ಚಾಮುಂಡಿಬೆಟ್ಟದಲ್ಲಿ ವಿಜೃಂಭಣೆಯ ಮಹಾರಥೋತ್ಸವ |
ಪ್ರಕಟಿಸಿದ ದಿನಾಂಕ : 2008-10-14
ಚಾಮುಂಡೇಶ್ವರಿಯ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸೋಮವಾರ ನಡೆದ ಮಹಾ ರಥೋತ್ಸವದಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು.
ಮೈಸೂರು: ಚತುರ್ದಶಿ ಪೂರ್ವಾಭದ್ರ ಉಪರಿ ಉತ್ತರಭದ್ರ ನಕ್ಷತ್ರ, ತುಲಾ ಲಗ್ನದ್ಲಲಿ ಬೆಳಿಗ್ಗೆ ೭-೧೫ ರ ಸಮಯದ್ಲಲಿ ರಾಜ ವಂಶಸ್ಥ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ದೇವಸ್ಥಾನದ ಹೊರ ಆವರಣದಲ್ಲಿ ರಥ ಒಂದು ಸುತ್ತು ಪ್ರದಕ್ಷಿಣೆ ಹಾಕಿತು. ಈ ಸಂದರ್ಭದಲ್ಲಿ ‘ಚಾಮುಂಡಾಂಬೆಗೆ ಜೈ’ ಎನ್ನುವ ಭಕ್ತರ ಉದ್ಘೋಷ ಮುಗಿಲು ಮುಟ್ಟಿತು. ಹರಕೆ ಹೊತ್ತ ಭಕ್ತರು ಕಾಸು, ಹಣ್ಣು-ಜವನವನ್ನು ತೇರಿಗೆ ಎಸೆದು ಭಕ್ತಿಯನ್ನು ಸಮರ್ಪಿಸಿದರು. ರಥ ಪ್ರದಕ್ಷಿಣೆ ಹಾಕುವಾಗ ಕುಶಾಲತೋಪುಗಳನ್ನು ಸಿಡಿಸಲಾಯಿತು.
ಇದಕ್ಕೂ ಮೊದಲು ರಥೋತ್ಸವದ ಅಂಗವಾಗಿ ಮುಂಜಾನೆ ನಾಲ್ಕರ ವೇಳೆಗೆ ಚಾಮುಂಡೇಶ್ವರಿಗೆ ವಿಶೇಷ ಅಭ್ಯಂಜನ, ಅಭಿಷೇಕ ಮಾಡ ಲಾಯಿತು. ದೇವಸ್ಥಾನದ ಗರ್ಭಗುಡಿ, ಸುಖನಾಸಿನಿಯಲ್ಲಿ ಬಗೆ-ಬಗೆ ಹೂವುಗಳಿಂದ ಮಂಟಪವನ್ನು ಕಟ್ಟಲಾಗಿತ್ತು. ಪಂಚಲೋಹದ ಉತ್ಸವ ಮೂರ್ತಿಗೆ ಚಿನ್ನಾಭರಣ, ಜರಿ ಸೀರೆ, ರಾಜಮುಡಿ (ಕೀರಿಟ) ಯಿಂದ ಅಲಂಕಾರ ಮಾಡಿ ದೇವಸ್ಥಾನದ ಪ್ರಾಂಗಣದಲ್ಲಿ ಪೂಜೆ ದಲ್ಲಿಸಲಾಯಿತು. ಇದೇ ವೇಳೆಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ದರ್ಬಾರ್ ಮಂಟಪದ್ಲಲಿ ಪೂಜೆ ಸಲ್ಲಿಸಿದರು.
ಉತ್ಸವಮೂರ್ತಿಯನ್ನು ಬೆಳ್ಳಿ ಛತ್ರಿ, ಚಾಮರ, ನಿಶಾನೆ, ಅರಮನೆ ಮರ್ಯಾದೆ, ಮಂಗಳವಾದ್ಯಗಳ ಸಮೇತ ಬೆಳ್ಳಿ ಚಪ್ಪರದಡಿಯಲ್ಲಿ ರಥದ ಹತ್ತಿರಕ್ಕೆ ತರಲಾಯಿತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ದೇವಿಗೆ ಪೂಜೆ ಸಲ್ಲಿಸಿದರು. ನಂತರ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತರ ನೇತೃತ್ವದಲ್ಲಿ ರಥೋತ್ಸವ ಪ್ರಾರಂಭವಾಯಿತು.
ಜ್ಲಿಲಾಧಿಕಾರಿ ಪಿ.ಮಣಿವಣ್ಣನ್, ಶಾಸಕರಾದ ಎಚ್.ಎಸ್.ಶಂಕರಲಿಂಗೇ ಗೌಡ, ಎಂ.ಸತ್ಯನಾರಾಯಣ, ಸ್ದಿದರಾಜು, ಬಿಜೆಪಿ ನಗರಾಧ್ಯಕ್ಷ ಬಿ.ಪಿ. ಮಂಜುನಾಥ್, ಪೊಲೀಸ್ ಉಪ ಆಯುಕ್ತರಾದ ವಿ.ಎಸ್.ಡಿಸೋಜ, ಜವಹರ ಲಾಲ್ ಮತ್ತಿತರರು ಭಾಗವಹಿಸಿದ್ದರು.
ಬಿಗಿ ಭದ್ರತೆ: ಉಗ್ರರ ಭೀತಿಯ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಇತ್ತು. ಮಹಿಷಾಷುರನ ಪ್ರತಿಮೆಯ ಮುಂದಿನ ಜಾಗದ್ಅಲ್ಲಿ ನಾಲ್ಕು ಲೋಹ ಪರಿಶೋಧಕ ಯಂತ್ರಗಳನ್ನು ಅಳವಡಿಸಿ ಭಕ್ತರನ್ನು ಒಳಬಿಡಲಾಗುತ್ತಿತ್ತು. ಪ್ರವೇಶ ಸ್ಥಳ ಹಾಗೂ ದೇವಸ್ಥಾನದ ಆವರಣದ್ಲಲಿ ವೀಡಿಯೋ ಮೂಲಕ ಜನರ ಚಲನ-ವಲನಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿತ್ತು. ಅಲ್ಲಲ್ಲಿ ಬಂದೂಕು ಹಿಡಿದ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಭಕ್ತರ ಅನುಕೂಲಕ್ಕಾಗಿ ನಗರ ಸಾರಿಗೆ ಸುಮಾರು ೫೦ಕ್ಕೂ ಹೆಚ್ಚು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿತ್ತು.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವಾರ್ತೆ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-14
|
|
|