ಮನಾಮಾ: ಬಹರೇನಿನಲ್ಲಿ -ಕಿವುಡನ ಕಿತಾಪತಿ- ದೈಜಿ ಜಗತ್ತಿನ ವಾಲ್ಟರ್ ನಂದಳಿಕೆಯವರಿಗೆ ಅಭಿಮಾನದ ಸನ್ಮಾನ |
ಪ್ರಕಟಿಸಿದ ದಿನಾಂಕ : 2008-10-12
(ತುಂಬಾ ಚಿತ್ರಗಳಿವೆ...ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್ )
ಯಶಸ್ವೀ ನಾಟಕ ಪ್ರದರ್ಶನ : ಸ್ಥಳೀಯ ಪ್ರತಿಭೆಗಳಿಗೆ ಮನ್ನಣೆ
ಮನಾಮಾ, ಅಕ್ಟೋಬರ್ 12: ಬೇರೆ ಕೊಲ್ಲಿ ರಾಷ್ಟ್ರಗಳಿಗೆ ತುಲನೆ ಮಾಡಿದರೆ ಬಹರೇನ್ ದ್ವೀಪರಾಷ್ಟ್ರ ಬಹಳ ಚಿಕ್ಕದು. ಆದರೆ ಇಲ್ಲಿ ಜರುಗುವ ಕನ್ನಡಪರ ಚಟುವಟಿಕೆಗಳು, ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಬೇರೆ ರಾಷ್ಟ್ರಗಳು ಸಾಟಿಯಲ್ಲ. ಕನ್ನಡ ಭಾಷೆ, ಸಂಸ್ಕೃತಿ, ಕಲೆಯನ್ನು ಬೆಳೆಸುವಲ್ಲಿ, ಪಸರಿಸುವಲ್ಲಿ ಬಹರೇನ್ ಮುಂಚೂಣಿಯಲ್ಲಿದೆ ಎಂದರೆ ಖಂಡಿತವಾಗಿಯೂ ಉತ್ಪ್ರೇಕ್ಷೆಯಲ್ಲ. ಇದನ್ನು ನಾನು ಈ ದ್ವೀಪಕ್ಕೆ ಭೇಟಿ ನೀಡಿದಾಗೆಲ್ಲಾ ನೋಡಿದ್ದೇನೆ, ಮಾಧ್ಯಮಗಳ ಮೂಲಕ ನೋಡಿ, ಓದಿ ತಿಳಿದಿದ್ದೇನೆ. ನಿಜಕ್ಕೂ ನಿಮ್ಮೆಲ್ಲರ ಸಾಧನೆ ಅಭಿನಂದನಾರ್ಹವಾದುದು. ಈ ನಿಮ್ಮ ಕನ್ನಡ ಚಟುವಟಿಕೆಗಳು ಇದೇ ರೀತಿ ನಿರಂತರವಾಗಿ, ನಿರಾತಂಕವಾಗಿ ಮುಂದುವರಿಯಲಿ ಎಂದು ಜನಪ್ರಿಯ ಅಂತರ್ಜಾಲ ಮಾಧ್ಯಮವಾಗಿರುವ ದೈಜಿವರ್ಲ್ಡ್.ಕಾಂ ತಾಣದ ಪ್ರಧಾನ ಸಂಪಾದಕರಾದ ಶ್ರೀ ವಾಲ್ಟರ್ ನಂದಳಿಕೆಯವರು ತಿಳಿಸಿದರು.

ಅವರು ಕನ್ನಡ ಸಂಘ ಆಯೋಜಿಸಿದ್ದ - ಕಿವುಡನ ಕಿತಾಪತಿ - ಕನ್ನಡ ನಾಟಕ ಪ್ರದರ್ಶನದ ಸಮಾರಂಭದಲ್ಲಿ ತಮಗೆ ಸಂದ ಸನ್ಮಾನಕ್ಕೆ ಕೃತಜ್ಞತೆಗಳನ್ನು ಅರ್ಪಿಸುತ್ತಾ ನುಡಿದರು.
ವೇದಿಕೆಯಲ್ಲಿ ಕರಾವಳಿ ಕೊಂಕಣ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ ರೋನಾಲ್ಡ್ ಡಿಸೋಜಾ, ಉಪಾಧ್ಯಕ್ಷ ರಮೇಶ್ ಮಂಜೇಶ್ವರ ಉಪಸ್ಥಿತರಿ ದ್ದರು. ಬಹರೇನ್ ಕನ್ನಡ ಸಂಘದ ಅಧ್ಯಕ್ಷರಾದ್ ಶ್ರೀ ಆಸ್ಟಿನ್ ಸಂತೋಷ್ ವಾಲ್ಟರ್ ನಂದಳಿಕೆಯವರ ಪರಿಚಯ ನೀಡಿ ಪುಷ್ಪಗುಚ್ಛವನ್ನಿತ್ತು ಸ್ಮರಣಿಕೆ ನೀಡಿ ಸನ್ಮಾನಿಸಿದರು.

