ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಜೆದ್ದಾ: ಈದ್ ಮಿಲನ್ ಆಚರಿಸಿದ ಭಟ್ಕಳದ ಜೆದ್ದಾ ಅಸೋಸಿಯೇಶನ್

ಇಸ್ಲಾಂ ಪ್ರವಚನಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಬೇಕು - ಮೌಲಾನಾ ಇಕ್ಬಾಲ್ ನಕ್ವಿ

ಜೆದ್ದಾ, ಅಕ್ಟೋಬರ್ 9: ಕಳೆದ ಅಕ್ಟೋಬರ್ ಆರನೆಯ ತಾರೀಖಿನಂದು ನಗರದ ರಮಾದಾ ಇಂಟರ್ ಕಾಂಟಿನೆಂಟಲ್ ಹೋಟೆಲಿನ ಸಭಾಂಗಣದಲ್ಲಿ ಜೆದ್ದಾ ಭಟ್ಕಳದ ನವಾಯತರ ಸಮುದಾಯ ಈದ್ ಮಿಲನ್ ಕಾರ್ಯಕ್ರಮ ವನ್ನು ಹಮ್ಮಿಕೊಂಡಿತ್ತು.  ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಕ್ನುದ್ದೀನ್ ಜಾಹಿದ್ ಅವರು ವಹಿಸಿದ್ದರು.  ಸೌದಿ ಅರೇಬಿಯಾಕ್ಕೆ ಉಮ್ರಾ ನಿರ್ವಹಿಸಲು ಆಗಮಿಸಿರುವ ಖ್ಯಾತ ಇಸ್ಲಾಮಿಕ್ ವಿದ್ವಾಂಸರಾದ ಮೌಲಾನ ಮುಲ್ಲಾ ಇಕ್ಬಾಲ್ ನಕ್ವಿಯವರು ವಿಶೇಶ ಅತಿಥಿಗಳಾಗಿ ಆಮಂತ್ರಿಸಲ್ಪಟ್ಟಿದ್ದರು.  ಇನ್ನೋರ್ವ ವಿದ್ವಾಂಸರಾದ ಮೌಲಾನಾ ಅನ್ಸಾರ್ ಖತೀಬ್ ನದ್ವಿಯವರೂ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಮೌಲಾನಾ ಮೊಹಮ್ಮದ್ ಇಝ್ಹಾರ್ ರುಕ್ನುದ್ದೀನ್ ಅವರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮವ್ ಪ್ರಾರಂಭವಾಯಿತು. ಜೆದ್ದಾ ಅಸೋಸಿಯೇಶನ್ ಸಂಘಟನೆಯ ಕಾರ್ಯದರ್ಶಿಗಳಾದ ಮೊಹಮ್ಮದ್ ಮುಕೀಮ್ ಹಲ್ಲಾರಿಯವರು ಕಾರ್ಯಕ್ರಮಕ್ಕೆ ಅತಿಥಿಗಳನ್ನು ಅಹ್ವಾನಿಸಿ ದರು. ಆ ಬಳಿಕ ಉಸಾಮಾ ಫಜ್ಲುರ್ ರಹಮಾನ್ ಅವರು ಹಲವು ನಾಅತ್ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನಗೆದ್ದರು.  ಸಂಘಟನೆಯ ನಿಕಟಪೂರ್ವ ಅಧ್ಯಕ್ಷರಾದ ಇಶಾಖ್ ಶಾಬಂದರಿಯವರೂ ಉಪಸ್ಥಿತರಿದ್ದು ಹಬ್ಬದ ಸಂತೋಷವನ್ನು ತಮ್ಮ ಮಾತುಗಳಲ್ಲಿ ವರ್ಣಿಸಿದರು.

ಆ ಬಳಿಕ ಮಾತನಾಡಿದ ಅತಿಥಿಗಳಾದ ಮೌಲಾನಾ ಇಕ್ಬಾಲ್ ನಕ್ವಿ ಯವರು ಇಸ್ಲಾಮ್ ಪ್ರವಚನಗಳು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಬೇಕು, ಇಸ್ಲಾಮಿನ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳದೇ ಕೇವಲ ಪಠಣ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ತಿಳಿಸಿದರು.

