ಆತ್ಮಹತ್ಯೆ ಪ್ರಕರಣ: ಅನಾಥ ಸ್ಥಿತಿಯಲ್ಲಿ ಮೃತದೇಹಗಳು |
ಪ್ರಕಟಿಸಿದ ದಿನಾಂಕ : 2008-10-18
ಮುಂಬಯಿ, ಅ. 17 : ನಗರದ ಬೊರಿವಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಒಂದೇ ಕುಟುಂಬದ ನಾಲ್ವರ ಮೃತದೇಹಗಳು ವಾರಸುದಾರರಿದ್ದು ಕೂಡ ಅನಾಥ ಸ್ಥಿತಿಯಲ್ಲಿವೆ.
ಕಳೆದ ಅ. 12ರಂದು ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಕಂಡು ಬಂದ ಎ. ಕೆ. ನಾರ್ (77 ವ.), ಅವರ ಪತ್ನಿ ಶ್ಯಾಮಲಾ (65 ವ.), ಮಕ್ಕಳಾದ ಸುಚಿತ್ರಾ (43 ವ.) ಹಾಗೂ ಸುಧೀರ್ (42 ವ.) ಎಂಬವರ ಮೃತದೇಹಗಳು ವಾರಸುದಾರರಿದ್ದರೂ ಕೂಡ ಅನಾಥವಾಗಿ ಭಗವತಿ ಆಸ್ಪತ್ರೆಯ ಶವಗಾರದಲ್ಲಿ ಬಿದ್ದಿವೆ ಎಂದು ಮೊಲಗಳು ತಿಳಿಸಿವೆ.
ಮೃತರು ಮೂಲತಃ ಕೇರಳದವರಾಗಿದ್ದು, ಪೊಲೀಸರು ಫೋನ್ ಮುಖಾಂತರ ಘಟನೆಯ ಬಗ್ಗೆ ವಿವರಿಸಿ ಮೊರು-ನಾಲ್ಕು ದಿನಗಳಾದರೂ ಕೂಡ ಅವರ ಸುಳಿವೇ ಇಲ್ಲದಿರುವುದನ್ನು ಕಂಡು ಕಸ್ತೂರ್ಬಾ ಪೊಲೀಸ್ ಠಾಣೆಯ ಅಧಿಕಾರಿಗಳ ತಂಡ ಕೇರಳಕ್ಕೆ ತೆರಳಿ, ಸಂಬಂಧಿಕರಲ್ಲಿ ಮೃತದೇಹಗಳನ್ನು ಕೊಂಡು ಹೋಗುವಂತೆ ವಿನಂತಿಸಿದಾಗ, ತನಗೂ ಅವರಿಗೂ ಯಾವುದೇ ರೀತಿಯ ಸಂಪರ್ಕವಿಲ್ಲ ಎಂದು ಮೃತರ ತಂಗಿ ತಿಳಿಸಿದ್ದಾರೆ.
ಸಾಲದ ಹೊರೆಯಿಂದ ತತ್ತರಿಸಿದ ಈ ಕುಟುಂಬವು ಆತ್ಮಹತ್ಯೆಗೆ ಶರಣಾಗಿ ಬದುಕಿನಿಂದ ಮುಕ್ತಿ ಪಡೆದರೂ, ಮೃತದೇಹಗಳು ಯಾವಾಗ ಮುಕ್ತಿ ಪಡೆಯುತ್ತವೆ ಎಂದು ಪೊಲೀಸರು ಚಿಂತೆಗೀಡಾಗಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-18
|
|
|