಲವಾಗಿಸಿ, ತಮಿಳರನ್ನು ಉಳಿಸಿ ಬೆಳೆಸುವ ದಾರಿಯೊಂದನ್ನು ಕಂಡುಕೊಳ್ಳಬೇಕು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಗ.ಕ.ಕರಾವಳಿ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-20
|
|
|
|
ಎಲ್ಲಾ ವರದಿಗಳು [ವಿಶಿಷ್ಟ ಬರಹ] |
| »2008 ನಲ್ಲಿ ಕಾಲ್ತುಳಿತಕ್ಕೆ 360 ಕ್ಕೂ ಹೆಚ್ಚು ಬಲಿ , ಬಾಂಬ್ ಸ್ಪೋಟಕ್ಕೆ 156 | | »ಆಗಾಗ ಬದುಕಿ ಬರುವವರು...!! ಸಮಾಜವ ಹಿಂಡಲು..?? | | »The dilemma of an educated Muslim youth | | »ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೆ ಹಿಂಸಿಸಿಕೊಂಡಂತೆ | | »ಕುಂಕುಮವಿಟ್ಟರೆ ಗೆಟ್ ಔಟ್! | | »ಸಬಕೋ ಸನ್ಮತಿ ದೇ ಭಗವಾನ್ ..... | | »ಟಾಪ್ ಸಿ.ಎಮ್ | | »ಸರ್ ಎಂ.ವಿಶ್ವೇಶ್ವರಯ್ಯನವರಿಗೆ ನಮನ | | »ಅಪ್ಪಿಕೋ ಚಳವಳಿ ನೆನಪಿನ ಹಬ್ಬ | | »ಮನೆಯೊಳಗೆ ಬೇರುಗಳ ಸುಂದರ ಲೋಕ | | »ಈ ಸಂದಿಗ್ಧ ಕಾಲದಲ್ಲಿ ನೀವು ಯಾರ ಪರ? | | »ಅವನಿಗೆ ಅಬ್ದುಲ್ ಕಲಾಂ ಕಾಗದ ಬರೆದರು! | | »ದಿನದ ಸುದ್ದಿ- ಹಾಡು ಹಕ್ಕಿಗೆ ಕೃತಕ ಗೂಡು | | »ಜೀವಕ್ಕೆ ಬೆಲೆಯೆಲ್ಲಿದೆ? ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ... | | »ಕೋಮು ದ್ವೇಷದ ಸುಗ್ಗಿಯ ಕುಯಿಲು... | | »ಅಲ್ಲಿ ಮಹಾಸ್ಫೋಟ, ಇಲ್ಲಿ ಮಹಾಪ್ರಯೋಗ | | »ಮಧ್ಯ ಬೆರಳಿನ ಪುರಾಣ - History of the Middle Finger | | »ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ | | »ಹೋದವರು ಮತ್ತೆ ಬರಲಾರರು | | »ವಿಶ್ವದ ಹುಟ್ಟಿನ ಪತ್ತೆ ಯತ್ನ...ವಿಜ್ಞಾನಿಗಳಿಂದ ಪ್ರೊಟಾನ್ ಸ್ಪೋಟ | | »ಕಂದನ ನಗು ಕಸಿದಹೃದಯ ಬೇನೆ ..... | | »ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು | | »ಭಗತ್ ಸಿಂಗ್ ರ ಅಣಿಮುತ್ತುಗಳು. | | »ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು | | »ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು | | »ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ! | | »ವಿಜ್ಞಾನಿಗೆ ಕೈಕೊಟ್ಟ ಕಂಪ್ಯೂಟರ್ ಉಪಕರಣಗಳು..! | | »ವಾರದಲ್ಲಿ ಹೊಸಮನೆ ರೆಡಿ | | »ಹೆಕ್ಕಿಕೋ, ಪ್ಲಾಸ್ಟಿಕ್ ಹೆಕ್ಕಿಕೋ... | | »ಮುದ್ರಿಸುವ ಮುನ್ನ ಯೋಚಿಸಿ... | | »ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…? | | »ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ... | | »ಮಳೆಗೆ ನಾವೆಷ್ಟು ಸಿದ್ಧ? | | »ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ | | »ನೀರಿನ ಮೇಲೆ ತೇಲುವ ಕಾರು ಪಾರ್ಕಿಂಗ್ ವ್ಯವಸ್ಥೆ | | »Virginity: A virtue or a curse? | | »ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ | | »ತಾಯಿಯ ಹಾಲಿನಲ್ಲಿ ಮೊಟ್ಟೆಯ ವಾಸನೆ! | | »ನೋವಿಗೆಷ್ಟು ಕಾಸು! | | »ಭವಿಷ್ಯದ ತಿಜೋರಿಯಲ್ಲಿ ಭಾರತದ ಬೀಜಗಳು! | | »ಪತ್ರೊಡೆಯ ಘಮಕ್ಕೆ ಒಸರುವ ಜೊಲ್ಲು | | »ಅಂದು ಸ್ವಾತಂತ್ರ್ಯಕ್ಕೂ ಸಾರ್ಥಕತೆ! | | »ಕೆಆರ್‌ಎಸ್ ಕ್ರೆಸ್ಟ್‌ಗೇಟ್ ಹಿಂದಿನ ಇತಿಹಾಸ | | »ಗಂಡಸರೂ ಬಸುರಿ ಆಗುವುದಾಗಿದ್ದರೆ...?! | | »ಮೊಬೈಲ್ ಸಿಮ್: ಉಪೇಕ್ಷೆ ಮಾಡದಿರಿ - ಹೀಗೊಂದು ಉಪಯುಕ್ತ ಮಾಹಿತಿ | | »ಪ್ರಚಂಡ ಸವಾಲು | | »ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರು.......... | | »ಸ್ವಾತಂತ್ರ್ಯಕ್ಕಾಗಿ ಜೈಲುವಾಸ: ರಾಜ್ಯದ ಮೊದಲ ಮಹಿಳೆ ಸ್ದಿದಮ್ಮ | | »ಛಿದ್ರವಾಗುವ ಮುನ್ನ ಭದ್ರವಾಗೋಣ | | » ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..? | | »ವಿಶ್ವಾಸದ ಮೂರು ಮುಖಗಳು .... | | »ನೀರಿನ ಹೆಸರಿನಲ್ಲಿ ಕಣ್ಣೀರು..... | | »‘ಅರಣ್ಯ’ ರೋದನ..... | | »ಸರಕಾರಿ ಬಸ್ಸುಗಳಿರುವುದು ಲಾಭ ಗಳಿಸುವುದಕ್ಕಲ್ಲ | | »ಕಲ್ಲು ಗಣಿಗಾರಿಕೆ; ಪಶ್ಚಿಮಘಟ್ಟ ನಾಶಕ್ಕೆ ನಾಂದಿ | | »ದಿನವೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅಬ್ಬಿ ಫಾಲ್ಸ್ | | »ಮರುಪೂರಣದಿಂದ ಹತ್ತಡಿ ಏರಿದ ನೀರು | | »ಜನ, ವಾಹನ ದಟ್ಟಣೆಯ ಸುಳಿಯಲ್ಲಿ ಕೆಆರ್ ಮಾರ್ಕೆಟ್ ಸದಾ ಗಜಿಬಿಜಿ, ಗೌಜು ಗ್ದದಲ, ಗಲೀಜಿನ ವಾತಾವರಣ | | »ಬೆಂಗಳೂರು ಸರಣಿ ಸ್ಪೋಟ : ರವಿ ಬೆಳೆಗೆರೆ ಅಭಿಪ್ರಾಯ | | »ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ! | | »ಗಣಿ: ನಿಸರ್ಗ, ಬೊಕ್ಕಸ ಕೊಳ್ಳೆ | | »ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ | | »ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು | | »ಮುಂಬೈ ರೊಟ್ಟಿ ಕಾರ್ಖಾನೆಯೊಂದರೊಳಗಣ ನೋಟ | | »ಅತಿಯಾದ ಸೆಖೆಯೇ? ಟ್ರೈ ಮಾಡಿ-ಯು.