ಅಜ್ಮಾನ್: ಗಲ್ಫ್ ಮೆಡಿಕಲ್ ಕಾಲೇಜಿಗೆ ಮಲೇಶಿಯಾ ಪ್ರಧಾನ ಮಂತ್ರಿಗಳ ಭೇಟಿ |
ಪ್ರಕಟಿಸಿದ ದಿನಾಂಕ : 2008-10-09
ಅಧ್ಯಕ್ಷ ತುಂಬೆ ಮೊಹಿಯುದ್ದೀನ್ ಅವರಿಂದ ಅತಿಥಿಗಳ ಸತ್ಕಾರ : ವಿದ್ಯಾಲಯದ ನಿರ್ವಹಣೆಗೆ ಶ್ಲಾಘನೆ
ಅಜ್ಮಾನ್, ಅಕ್ಟೋಬರ್ 9: ಮಲೇಶಿಯಾದ ಜೋಹರ್ ವಲಯದ ಪ್ರಧಾನ ಮಂತ್ರಿಗಳಾದ ಹೆ.ಇ. ಯಬ್ ದಾತೋ ಅಬ್ದುಲ್ ಘನಿ ಉಸ್ಮಾನ್ ಹಾಗೂ ಅವರ ಬಳಗದ ಒಟ್ಟು ಎಂಟು ಸಚಿವರು ನಗರದ ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯಕ್ಕೆ ಅಕ್ಟೋಬರ್ 7 ರಂದು ಸೌಹಾರ್ದ ಭೇಟಿ ನೀಡಿದರು.
ಜಿ.ಎಮ್.ಸಿ. ಅಧ್ಯಕ್ಷರಾದ ತುಂಬೆ ಮೊಹಿಯುದ್ದೀನ್ ಅವರು ಅತಿಥಿಗಳನ್ನು ಸ್ವಾಗತಿಸಿ ವಿಶ್ವವಿದ್ಯಾಲಯ ಹಾಗೂ ವೈದ್ಯಕೀಯ ಕಾಲೇಜಿನ ಅವರಣ ಹಾಗೂ ವಿಭಾಗಗಳನ್ನು ಪರಿಚಯಿಸಿದರು.
ಜಿ.ಎಮ್.ಸಿ. ಯ ವಿಭಾಗಗಳನ್ನು ಪರಿವೀಕ್ಷಿಸಿದ ಅತಿಥಿಗಳು ಕಾಲೇಜು ಹಾಗೂ ವಿಶ್ವವಿದ್ಯಾಲಯದ ನಿರ್ವಹಣೆಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವದ ಶ್ರೇಷ್ಟ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಜಿ.ಎಮ್.ಸಿ. ಕಾಲೇಜು ಮುಂಚೂಣಿಯಲ್ಲಿದ್ದು ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸಲಿ ಎಂದು ಪ್ರಧಾನಮಂತ್ರಿಗಳು ಹಾರೈಸಿದರು.
ಅತಿಥಿಗಳಿಗೆ ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದ ಅಧ್ಯಕ್ಷರು ಸ್ಮರಣಿಕೆಗಳನ್ನು ನೀಡಿ ಸತ್ಕರಿಸಿದರು.
ಪ್ರಸ್ತುತ ಹಲವು ವೈದ್ಯಕೀಯ ವಿಭಾಗಗಳಲ್ಲಿ ನೋಂದಾವಣೆ ಜಾರಿಯಲ್ಲಿದ್ದು ಹೆಚ್ಚಿನ ವಿವರಗಳಿಗೆ www.gmu.ac.ae ತಾಣವನ್ನು ಸಂದರ್ಶಿಸ ಬಹುದಾಗಿದೆ.
ವರದಿಯ ವಿವರಗಳು |
 |
ಕೃಪೆ : ಗಲ್ಪ್ ಮೆಡಿಕಲ್ ಕಾಲೇಜ್ ಪ್ರಕಟಣೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-09
|
|
|