ಭಗ್ನ ಕನಸು.. ಹಣಕಾಸಿನ ಬಿಕ್ಕಟ್ಟು: ಅಮೆರಿಕದಲ್ಲಿ ಭಾರತೀಯ ಕುಟುಂಬ ಆತ್ಮಹತ್ಯೆ |
ಪ್ರಕಟಿಸಿದ ದಿನಾಂಕ : 2008-10-08
ವಾಷಿಂಗ್ಟನ್: ವಿಶ್ವದ ಹಿರಿಯಣ್ಣ ಎಂದು ಬೀಗುತ್ತಿರುವ ಅಮೆರಿಕ ಈಗ ಹಣಕಾಸಿನ ವಿಷಯದಲ್ಲಿ ವಿಶ್ವದ ಕಿರಿಯಣ್ಣನಾಗಿದ್ದಾನೆ. ಅಷ್ಟರಮಟ್ಟಿಗೆ ಅಮೆರಿಕದಲ್ಲಿ ಹಣಕಾಸಿನ ಬಿಕ್ಕಟ್ಟು ಉದ್ಭವಿಸಿದೆ.
ಇದಕ್ಕೆ ಪೂರಕವೆಂಬಂತೆ ಹಣಕಾಸಿನ ತೊಂದರೆಯನ್ನು ಎದುರಿಸುತ್ತಿದ್ದ ಭಾರತೀಯ ಕುಟುಂಬವೊಂದು ಅಮೆರಿಕದ ಲಾಸ್ ಎಂಜಲೀಸ್‌ನಲ್ಲಿ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳೆದ ವಾರಂತ್ಯದಲ್ಲಿ ಸಂಭವಿಸಿದೆ.
ವಿಷಯ ಕುರಿತು ಅವರ ಪಕ್ಕದ ನಿವಾಸಿಗಳು ಸೋಮವಾರ ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿದಾಗ ಕೈಯಲ್ಲಿ ಗನ್ ಹಿಡಿದುಕೊಂಡು ಸ್ವಯಂ ಶೂಟ್ ಮಾಡಿಕೊಂಡು ತಮ್ಮ ರೂಂನಲ್ಲಿ ಮಲಗಿದ್ದ ನಿರುದ್ಯೋಗಿ ಹಣಕಾಸು ಸಲಹೆಗಾರ 45 ವರ್ಷದ ಕಾರ್ತಿಕ್ ರಾಜರಾಮ್ ಅವರ ಮೃತದೇಹದೊಂದಿಗೆ ಅವರ ಪೂರ್ಣ ಕುಟುಂಬ ಮೃತಪಟ್ಟಿರುವುದು ಕಾರಳ ದೃಶ್ಯ ಪತ್ತೆಯಾಗಿದೆ.
ಆತನ ಕಿರಿಯ ಪುತ್ರರಾದ ಅರ್ಜುನ (7) ಮತ್ತು ಗಣೇಶ್ (12) ಇಬ್ಬರನ್ನೂ ತನ್ನ ರೂಂನಲ್ಲೇ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಮನೆಯ ಪ್ರತ್ಯೇಕ ಕೋಠಡಿಗಳಲ್ಲಿ ಕಾರ್ತಿಕ್ ಪತ್ನಿ ಸುಬಾಶ್ರೀ (39), ಅವರ ಅತ್ತೆ ಇಂದ್ರಾ ರಾಮಸೆಶಮ್ (69) ಮತ್ತು ಅವರ ಹಿರಿಯ ಪುತ್ರ ಕೃಷ್ಣ (19) ಅವರೆಲ್ಲರನ್ನೂ ಕಾರ್ತಿಕ್ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ರಾಜರಾಮ್ ಅವರು ಬಿಟ್ಟು ಹೋಗಿರುವ ಎರಡು ಆತ್ಮಹತ್ಯೆ ಪತ್ರಗಳನ್ನು ಸಹ ಪೊಲೀಸರು ಪತ್ತೆ ಮಾಡಿದ್ದಾರೆ. ಪತ್ರಗಳಲ್ಲಿ ತಾನು ಅನುಭವಿಸುತ್ತಿದ್ದ ಹಣಕಾಸಿನ ತೊಂದರೆ ಮತ್ತು ಅದರಿಂದ ಈಡೀ ಕುಟುಂಬವನ್ನೇ ಮುಗಿಸಲು ತೆಗೆದುಕೊಂಡ ನಿರ್ಧಾರವನ್ನು ಬರೆದಿದ್ದಾರೆ ಎನ್ನಲಾಗಿದೆ
ವರದಿಯ ವಿವರಗಳು |
 |
ಕೃಪೆ : ಕನ್ನಡ ಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-08
|
|
|