ಎಸ್.ಬಿ. ಎಸಿ ಶರ್ಟ್ | | »ಕಣ್ಣಿಲ್ಲದ ಅಜ್ಜಿಯ ಬಳಿ ದಾರಿ ಕಾಣದ ತಬ್ಬಲಿಗಳು | | »ಅರವತ್ತು ವರ್ಷಗಳ ಬಳಿಕ ಹಿಂದಕ್ಕೆ ಬಂದ ಪತ್ರ | | »ತೋಟವನ್ನೇ ನುಂಗುತ್ತಿರುವ ಬೇರುಹುಳಗಳು : ಕಂಗಾಲಾದ ಅಡಿಕೆ ಬೆಳೆಗಾರರು | | »ತುಂಗೆಯ ಮಡಿಲಿಗೆ ಪಕ್ಷಿ ಜೀವಗಳ ಬಾಗಿನ! | | »ಬಾಂಬ್ ಸೂಟ್ ಎಂಬ ರಕ್ಷಾ ಕವಚ | | »ಕಾವೇರಿ ಕಣಿವೆಯಲ್ಲಿ :ಚುಕ್...ಪುಕ್... ಬಾಬಾ ಎಕ್ಸ್‌ಪ್ರೆಸ್ | | »ಶ್ರೀರಾಮ ಸೇತುವೆಯನ್ನು ಧ್ವಂಸಗೈದವರು ಯಾರು? | | » ‘ಪವರ್ ಕಿಂಗ್’ ನಿಂದ ‘ಪವರ್ ಕ್ವೀನ್’ ಅಗುತ್ತಿರುವ ನಮ್ಮ ಮಹಿಳೆಯರು | | »ಸಡಿಲ ಪ್ಯಾಂಟ್ ಧರಿಸಿದರೆ ದಂಡ | | »ಮೋಡ ಬಿತ್ತನೆ: ಹೆರಿಗೆಯೋ ಗರ್ಭಪಾತವೋ? | | »ಸಂಪ್ರದಾಯಸ್ಥ ಹವ್ಯಕರಲ್ಲಿ ಹೊಸ ಗಾಳಿ... | | »ರೈತರನ್ನು ಕೊಂದು ಪ್ರತಿಮೆ ಸ್ಥಾಪಿಸಲು ಹೊರಟವರು | | »ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಮುನ್ನ | | »ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ | | »ಇಹಲೋಕ ತ್ಯಜಿಸಿದ ಬ್ಲಾಗ್‌ಲೋಕದ ಹಿರಿಯಜ್ಜಿ | | »ಗಾಳಿ ಶಕ್ತಿಯಿಂದ ಚಲಿಸಲಿದೆ ವಾಹನ ! | | »ಓಪನ್ ಆಫೀಸ್ ಬಗ್ಗೆ ಒಂದಿಷ್ಟು ಮಾಹಿತಿ | | »ಮೂರೂ ಬಿಟ್ಟವರ ಅಮೆರಿಕ ಯಾತ್ರೆ ....... | | »ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ | | »ಎಪ್ಪತ್ತರ ಅಜ್ಜಿಗೆ ಅವಳಿ ಮಕ್ಕಳು | | »ರೈತರಿಗೆ ಅನ್ನದಾತರಾಗಿರುವ ಐಟಿ ಇಂಜಿನಿಯರ್‌ಗಳು!! | | »ಅಮೆರಿಕೆಗಾಗಿ ದೇಶದ ಹಿತ ಬಲಿ | | »ದುಬೈ : ಖರ್ಜೂರದಾಕಾರದ ಹೊಸ ಕಟ್ಟಡ : ದುಬೈ ಕ್ರೌನ್ | | »ಸಿದ್ದರಾಮಯ್ಯ: ಬಾಣಲೆಯಿಂದ ಬೆಂಕಿಗೆ, ಬೆಂಕಿಯಿಂದ ಎಲ್ಲಿಗೆ? | | »ಬಿಜೆಪಿಯ ದುರಂತಕ್ಕೆ ಪೀಠಿಕೆ .....? | | »ಚಮ್ಮಾರಿಕೆಯೊಂದಿಗೆ ಪುಸ್ತಕ ಪ್ರಕಟಿಸುವ ಧನರಾಜ | | »ಹೊಸ ಬ್ಯಾಟರಿ ಕಂಡುಹಿಡಿಯಿರಿ : 300 ಮಿಲಿಯನ್ ಡಾಲರ್ ಗೆಲ್ಲಿರಿ | | »ಮುತ್ತು ವೈಜ್ಞಾನಿಕ ಸತ್ಯಾಂಶಗಳು ..ಇಂದು( ಜು 6) ಅಂತಾರಾಷ್ಟ್ರೀಯ ‘ಕಿಸ್ಸಿಂಗ್ ಡೇ’ | | »ತರೀಕೆರೆ ಏರಿಯಾ - ಚಿಟ್ಟೆಗಳ ಕಲಾವಿದೆ | | »ಹುಲಿ ಸಾಮ್ರಾಜ್ಯದಲ್ಲಿ ಕಾಫಿ ಎಸ್ಟೇಟ್! | | »ವೈದ್ಯಕೀಯ ಜ್ಞಾನನಿಧಿ ಡಾ| ಕೆ.