ದುಬೈ: ಬಿ.ಡಿ.ಎನ್.ಇ. ಪ್ರಾಯೋಜಿಸಿರುವ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮ ಅಕ್ಟೋಬರ್ 10 ರಂದು |
ಪ್ರಕಟಿಸಿದ ದಿನಾಂಕ : 2008-10-08
ಬಿಲ್ಲವಾಸ್ ದುಬೈ ಅಂಡ್ ನಾರ್ಧರ್ನ್ ಎಮಿರೇಟ್ಸ್ ಅರ್ಪಣೆ : ಮಹಿಳೆಯರಿಂದ ವಿಶೇಷ ಕಾರ್ಯಕ್ರಮ
ದುಬೈ, ಅಕ್ಟೋಬರ್ 8: ದುಬೈ ನಗರದಲ್ಲಿ ಸುಮಾರು ಹನ್ನೊಂದು ವರ್ಷಗಳಿಂದ ಕಾರ್ಯನಿರತವಾಗಿರುವ ಏಕಮಾತ್ರ ಅಧಿಕೃತ ಬಿಲ್ಲವ ಸಂಘಟನೆಯಾದ ಬಿಲ್ಲವಾಸ್ ದುಬೈ ಅಂಡ್ ನಾರ್ಧರ್ನ್ ಎಮಿರೇಟ್ಸ್ ತನ್ನ ವಾರ್ಷಿಕೋತ್ಸವವನ್ನು ವಿಜೃಂಬಣೆಯಿಂದ ಆಚರಿಸಲು ನಿರ್ಧರಿಸಿದೆ.
ಅಕ್ಟೋಬರ್ 10ನೇ ತಾರೀಖು ಶುಕ್ರವಾರದಂದು ದುಬೈ ದೇರಾದಲ್ಲಿರುವ ರಾಡಿಸನ್ ಹೋಟೆಲಿನ ಜಬೀಲ್ ಬಾಂಕ್ವೆಟ್ ಹಾಲ್ ಸಭಾಂಗಣದಲ್ಲಿ ಬೆಳಿಗ್ಗೆ ಒಂಭತ್ತರಿಂದ ರಿಂದ ಸಂಜೆ ಐದರವರೆಗೂ ವಾರ್ಷಿಕೋತ್ಸವ ನಡೆಯಲಿದ್ದು ವಿವಿಧ ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯ ಕ್ರಮಗಳಿಂದ ಸದಸ್ಯರನ್ನು ರಂಜಿಸಲಿದೆ.

ಸರಳ ಪಶ್ನೆಗಳ ಮೂಲಕ ಇಡಿಯ ದಿನದ ಅವಧಿಯಲ್ಲಿ ನೆರೆದವರಿಗೆ ಹಲವಾರು ಅನಿರೀಕ್ಷಿತ ಬಹುಮಾನಗಳನ್ನು ಪ್ರಕಟಿಸಲಾಗಿದ್ದು ಈ ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳುವವರಿಗೆ ಹಪಾಹಪಿ ಖಚಿತವಾಗಿದೆ. ಕಾರ್ಯಕ್ರಮದಲ್ಲಿ ಮಹಿಳೆಯರಿಂದ ವಿಶೇಷ ಕಾರ್ಯಕ್ರಮಗಳು ಆಯೋಜಿತವಾಗಿದ್ದು ಹೆಚ್ಚಿನ ಕುತೂಹಲ ಕೆರಳಿಸಿವೆ.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಖ್ಯಾತ ಹಿಂದಿ ಮತ್ತು ಕನ್ನಡ ಚಿತ್ರನಟರಾದ ಸಚಿನ್ ಸುವರ್ಣ ಹಾಗೂ ಖ್ಯಾತ ಭರತನಾಟ್ಯ ಕಲಾವಿದ ಮತ್ತು ದೂರದರ್ಶನ ಪ್ರದರ್ಶನಕಾರರಾದ ವಿದ್ವಾನ್ ಪ್ರಮೋದ್ ಉಳ್ಳಾಲ್ ಆಗಮಿಸಲಿದ್ದಾರೆ. ಎಲ್ಲರ ಮೆಚ್ಚಿನ ಶ್ರೋಧನ್ ಪ್ರಸಾದ್ ಅವರು ತಮ್ಮ ಎಂದಿನ ಲವಲವಿಕೆ ಹಾಗೂ ಕಂಚಿನ ಕಂಠದಿಂದ ಈ ಕಾರ್ಯ ಕ್ರಮಕ್ಕೆ ನಿರೂಪಣೆ ನೀಡಲಿರುವುದು ಕಾರ್ಯಕ್ರಮಕ್ಕೆ ಹೆಚ್ಚಿನ ಕಳೆ ತಂದಿದೆ.

ಈ ಕಾರ್ಯಕ್ರಮಕ್ಕೆ ಸಂತ ಶ್ರೀ ನಾರಾಯಣ ಗುರುರವರ ಒಂದೇ ಮತ, ಒಂದೇ ಕುಲ, ಒಂದೇ ದೇವರು ಮೂಲಮಂತ್ರ ಪ್ರೇರಣೆಯಾಗಿದ್ದು ಸಮಾಜದ ಎಲ್ಲಾ ವರ್ಗದ ಜನರನ್ನು ಸಮಾನದೃಷ್ಟಿಯಿಂದ ನೋಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ. ಅಗತ್ಯವಿದ್ದಾಗ ಸಾಧ್ಯವಾದ ಎಲ್ಲಾ ರೀತಿಯ ಸೇವೆ ಸಲ್ಲಿಸುವ ಮೂಲಕ ಸಮಾಜಸೇವೆಯ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಸಮಿತಿ ಸದಾ ಬದ್ಧವಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಎಲ್ಲಾ ಸದಸ್ಯರಲ್ಲಿ ಹಾಗೂ ಬಿಲ್ಲವ ಬಾಂಧವರಲ್ಲಿ ಬಿ.ಡಿ.ಎನ್.ಇ. ಸಮಿತಿ ಮನವಿ ಮಾಡಿಕೊಂಡಿದೆ.

ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಸದಸ್ಯರನ್ನು ಅವರ ದೂರವಾಣಿಗೆ ಕರೆ ಮಾಡಿ ಪಡೆದುಕೊಳ್ಳಬಹುದು:
ಸತೀಶ್ ಪೂಜಾರಿ, ದುಬೈ: 050-6504507 ಶೋಧನ್ ಪ್ರಸಾದ್, ದುಬೈ: 050-6169680 ದೇವದಾಸ್ ಡಿ. ಸುವರ್ಣ, ದುಬೈ: 050-4941973 ಸುರೇಶ್ ಅಮೀನ್, ಶಾರ್ಜಾ:050-6359682 ಆನಂದ್ ಬೈಲೂರ್, ಜೆಬೆಲ್ ಆಲಿ:050-4982189
ಅಧಿಕೃತ ಅಂತರ್ಜಾಲ ತಾಣಗಳು: www.daijiworld.com ಮತ್ತು www.gulfkannadiga.com
ವರದಿಯ ವಿವರಗಳು |
 |
ಕೃಪೆ : ಬಿ.ಡಿ.ಎನ್.ಇ. ಪ್ರಕಟಣೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-08
|
|
|