- ಕಿವುಡನ ಕಿತಾಪತಿ - ನಾಟಕಕ್ಕೆ ಎಂ. ಸೋಲಾರೆಯವರ ಮೂಲಕಥೆ ಯಿದ್ದು ಸಂಘದ ಪ್ರತಿಭಾವಂತ ನಟ, ನಿರ್ದೇಶಕ ಅನಿಲ್ ಬಾಸಗಿಯವರು ಇದನ್ನು ರಚಿಸಿ ನಿರ್ದೇಶಿಸಿದ್ದಾರೆ. ಅಲ್ಲದೇ ಕಿವುಡನ ಪ್ರಧಾನ ಪಾತ್ರ ದಲ್ಲಿಯೂ ಕಾಣಿಸಿಕೊಂಡು ಅದ್ಭುತ ಅಭಿನಯ ನೀಡಿದ್ದಾರೆ. ನಾಟಕಕ್ಕೆ ಕಿರಣ್ ಉಪಾಧ್ಯಾಯ ಸಂಭಾಷಣೆ ನೀಡಿದ್ದಾರೆ. ಉಳಿದ ಪಾತ್ರವರ್ಗದಲ್ಲಿ ಶ್ರೀಯುತರಾದ ಜಯಪ್ರಕಾಶ್, ದೂಮಣ್ಣ ರೈ, ಕೃಷ್ಣ ಭಟ್, ಎಚ್.ಕೆ. ಪೈ, ಶ್ರೀಪತಿ ಆಚಾರ್ಯ, ಕಿರಣ್ ಉಪಾಧ್ಯ, ಶ್ರೀಮತಿಯರಾದ ವಿಜಯ ಸತ್ಯನಾರಾಯಣ್, ಚೇತನಾ ಹೆಗ್ಡೆ, ಚೈತ್ರಾ ಸತೀಶ್, ಸಂಧ್ಯಾಪೈ ಮೊದಲಾದವರು ಪ್ರಬುದ್ಧ ಅಭಿನಯ ನೀಡಿ ಕಿಕ್ಕಿರಿದು ನೆರೆದ ಪ್ರೇಕ್ಷಕರಿಗೆ ಎರೆಡೂವರೆ ತಾಸು ಮನರಂಜನೆಯೊಂದಿಗೆ ನಗುವಿನ ರಸದೌತಣ ನೀಡುವಲ್ಲಿ ಯಶಸ್ವಿಯಾದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಘದ ಉಪಕಾರ್ಯದರ್ಶಿಗಳಾದ ಜಯಪ್ರಕಾಶ್ ಸಾಲ್ಯಾನ್ ರವರು ಪ್ರಾಸ್ತವಿಕ ಭಾಷಣ ಮಾಡಿ ಸ್ವಾಗತಿಸಿ ದರೆ ಅನಿಲ್ ಬಾಸಗಿಯವರು ಪಾತ್ರಪರಿಚಯ ನೀಡಿದರು.

ನಾಟಕದ ಕೊನೆಯಲ್ಲಿ ಅಧ್ಯಕ್ಷರಾದ ಆಸ್ಟಿನ್ ಸಂತೋಷ್ ರವರು ಎಲ್ಲಾ ಕಲಾವಿದರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್, ಬಹರೇನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-12
|
|
| Ronald D.F.D'Souza, Bondel/Mangalore | 2008-10-13 | | Kannada Sangha Bahrain is doing a marvelous job by promoting Kannada langauge in Bahrain.My sincere wishes to the President and the executive committee. Ronald |
|