ಜಿ.ಎಸ್. ಭಟ್ | | »ಚಳ್ಳಕೆರೆ : ಮಾನವ ರಹಿತ ವಿಮಾನ ಹಾರಾಟ ಕೇಂದ್ರ | | »ಏನಿದು ಭಾರತ-ಅಮೆರಿಕ ಅಣು ಒಪ್ಪಂದ? ಇದರಿಂದ ಏನು ಲಾಭ? ವಿರೋಧ ಏಕೆ? ಸಮಗ್ರ ನೋಟ | | »ಹಣದುಬ್ಬರವೆಂದರೇನು ಗೊತ್ತಾ? | | »ಹೊಳೆ ದಾಟಿದ ಮೇಲೆ... | | »ಅಂತರಿಕ್ಷದಲ್ಲಿ ಮದುವೆ ಮಾಡಿಸುತ್ತದೆ ಈ ಸಂಸ್ಥೆ! | | »ಜಿರಾಫೆಯನ್ನು ಬಂಧಿಸಿದ ಪೊಲೀಸರು | | »ಆ ಸಿಗರೇಟು ಬಿಡಿ ಇ-ಸಿಗರೇಟು ಸೇದಿ | | »ರೈತರ ಸರಣಿ ಆತ್ಮಹತ್ಯೆ : ದೊರಕದ ಸಹಾಯ | | »ಪಠ್ಯಪುಸ್ತಕ ಬದಲಾವಣೆಗೆ ಸಚಿವರ ‘ಕೇಸರಿ ನಕಾಶೆ’ | | »’ಮೊಬೈಲ್’ ಗಾದೆಗಳು!! | | »ಭಾರತೀಯ ಭಾಷಾ ಗಣಕಲೋಕದ ಪಿತಾಮಹ - ಶ್ರೀ ಕೆ.ಪಿ ರಾವ್ | | »ಒಂದು ಸಾವಿನ ಮನೆಯ ವೃತ್ತಾಂತ ..... | | »ಕನ್ನಡ ಕಲಿಸುವುದಕ್ಕೆ ಇಷ್ಟವಿರುವವರಿಗೆ ಅರ್ಪಣೆ | | »ಅನಾಥ ಅಜ್ಜಿಗೆ ಸ್ಪೂರ್ಥಿಯ ಆಸರೆ | | »ರಾಜಕೀಯ ಚದುರಂಗದಾಟದ ಕಾಯಿಗಳಾಗುತ್ತಿರುವ ರೈತರು | | »ಅನ್ನ ತಿನ್ನುವವರು ನೀರುಳಿಸುವ ವಿಧಾನ | | »ಗಂಗೆ ಅಂತರ್ಧಾನಳಾದಾಳೇ... !? | | »ಚಿಕುನ್‌ಗುನ್ಯಾದಿಂದ ಕರಾವಳಿ ಕಲಿಯಬೇಕಾದ ಪಾಠ | | »ಕಾಲ್ ಸೆಂಟರ್‌ಗಳಲ್ಲಿ ತೆರೆಯಲಿ ಏಡ್ಸ್ ಜಾಗೃತಿ ಅಂಗಡಿಗಳು | | »ಕರಾವಳಿಯನ್ನು ಕಾಡುತ್ತಿದೆ ಕಮ್ಯುನಿಸ್ಟ್ ಕಳೆ | | »ಗಣಿಗಾರಿಕೆ ರಾಷ್ಟ್ರೀಕರಣವಾಗಲಿ | | »ಕಳೆ ಪಡೆಯುತ್ತಿರುವ ಹೊಳೆ ಮೀನುಗಾರಿಕೆ .... | | » 'Housewives' out of fashion in metros! | | »ನನ್ನಜ್ಜನಿಗೊಂದಾನೆಯಿತ್ತು ! | | »ಕೊಂಕಣಿ ರಾಜ್ಯದ ಕನಸು ಕಂಡಿದ್ದ ಕಾಮತರು | | »ಪದ್ಮಪ್ರಿಯಾ ಪ್ರಕರಣದ ಸುತ್ತ... | | »... ಆ ಒಂದು ಮುತ್ತಿನ ಕತೆ | | »ಈ ಭೇಟಿ ನ್ಯಾಯವೇ? | | »ಪಾಸ್‌ಪೋರ್ಟ್ ಅರ್ಜಿಗೆ ಕನ್ನಡ, ಇಂಗ್ಲಿಷ್‌ನ ವೆಬ್‌ಸೈಟ್ | | »some ಪದ ಕೇಡಿ | | »ಈ-ಮೆಲ್ ರಚನೆಯ ಪರಿಚಯ | | »ರೈತರಿಗೆ ಮಾತ್ರ ರಬ್ಬರ್ ಗುಂಡು: ಉಳಿದವರಿಗೆ? | | »ಇ-ಮೇಲ್ ಅಕೌಂಟನ್ನು ತೆರೆಯುವುದು | | »ನೀರಿನಿಂದ ಓಡುವ ಕಾರು! | | »ನಾಡಿನ ಒಳಿತಿನ ಚುಕ್ಕಾಣಿ ಅರ್ಚಕನ ಕೈಗೆ? | | »ಕೆಂಪಾಯಿತು ಯಡಿಯೂರಪ್ಪನವರ ಹೆಗಲಿನ ಹಸಿರು ಶಾಲು | | »ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗೆ ಮೊದಲ ಬಲಿ ರೈತನೇ! | | » |
|