ದುಬೈ: ಶುಕ್ರವಾರ ತುಳು ನಾಟಕ - ಗಂಗುನ ಗಮ್ಮತ್ ಪ್ರದರ್ಶನ |
ಪ್ರಕಟಿಸಿದ ದಿನಾಂಕ : 2008-10-14
ಸ್ಥಳೀಯ ಕಲಾವಿದರಿಗೆ ಮನ್ನಣೆ - ಪ್ರಭಾಕರ ಅಂಬಲ್ತೆರೆ ವಿಷನ್ಸ್ ಪ್ರಸ್ತುತಿ
ದುಬೈ, ಅಕ್ಟೋಬರ್ 14: ಪ್ರಭಾಕರ ಅಂಬಲ್ತೆರೆ ವಿಷನ್ಸ್ ಇದೇ ಮೊದಲ ಬಾರಿಗೆ ತುಳು ನಾಟಕವೊಂದನ್ನು ಪ್ರಸ್ತುತಪಡಿಸುತ್ತಿದೆ. ತನ್ನ ಚೊಚ್ಚಲ ಕಾಣಿಕೆಯಲ್ಲಿ ಸ್ಥಳೀಯ ಕಲಾವಿದರ ಪ್ರತಿಭೆ ಹಾಗೂ ಪ್ರತಿಭಾವಂತ ನಟರಾದ ವಿಶ್ವನಾಥ ಶೆಟ್ಟಿಯವರ ನಿರ್ದೇಶನದಲ್ಲಿ ಊರಿನಲ್ಲಿ ಈಗಾಗಲೇ ಯಶಸ್ವಿಯಾಗಿ ಪ್ರದರ್ಶಿತವಾಗಿರುವ ಗಂಗುನ ಗಮ್ಮತ್ ತುಳು ನಾಟಕವನ್ನು ಪ್ರದರ್ಶಿಸಲು ಸಕಲ ಸಿದ್ಧತೆಗಳನ್ನು ನಡೆಸಿದೆ.
ಇದೇ ಶುಕ್ರವಾರ ದುಬೈ ಇಂಡಿಯನ್ ಅಸೋಸಿಯೇಶನ್ ಸಭಾಂಗಣದಲ್ಲಿ ಸಂಜೆ 3 ರಿಂದ ಪ್ರಾರಂಭವಾಗುವ ಕಾರ್ಯಕ್ರಮ ಸಂಗೀತ ರಸಮಂಜರಿ ಯೊಂದಿಗೆ ತೊಡಗಲಿದೆ.
ನಿರ್ದೇಶಕ ವಿಶ್ವನಾಥ ಶೆಟ್ಟಿಯವರು ಗಂಗುನ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ.
ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾಗಿರುವ ಹಾಗೂ ಸಾಮಾಜಿಕ ಸಂಘಟಕರಾದ ಶ್ರೀ ಪ್ರಭಾಕರ ಅಂಬಲ್ತೆರೆಯವರು ಈ ಕಾರ್ಯಕ್ರಮದ ರೂವಾರಿಯಾಗಿದ್ದು ನಾಟಕ ಪ್ರದರ್ಶನಕ್ಕೆ ಅಗತ್ಯವಾದ ಎಲ್ಲಾ ಸೌಕರ್ಯ ವನ್ನು ಒದಗಿಸಲು ಶ್ರಮಿಸಿದ್ದಾರೆ.
ನಾಟಕ ಪ್ರದರ್ಶನ ಸಂಪೂರ್ಣವಾಗಿ ಉಚಿತವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಲಾಗಿದೆ. ಇದು ಪ್ರಭಾಕರ ಅಂಬಲ್ತೆರೆ ವಿಷನ್ಸ್ ನ ಪ್ರಥಮ ಕಾಣಿಕೆಯಾಗಿದ್ದು ಇದಕ್ಕೆ ಮಾಧ್ಯಮವರ್ಗ ಹಾಗೂ ಬೆಂಗಲಿಗ ರಿಂದ ಮತ್ತು ಪ್ರೇಕ್ಷಕರಿಂದ ಸಂಪೂರ್ಣ ಪ್ರೋತ್ಸಾಹ ಅಪೇಕ್ಷಿಸಲಾಗಿದೆ.
ಹೆಚ್ಚಿನ ವಿವರಗಳಿಗೆ: 050-4947833 050-4889530 050-2808971
ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಕೃಪೆ: ಅಂಬಲ್ತೆರೆ ವಿಷನ್ಸ್ ಪ್ರಕಟಣೆ
ವರದಿಯ ವಿವರಗಳು |
 |
ಕೃಪೆ : ಅಂಬಲ್ತೆರೆ ವಿಷನ್ಸ್ ಪ್ರಕಟಣೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-14
|
|
| Mohd.Ebrahim.Moolur ( M.E.Moolur), Udupi | 2008-10-25 | | First of all I appreciate you for NOT ALLOWING RELIGIOUS FEED BACKS. I strongly believe relegion has no place to play in any multi ethnic events. Thank you for this initiative.
I enjoyed the drama to its full .It was excellant. I congratulate Mr. Prabhakar Ambalthere, Mr.Vishvanath Shetty and all artists who proved that we have a pool of artists here in UAE who can perform as good as proffessional artists.The drama emotionally took me back to my school days where I used to write, act and direct tulu and kannada dramas.I look forward for more from the Cherishmatic Ambaltherte Vision.{ DEAR MR.MULOOR, WE THANK YOU FOR APPRECIATING OUR STAND. WE ALSO SHARE YOUR THOUGHTS & OPINON. A GROUP OF PEOPLE FROM RESPECTED COMMUNITIES HAVE BEEN SENDING FEEDBACKS BASED ON ONLY REALTED TO RELEGION/ PERSONAL ISSUES IN THIS PLATFORM AND WE ARE INCREASINGLY FEELING FED UP SO MUCH THAT WE ARE MULLING TO STOP THIS FEEDBACK PAGE. HOWEVER AS SINCERE, HEALTHY FEEDBACK ON SOICAL ISSUES ARE A NECESSITY, WE ARE CONTINUING TO PUBLISH CRISP /SCHOLARLY FEEDBACKS ONLY ~ MANAGING EDITOR} |
| Ashok kumar, belmannu (DUBAI- NMC) | 2008-10-15 | | wish you best of luck mr.Prabhakar Ambalthare. |
|