ಅವರ ಮಾತುಗಳಿಗೆ ತಮ್ಮ ಸಮರ್ಥನೆ ನೀಡುತ್ತಾ ಮೌಲಾನಾ ಅನ್ಸಾರ್ ಖತೀಬ್ ನಕ್ವಿಯವರು ಭಟ್ಕಳದ ಜಾಮಿಯಾ ಇಸ್ಲಾಮಿಯಾ ಸಂಘಟನೆಗೆ ಎಲ್ಲರನ್ನೂ ಆಹ್ವಾನಿಸಿದರು. 

ಆ ಬಳಿಕ ಹಲವು ಮನರಂಜನಾ ಹಾಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಕೋಟೇಶ್ವರ್ ಶೋಯೆಬ್ ಅವರು ಲವಲವಿಕೆಯಿಂದ ನಡೆಸಿಕೊಟ್ಟರು. ಹಲವು ಅದೃಷ್ಟಶಾಲಿಗಳು ಬಹುಮಾನಗಳನ್ನು ಗೆದ್ದರು.  ಮಹಿಳೆಯರಿಗಾಗಿ ಇಷಾಖ್ ಶಾಬಂದರಿಯವರ ಪುತ್ರಿ ಇಸ್ರಾ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಮಹಿಳೆಯರ ಮನಗೆದ್ದಿತು.  ರಾಫೆಲ್ ಡ್ರಾ ಮೂಲಕ ಹಲವು ಬಹುಮಾನಗಳನ್ನು ವಿತರಿಸಲಾಯಿತು.  ರಾಫೆಲ್ ಡ್ರಾ ಬಹುಮಾನಗಳನ್ನು ಯಾಸೀನ್ ಅಸ್ಕರಿಯವರು ಆಯೋಜಿಸಿದ್ದರು.

ಸ್ವಾದಿಷ್ಟ ಭೋಜನದೊಂದಿಗೆ ಕಾರ್ಯಕ್ರಮ ಸುಖಾಂತ್ಯ ಕಂಡಿತು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಭಟ್ಕಲೀಸ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-09


ಪ್ರತಿಸ್ಪಂದನ
Vikram Bhat, Dubai
2008-11-10
ನಿಮ್ಮ ಸಲಹೆಗೆ ದನ್ಯವಾದಗಳು - ಸಂಪಾದಕ
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

