ಪಟ್ಟಾಭಿಷೇಕದ ಶೈಲಿಯಲ್ಲಿ ಪದಗ್ರಹಣ ಸಮಾರಂಭ ಹಮ್ಮಿಕೊಂಡು ಹೊಸ ಇತಿಹಾಸ ಸೃಷ್ಠಿಸಿದ ಮುಂಬಯಿ ಬಂಟರ ಸಂಘ |
ಪ್ರಕಟಿಸಿದ ದಿನಾಂಕ : 2008-10-12
(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)
ಬಂಟ್ಸ್ ಸಂಘ ಮುಂಬಯಿ ಇದರ ನೂತನ ಆಡಳಿತ ಸಮಿತಿಯ ಪದಗ್ರಹಣದ ಸಮಾರಂಭವು ಇಂದಿಲ್ಲಿ ಶನಿವಾರ ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಿತು.

ಶ್ರೀಕ್ಷೇತ್ರ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಇವರು ಉಪಸ್ಥಿತರಿದ್ದು, ಎಸ್.ಎಂ. ಸಮೂಹ ಉದ್ಯಮ ಸಂಸ್ಥೆಗಳ ಕಾರ್ಯಾಧ್ಯಕ್ಷ ಎಸ್. ಎಂ. ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ನಿಟ್ಟೆ ಎಜ್ಯುಕೇಶನ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಎನ್. ವಿನಯ್ ಹೆಗ್ಡೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಗಣ್ಯರ ಸಮಕ್ಷಮದಲ್ಲಿ ಸಂಘಕ್ಕೆ ಸರ್ವಾನು ಮತದಿಂದ ಆಯ್ಕೆಯಾದ ನೂತನ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧಿಕಾರ ವಹಿಸಿಕೊಂಡರು.

ಗೌರವ ಅತಿಥಿಗಳಾಗಿ ಫೇಡೆರೇಶನ್ ಆಫ್ ವರ್ಲ್ಡ್ ಬಂಟ್ಸ್ ಎಸೋಸಿಯೇಶನ್‌ನ ಕಾರ್ಯಾಧ್ಯಕ್ಷ ಅಜಿತ್‌ಕುಮಾರ್ ರೈ ಮಲಾಡಿ, ಆಲ್‌ಕಾರ್ಗೊ ವೂವರ್‍ಸ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ಶಶಿಕಿರಣ್ ಶೆಟ್ಟಿ, ಮುಂಬಯಿ ಪ್ರದೇಶ ಬಿಜೆಪಿ ಅಧ್ಯಕ್ಷ ಗೋಪಾಲ್ ಸಿ. ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ನಿಕಟಪೂರ್ವ ಅಧ್ಯಕ್ಷ ಡಾ| ಪದ್ಮನಾಭ ವಿ. ಶೆಟ್ಟಿ, ಗೋಲ್ಡ್‌ಪಿಂಚ್ ಹೋಟೆಲ್ ಕಾರ್ಯಾಧ್ಯಕ್ಷ ಪ್ರಕಾಶ್ ಶೆಟ್ಟಿ ಹಾಜರಿದ್ದು ಮೈಸೂರು ಪೇಟ ಧರಿಸಿ, ಶಾಲು ಹೊದಿಸಿ ಐಕಳ ಹರೀಶ್ ಶೆಟ್ಟಿ ಹಾಗೂ ಶ್ರಿಮತಿ ಚಂದ್ರಿಕಾ ಹೆಚ್.ಶೆಟ್ಟಿ ದಂಪತಿಯನ್ನು ಸನ್ಮಾನಿಸಿದರು.

ಈ ಮೊದಲು ಸರ್ವ ಆಡಳಿತ ಸಮಿತಿಯ ಸದಸ್ಯ ರೊಂದಿಗೆ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ಆರತಿಗೈದು ಪೂಜೆಸಲ್ಲಿಸಿ ಸಮಾರಂಭಕ್ಕೆ ಚಾಲನೆಯನ್ನಿಡಿದರು.

