ಅಬುಧಾಬಿ: ಕನ್ನಡ ಚಿತ್ರ -ಗುಲಾಬಿ ಟಾಕೀಸ್-14ನೇ ಅಕ್ಟೋಬರ್ ನಂದು ಪ್ರದರ್ಶನ |
ಪ್ರಕಟಿಸಿದ ದಿನಾಂಕ : 2008-10-11
ನಿರ್ದೇಶಕ ಗಿರೀಶ್ ಕಾಸರವಳ್ಳಿ, ಪ್ರಶಸ್ತಿವಿಜೇತ ನಟಿ ಉಮಾಶ್ರೀ ಹಾಗೂ "ಗುಲಾಬಿ ಟಾಕೀಸ್” ಚಿತ್ರದ ಇತರ ಗಣ್ಯರ ಆಗಮನ
ಅಬುಧಾಬಿ, ಅಕ್ಟೋಬರ್ ೧೧: ನಗರದಲ್ಲಿ ಅಕ್ಟೋಬರ್ 10 ರಿಂದ 20 ರ ವರೆಗೆ ನಡೆಯಲಿರುವ ಮಿಡ್ಲ್ ಈಸ್ಟ್ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಉತ್ಸವದಲ್ಲಿ ಕನ್ನಡ ಚಿತ್ರವೊಂದು ಪ್ರದರ್ಶಿತವಾಗಲಿದೆ.
ಭಾರತದಿಂದ ಆಯ್ಕೆಯಾಗಿರುವ ಈ ಚಿತ್ರ ಕನ್ನಡದ್ದಾಗಿರುವುದು ಕನ್ನಡಿಗರಿಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.
ಸಿನಿಮಾ ರಂಗದ ಒಬ್ಬ ಬಹಳ ಖ್ಯಾತಿವಂತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರ ಈಗಾಗಲೇ ಒಶಿಯಾನ್’ಸ್ ಸಿನೆ ಫ್ಯಾನ್ ಫಿಲಂ ಪೆಸ್ಟಿವಲ್ ಆಫ್ ಏಶಿಯನ್ ಸಿನೇಮಾ ಉತ್ಸವದಲ್ಲಿ ಅತ್ಯುತ್ತಮ ನಟಿ (ಉಮಾಶ್ರೀ) ಹಾಗೂ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದೆ.
ಬೆಂಗಳೂರಿನಲ್ಲಿ ಬಿಡುಗಡೆಯಾದ ಬಳಿಕ ವಿಮರ್ಶಕರಿಂದ ಕನ್ನಡ ಸಿನೇಮಾ ಇತಿಹಾಸದಲ್ಲಿಯೇ ವಿಶಿಷ್ಟ ಬಗೆಯಲ್ಲಿ ನಿರ್ಮಾಣವಾಗಿದೆ ಎಂಬ ವಿಮರ್ಶೆಯನ್ನೂ ಪಡೆದಿದೆ.
ಚಿತ್ರದ ಕಥೆ ಕರ್ನಾಟಕದ ಕರಾವಳಿಯ ಬೈಂದೂರು, ಗಂಗೊಳ್ಳಿ ಹಾಗೂ ಮಲ್ಪೆ ಪ್ರದೇಶದಲ್ಲಿ ವಾಸವಾಗಿರುವ ಶ್ರೀಮತಿ ವೈದೇಹಿ ಎಂಬ ಮಹಿಳೆಯ ಸುತ್ತ ಸಾಗುತ್ತದೆ.
ಉಮಾಶ್ರೀಯವರು ಈ ಚಿತ್ರದ ನಾಯಕನಟಿಯಾಗಿ ಅದ್ಭುತ ನಟನೆ ನೀಡಿದ್ದಾರೆ. ಕುಂದಾಪುರ ಕಡೆಯ ಕನ್ನಡ ಭಾಷೆಯಲ್ಲಿ ಸಾಗುವ ಚಿತ್ರ ವಿಶಿಷ್ಟ ಅನುಭವ ನೀಡುತ್ತದೆ.
ಈ ಚಿತ್ರದ ಪ್ರದರ್ಶನ 14 ನೇ ಅಕ್ಟೋಬರ್ ಮಂಗಳವಾರ ಬೆಳಿಗ್ಗೆ 11 ಘಂಟೆಗೆ ನಗರದ ಎಮಿರೇಟ್ಸ್ ಪ್ಯಾಲೇಸ್ ಥಿಯೇಟರ್ ನಲ್ಲಿ ಹಾಗೂ 15 ನೇ ಅಕ್ಟೋಬರ್ ಬುಧವಾರ ಮರೀನಾ ಹಾಲ್ ನಲ್ಲಿ ರುವ ಸಿನೆ ಸ್ಟಾರ್ ಸಿನೇಮಾ-1 ಚಿತ್ರಮಂದಿರದಲ್ಲಿ ರಾತ್ರಿ 9.30 ಕ್ಕೆ ಪ್ರದರ್ಶನ ಆಯೋಜಿತವಾಗಿದೆ.
ಚಿತ್ರದ ಟಿಕೇಟುಗಳು ಆಯಾ ಚಿತ್ರಮಂದಿರಗಳಲ್ಲಿ ಅಥವಾ (www.meiff.com) ಅಂತರ್ಜಾಲ ತಾಣದ ಮೂಲಕ ಅಥವಾ ಉತ್ಸವ ಕಛೇರಿಯ ಬಾಕ್ಸ್ ಆಫೀಸ್ ನಲ್ಲಿ ದೊರೆಯುತ್ತದೆ.
ಪ್ರತಿ ಟಿಕೇಟಿನ ಬೆಲೆ 25/- ದಿರ್ಹಾಂ ನಿಗದಿಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ಚಿತ್ರಪ್ರದರ್ಶನದಲ್ಲಿ ಚಿತ್ರನಟಿ ಉಮಾಶ್ರೀ, ನಿರ್ಮಾಪಕರಾದ ಬಸಂತ್ ಕುಮಾರ್ ದಂಪತಿಗಳು, ಹಾಗೂ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರು ಹಾಜರಿದ್ದು ಗಣ್ಯರೊಂದಿಗೆ ಭೇಟಿಯಾಗುವ ಅವಕಾಶವಿದೆ.
ಓದಿ...ಗಲ್ಫ್ ಕನ್ನಡಿಗದ ವಿಶೇಷ ಸಂದರ್ಶನ
"ನನ್ನ ಕಥಾವಸ್ತುಗಳಿಗೆ ಶ್ರೀಮಂತ ಕನ್ನಡ ಸಾಹಿತ್ಯವೇ ಆಧಾರ"- ಗಿರೀಶ್ ಕಾಸರವಳ್ಳಿ (ಕ್ಲಿಕ್)
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-11
|
|
| Sayeed, Kundapur | 2008-10-11 | | DAYAVITTU CHITHRADA HESARU TILISI. DHANYAVADA..ನಿಮಗೆ ದನ್ಯವಾದಗಳು...ನಿಮ್ಮ ಊರಿನ ವಿಷಯ ಹಾಗು ಅಲ್ಲಿಯೇ ಚಿತ್ರೀಕರಿಸಿದ ಚಿತ್ರ ; ಗುಲಾಬಿ ಟಾಕೀಸ್ |
|