ಮೂವರು ಗಣ್ಯರಿಗೆ ರಾಜ್ಯ ಮಟ್ಟದ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2008-10-09
ಮೂವರು ಗಣ್ಯರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೃತ್ಯ, ಸಾಹಿತ್ಯ, ಸಂಗೀತ ಕ್ಷೇತ್ರ ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೂವರು ಗಣ್ಯರನ್ನು 2007 ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಸರ್ಕಾರ ಆಯ್ಕೆ ಮಾಡಿದೆ.
ಬೆಂಗಳೂರು: ನೃತ್ಯ ಕ್ಷೇತ್ರದಲ್ಲಿ ಕೊಡಮಾಡುವ ‘ಶಾಂತಲಾ ನಾಟ್ಯ ಪ್ರಶಸ್ತಿ’ಗೆ ಬೆಂಗಳೂರಿನ ಟಿ.ಎಸ್.ಭಟ್, ಸಾಹಿತ್ಯ ಕ್ಷೇತ್ರದಲ್ಲಿ ನೀಡಲಾಗುವ ‘ದಾನಚಿಂತಾಮಣಿ’ ಪ್ರಶಸ್ತಿಗೆ ವಿಜಾಪುರದ ಶಶಿಕಲಾ ವೀರಯ್ಯಸ್ವಾಮಿ ಹಾಗೂ ಸಂಗೀತ ಕ್ಷೇತ್ರದಲ್ಲಿನ ‘ಕನಕಪುರಂದರ ಪ್ರಶಸ್ತಿ’ಗೆ ಧಾರವಾಡದ ಪಂಡಿತ್ ಚಂದ್ರಶೇಖರ ಪುರಾಣಿಕ ಮಠ ಅವರನ್ನು ಆಯ್ಕೆ ಮಾಡಲಾಗಿದೆ.
ಬರುವ ನವೆಂಬರ್ ತಿಂಗಳ್ಲಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಂದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕ ನೀಡಿ ಗಣ್ಯರನ್ನು ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಭರತ ನಾಟ್ಯ, ಕಥಕ್, ಕಥಕ್ಕಳಿಯಲ್ಲಿ ಪ್ರವೀಣರಾಗಿರುವ ಟಿ.ಎಸ್. ಭಟ್ ಅವರು 1957 ರಲ್ಲಿಯೇ ನೃತ್ಯ ಶಾಲೆಯನ್ನು ಪ್ರಾರಂಭಿಸಿ ಅಪಾರ ಶಿಷ್ಯವೃಂದವನ್ನು ಹೊಂದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ವೈಚಾರಿಕ ಬರಹಗಳ ಮೂಲಕ ಜನಪ್ರಿಯತೆ ಗಳಿಸಿದವರು ಶಶಿಕಲಾ ವೀರಯ್ಯ ಸ್ವಾಮಿ.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವಾರ್ತೆ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-09
|
|
|