ನಗರದಲ್ಲಿ ಬಾಲಮಿತ್ರ ಯಕ್ಷಗಾನ ಕಲಾ ಮಂಡಳಿಯ ಮಕ್ಕಳಿಂದ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನ ಆರಂಭ |
ಪ್ರಕಟಿಸಿದ ದಿನಾಂಕ : 2008-10-14
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಬಾಲಮಿತ್ರ ಯಕ್ಷಗಾನ ಕಲಾ ಮಂಡಳಿಯ ಸರಳೇಬೆಟ್ಟು ಮಣಿಪಾಲದ ಮಕ್ಕಳ ತಂಡವು ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶಿಸಲು ಇಂದಿಲ್ಲಿ ಮುಂಬಯಿಗೆ ಆಗಮಿಸಿದ್ದು, ಇಂದಿಲ್ಲಿ ಸೋಮವಾರ ಸಂಜೆ ಸಾಂತಕ್ರೂಜ್ ಪೂರ್ವದ ಪೇಜಾವರ ಮಠದ ಶಾಖೆಯ ಸಭಾಗೃಹದಲ್ಲಿ ಯಕ್ಷಗಾನ ತಿರುಗಾಟದ ಉದ್ಘಾಟನಾ ಸಮಾರಂಭವನ್ನು ನಡೆಸಲಾಯಿತು.

ಖ್ಯಾತ ಯಕ್ಷಗಾನ ಕಲಾಭಿಮಾನಿ, ಸಾಹಿತಿ ಡಾ| ಸಂಜೀವ ಕೆ.ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾಕಾರರಾದ ಕಮಲಾಕ್ಷ ಪ್ರಭು, ಸದಾನಂದ ಐತಾಳ್, ಕೊಂಡದಕುಳಿ ರಾಮಚಂದ್ರ ಹೆಗಡೆ, ದಯಾನಂದ ಪ್ರಭು, ಸುಂದರ ಆಚಾರ್ಯ, ಜಿ.ಟಿ. ಆಚಾರ್ಯ, ಎಸ್. ಕೆ.ಸುಂದರ್, ಪ್ರಕಾಶ್ ಆಚಾರ್ಯ ರಾಮಕುಂಜ ಹಾಗೂ ರಮೇಶ್ ಬಿರ್ತಿ ಮುಂತಾದವರು ಉಪಸ್ಥಿತರಿದ್ದರು.

ಇಂದು ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ಮುಂಬಯಿ ಇವರ ಪ್ರಾಯೋಜಕತ್ವದಲ್ಲಿ ತಿರುಗಾಟದ ಪ್ರಥಮ ಪ್ರದರ್ಶನವಾಗಿ ಚಿಣ್ಣರು ’ಹರಿಭಕ್ತ ಸುಧನ್ವ’ ಪ್ರದರ್ಶಿಸಿದರು.
ಈ ತಿರುಗಾಟದ ಕೊನೆಯ ಪ್ರದರ್ಶನವು ಬರುವ ಅಕ್ಟೋಬರ್ 21ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಕೊನೆಗೊಳ್ಳಲಿದ್ದು, ತಿರುಗಾಟದಲ್ಲಿ ಹರಿಭಕ್ತ ಸುಧನ್ವ, ಲವಕುಶ ಕಾಳಗ, ವೀರಾಭಿಮನ್ಯು, ದುಶ್ಯಸನ ವಧೆ, ವೀರವೃಷ ಸೇನ ಸೇರಿದಂತೆ ದಿನಕ್ಕೊಂದು ಪ್ರಸಂಗವನ್ನು ಪ್ರದರ್ಶಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-14
|
|
|