ಮನಾಮಾ: ಹಣದುಬ್ಬರಕ್ಕೆ ತಕ್ಕನಾದ ವೇತನ ಏರಿಕೆ ಗಮನಿಸಲು ಸಮಿತಿ ರಚನೆ |
ಪ್ರಕಟಿಸಿದ ದಿನಾಂಕ : 2008-10-20
ಕಾರ್ಮಿಕ ಸಚಿವರಿಂದ ಘೋಷಣೆ : ನಾಗರಿಕ ಹಾಗೂ ಅನಿವಾಸಿಗಳಿಗೆ ಸಮಾನವಾಗಿ ಅನ್ವಯ
ಮನಾಮಾ, ಅಕ್ಟೋಬರ್ 20: ಹಣದುಬ್ಬರ ಬಹರೇನ್ ನಾಗರಿಕರನ್ನು ಕಂಗೆಡಿಸಿದ್ದು ಬೆಲೆಯೇರಿಕೆಯ ಬಿಸಿ ಎಲ್ಲರಿಗೂ ತಟ್ಟಿದೆ. ಈ ಬೆಲೆಯೇರಿಕೆಗೆ ಅನುಗುಣವಾಗಿ ನಾಗರಿಕರ ವೇತನಗಳಲ್ಲಿ ವೃದ್ಧಿಯಾಗುತ್ತಿದೆಯೇ ಇಲ್ಲವೇ ಎಂದು ತಪಾಸಣೆ ಮಾಡಲು ಹೊಸ ಸಮಿತಿಯೊಂದನ್ನು ನೇಮಿಸಲಾಗುವುದು ಎಂದು ಬಹರೇನ್ ಕಾರ್ಮಿಕ ಸಚಿವರಾದ ಡಾ. ಮಜೀದ್ ಅಲ್ ಅಲಾವಿಯವರು ತಿಳಿಸಿದ್ದಾರೆ. ಇತ್ತೀಚೆಗೆ ನಗರದ ರಾಡಿಸನ್ ಸಾಸ್ ಹೋಟೆಲಿನಲ್ಲ್ ನಡೆದ ವೇತನ ಕುರಿತ ಸಂಕಿರಣದಲ್ಲಿ ಅವರು ಈ ವಿಷಯವನ್ನು ತಿಳಿಸಿದರು. ಈ ವಿಚಾರಸಂಕಿರಣವನ್ನು ಉಪಪ್ರಧಾನ ಮಂತ್ರಿಗಳಾದ ಶೇಖ್ ಮೊಹಮ್ಮದ್ ಬಿನ್ ಮುಬಾರಕ್ ಅಲ್ ಖಲೀಫಾ ಅವರು ಉದ್ಘಾಟಿಸಿದ್ದರು
wage watchdog ಎಂಬ ಹೆಸರಿನ ಈ ಸಮಿತಿ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಬಹರೇನ್ ನಾಗರಿಕ ಹಾಗೂ ಅನಿವಾಸಿಗಳ ವೇತನಗಳನ್ನು ಪರಿಶೀಲಿಸಿ ತನ್ನ ವರದಿ ಸಲ್ಲಿಸಲಿದೆ. ಈ ಮೂಲಕ ಸಮಾಜದ ಎಲ್ಲಾ ವರ್ಗದ ಜನತೆ ಸುಖಕರವಾದ ಜೀವನ ನಡೆಸಲು ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದು ಕಾರ್ಮಿಕ ಸಚಿವರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ಡೇಲಿ ನ್ಯೂಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-20
|
|
|