ನಾದವೈಭವಂನ ಭಜನಾ ನಾದಾಭಿಯಾನಕ್ಕೆ ಚಾಲನೆ |
ಪ್ರಕಟಿಸಿದ ದಿನಾಂಕ : 2008-10-10
ಉಡುಪಿ: ಸದಾ ಪ್ರಯೋಗ ನಿರತವಾಗಿರುವ ಉಡುಪಿಯ ಅತ್ಯಂತ ಹಿರಿಯ ಸಂಗೀತ ಸಂಸ್ಥೆ ನಾದವೈಭವಂ ತನ್ನ ವಿನೂತನ ಭಜನಾ ನಾದಾಭಿಯಾನದ ಮೂಲಕ ನಾಡಿನಾದ್ಯಂತ ಸಂಚರಿಸಿ ನಾಡಿನಲ್ಲಿರ ಬಹುದಾದ ವಿಭಜನೆಯ ಅಪಾಯವನ್ನು ತೊಡೆದು ಹಾಕಲಿ ಎಂದು ಉಡುಪಿಯ ಸಾರಿಗೆ ಅಧಿಕಾರಿ ಎಂ.ಪಿ. ಓಂಕಾರೇಶ್ವರಿ ತಿಳಿಸಿದ್ದಾರೆ.
ಕೋಟೇಶ್ವರ ಸಮೀಪದ ಹೊದ್ರಾಳಿಯ ಶ್ರೀ ತ್ರೀಕಣ್ಣೇಶ್ವರಿ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ದೀಪ ಬೆಳಗಿಸಿ, ಹಾಡುವ ಮೂಲಕ ಕಾರ್ಯಕ್ರ ಮವನ್ನು ಉದ್ಘಾಟಿಸಿ, ಭಜನಾ ನಾದಾಭಿಯಾನಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಂದಾರ್ತಿ ಕ್ಷೇತ್ರದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಅಡಿಗ, ಸಂಘಟಕ, ಲೇಖಕ ಪ್ರಕಾಶ್ ಪಡಿಯಾಋ ಮರವಂತೆ ಶುಭಾಶಂಸನೆಗೈದರು. ಕ್ಷೇತ್ರದ ಧರ್ಮದ ಕೆ. ರಾಮದಾಸ ರಾವ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಭಜನಾ ನಾದಾಬಿಯಾನ ಬಳಗದ ಗುರುಗಳಾದ ಉಡುಪ ವಾಸುದೇವ ಭಟ್ ದಂಪತಿಗಳಿಗೆ ಗುರುವಂದನೆ ಸಲ್ಲಿಸಲಾಯಿತು. ರ್ಶರೀತಿಕಣ್ಣೇಶ್ವರಿ ವಾಣಿಯ ಮಾಸಿಕದ ವ್ಯವಸ್ಥಪಕ ಸಂಪಾದಕ ತೇಜೇಶ್ವರ ರಾವ್ ವಂದಿಸಿದರು. ಅಂಶುಮಾಲಿ ಕಾರ್ಯಕ್ರಮ ನಿರೂಪಿಸಿದರು.
ಮೊದಲ ನಾದಾಭಿಯಾನದಲ್ಲಿ ಮೀನ ಲಕ್ಷಣಿ ಅಡ್ಯಂತಾಯ, ಪ್ರಫುಲ್ಲ ಶೆಟ್ಟಿ, ಶೈಲಾ ವಿ. ಶೆಟ್ಟಿ, ಗೀತಾ ಎಸ್. ಹೆಗ್ಡೆ, ಜ್ಯೋತಿ ಅರ್. ಆಚಾರ್ಯ, ಉಮಾ ಎನ್. ಆಚಾರ್ಯ, ಸಂಧ್ಯಾ ವಿ. ಶೆಟ್ಟಿ, ಸಪ್ನಾ ಸುರೇಶ್, ಮಾಲಾ ಎಂ.ಶೆಟ್ಟಿ ಹಾಡಿ ರಂಜಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಗ.ಕ.ಕರಾವಳಿ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-10
|
|
|