»ಸೌದಿ ಅರೇಬಿಯಾ: ಬಾಂಗ್ಲಾದೇಶದಿಂದ ಕಾರ್ಮಿಕರ ನೇಮಕಕ್ಕೆ ಕೊನೆ : ಕೃಷಿ ಮತ್ತು ಗೃಹ ವಿಭಾಗಳಿಗೆ ಅನ್ವಯ
»ಕನ್ನಡಿಗ ಹೆಲ್ಪ್‌ಲೈನ್ ಕಮಿಟಿ ಸಮಿತಿ ಆಯ್ಕೆ
»ರಿಯಾದ್‌ನಲ್ಲಿ ಮಹಿಳೆಯರಿಗಾಗಿಯೇ ಹೋಟೆಲ್
»ಮಂಗಳೂರು-ಸೌದಿ ವಿಮಾನ: ಜನಾರ್ದನ ಪೂಜಾರಿ ಆಗ್ರಹ
»ರಿಯಾದ್: ಇದೀಗ ಸೌದಿ ಅರೇಬಿಯಾಕ್ಕೂ ಬಜೆಟ್ ಏರ್ ಲೈನ್ಸ್ : ವರ್ಷಾಂತ್ಯದಲ್ಲಿ 12 ನಗರಗಳಿಗೆ ಸಂಪರ್ಕ
»ಸೌದಿ ಅರೇಬಿಯಾ: ರಿಯದ್ ಮಾರುಕಟ್ಟೆ ಮಳಿಗೆಯೊಂದರಲ್ಲಿ ಬೆಂಕಿ : ೨೦ ಅಂಗಡಿಗಳು ಭಸ್ಮ
»ಜೆದ್ದಾ: ಅನಿವಾಸಿ ಭಾರತೀಯ ಹಾಗೂ ಭಾರತೀಯ ಮೂಲದ ವಿದೇಶೀಯರ ಮಕ್ಕಳಿಗೆ ವಿದ್ಯಾರ್ಥಿವೇತನ
»ರಿಯಾದ್: ಪುತ್ತೂರು ನಿವಾಸಿ ರವಿರಾಜ್ ಸಾವು
»ಸೌದಿ ಅರೇಬಿಯಾ: ಮನೆಗೆ ಹಿಂತಿರುಗಲು ವಿವಸ್ತ್ರಳಾದ ಆಸ್ಪತ್ರೆ ಪರಿಚಾರಿಕೆ
»ಸೌದಿ ಅರೇಬಿಯಾ: ಹೆಣ್ಣುಮಕ್ಕಳನ್ನು ಚುಡಾಯಿಸುತ್ತಿದ್ದ 57 ಪಡ್ಡೆ ಹುಡುಗರ ಬಂಧನ
»ಮಹಿಳೆಯರು ವಾಹನ ಚಲಾಯಿಸುವುದು ಇಸ್ಲಾಂ ಧರ್ಮಾನುಸಾರ ನಿಷಿದ್ಧವಲ್ಲ: ಇಸ್ಲಾಂ ಪಂಡಿತರ ಅಭಿಪ್ರಾಯ
»ಮಕ್ಕಾ ಮದೀನಾ ನಗರಗಳ ನಡುವೆ ರೈಲು ಮಾರ್ಗಕ್ಕೆ ಹಸಿರು ನಿಶಾನೆ
»ಅನಿವಾಸಿಗಳ ನಿವಾಸಾವಧಿಗೆ ಮಿತಿ : ಸೌದಿ ಅರೇಬಿಯಾ ಸಮರ್ಥನೆ
»ಡಾಲರ್ ಮೇಲಿನ ಅವಲಂಭನೆ ತೆಗೆಯುವ ಉದ್ದೇಶ ಇಲ್ಲ : ಸೌದಿ ಅರೇಬಿಯಾ ಸ್ಪಷ್ಟನೆ
»ಸೌದಿಯಲ್ಲಿ ಭಾರತೀಯನಿಗೆ ಮರಣ ದಂಡನೆ
»ಸೌದಿ ಅರೆಬಿಯಾದಲ್ಲಿ ವಾಹನಗಳ ಢಿಕ್ಕಿ: ಉಚ್ಚಿಲ ನಿವಾಸಿ ಸಮೇತ ೧೨ ಮಂದಿ ಸಾವು
»ಮದೀನದಲ್ಲಿ ಅಪಘಾತ: ಮಂಗಳೂರಿನ ದಂಪತಿ ಬಲಿ
»ಸೌದಿ ಅರೇಬಿಯಾದ ಹೆಪ್ಪುಗಟ್ಟಿಸುವ ಚಳಿಯಲ್ಲಿ ಶಾಲಾ ಮಕ್ಕಳ ಸಹಿತ ೧೨ ಜನರ ಸಾವು
»ಅಮೇರಿಕಾ ಅಧ್ಯಕ್ಷರಿಗೆ ಸೌದಿ ಅರೇಬಿಯಾದಲ್ಲಿ ಅದ್ದೂರಿ ಸ್ವಾಗತ
»ಮಕ್ಕದಲ್ಲಿ ನಿಧಾನಕ್ಕೆ ಮರುಕಳಿಸುತ್ತಿರುವ ಸಿಗರೇಟ್
»ಆಹಾರ ವಸ್ತುಗಳ ಬೆಲೆಗಳಲ್ಲಿ ೩೦% ಏರಿಕೆ
»ಹಜ್ ಯಾತ್ರಿಗಳ ಧಾರ್ಮಿಕ ಭಾವನೆಯನ್ನು ಹಣಕ್ಕೆ ಪರಿವರ್ತಿಸುವ ಖದೀಮರು ಮಕ್ಕಾದಲ್ಲಿ
