ಭಾರತೀಯ ತತ್ತಶಾಸ್ತ್ರ ಪ್ರವೇಶ ಗ್ರಂಥ ಲೋಕಾರ್ಪಣೆ |
ಪ್ರಕಟಿಸಿದ ದಿನಾಂಕ : 2008-10-05
ಮಂಗಳೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಶ್ರಯದಲ್ಲಿ ಡಾ. ಎಂ. ಪ್ರಭಾಕರ ಜೋಷಿ ಹಾಗೂ ಸಿದ್ದಾಪುರ ಪ್ರೊ. ಎಂ. ಎ. ಹೆಗಡೆ ಬರೆದಿರುವ ಹೆಗ್ಗೂಡು ಅಕ್ಷರ ಪ್ರಕಾಶನ ಪ್ರಕಾಶಿಸಿರುವ ಭಾರತೀಯ ತತ್ವಶಾಸ್ತ್ರ ಪ್ರವೇಶ ಗ್ರಂಥದ ಲೋಕಾರ್ಪಣೆ ಶನಿವಾರ ನಗರದ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು.

ಸಂಸ್ಕೃತ ಪ್ರಾಧ್ಯಾಪಕಡಾ. ಜಿ. ಎನ್. ಭಟ್ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಂಸ್ಕರತಿ ತಜ್ಞ ಡಾ. ವಿಲಿಯಂ ಡಿಸಿಲ್ವ ಗ್ರಂಥವನ್ನು ಪರಿಚಯಿಸಿದರು.
ವೃಂದಾ ಕಾಮತ್ ಪ್ರಾರ್ಥಿಸಿದಿರು. ಡಾ. ಪ್ರಭಾಕರ ಜೋಷಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ಸಂಯೋಜಕ ಸುಧೀರ್ ಪಿ. ಘಾಟೆ ವಂದಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಗ.ಕ.ಕರಾವಳಿ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-05
|
|
|