ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಒಮಾನ್‌ಗೆ ಆಗಮಿಸಿದ ಜೀವನ್ ಕಿರಣ್

ಕುಂಬಳೆ, ಅ. ೧೨: ಸೋಮಾಲಿಯಾದ ಬಳಿ ಕಡಲು ಕಳ್ಳರಿಂದ ಅಪಹರಣಕ್ಕೊಳಗಾಗಿ ಶುಕ್ರವಾರ ಮಧ್ಯಾಹ್ನ ಬಿಡುಗಡೆಗೊಂಡ ಜೀವನ್ ಕಿರಣ್ ಡಿ’ಸೋಜ (28ವ.) ಅವರು ಶನಿವಾರ ರಾತ್ರಿ ಮನೆಗೆ ಕರೆ ಮಾಡಿ ಅ. ೧೨ರಂದು ರಾತ್ರಿ ಓಮಾನ್‌ಗೆ ತಲುಪುವುದಾಗಿ ತಿಳಿಸಿದ್ದಾರೆ.
ಹಡಗಿನಲ್ಲಿ ಆತ ಇತರರೊಂದಿಗೆ ಆಗಮಿಸುತ್ತಿದ್ದಾರೆ.

ಅಪಹರಣಕ್ಕೊಳಗಾದ 51 ದಿನಗಳಲ್ಲಿ ಸರಿಯಾದ ಆಹಾರವಿಲ್ಲದೆ ಬಳಲಿದ್ದ ಅವರಿಗೆ ಈಗ ಬೇರೆ ಹಡಗು ಗಳವರು ಆಹಾರ ವಸ್ತುಳನ್ನು ನೀಡುತ್ತಿದ್ದಾರೆಂದು ಆತ ತಿಳಿಸಿದ್ದಾರೆ.

ಓಮಾನ್‌ಗೆ ಆಗಮಿಸಿ ಹಡಗಿನ ಕಂಪೆನಿಯವರಲ್ಲಿ ಮಾತನಾಡಿದ ಬಳಿಕ ಟಿಕೆಟ್‌ಗೆ ಹಣ ಹೊಂದಿಸಿಕೊಂಡು ವಿಮಾನದಲ್ಲಿ ಊರಿಗೆ ಆಗಮಿಸುವು ದಾಗಿ ಆತ ತಿಳಿಸಿದ್ದಾರೆ. ಶುಕ್ರವಾರ ಅಥವಾ ಶನಿವಾರ ಆತ ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ.

ಸರಿಯಾಗಿ ಅನ್ನಾಹಾರ, ಸ್ನಾನ ಇತ್ಯಾದಿ ಅನುಕೂಲಗಳಿಲ್ಲದೆ ಆರೋಗ್ಯಲ್ಲಿ ಏರುಪೇರಾಗಿದ್ದು ಈಗ ಚೇತರಿಸಿಕೊಳ್ಳುತ್ತಿರುವುದಾಗಿ ಆತ ತಿಳಿಸಿದ್ದಾರೆ.

ಹಡಗಿನಲ್ಲಿ ಒಂದು ಗುಹೆಯಲ್ಲಿ ಕೂಡಿ ಹಾಕಿದಂತೆ ತಮ್ಮನ್ನು ಇರಿಸಿದ್ದು, ಕಡಲುಗಳ್ಳರು 18 ಮಂದಿ ತಮ್ಮನ್ನು ಯಾವಾಗಲೂ ಕಾಯುತ್ತಿದ್ದರು. ಹಡಗಿನ ಕಂಪೆನಿಯವರು ಅವರೊಂದಿಗೆ ಮಾತುಕತೆ ನಡೆಸಿ ಸಾಕಷ್ಟು ಮೊತ್ತ ನೀಡಿ ಬಿಡುಗಡೆಗೆ ವ್ಯವಸ್ಥೆ ಮಾಡಿದರೆಂದು ಜೀವನ್ ಕಿರಣ್ ಹೇಳಿದ್ದಾರೆ. ಅಪಹರಣಕಾರರು ತನ್ನ ಇತರ ಹಲವು ಸಹೋದ್ಯೋಗಿಗಳ ಮೊಬೈಲ್ ಫೋನುಗಳನ್ನು ಕೂಡ ಅಪಹರಿಸಿದ್ದರು.

ಆದರೆ ತನ್ನದನ್ನು ಉಳಿಸಿಕೊಳ್ಳುವಲ್ಲಿ ತಾನು ಯಶಸ್ವಿಯಾಗಿದ್ದೇನೆಂದು ಆತ ಮನೆಯವರಲ್ಲಿ ಹೇಳಿದ್ದಾರೆ.

ಆದರೆ ಸರಿಯಾಗಿ ಸಂಪರ್ಕ ಸಿಗದಿರುವ ಕಾರಣ ಮಾತುಕತೆ ಸಾಧ್ಯವಾಗುತ್ತಿಲ್ಲ . ಓಮಾನ್‌ಗೆ ಆಗಮಿಸಿದ ಬಳಿಕ ಮಾತುಕತೆ ಸಾಧ್ಯವಾಗಬಹುದೆಂದು ನಿರೀಕ್ಷಿಸಲಾಗಿದೆ.

ವಿದೇಶದಲ್ಲಿರುವ ಜೀವನ್ ಕಿರಣ್ ಸಹೋದರ ಕೂಡ ಜೀವನ್ ಆಗಮಿಸುತ್ತಿರುವ ವಿಷಯವನ್ನು  ತಿಳಿಸಿದ್ದಾರೆ.

ಅಪಹರಣವಾಗಿ ಸುಮಾರು ಒಂದು ವಾರದ ಬಳಿಕ ಮನೆಯವರಿಗೆ ವಿಷಯ ತಿಳಿದಿತ್ತು. ಅಲ್ಲಿಂದ ಸುಮಾರು 45 ದಿನಗಳ ಕಾಲ ಪ್ರತಿನಿತ್ಯ ಬಂಧು ಮಿತ್ರರು ಹಾಗೂ ಅದಿಕಾರಿಗಳ ಫೋನ್ ಕರೆಗಳು ಮನೆಯವರಿಗೆ ಕಿರಿಕಿರಿಯಾಗುವಷ್ಟು ಬರುತ್ತಿದ್ದವು. ಇದೀಗ ಬಿಡುಗಡೆಯ ಬಳಿಕ ಮನೆಗೆ ಫೋನ್ ಕರೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದರಿಂದ ತಮಗೆ ಸಂತಸವಾಗಿದೆ ಎಂದು ಜೀವನ್ ಅವರ ಮನೆಯವರು ತಿಳಿಸಿದ್ದಾರೆ.

ಪುತ್ರನ ಬಿಡುಗಡೆಯ ಸಂತಸವನ್ನು ಮನೆಗೆ ಬಂದವರಿಗೆ ಸಿಹಿ ಹಂಚುವ ಮೂಲಕ ಅವರು ಆಚರಿಸುತ್ತಿದ್ದಾರೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಉದಯವಾಣಿ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-13

ಇತರ ಸಂಭಂದಪಟ್ಟ ವರದಿಗಳು
»
»ಅಪಹೃತ ಹಡಗು ವಿಮೋಚನೆ. ಎಲ್ಲ 23 ಸಿಬ್ಬಂದಿ ಬಿಡುಗಡೆ
»

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri