ಕರಾವಳಿಯ ಇತಿಹಾಸ ಮತ್ತು ಪ್ರವಾಸೋದ್ಯಮದ ಕುರಿತು ಕಾರ್ಯಗಾರ |
ಪ್ರಕಟಿಸಿದ ದಿನಾಂಕ : 2008-10-15
ಮುಂಬಯಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗವು ’ಕರಾವಳಿಯ ಇತಿಹಾಸ ಮತ್ತು ಪ್ರವಾಸೋದ್ಯಮ’ ಕುರಿತು ಮೂರು ದಿನಗಳ ವಿಚಾರ ಸಂಕೀರಣ ಆಯೋಜಿಸಿತ್ತು.
2008 ರ ಅಕ್ಟೋಬರ್ 13-15 ರ ವರೇಗೆ ಮುಂಬಯಿ ಸಾಂತಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿಯ ಕಲೀನಾ ಕ್ಯಾಂಪಸ್‌ನಲ್ಲಿರುವ ಜವಾಹಾರ್ ಲಾಲ್ ನೆಹರೂ ವಾಚನಾಲಯದ ಮಾರ್ಷಲ್ ಸಭಾಗೃಹದಲ್ಲಿ ಹಮ್ಮಿ ಕೊಂಡ ಸಂಕೀರಣವನ್ನು ಸೋಮವಾರ ಪೂರ್ವಾಹ್ನ ಮುಂಬಯಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ವಿಜಯ್ ಖೋಲೆ ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಮಹಾರಾಷ್ಟ್ರ ಸರಕಾರದ ಪ್ರವಾಸೋದ್ಯಮ ಇಲಾಖೆಯ ಮಾಜಿ ಕಾರ್ಯದರ್ಶಿ ಡಾ| ಭೂಷಣ್ ಗಗ್ರಾಣಿ ಹಾಜರಿದ್ದು ಮಾಹಿತಿಯನ್ನಿತ್ತರು.
ಕರಾವಳಿಯ ಇತಿಹಾಸ ಮತ್ತು ಪ್ರವಾಸೋದ್ಯಮದ ಪ್ರತೀಕದ ಕ್ರಮ ಬದಲಾಯಿಸುವಿಕೆ ಹಾಗೂ ಸಾಮಾಜಿಕ ಆರ್ಥಿಕಾಭಿವೃದ್ಧಿಯನ್ನು ರೂಪಿಸುವ ಬಗ್ಗೆ ಅಧ್ಯಾಯನ ನಡೆಸುವ ಕುರಿತು ಈ ಕಾರ್ಯಗಾರದಲ್ಲಿ ಮಾಹಿತಿಯನ್ನೀಡಲಾಗಿದ್ದು, ಪ್ರೊ| ಜೆ. ವಿ. ನಾಕ್, ಡಾ| ಎ.ಪಿ.ಜಮ್ಖೇಡ್ಕರ್, ಡಾ| (ಶ್ರೀಮತಿ) ದುಲಾರಿ ಕುರೇಶಿ, ಕು| ವೀಣಾ ಪಾಟೀಲ್, ಡಾ| ಎವ್ಜಿನ್ ಜೆ. ಡಿ’ಸೋಜಾ, ಎಲಾನ್ ತ್ವೆಡೀ ಮುಂತಾದವರು ಉಪಸ್ಥಿತರಿದ್ದು ವಿಚಾರ ಸಂಕೀರಣವನ್ನು ನಡೆಸಿ ಕೊಟ್ಟರು.
ವರದಿಯ ವಿವರಗಳು |
 |
ಕೃಪೆ : ರೋನ್ಸ್ ಬಂಟ್ವಾಳ್, ಮುಂಬಯಿ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-15
|
|
|