10 ಲಕ್ಷ ರು. ಪರಿಹಾರ ಗೆದ್ದ ಭಾರತೀಯ |
ಪ್ರಕಟಿಸಿದ ದಿನಾಂಕ : 2008-10-18
ನ್ಯೂಯಾರ್ಕ್: ಪೊಲೀಸರಿಂದ ಅನ್ಯಾಯಕ್ಕೊಳಗಾಗಿ ಅವರ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದ ಭಾರತೀಯ ಹರವಿಂದರ್ ವಿಲ್ಕು ಎಂಬುವರಿಗೆ 20 ಸಾವಿರ ಡಾಲರ್ (ಸುಮಾರು 10 ಲಕ್ಷ ರು.) ಪರಿಹಾರ ನೀಡಲು ಅಮೆರಿಕದ ನ್ಯಾಯಾಲಯ ಆದೇಶಿಸಿದೆ.
ನ್ಯೂಯಾರ್ಕ್‌ನ ಇಬ್ಬರು ಪೊಲೀಸರು ತನ್ನನ್ನು ವಿನಾಕಾರಣ ಬೀದಿಯಲ್ಲಿ ನಿಲ್ಲಿಸಿ ಥಳಿಸಿದ್ದಾರೆ ಮತ್ತು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ಹರವಿಂದರ್ ಮೊಕದ್ದಮೆ ಹೂಡಿದ್ದರು.
ಪೊಲೀಸ್ ಅಧಿಕಾರಿಗಳು ತಪ್ಪು ಮಾಡಿರುವುದು ಸಾಬೀತಾಗಿರುವುದರಿಂದ ಸರ್ಕಾರ ಹರವಿಂದರ್‌ಗೆ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-18
|
|
|