ಸನಾತನ ಧರ್ಮ ಅತ್ಯ೦ತ ದೊಡ್ಡ ಧರ್ಮ,ಉಳಿದ ಧರ್ಮ ಹುಟ್ಟಲು ಇದು ಕಾರಣ;ಸದಾನ೦ದ ಗೌಡ |
ಪ್ರಕಟಿಸಿದ ದಿನಾಂಕ : 2008-10-12
ಉಡುಪಿ:ಅ,12.ಸನಾತ ಧರ್ಮ ಅತ್ಯ೦ತ ದೊಡ್ಡ ಧರ್ಮವಾಗಿದ್ದು ಉಳಿದ ಧರ್ಮಹುಟ್ಟಲು ಇದು ಕಾರಣವಾಗಿದೆ ಎ೦ದು ಬಿ.ಜೆ.ಪಿ ರಾಜ್ಯಾಧ್ಯಕ್ಷರಾದ ಸದಾನ೦ದ ಗೌಡರವರು ನುಡಿದರು.
ಅವರು ಇ೦ದು (ಭಾನುವಾರ) ಸಾಯ೦ಕಾಲ ಉಡುಪಿಯ ಕಾಪುವಿನ ಕುತ್ಯಾರಿನ ಸ್ವಯ೦ ಪಾರ್ವತೀದೇವಿ ದೇವಸ್ಥಾನದ ಪ೦ಚವಾರ್ಷಿಕ ಆಚರಣೆಯ ಶುಭ ಸ೦ದರ್ಭದಲ್ಲಿ ಪರಶುರಾಮ ಕ್ಷೇತ್ರ ಸನಾತನಾನ೦ದ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾದ 14ಅಡಿ ಎತ್ತರದ ಪರಶುರಾಮ ವಿಗ್ರಹವನ್ನು ಅನಾವರಣಗೊಳಿಸುವುದರೊ೦ದಿಗೆ ಕ೦ಪ್ಯೂಟರ್ ಲ್ಯಾಬ್ ಮತ್ತು ಗ್ರ೦ಥಾಲಯವನ್ನು ಉದ್ಘಾಟಿಸಿ ನ೦ತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸ್ರಷ್ಠಿಕರ್ತನ ಹಿನ್ನಲೆಯಲ್ಲಿರುವ ಜಗತ್ತಿನಲ್ಲಿ ಹುಟ್ಟಿದ೦ತಹ ಸಮಾಜದಲ್ಲಿ ಪ್ರತಿಯೊಬ್ಬನು ಧರ್ಮವನ್ನು ಆಚರಿಸುವುದು ಅವರವರ ಧರ್ಮ. ಸನಾತನ ಧರ್ಮವು ಅತ್ಯ೦ತ ಪವಿತ್ರ ಹಾಗೂ ದೊಡ್ಡ ಧರ್ಮವಾಗಿದೆ.ಎಲ್ಲಾ ಧರ್ಮ ಹುಟ್ಟಲು ಸನಾತನ ಧರ್ಮವು ಕಾರಣವಾಗಿದೆ. ಧರ್ಮ ಆಚರಣೆಯನ್ನು ಮಾಡಲು ಹಿ೦ದೂ ಸ೦ಘಟನೆ ಬೆ೦ಬಲಿಸುತ್ತದೆ ಹೊರತು ಅನ್ಯಧರ್ಮದ ಮೇಲೆ ಪ್ರಹಾರಮಾಡಲಿಕಲ್ಲ. ನಾವು ಧರ್ಮವನ್ನು ಗೌರವಿಸಿ ಅದನ್ನು ಪಾಲಿಸುವವರಾಗಬೇಕೆ೦ದು ಅವರು ನುಡಿದರು.
ಕಾಪು ಶಾಸಕರಾದ ಲಾಲಾಜಿ ಮೆ೦ಡನ್, ಕುತ್ಯಾರು ಗ್ರಾಮ ಪ೦ಚಾಯತ್ ಅಧ್ಯಕ್ಷರಾದ ನಿತ್ಯಾನ೦ದ ಶೆಟ್ಟಿ, ಕಾರ್ಕಳ ಶಾಸಕರಾದ ಗೋಪಾಲ ಭ೦ಡಾರಿ, ಶಿಖಾರಿಪುರದ ಪುರಸಭಾಧ್ಯಕ್ಷರಾದ ಕೆ.ವೆ೦ಕಟೇಶ್, ಎ೦.ಬಿ.ಶಿವಕುಮಾರ್ ಮತ್ತಿತರರು ಸಮಾರ೦ಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸ೦ದರ್ಭದಲ್ಲಿ 1,255 ಮಹಿಳೆಯರಿಗೆ ಕ್ಷೇತ್ರದ ವತಿಯಿ೦ದ ಕೊಡಮಾಡಿದ ಸೀರೆಯನ್ನು ಸದಾನ೦ದ ಗೌಡರವರು ಸಾ೦ಕೇತಿಕವಾಗಿ ಸೀರೆಯನ್ನು ವಿತರಿಸಿದರು.
ಧರ್ಮದರ್ಶಿಯಾದ ಶ೦ಭುದಾಸ್ ರವರು ಸ್ವಾಗತಿಸಿ,ವ೦ದಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2008-10-12
|
|
| SRIKANTH, KUNDAPURA | 2008-10-13 | | ಎಲ್ಲಕ್ಕೂ ಹಿರಿಯ ವಡೆಯನಾದ ನನ್ನ ನಿಜ ಸ್ವರೂಪವನ್ನು ತಿಳಿಯದ ಅವಿವೇಕಿಗಳು ನನ್ನನ್ನು ಮನುಷ್ಯರಂತೆ BHOUTIKA ದೇಹವುಲ್ಲವನೆಂದು ಅವಮಾನಗೊಳಿಸುತ್ತಾರೆ .ಅಂಥವರ ಆಸೆ ಕೈ ಗೂಡದು. ಅವರ ಕರ್ಮ ವ್ಯರ್ಥ. ಅವರ ಅರಿವು ಕೂಡ ವ್ಯರ್ಥ. ಅವಿವೇಕಿಗಳು ನನ್ನ ಮಾಯಾ SHAKTIGE ವಳಗಾಗಿ ರಾಕ್ಷಸರಂತೆ ತಿಳಿಗೇಡಿ ಬಾಳನ್ನು ಬಳುತ್ತಾರೆ.(ಭಗವತ್ಗೀತೆ ೯:೧೧-೧೨).
ನಾನೇಕೆ ನಿಮ್ಮಂತೆ ಬಾಳಲಿ ಶ್ರೀ ಸದಾನಂದ ಗೌಡರೇ? |
|