»ಹಜ್ ಮಹಾಸಮ್ಮೇಳನದ ಅವಧಿಯಲ್ಲಿ ೨೨೭ ಭಾರತೀಯರ ಸಾವು
»ಹೊಸ ಸಾರಿಗೆ ವ್ಯವಸ್ಥೆ ಕಾನೂನುಗಳಿಗೆ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹ
»ಶ್ರೀಲಂಕಾ ಮೂಲದ ಗೃಹ ಪರಿಚಾರಿಕೆಯರ ಮೂಲವೇತನದಲ್ಲಿ ೯೦% ಭಡ್ತಿ: ನಾಳೆಯಿಂದ ಜಾರಿ
»ಹಜ್ ಯಾತ್ರಿಕರ ಮೇಲೆ ಧಾಳಿ ನಡೆಸುವ ಸನ್ನಾಹ: ಏಳು ಭಯೋತ್ಪಾದಕರ ಬಂಧನ
»ಮೀನಾದಲ್ಲಿ ಮಾನವತೆಯ ಸಮುದ್ರ
»ಇಂದು ಪವಿತ್ರ ಹಜ್
»ರಸ್ತೆ ಅಪಘಾತದಲ್ಲಿ ಐವರು ಭಾರತೀಯರ ದುರ್ಮರಣ
»ಸೌದಿ ರಿಯಾಲ್ ಮೌಲ್ಯೀಕರಣ ಇಲ್ಲ: ಸೌದಿ ಅರೇಬಿಯಾ ಸ್ಪಷ್ಟನೆ
»ಈದ್ ಉಲ್ ಅಧಾ ಹಬ್ಬದ ಮೊದಲ ದಿನ ಡಿಸೆಂಬರ್ ೧೯ರಂದು
»ಸೌದಿ ಅರೇಬಿಯಾದ ಭಾರತೀಯರೊಬ್ಬರ ಮನೆಯಲ್ಲಿ ದರೋಡೆ
»ಸೌದಿ ಅರೇಬಿಯಾ ಸರ್ಕಾರದಿಂದ ಅಕ್ಕಿ ಹಾಗೂ ಮಕ್ಕಳ ಹಾಲಿಗೆ ಸಬ್ಸಿಡಿ.
»ಜಮ್ರಾತ್ ಸೇತುವೆ, ಮೂರನೆಯ ಹಂತ ಮುಕ್ತಾಯದ ಹಂತದಲ್ಲಿ
» ಸರ್ಕಾರಿ ನೌಕರರಿಗೆ ವೇತನದಲ್ಲಿ ೩೦% ಏರಿಕೆ
»ಮಕ್ಕಾದ ಬಳಿ ತಪಾಸಣಾ ಕೇಂದ್ರದ ಮೇಲೆ ಧಾಳಿ.
»ನಿಮ್ಮ ನೌಕರರೊಂದಿಗೆ ದಯಾಪರರಾಗಿರಿ: ಮುಫ್ತಿ ಕರೆ.
»ಸೌದಿ ಅರೇಬಿಯಾದ ಪ್ರಥಮ ಮಹಿಳಾ ಲಾಂಡ್ರಿಯಲ್ಲಿ ಕಾರ್ಯ ನಿರ್ವಹಿಸಲಿರುವ ಐವತ್ತು ಮಹಿಳೆಯರು.
»ಜೆದ್ದ ಸುರಕ್ಷಾ ಸಿಬ್ಬಂದಿಯಿಂದ ಭಯೋತ್ಪಾದನಾ ಸಂಚು ಬಯಲು
»ಈ ಬಾರಿಯ ಹಜ್ ಯಾತ್ರೆಯಲ್ಲಿ ಪಂಚತಾರಾ ಡೇರೆಗಳಿರದು -ಹಜ್ ಸಚಿವಾಲಯ.
»ಹಜ್ ಯಾತ್ರೆಗೆ ಸಕಲ ಸಿದ್ಧತೆಗಳನ್ನು ಪೂರೈಸಿದ ಸೌದಿ ಹಜ್ ಪ್ರಾಧಿಕಾರ
»ಸೌದಿ ಅರೇಬಿಯಾದಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆ
»ರಿಯಾದ್: ಹಕ್ಕಿ ಜ್ವರ - ೨೧ ಮಂದಿಗೆ ವೈದ್ಯಕೀಯ ತಪಾಸಣೆ
»ಸೌದಿ ಅರೆಬಿಯಾ: 6 ಭಾರತೀಯರು ಸೇರಿ 28 ಸಾವು
»ಕಳೆದ ಏಳು ವರ್ಷಗಳಲ್ಲಿ ಇಂದು ಏರಿದ ಹಣದುಬ್ಬರದ ದಾಖಲೆ ಗರಿಷ್ಟ ೪.೪ ಶೇಖಡಾ
»ಸೇತುವೆಗಳ ಕೆಳಕ್ಕೆ ಹಾಗೂ ಹಾದಿಬದಿಯಲ್ಲಿ ಜೀವನ-ಸೌದಿ ಅರೇಬಿಯಾದಲ್ಲಿ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri