ದೋಹಾ: ಇಂಡಿಯನ್ ಕಲ್ಚರಲ್ ಸೆಂಟರ್ - ಹೊಸ ಸಮಿತಿ ನೇಮಕ |
ಪ್ರಕಟಿಸಿದ ದಿನಾಂಕ : 2008-10-17
ಪ್ರಥಮ ಬಾರಿಗೆ ಮೂವರು ಮಹಿಳೆಯರು ಸಮಿತಿಯಲ್ಲಿ : ಹಲವು ಕಾರ್ಯಕ್ರಮಗಳಿಗೆ ರೂಪುರೇಶೆ
ದೋಹಾ, ಅಕ್ಟೋಬರ್ 17: ಐ.ಸಿ.ಸಿ. (ಇಂಡಿಯನ್ ಕಲ್ಚರಲ್ ಸೆಂಟರ್)ನ 2008-2010 ರ ಸಾಲಿನ ಹೊಸ ಸಮಿತಿಯನ್ನು ನಿನ್ನೆ ಆಯ್ಕೆಮಾಡಲಾಯಿತು. ಇದೇ ಪ್ರಥಮ ಬಾರಿಗೆ ಮೂವರು ಮಹಿಳೆಯರು ಸಮಿತಿಯಲ್ಲಿ ಆಯ್ಕೆಯಾಗಿರುವುದು ಹೊಸತನ ಮೂಡಿಸಿದೆ. ಹೊಸ ಸಮಿತಿ ಹಲವು ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಜ್ಜಾಗಿದೆ.
ಹೊಸ ಸಮಿತಿಯ ಅಧ್ಯಕ್ಷರಾದಿ ಕೆ.ಎಮ್.ವರ್ಗೀಸ್, ಉಪಾಧ್ಯಕ್ಷೆಯಾಗಿ ಉಷಾ ರವಿಶಂಕರ್, ಪ್ರಧಾನ ಕಾರ್ಯದರ್ಶಿಯಾಗಿ ಎಮ್. ಹಬೀಬುನ್ನಬಿ, ಸಹಕಾರ್ಯದರ್ಶಿಯಾಗಿ ಆನೀ ವರ್ಗೀಸ್, ಖಜಾಂಚಿಯಾಗಿ ಅನಂತ ನಾರಾಯಣ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜೈನುದ್ದೀನ್ ವನ್ನೇರಿ, ಕಟ್ಟಡ ನಿರ್ವಹಣಾ ಕಾರ್ಯದರ್ಶಿಯಾಗಿ ವರ್ಗೀಸ್ ಚಾಕೋ, ಅಫಿಲಿಯೇಶನ್ ಹಾಗೂ ಕಾನ್ಸುಲಾರ್ ಸೇವೆ ಕಾರ್ಯದರ್ಶಿಯಾಗಿ ಹರೀಶ್ ಕೆ. ಕಂಜನಿ, ಗ್ರಂಥಾಲಯ ಕಾರ್ಯದರ್ಶಿಯಾಗಿ ಮಂಥಾ ಶ್ರೀನಿವಾಸ್, ಒಳಾಂಗಣ ಕಾರ್ಯಕ್ರಮಗಳ ಕಾರ್ಯದರ್ಶಿಯಾಗಿ ಮಿಲಾನ್ ಅರುಣ್, ಕ್ರೀಡಾ ಕಾರ್ಯದರ್ಶಿಯಾಗಿ ವಾಲ್ಟರ್ ಡಯಾಸ್ ಆಯ್ಕೆಯಾಗಿದ್ದಾರೆ.
ಹೊಸ ಸಮಿತಿ ನಗರದ ಭಾರತೀಯರಿಗೆ ಹೊಸತನ್ನೇನಾದರೂ ನಿಡುವ ನಿಟ್ಟಿನಲ್ಲಿ ಹಲವು ಕಾರ್ಯಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿತು. ಇವುಗಳಲ್ಲಿ ತಜ್ಞರಿಂದ ಸಲಹೆ, ಐ.ಸಿ.ಸಿ. ಬೇಸಿಗೆ ಶಿಬಿರ, ಸ್ವಾತಂತ್ರೋತ್ಸವದ ಅಂಗವಾಗಿ ಸಾಂಸ್ಕೃತಿಕ ಮೇಳ, ಒಡಿಸ್ಸಿ ನೃತ್ಯ, ಒಳಾಂಗಣ ಕ್ರೀಡೆಗಳು ಮೊದಲಾದವು ಪ್ರಮುಖವಾಗಿವೆ.
ಈಗ ಲಭ್ಯವಿರುವ ಸ್ಥಳಾವಕಾಶ ಕಡಿಮೆಯಾಗಿದ್ದು ಹೆಚ್ಚಿನ ಸ್ಥಳಾವಕಾಶಕ್ಕಾಗಿ ಶೋಧ ನಡೆಯುತ್ತಿದೆ, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯರಿಗೆ ಅನುಕೂಲವಾಗಲಿದೆ ಎಂದು ನೂತನ ಅಧ್ಯಕ್ಷ ಕೆ.ಎಮ್. ವರ್ಗೀಸ್ ತಿಳಿಸಿದ್ದಾರೆ. ಹೊಸ ಸಮಿತಿ ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಲಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ನಾವು ದುಡಿಯುತ್ತಿರುವ ದೇಶವಾದ ಕತರ್ ಸಂಸ್ಕೃತಿಗೂ ತಮ್ಮ ಸಮಿತಿ ಸೇವೆ ಸಲ್ಲಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ಸಮಿತಿಗೆ ಐ.ಸಿ.ಸಿ. ಹಾರ್ದಿಕ ಸ್ವಾಗತ ಕೋರುತ್ತದೆ. ಸದಸ್ಯರಾಗಬಯಸುವವರು ಹಾಗೂ ಹೆಚ್ಚಿನ ಮಾಹಿತಿಗಾಗಿ : ಐ.ಸಿ.ಸಿ. ಸ್ವಾಗತ ಮೇಜಿನ ಸಂಖ್ಯೆ 4674845 ಯನ್ನು ಸಂಪರ್ಕಿಸಲು ಕೋರಲಾಗಿದೆ.
ಚಿತ್ರ, ವರದಿ: ಇಕ್ಬಾಲ್ ಮನ್ನಾ, ದೋಹಾ ಕತರ್
ವರದಿಯ ವಿವರಗಳು |
 |
ಕೃಪೆ : ಇಕ್ಬಾಲ್ ಮನ್ನಾ, ದೋಹಾ ಕತರ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-17
|
|
|