ಕುವೈಟ್: ಅನಧಿಕೃತ ಅನಿವಾಸಿಗಳಿಗೆ ಸ್ವದೇಶಕ್ಕೆ ಮರಳಲು ಆಗ್ರಹ |
ಪ್ರಕಟಿಸಿದ ದಿನಾಂಕ : 2008-10-08
ಕ್ಷಮಾದಾನದ ಅವಧಿಯ ಸದುಪಯೋಗ ಪಡಿಸಿಕೊಳ್ಳಲು ಕರೆ
ಕುವೈಟ್, ಅಕ್ಟೋಬರ್ 8: ರಾಷ್ಟ್ರದಲ್ಲಿರುವ ಅನಧಿಕೃತ ಅನಿವಾಸಿಗಳಿಗೆ ಸ್ವದೇಶಗಳಿಗೆ ಮರಳಲು ಅಕ್ಟೋಬರ್ 15 ರ ವರೆಗೆ ಗಡುವನ್ನು ನೀಡಲಾಗಿದ್ದು ಈ ಅವಧಿಯೊಳಕ್ಕೆ ಕುವೈಟಿನಿಂದ ತಮ್ಮ ಸ್ವದೇಶಗಳಿಗೆ ಮರಳುವಂತೆ ಇಮ್ಮಿಗ್ರೇಶನ್ ವಿಭಾಗದ ಉಪನಿರ್ವಾಹಕರಾದ ಕರ್ನಲ್ ಖಾಲಿದ್ ಅಲ್ ಕಂದಾರಿಯವರು ಆಗ್ರಹಪಡಿಸಿದ್ದಾರೆ. ಕುವೈಟ್ ಅಮೀರ್ ಅವರು ನೀಡಿರುವ ಈ ಕ್ಷಮಾದಾನದ ಗಡುವು ಅಕ್ಟೋಬರ್ 15ಕ್ಕೆ ಮುಗಿಯಲಿದ್ದು ಆ ಬಳಿಕ ಯಾರಿಗೂ ಕೃಪೆ ತೋರಿಸಲಾಗುವುದಿಲ್ಲ ಹಾಗೂ ಅವರ ಮೇಲೆ ಉಗ್ರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಲ್ ಕಂದಾರಿಯವರು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಹಲವಾರು ಅನಧಿಕೃತ ಅನಿವಾಸಿಗಳು ತಮ್ಮ ವಾಸ್ತವ್ಯವನ್ನು ಅಧಿಕೃತವಾಗಿಸಿದ್ದು ಇನ್ನೂ ಸಾವಿರಾರು ಜನರು ಅನಧಿಕೃತವಾಗಿಯೇ ಉಳಿದಿದ್ದಾರೆ. ಅನಧಿಕೃತ ಅನಿವಾಸಿಗಳನ್ನು ಕೆಲಸಕ್ಕೆ ತೆಗೆದುಕೊಂಡವರಿಗೆ ವೀಸಾ ನೀಡಲಾಗುವುದಿಲ್ಲ ಹಾಗೂ ಇವರಿಗೆ ಕೆಲಸ ಕೊಡಿಸಿದ ಸಂಸ್ಥೆಯ ಲೈಸನ್ಸ್ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕರ್ನಲ್ ಕಂದಾರಿ ಸ್ಪಷ್ಟಪಡಿಸಿದ್ದಾರೆ.
ಕುವೈಟಿನಲ್ಲಿ ಹಲವಾರು ಕಾರಣಗಳಿಂದ ತಮ್ಮ ಮಾಲಿಕರನ್ನು ತ್ಯಜಿಸಿ ಅನಧಿಕೃತ ಜೀವನ ನಡೆಸುವವರು ಇನ್ನೂ ಸಾವಿರಾರು ಜನರಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕುವೈಟ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-08
|
|
|