ಮೊಗವೀರ್’ಸ್ ಬಹರೇನ್ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟ : ಸುರೇಶ್ ಬೈಕಂಪಾಡಿ ಪಂದ್ಯಶ್ರೇಷ್ಠ |
ಪ್ರಕಟಿಸಿದ ದಿನಾಂಕ : 2008-10-11
{ಚಿತ್ರ, ವರದಿ: ಕಮಲಾಕ್ಷ ಅಮೀನ್}
ಬಹರೇನ್, ಅಕ್ಟೋಬರ್ ೧೧: ಇಲ್ಲಿನ ಅನಿವಾಸಿ ಮೊಗವೀರರ ಸಂಘಟನೆ ಯಾದ ಮೊಗವೀರ್ಸ್ ಬಹರೇನ್ ತನ್ನ ಸಸಸ್ಯರು ಹಾಗೂ ಅವರ ಪರಿವಾರದವರಿಗಾಗಿ ಸ್ತಳೀಯ ಮನಾಮಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ವಿಶಿಷ್ಟ ಅನುಭವ ನೀಡಿತು.
ಅಂತಿಮ ಪಂದ್ಯದಲ್ಲಿ ಶ್ರೀ ಚಂದ್ರಶೇಖರ್ ಶ್ರೀಯಾನ್ ನೇತೃತ್ವದ ತಂಡ ಅರುಣ್ ಕುಮಾರ್ ಅವರ ನೇತೃತ್ವದ ತಂದವನ್ನು ಸೋಲಿಸಿ ಮೊಗವೀರ್ಸ್ ಕಪ್ ಟ್ರ್ಹೋಫಿಯನ್ನು ಗೆದ್ದುಕೊಂಡಿತು.
ನಾಣ್ಯ ಚಿಮ್ಮುವಿಕೆಯನ್ನು ಗೆದ್ದುಕೊಂಡು ಬ್ಯಾಟಿಂಗ್ ಆಯ್ದುಕೊಂಡ ಅರುಣ್ ಕುಮಾರ್ ತಂಡ 15 ಓವರುಗಳಲ್ಲಿ 130 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಲು ಶಕ್ತವಾಯಿತಾದರೂ ಇದಕ್ಕುತ್ತರವಾಗಿ ಅದ್ಭುತ ವಾಗಿ ಆಡಿದ ಚಂದ್ರಶೇಖರ್ ತಂಡಾ ಕೇವಲ ಆರು ವಿಕೆಟ್ಟುಗಳ್ನ್ನು ಕಳೆದುಕೊಂಡು 11 ಓವರುಗಳಲ್ಲಿ ನಿಗದಿತ ರನ್ನುಗಳನ್ನು ಗಳಿಸಿ ಕಪ್ ಗೆದ್ದುಕೊಂಡಿತು.
ಪಂದ್ಯದುದಕ್ಕೂ ಶ್ರೇಷ್ಟ ನಿರ್ವಹಣೆ ತೋರಿದ ಸುರೇಶ್ ಬೈಕಂಪಾಡಿ ಅಂತಿಮ ಪಂದ್ಯದಲ್ಲಿ ಔಟಾಗದೇ 68 ರನ್ನುಗಳನ್ನು ಗಳಿಸಿ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪಾತ್ರರಾದರು.
ಉತ್ತಮ ದಾಂಡಿಗ ವೈಯಕ್ತಿಕ ಪ್ರಶಸ್ತಿಯನ್ನು ಶ್ರೀ ಅರುಣ್ ಕುಮಾರ್ ಕಡೆದರೆ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಸಂದೀಪ್ ಸನಂತಿತ್ಲುರವರು ತಮ್ಮ ಬಗಲಿಗೇರಿಸಿ ಕೊಂಡರು.
ಪಂದ್ಯದ ಪ್ರಾಯೋಜಕತ್ವವನ್ನು ಶ್ರೀಯುತ ಗಿರೀಶ್ ಇಡ್ಕಿ, ಜಗನ್ನಾಥ್ ಕಡಕಾರ್ ಹಾಗೂ ತೀರ್ಥ ಸುವರ್ಣರವರು ವಹಿಸಿಕೊಂಡಿದ್ದರೆ ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗಾಗಿ ಶ್ರೀ ಪದ್ಮನಾಭ ಕಾಂಚನ್ ಹಾಗೂ ಸುನಿಲ್ ಕೋಟ್ಯಾನ್ ಅವರು ಸಹಕರಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮೊಗವೀರ್ಸ್ ಬಹರೇನ್ ಅಧ್ಯಕ್ಷರಾದ ಶ್ರೀ ಗಿರೀಶ್ ಅವರು ಪಂದ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ ಬಗ್ಗೆ ತಮ್ಮ ತೃಪ್ತಿ ವ್ಯಕ್ತಪಡಿಸಿದುದಲ್ಲದೇ ಇಂತಹ ಪಂದ್ಯಾಟಗಳಿಂದ ಸದಸ್ಯರ ನಡುವಣ ಬಾಂಧವ್ಯದ ಬೆಸುಗೆ ಇನ್ನಷ್ಟು ಬಲಗೊಳ್ಳುವುದು ಎಂದು ಅಭಿಪ್ರಾಯಪಟ್ಟರು
ವರದಿಯ ವಿವರಗಳು |
 |
ಕೃಪೆ : ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್. ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-11
|
|
|