ಕಲ್ಬಾದೇವಿ: ಕಟ್ಟಡದಲ್ಲಿ ಬೆಂಕಿ ದುರಂತ; ಓರ್ವ ಬಲಿ |
ಪ್ರಕಟಿಸಿದ ದಿನಾಂಕ : 2008-10-15
ಮುಂಬಯಿ, ಅ. ೧೪: ಕಲ್ಬಾ ದೇವಿಯ ಬಹುಮಹಡಿ ಕಟ್ಟಡವೊಂದರಲ್ಲಿ ಇಂದು ಸಂಭವಿಸಿದ ಬೆಂಕಿ ಅವಘಡದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಅಗ್ನಿಶಾಮಕ ಪಡೆಯ ಓರ್ವ ಸಿಂದಿ ಸಹಿತ ನಾಲ್ವರು ಗಾಯಗೊಂಡಿದ್ದಾರೆ. ಕಲ್ಬಾದೇವಿಯಲ್ಲಿರುವ ಐದಂತ ಸ್ತಿನ ವೃಂದಾವನ ಕಟ್ಟಡಕ್ಕೆ ಪೂರ್ವಾಹ್ನ 11 ಗಂಟೆ ಹೊತ್ತಿಗೆ ಬೆಂಕಿ ಹತ್ತಿಕೊಂಡಿತು. ಈ ಕಟ್ಟಡದಲ್ಲಿ ವಿಜಯಾ ಬ್ಯಾಂಕ್ ಶಾಖೆ, ಅಂಗಡಿಗಳು , ಕಚೇರಿಗಳು ಮತ್ತು ಕೆಲವು ಮನೆಗಳಿವೆ.
ಬೆಂಕಿ ಅವಘಡದಲ್ಲಿ ಮಡಿದಿರುವ ವ್ಯಕ್ತಿಯನ್ನು 55ರ ಹರೆಯದ ಲಕ್ಷ್ಮೀ ನಾರಾಯಣ ನೇಮಿಚಂದ್ ಎಂದು ಗುರುತಿಸಲಾಗಿದೆ. ಗಾಯಗೊಂಡ ನಾಲ್ವರನ್ನು ಸಮೀಪದ ಜಿ. ಟಿ. ಆಸ್ಪತ್ರೆಗೆ ಒಯ್ಯಲಾಗಿದೆ. ಗಾಯಾಳು ಗಳನ್ನು ಮೈತ್ರಿ (೩ ವ.), ಮೋನಿಕಾ (೨೮ ವ.), ಪಂಕಜ್ ಪಾಟೀಲ್ (೩೫ ವ.) ಮತ್ತು ಅಗ್ನಿಶಾಮಕ ಪಡೆಯ ಸಿಬ್ಬಂದಿ ಭರತ್ ಬೋಗೆ ಎಂದು ಗುರುತಿಸಲಾಗಿದೆ.
ಬೆಂಕಿಯಲ್ಲಿ ಕಟ್ಟಡದ ನಾಲ್ಕು ಮಹಡಿಗಳು ಸುಟ್ಟು ಕರಕಲಾಗಿವೆ. ಪರಿಹಾರ ಕಾರ್ಯ ಮುಂದುವರಿದಿದೆ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-15
|
|
|