ಬಹ್ರೈನ್: ಕೊಲ್ಲಿಯ ಮಂಗ್ಳೂರಿನ ಕೊಂಕಣಿ ಕಂಠಕ್ಕೆ ಕ್ಷಣಗಣನೆ |
ಪ್ರಕಟಿಸಿದ ದಿನಾಂಕ : 2008-10-09
ಬಹ್ರೈನ್: ಅದೊಂದು ಅಪರೂಪದ ಸಂತಸ ಕೂಟ.ಅಲ್ಲಿ ಗಲ್ಫ್ ವಾಯ್ಸ್ ಆಫ್ ಮಂಗಳೂರಿನ ಬಹ್ರೈನ್ ಸ್ಪರ್ಧೆಯ ಅಂತಿಮ ಹಂತದ ಸ್ಪರ್ಧಾ ಕಣದಲ್ಲಿರುವ ಹನ್ನೊಂದು ಸ್ಪರ್ಧಿಗಳಿದ್ದರು, ಅದಾಗಲೆ ಸ್ಪರ್ಧೆಗಂದೇ ಬಹ್ರೈನ್ ದ್ವೀಪ ರಾಷ್ಟ್ರಕ್ಕೆ ಆಗಮಿಸಿರುವ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲರುವ ಕೊಂಕಣಿ ಗಾಯನ್ ಲೋಕದ ಶ್ರೇಷ್ಟರಾದ ಮೆಲ್ವಿನ್ ಪೆರೆಸ್, ವಿಲ್ಫಿ ರೆಮಿಂಬಿಸ್, ಜೋಯಲ್ ಪೆರೆರಾ ಮಾತ್ರವಲ್ಲದೆ ಗಾಯಕಿ ಶ್ರೀಮತಿ ಮೀನ ರೆಬಿಂಬಸ್ ಮುಂತಾವರಿದ್ದರು. ಕರಾವಳಿ ಕೊಂಕಣ್ಸ್ ಅಸೋಸಿಯೆನ್ನಿನ ನೂರಾರು ಸದಸ್ಯರು, ಅವರ ಪರಿವಾರ ಅಲ್ಲಿತ್ತು ಹಾಗು ಕಾರ್ಯಕ್ರಮದ ಪ್ರಾಯೋಜಕರುಗಳಿದ್ದರು.

ಅವರೆಲ್ಲರ ಮುಖದಲ್ಲಿ ಸಂತಸ, ಮುಂದಿನ ಕೆಲವೇ ತಾಸುಗಳಲ್ಲಿ ಜರುಗಲಿರುವ ಅಂತಿಮ ಹಂತದ ಸ್ಪರ್ಧೆಗೆ ತಾವು ಸಾಕ್ಷಿಯಾಗಲಿರುವೆ ಯೆಂಬ ಹರ್ಷ. ಸ್ಪರ್ಧಿಗಳ ಮುಖದಲ್ಲಿ ಾಮ್ತಿಮ ಹಂತದ ಸ್ಪರ್ಧೆಯಲ್ಲಿ ಬಾಗಿಯಾಗುವ ಸಂತೋಷದೊಂದಿಗೆ ಮಂದಿನ ಸ್ಪರ್ಧೆಯಲ್ಲಿ ಏನಾಗುವುದೋ ಎಂಬ ಅಂತಕ ಸ್ವಲ್ಪ ಮಟ್ಟಿಗೆ ಕಂಡುಬರುತ್ತಿದ್ದರೂ ಸ್ಪರ್ಧೆಗೆ ಮುನ್ನವೇ ತೀರ್ಪುಗಾರರನ್ನು ಬೇಟಿಯಾದಂತಹ ನಿರಾಳ ಭಾವ ಕಾಣುತಿತ್ತು.

ಇದು ಇಲ್ಲಿನ ಕರಾವಳಿ ಕೊಂಕಣ್ಸ್ ಅಸೋಸಿಯೇಶನ್ನಿನವರು ಸ್ಥಳೀಯ ಪಾಪಿಲೋನ್ ರೆಸ್ಟೊರೆಂಟಿನ ಸಭಾಂಗಣದಲ್ಲಿ ಗಲ್ಫ್ ವಾಯ್ಸ್ ಆಫ್ ಮಂಗಳೂರು ಗಾಯನ್ ಸ್ಪರ್ಧೆಯ ಪೂರ್ವಭಾಗಿಯಾಗಿ ಏರ್ಪಡಿಸಿದ್ದ ಸಂತಸ ಕೂಟದಲ್ಲಿ ಕಂಡುಬಂದ ದೃಶ್ಯ.

