ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ’ಕಾರಂತೋತ್ಸವ-2008’ ಸಂಭ್ರಮ |
ಪ್ರಕಟಿಸಿದ ದಿನಾಂಕ : 2008-10-19
(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)
ಕಾರಂತರನ್ನು ಬರೀ ಉಪನ್ಯಾಸದಿಂದ ಸ್ಮರಿಸಿ ಕೊಳ್ಳುವುದು ಔಚಿತಪೂರ್ಣವಲ್ಲ : ವಿ. ಗ. ನಾಯಕ
ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮುಂಬಯಿ ಇದರ ವತಿಯಿಂದ ವರ್ಷಂಪ್ರತಿಯಂತೆ ಇಂದಿಲ್ಲಿ ’ಕಾರಂತೋತ್ಸವ-2008’ ಸಂಭ್ರಮ ನಡೆಸಲಾಯಿತು. ಇಂದು ಶನಿವಾರ ಸಂಜೆ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಕಾರಂತೋತ್ಸವದಲ್ಲಿ ಖ್ಯಾತ ಸಾಹಿತಿ,ವಿಮರ್ಶಕ ಶ್ರೀ ವಿ. ಗ. ನಾಯಕ ಇವರು ಮುಖ್ಯ ಅತಿಥಿಯಾಗಿದ್ದು,ಕಾರಂತರ ಭಾವಚಿತ್ರಕ್ಕೆ ಪುಷ್ಫವೃಷ್ಠಿಗೈದು ಸಮಾರಂಭವನ್ನು ಉದ್ಘಾಟಿಸಿದರು ಮತ್ತು ಕಾರಂತರಿಗೆ ನುಡಿ ನಮನಗಳನ್ನುಗೈದು ಉಪನ್ಯಾಸವನ್ನೀಡಿದರು.
ವಿ. ಗ. ನಾಯಕರು ಮಾತನಾಡಿ ಪ್ರತಿಭೆಯ ಹೊರತಾದ ಹೋರಾಟ ಕಾರಂತರದ್ದು. ನಿಷ್ಠಾವಂತ ಸೌಜನ್ಯವುಳ್ಳ ಮೇಧಾವಿಯಾಗಿದ್ದ ಕಾರಂತರು ಅನಂತ ಅನುಭವ ವಿಸ್ತಾರವುಳ್ಳ ಮಹಾನ್ ಶಕ್ತಿಯಾಗಿದ್ದರು. ಪತ್ರದ ಸಾಹಿತ್ಯವನ್ನು ರೂಢಿಸಿಕೊಂಡ ಇವರು ಸ್ವಂತಿಕೆಯ ಮನೋಧರ್ಮವುಳ್ಳ ಪ್ರಾವೀಣ್ಯ ಪಂಡಿತರೆಣಿಸಿದ್ದರು. ಕಾರಂತರ ಕಾದಂಬರಿಗಳನ್ನು ಓದಿದರೆ ಮಾನವನ ಬದುಕು ಪರಿಪೂರ್ಣತೆಗೊಳ್ಳುವುದರಲ್ಲಿ ಸಂಶಯವಿಲ್ಲ. ಕಾರಣ ಚಂದದ ದಂಪತ್ಯ ವಿಕಾಸಕ್ಕೆ ಕಾರಂತರ ಸಾಹಿತ್ಯ ಉಪಯುಕ್ತ ವಾಗಿವೆ. ಸ್ರ್ತೀಕುಲಕ್ಕೆ ಕಾರಂತರ ಪ್ರೇರಣೆ ಅರ್ಥಪೂರ್ಣವಾದದ್ದು. ಇಂತಹ ಕಾರಂತರನ್ನು ಬರೀ ಉಪನ್ಯಾಸದಿಂದ ಸ್ಮರಿಸಿ ಕೊಳ್ಳುವುದು ಔಚಿತಪೂರ್ಣವಲ್ಲ. ಆದುದರಿಂದ ಯುವ ಜನಾಂಗಕ್ಕೆ ಕಾರಂತರ ಮನೋಧರ್ಮ ಸ್ಪೂರ್ತಿಯಾಗಲಿ ಎಂದ ನುಡಿದರು.