ಸಮಾರಂಭದಲ್ಲಿ ವಿಶೇಷ ಆಮಂತ್ರಿತರಾಗಿ ಸಂಘದ ವಿಶ್ವಸ್ಥರುಗಳಾದ ಎಂ. ಡಿ. ಶೆಟ್ಟಿ, ಪದ್ಮನಾಭ ಎಸ್. ಪಯ್ಯಡೆ, ಬಿ. ವಿವೇಕ್ ಶೆಟ್ಟಿ, ಸುಧಾಕರ ಎಸ್. ಹೆಗ್ಡೆ, ಆನಂದ್ ಎಂ. ಶೆಟ್ಟಿ, ರವೀಂದ್ರ ಎಂ. ಅರಸ, ಮಾಜಿ ಅಧ್ಯಕ್ಷರುಗಳಾದ ಹೆಜ್ಮಾಡಿ ವಿಠಲ ಶೆಟ್ಟಿ, ಆರ್. ಸಿ. ಶೆಟ್ಟಿ, ಮೇರ್ಕಳ ತ್ಯಾಂಪಣ್ಣ ಶೆಟ್ಟಿ, ನಿಟ್ಟೆ ಸುಧಾಕರ್ ಶೆಟ್ಟಿ, ಅಧ್ಯಕ್ಷ ಭುಜಂಗ ಎಂ. ಶೆಟ್ಟಿ ಮುಂತಾದ ಹಿರಿಯ ಮುಂದಾಳುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಿಎ| ಶಂಕರ್ ಬಿ. ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ವಿ. ಕೆ. ಶೆಟ್ಟಿ, ಗೌ| ಕೋಶಾಧಿಕಾರಿ ಪ್ರಭಾಕರ್ ಎಲ್. ಶೆಟ್ಟಿ, ಜೊತೆ ಕಾರ್ಯದರ್ಶಿ ಹರೀಶ್ ವಾಸು ಶೆಟ್ಟಿ, ಜೊತೆ ಕೋಶಾಧಿಕಾರಿ ಸಿಎ| ಸತೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಆಶಾ ಮನೋಹರ್ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಗೌತಮ್ ಎಸ್. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಹಾಗೂ ಕ್ರೀಡಾ ಸಮಿತಿ ಹಾಗೂ ಬಾಂದ್ರಾ-ಅಂಧೇರಿ ಪ್ರಾದೇಶಿಕ ವಿಭಾಗದ ಕಾರ್ಯಧ್ಯಕ್ಷ ಮಹೇಶ್ ಶೆಟ್ಟಿ, ಜ್ಞಾನ ಮಂದಿರ (ದೇವಾಲಯ) ಸಮಿತಿಯ ಕಾರ್ಯಧ್ಯಕ್ಷ ಶಿವರಾಮ ಜಿ. ಶೆಟ್ಟಿ, ವೈವಾಹಿಕ ಸಮಿತಿಯ ಕಾರ್ಯಧ್ಯಕ್ಷ ವಿಠಲ್ ಎಸ್. ಆಳ್ವ, ಕಾನೂನು, ಸಂವಿಧಾನ, ಉಪನಿಯಮ ಸಮಿತಿಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ್ ಶೆಟ್ಟಿ ಬಿ., ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ, ಸ್ಥಿರಾಸ್ತಿ ಆಡಳಿತ ಮತ್ತು ಸಭಾಗೃಹ ಸಮಿತಿಯ ಕಾರ್ಯಧ್ಯಕ್ಷ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ಮಾಹಿತಿ ಮತ್ತು ತಂತ್ರಜ್ಞಾನ ಸಮಿತಿಯ ಕಾರ್ಯಧ್ಯಕ್ಷ ಬಿ. ಆರ್. ಶೆಟ್ಟಿ, ಸಂಘದ ಮುಖವಾಣಿ ಬಂಟರವಾಣಿ ಮಾಸಿಕದ ಕಾರ್ಯಧ್ಯಕ್ಷ ವಿಶ್ವನಾಥ್ ಎಸ್. ಹೆಗ್ಡೆ, ಬಂಟ್ಸ್ ಹೆಲ್ತ್ ಸೆಂಟರ್‌ನ ಕಾರ್ಯಧ್ಯಕ್ಷ ಡಾ| ಮನೋಹರ್ ಹೆಗ್ಡೆ, ಸಾಂಸ್ಕೃತಿಕ ಮತ್ತು ಸಾಹಿತ್ಯ ಸಮಿತಿಯ ಕಾರ್ಯಧ್ಯಕ್ಷ ತೋನ್ಸೆ ವಿಜಯ ಕುಮಾರ್ ಶೆಟ್ಟಿ, ಕೇಟರಿಂಗ್ ಮತ್ತು ಡೆಕೋರೇಶನ್ ಸಮಿತಿಯ ಕಾರ್ಯಧ್ಯಕ್ಷ ಯು. ಮೋಹನ್‌ದಾಸ್ ಶೆಟ್ಟಿ, ಸದಸ್ಯತ್ವ ಸಂಗ್ರಹ ಸಮಿತಿಯ ಕಾರ್ಯಧ್ಯಕ್ಷ ಶಾಂತರಾಮ್ ಬಿ. ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.


ವರದಿಯ ವಿವರಗಳು |
 |
ಕೃಪೆ : (ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್) ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-12
|
|
|