|
ಪ್ರಕಟಿಸಿದ ದಿನಾಂಕ : 2008-10-15
ಸೈಕಲ್ ರಿಕ್ಷಾಗಳು ನಮ್ಮ ದೇಶದ ರಾಜಧಾನಿಯಲ್ಲೂ ಇವೆ.ಪರಿಸರ ಮಾಲಿನ್ಯ ಉಂಟು ಮಾಡದ ಈ ರಿಕ್ಷಾಗಳು,ಅಗ್ಗದ ಸೇವೆಯನ್ನು ನೀಡಿ ಜನಪ್ರಿಯತೆ ಉಳಿಸಿಕೊಂಡಿವೆ. ಸಾಮಾನ್ಯವಾಗಿ ಇವನ್ನು ಸೈಕಲ್‌ವಾಲಾ ಸೈಕಲ್ ತುಳಿದೇ ನಡೆಸುತ್ತಾನೆ. ಆದರೆ ಏರು ರಸ್ತೆಯಲ್ಲಿ, ರಣ ಬಿಸಿಲಿನಲ್ಲಿ ಸೈಕಲ್ ತುಳಿಯುವುದು ಪ್ರಯಾಸಕರ.

ಅಂತಹ ಸಂದರ್ಭದಲ್ಲಿ ಬ್ಯಾಟರಿ ಚಾಲಿತ ಮೋಟಾರನ್ನು ಚಾಲೂ ಮಾಡಿ ಸೈಕಲ್‌ವಾಲಾ ತನ್ನ ಕಷ್ಟವನ್ನು ಕಡಿಮೆ ಮಾಡಬಹುದು.ಗಂಟೆಗೆ ಹದಿನೈದು ಕಿಲೋಮೀಟರ್ ವೇಗದಲ್ಲಿ ಚಲಾಯಿಸಲು.ಒಂದು ಐವತ್ತು ಕಿಲೋಮೀಟರ್ ಓಡಿಸಲು ಬ್ಯಾಟರಿ ಅವಕಾಶ ನೀಡುತ್ತದೆ.ಬ್ಯಾಟರಿ ಚಾರ್ಜ್ ಮಾಡಲು ಸೌರಶಕ್ತಿಯನ್ನು ಬಳಸಲು ತಂತ್ರಜ್ಞಾನವನ್ನು CMERI ಸಂಶೋಧನಾ ಸಂಸ್ಥೆ ಒದಗಿಸಿದೆ.
ಸದ್ಯ ಇನ್ನೂರು ಕೇಜಿ ತೂಗುವ ಸೈಕಲ್ ರಿಕ್ಷಾವನ್ನು ಹಗುರ ಗೊಳಿಸಿ, ಬ್ಯಾಟರಿಯಿಂದ ಅಧಿಕ ಕೆಲಸ ತೆಗೆಯುವ ತಂತ್ರಗಳ ಬಗ್ಗೆ ಸಂಶೋಧಕರು ಗಮನ ಹರಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಅಶೋಕ್ ವರ್ಲ್ಡ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-15
|
|
|