ನೂತನ ಸದಸ್ಯರುಗಳ ಸ್ವಾಗತ ಕಾರ್ಯಕ್ರಮ: ವೈವಿದ್ಯಮಯ ಸಾಂಸ್ಲ್ರತಿಕ ಸಂಜೆ |
ಪ್ರಕಟಿಸಿದ ದಿನಾಂಕ : 2008-10-05
ಹೊಸದಾಗಿ ಸಂಘಕ್ಕೆ ಸದಸ್ಯರಾಗಿ ಸೇರ್ಪಡೆಗೊಂಡ ಸುಮಾರು 40 ಸದಸ್ಯರನ್ನು ಸ್ವಾಗತ ಪರಿಚಯಿಸುವ ಒಂದು ವಿನೂತನ ಕಾರ್ಯಕೃಮ
ಬಹರೈನ್. "ಸಂಘ ಜೀವನ ಸುಖ ಜೀವನ" ಅಂಬ ಮೂಲಮಂತ್ರಕ್ಕೆ ಬದ್ಧವಾಗಿ ಇಲ್ಲಿನ ರಾಜ್ಯಪ್ರಶಸ್ತಿ ವಿಜೇತ ಕನ್ನಡ ಸಂಘ ಕಳೆದ 32 ವರುಷಗಳಿಂದ ಕಾರ್ಯನಿರ್ವಹಿಸುತ್ತಾ ತನ್ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆಯನ್ನು ದೂರದ ಕೊಲ್ಲಿಯಲ್ಲಿಯ ಮಣ್ಣಿನಲ್ಲೂ ಸಾದರ ಪಡುತ್ತಾ ಬಂದಿದೆ.
ತಮ್ಮ ಮನೆಯಿಂದ ಸಾವಿರಾರು ಮೈಲಿ ದೂರವಿರುವ ಕನ್ನಡಿಗರಿಗೆ ಇಲ್ಲೊಂದು ಮನೆಯನ್ನು ಕಲ್ಪಿಸಿಕೊಟ್ಟಿದೆ. ಸಂಘವೆಂಬ ಅವಿಭಕ್ತ ಕುಟುಂಭದ ಸದಸ್ಯರುಗಳು ಒಂದಾಗಿ ಕಲೆತು, ಬೆರೆತು, ಸಂತೋಷದಿಂದಿರುವಂತೆ ಪ್ರಯತ್ನಿಸುತ್ತಿದೆ. ಇದರಿಂದಾಗಿಯೇ ಈ ಸಂಸಾರ ದಿನೇ ದಿನೆ ಬೆಳೆಯುತ್ತಿದೆ. ಪರಿವಾರದ ಸದಸ್ಯರುಗಳು ಹೆಚ್ಚಾಗುತ್ತಾ ಇದ್ದಾರೆ. ಹಾಗೆಯೇ ಈ ಪರಿವಾರಕ್ಕೆ ಹೊಸದಾಗಿ ಬರುವ ಸಸಸ್ಯರುಗಳನ್ನು ಹಾರ್ದಿಕವಾಗಿ ಸ್ವಾಗತಿಸುವುದು ಕನ್ನಡ ಸಂಘ ಮೊದಲಿಂದಲೂ ಪಾಲಿಸಿಕೊಂಡು ಬಂದಂತಹ ಸಂಪ್ರದಾಯ.
ಹಾಗೆ ಹೊಸದಾಗಿ ಸಂಘಕ್ಕೆ ಸದಸ್ಯರಾಗಿ ಸೇರ್ಪಡೆಗೊಂಡ ಸುಮಾರು 40 ಸದಸ್ಯರನ್ನು ಸ್ವಾಗತ ಪರಿಚಯಿಸುವ ಒಂದು ವಿನೂತನ ಕಾರ್ಯಕೃಮ ಸಂಘದಲ್ಲಿ ಇತ್ತೀಚಿಗ ಜರುಗಿತು.
ಸಂಘದ ಅದ್ಯಕ್ಷರಾದ ಆಸ್ಟಿನ್ ಸಂತೋಷ್ ಕುಮಾರ್ ಹಾಗು ಹಲವು ಹಿರಿಯ ಸದಸ್ಯರುಗಳನ್ನು ಗುಲಾಬಿ ಹೂಗಳನ್ನು ನೀಡಿ ವೇದಿಕೆಗೆ ಬರಮಾಡಿಕೊಂಡು ಅವರನ್ನು ಪರಿಚಯಿಸಿ ಪರಿವಾರಕ್ಕೆ ಅದರದ ಸ್ವಾಗತವಿತ್ತರು.
ಇದೇ ಸುಸಂದರ್ಭದಲ್ಲಿ ಸಂಘದ ಸಾಂಸ್ಕೃತಿಕ ತಂಡವಾದ ಕೃಷ್ಣ ತಂಡವು ವೈವಿದ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಯೊಜಿಸಿ ಸಾದರಪಡಿಸಿದರು. ಸಂಘದ ಕಾಲಾವಿದರುಗಳು ನೃತ್ಯ, ಗಾಯನಗಳ ಕಲಾ ಪ್ರದರ್ಶನವನ್ನು ನಿಡಿ ಪ್ರೇಕ್ಷಕರ ಮನರಂಜಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಪ್ರಧಾನ ಕಾರ್ಯದರ್ಶಿ ಅನಿಲ್ ಬಾಸಿಯವರು ಸದಸ್ಯರುಗಳನ್ನು ಸ್ವಾಗತಿಸಿದರು.
ಮಣೊರಂಜನಾ ಕಾರ್ಯದರ್ಶಿ ದೂಮಣ್ಣ ರೈಯವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಭೋಜನದ ವ್ಯವಸ್ಥೆಯಿದ್ದು ಎಲ್ಲರೂ ಭೋಜನ ಸವಿದು ಸಂತೋಷದಿಂದ ಮನೆಗೆ ತೆರಳಿದರು.
ವರದಿ: ಕಮಲಾಕ್ಷ ಅಮಿನ್
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮಿನ್ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-05
|
|
|