ಈ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕರಾದ ಸದಾನಂದ ಸುವರ್ಣರು ಪ್ರಾಸ್ತಾವಿಕ ಭಾಷಣಗೈದು ಡಾ| ಶಿವರಾಮ ಕಾರಂತರ ಸಾಧನೆಗಳನ್ನು ಪರಿಚಯಿಸುವ ಸದುದ್ದೇಶಗಳ ಬಗ್ಗೆ ತಿಳಿಸಿ ಕಾರಂತರು ೨೦ನೇ ಶತಮಾನದಲ್ಲಿನ ಮಹಾನ್ ಚೇತನ ವಾಗಿದ್ದರು. ಒಂದು ಕಾಲದಲ್ಲಿ ಕಾರಂತರ ಬ್ಯಾಲೆಗಳನ್ನು ಮುಂಬಯಿ ಕನ್ನಡಿಗರು ಮೆಚ್ಚಿದ್ದರು. ಆದುದರಿಂದ ಯುವ ಜನಾಂಗಕ್ಕೆ ಕಾಂತರರನ್ನು ಪರಿಚಯಿಸಿ ನವ ಪೀಳಿಗೆಯಲ್ಲಿ ಅಮರಪ್ರೇಮವನ್ನು ಜೀವಂತವಾಗಿರಿಸಿ ಕಾರಂತರ ಬಗ್ಗೆ ಒಂದಿಷ್ಟು ಅರ್ಥೈಸಲು ಈ ಕಾರಂತೋತ್ಸವದ ಉದ್ದೇಶವಾಗಿದೆ. ಮಹಾನಗರದಲ್ಲಿ ವರ್ಷಕ್ಕೊಮ್ಮೆ ಯಾದರೂ ಈ ಪುಣ್ಯತ್ಮರ ನಾಮಸ್ಮರಣೆ ಅತ್ಯಗತ್ಯ ಎಂದರು.
ಕಾರಂತೋತ್ಸವ ಸಮಿತಿಯ ಅಧ್ಯಕ ಸ್ವಾಗತಿಸಿದರು. ಸದಸ್ಯರಾದ ಗೋಪಾಲ್ ತ್ರಾಸಿ ಅತಿಥಿಯನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಕೋಶಾಧಿಕಾರಿ ಪ್ರಾ| ಶಿವ ಬಿಲ್ಲವ ಚಿತ್ರ ಸ್ಪರ್ಧೆಯ ವಿಜೇತರ ಯಾದಿ ವಾಚಿಸಿದರು. ಕಾರ್ಯದರ್ಶಿ ಎಸ್. ಕೆ. ಸುಂದರ್ ವಂದನಾರ್ಪಣೆಗೈದರು.

ಕಾರ್ಯಕ್ರಮದಲ್ಲಿ ಡಾ| ಶಿವರಾಮ ಕಾರಂತರ ಸ್ಮರಣೆಯಲ್ಲಿ ಕನ್ನಡಿಗರ ಮಕ್ಕಳಿಗಾಗಿ ಇತ್ತೀಚೆಗೆ ನಡೆಸಲಾಗಿದ್ದ ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು. ಮನೋರಂಜನೆಯ ಸಲುವಾಗಿ ದಿ| ಪೂರ್ಣಚಂದ್ರ ತೇಜಸ್ವಿ ಅವರ ಕಥೆಯಾಧರಿಸಿದ ಸದಾನಂದ ಸುವರ್ಣ ನಿರ್ದೇಶನದ ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ’ಕುಬಿ ಮತ್ತು ಇಯಾಲ’ ಪ್ರದರ್ಶಿಸಲಾಯಿತು.
ವರದಿಯ ವಿವರಗಳು |
 |
ಕೃಪೆ : (ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್) ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-19
|
|
|