ಬೆಳ್ಳಾರೆ: 3ನೇ ವರ್ಷದ ಶಾರದೋತ್ಸವ |
ಪ್ರಕಟಿಸಿದ ದಿನಾಂಕ : 2008-10-15
ಸುಳ್ಯ, ಅ. 14: ಬೆಳ್ಳಾರೆ ಗ್ರಾಮದ ದರ್ಖಾಸ್ತು ಎಂಬಲ್ಲಿ 3ನೇ ವರ್ಷದ ಶ್ರೀ ಶಾರದೋತ್ಸವ ನಡೆಯಿತು.
ಅಧ್ಯಕ್ಷತೆಯನ್ನು ಸಹಕಾರಿ ಪೆರುವಾಜೆ ದಯಾಕರ ಶೆಟ್ಟಿ ವಹಿಸಿದ್ದರು. ಧಾರ್ಮಿಕ ಉಪನ್ಯಾಸವನ್ನು ಕೆ. ವಿ. ರವಿಚಂದ್ರ ಶೆಟ್ಟಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಪರಮೆಶ್ವರ ಭಟ್ ಚೂಂತಾರು ಆಗಮಿಸಿದ್ದರು. ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ, ಕಾರ್‍ಯದರ್ಶಿ ಸಾಂತಪ್ಪ ಗೌಡ, ಉಪಾಧ್ಯಕ್ಷ ಚಂದ್ರಶೇಖರ ಡಿ., ಜತೆ ಕಾರ್ಯದರ್ಶಿ ಗಂಗಾಧರ ಗೌಡ ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಗಂಗಾಧರ ರೈ ಪುಡ್ಕಜೆ ಸ್ವಾಗತಿಸಿದರು. ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-15
|
|
|