ಪ್ರೊ.ಅಜಿತ್‌ಗೆ ಪ್ರತಿಷ್ಠಿತ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2008-10-18
ಕ್ಷಯರೋಗ ನಿಯಂತ್ರಣ ಮತ್ತು ಚಿಕಿತ್ಸಾ ಪದ್ಧತಿಯಲ್ಲಿ ಸಂಶೋಧನೆಗಳ ಮೂಲಕ ಹೊಸ ವಿಧಾನಗಳನ್ನು ಅಭಿವೃದ್ಧಿ ಪಡಿಸಿದ್ದ ಹಿರಿಯ ಕ್ಷಯರೋಗ ತಜ್ಞ ಅನಿವಾಸಿ ಭಾರತೀಯರೊಬ್ಬರಿಗೆ (ಎನ್‌ಆರ್‌ಐ) ಪ್ರತಿಷ್ಠಿತ ಪ್ರಶಸ್ತಿ ಸಂದಿದೆ.
ಲಂಡನ್ (ಪಿಟಿಐ): ಕ್ಷಯರೋಗ ನಿಯಂತ್ರಣ ಮತ್ತು ಚಿಕಿತ್ಸಾ ಪದ್ಧತಿಯಲ್ಲಿ ಸಂಶೋಧನೆಗಳ ಮೂಲಕ ಹೊಸ ವಿಧಾನಗಳನ್ನು ಅಭಿವೃದ್ಧಿ ಪಡಿಸ್ದಿದ ಹಿರಿಯ ಕ್ಷಯರೋಗ ತಜ್ಞ ಅನಿವಾಸಿ ಭಾರತೀಯರೊಬ್ಬರಿಗೆ (ಎನ್‌ಆರ್‌ಐ) ಪ್ರತಿಷ್ಠಿತ ಪ್ರಶಸ್ತಿ ಸಂದಿದೆ.
ಪ್ರೊ.ಅಜಿತ್ ಲಾಲ್ವಾನಿ ಅವರು ಈ ಗೌರವಕ್ಕೆ ಪಾತ್ರವಾಗ್ದಿದು, ಇಲ್ಲಿನ ರೀಜೆಂಟ್ಸ್ ಪಾರ್ಕ್‌ನಲ್ಲಿ ಗುರುವಾರ ನಡೆ ವಾರ್ಷಿಕ ಹಾರ್ವೇನಿಯನ್ ಭಾಷಣ ಸಮಾರಂಭದಲ್ಲಿ ‘ರಾಯಲ್ ಕಾಲೇಜ್ ಆಫ್ ಫಿಜಿಶಿಯನ್ಸ್ ವೆಬರ್ ಪಾರ್ಕ್ ಟ್ರಸ್ಟ್ ಮೆಡಲ್’ ಅನ್ನು ನೀಡಿ ಗೌರವಿಸಲಾಯಿತು. ಲಂಡನ್‌ನ ಇಂಫಿರಿಯಲ್ ಕಾಲೇಜಿನ್ಲಲಿ ಹಿರಿಯ ಸಂಶೋಧಕ ಮತ್ತು ಅಧ್ಯಕ್ಷರಾಗಿರುವ ಲಾಲ್ವಾನಿ ಅವರು ಇಲಿನ ಬಹುದೊಡ್ಡ ವಿಟಮಿನ್ ತಯಾರಿಕಾ ಕಂಪೆನಿ ‘ವಿಟಬಯಾಟಿಕ್ಸ್’ ನ ಸ್ಥಾಪಕ ಹಾಗೂ ಅಧ್ಯಕ್ಷರ ಪುತ್ರ ರಾಗಿದ್ದಾರೆ.
‘ಲಾಲ್ವಾನಿ ಅವರು ಇಂಫಿರಿಯಲ್ ಕಾಲೇಜಿನ ಅಧ್ಯಕ್ಷರಾಗಿ ನೇಮಕವಾಗಿರುವುದು ಅವರಿಗೆ ಬ್ರಿಟನ್‌ನಲ್ಲಿ ಕ್ಷಯರೋಗ ನಿವಾರಣಾ ಸೇವೆಯ್ಲಲಿ ತೊಡಗಿರುವ ಸಂಸ್ಥೆಗಳೊಂದಿಗೆ ಹೆಚ್ಚು ಸಮನ್ವಯ ಸಾಧಿಸಲು ನೆರವಾಗಿದೆ. ಅಲದೆ ಈ ರೋಗ ನಿಯಂತ್ರಣಕ್ಕೆ ಹೊಸ ವಿಧಾನಗಳನ್ನು ಕಂಡುಕೊಳ್ಳಲು ಸಾಧ್ಯವಾಗಿದೆ’ ಎಂದು ಪ್ರಾಧ್ಯಾಪಕ ಜೋನಾಥನ್ ಪ್ರೈಡ್‌ಲಾಂಡ್ ಅವರು ಸನ್ಮಾನ ಪತ್ರದಲ್ಲಿ ಹೇಳಿದ್ದಾರೆ. ಲಾಲ್ವಾನಿ ಅವರೊಂದಿಗೆ ಪ್ರೊ.ಸರ್ ಬ್ರೂಸ್ ಪಾಂಡರ್, ಪ್ರೊ.ಕ್ಲೇನರ್‌ಮನ್ ಅವರು ಈ ಪ್ರಶಸ್ತಿ ಪಡೆದಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-18
|
|
|