ಕುವೈಟ್ ಯೂತ್ ರಿಕ್ರಿಯೇಶನ್ನಿನವರು ಪ್ರತಿಭಾ ಶೋಧದ ಅಂಗವಾಗಿ ಕೊಲ್ಲಿಯಾದ್ಯಂತ ಆಯೋಜಿಸಿದ್ದ ವಾಯ್ಸ್ ಆಫ್ ಇಂಡಿಯಾದಂತಹದ್ದೇ ಈ ಸ್ಪರ್ಧೆಯನ್ನು ಬಹರೇನಿನಲ್ಲಿ ಕರಾವಳಿ ಕೊಂಕಣ್ಸ್ ಅಸೋಸಿಯೇಶನ್ ಸಂಘಟನೆ ಏರ್ಪಡಿಸಿದ್ದು ಇದೇ ಬರುವ ಅಕ್ಟೋಬರ್ 9 ರ ಗುರುವಾರ ರಾತ್ರಿ ಎಂಟು ಘಂಟೆಗೆ ಸ್ಥಳೀಯ ರಮಾದಾ ಪ್ಯಲೇಸ್ ಹೋಟೆಲಿನಲ್ಲಿ ಜರುಗಲಿದೆ.

ಇಂದಿನ ಸ್ಪರ್ಧೆಗೆ ಈಗಾಗ್ಲೇ ಕ್ಷಣಗಣನೆ ಪ್ರಾರಂಭವಾಗಿದೆ.
ನೆರೆದವರನ್ನುದ್ದೇಶಿಸಿ ಸಂತಸ ಕೂಟದಲ್ಲಿ ಮಾತನಾಡಿದ ಕರಾವಳಿ ಕೊಂಕಣ್ಸ್ ಸಂಘದ ಅಧ್ಯಕ್ಷರಾದ ರೋನಾಲ್ಡ್ ಡಿಸೋಜಾರವರು ಈ ಕಾರ್ಯಕ್ರಮಕ್ಕೆ ಸಿಕ್ಕ ಪ್ರೋತ್ಸಾಹ ನಿರೀಕ್ಷೆಗೂ ಮೀರಿದ್ದು ತಮಗೆ ಅತೀವ ಸಂತೋಷ ತಂದಿದೆ ಹಾಗೂ ಗುರುವಾರ ಜರುಗಲಿರುವ ಸಂಭಾವ್ಯ ಕಾರ್ಯಕ್ರಮ ಬಹರೇನಿನ ಕೊಂಕಣಿ ಕಲಾಪ್ರೇಮಿಗಳಿಗೆ ಒಂದು ಸ್ಮರಣೀಯ ಕಾರ್ಯಕ್ರಮವಾಗಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ನಾಡಿನದ್ಯಂತ ಬಂದಂತಹ ಸಂಗೀತ ಸಾಧಕರಿಗೆ ಅವರು ಸ್ವಾಗತ ಕೋರಿದರು. ಈ ಕಾರ್ಯಕ್ರಮದಲ್ಲಿ ನಾಡಿನಿಂದ ಆಗಮಿಸಿರುವ ಹಲವು ಖ್ಯಾತ ಗಾಯಕರೂ ತಮ್ಮ ಅನುದಾನ ನೀಡಲಿದ್ದಾರೆ. ಕಾರ್ಯಕ್ರಮದ ಪ್ರವೇಶದರ ತಲಾ ಒಂದು ಬಹರೇನ್ ದಿನಾರ್ ನಿಗದಿಪಡಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ಕರಾವಳಿ ಕೊಂಕಣ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ ರೋನಾಲ್ಡ್ ಡಿಸೋಜಾರವರನ್ನು ದೂರವಾಣಿ: ೦೦೯೭೩-೩೯೨೭೮೬೦೭ ಮೂಲಕ ಸಂಪರ್ಕಿಸಬಹುದಾಗಿದೆ.
ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್.
ವರದಿಯ ವಿವರಗಳು |
 |
ಕೃಪೆ : ಚಿತ್ರ ವರದಿ ಕಮಲಾಕ್ಷ ಅಮಿನ್ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-09
|
|
|